ಬುಧವಾರ, ಫೆಬ್ರವರಿ 1, 2012

ಮನೆ ಬಳಕೆ ವಸ್ತುಗಳು

   ಹಿಂದೆ ಸೋಗೆ ಅಥವಾ ಇತರೆ ಮನೆಗಳನ್ನು ಬಳಕೆಗಾಗಿ ಮೂರು ಭಾಗಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ದೇವಮೂಲೆಯ ಭಾಗದಲ್ಲಿ ಅಡಿಗೆ ಮನೆಯಿರುತ್ತದೆ. ಅಲ್ಲಿ ಅಡಿಗೆಯ ತಯಾರಿಕೆಗೆ ಬಳಸುವ ಸಾಧನಗಳು ಮತ್ತು ಅದರ ಪೂರಕ ಪರಿಕರಗಳನ್ನು ಕಾಣಬಹುದು. ನಡುಮನೆಯಲ್ಲಿ ದೇವರ ಪಟಗಳು ಮತ್ತು ಬಂಧುಗಳು ಬಂದಾಗ ಕುಳಿತೇಳಲು ಬೇಕಾದ ಸಾಧನಗಳು ಮತ್ತು ಇತರೆ ವಸ್ತುಗಳು ಅಲ್ಲಿರುತ್ತವೆ. ಮೂರನೆಯ ಭಾಗದಲ್ಲಿ ವಿಶೇಷವಾಗಿ ಬಟೆಬರೆ ಧಾನ್ಯ ಸಂಗ್ರಹ ಮತ್ತು ಕೃಷಿ ಸಂಬಂಧಿ ಉಪಕರಣಗಳಲ್ಲದೆ ಇತರೆ ಉಪಕರಣಗಳು ಇರಬಹುದು. ಕೆಲವು ಕಡೆ ಇದೇ ಗೊಡ್ಡು ಗ್ವಾದಿಗಳನ್ನು ಕಟ್ಟಿ ಹಾಕುವ ಸ್ಥಳವಾಗಿರುವುದರಿಂದ ಅಲ್ಲಿ ಅವುಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ಅದಕ್ಕೆ ಪೂರಕವಾದ ಸಾಧನಗಳು ಅಲ್ಲಿರಬಹುದು. ಆದ್ದರಿಂದ ಒಟ್ಟಾರೆ ಒಂದು ಮನೆಯಲ್ಲಿರಬಹುದಾದ ಮನೆ ಬಳಕೆ ಮತ್ತು ಅದಕ್ಕೆ ಪೂರಕವಾದ ಸಾಧನಗಳನ್ನು ಅಧ್ಯಯನದ ಅನುಕೂಲತೆಗಾಗಿ ಕೆಳಗಿನಂತೆ ವಿಂಗಡಿಸಬಹುದು.
                                                
ಕುಂಕುಮ ಭರಣಿಗಳು


ಅಡುಗೆ ಮನೆಯ ಪಾತ್ರೆ-ಪರಡಿಗಳು

    ಈ ಜನಾಂಗ ಹಿಂದೆ ಮಣ್ಣು, ತಾಮ್ರ, ಕಂಚು ಮತ್ತು ಹಿತ್ತಾಳೆಯ ಸಲಕರಣೆಗಳನ್ನು ಬಲಸುತ್ತಿದ್ದರು. ಈಗ ಅಲ್ಯಮೀನಿಯಂ, ಸ್ಟೀಲ್ ಪಾತ್ರೆಗಳನ್ನು ಮತ್ತು ಕಬ್ಬಿಣದ ಸಾಧನಗಳನ್ನು ಅಡಿಗೆ ಮನೆಯಲ್ಲಿ ಬಳಸುವುದುಂಟು. ಮಾಂಸದಡಿಗೆಯ ಪಾತ್ರೆಗಳನ್ನು ಕೆಲವು ಮನೆಗಳಲ್ಲಿ ಸಸ್ಯಾಹಾರಕ್ಕೆ ಬಳಸುವುದಿಲ್ಲ. ಅವನ್ನು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಆದರೆ ಈಗಲೂ ಕೆಲವರ ಮನೆಗಳಲ್ಲಿ ಈ ವಸ್ತುಗಳು ಬಳಕೆಯಲ್ಲಿವೆ. ಆದರೆ ಸ್ಟೇಲ್ ಮತ್ತು ಅಲ್ಯೂಮೀನಿಯಂ-ಮುಂತಾದ ಆಧುನಿಕ ಲೋಹಗಳ ಬಳಕೆ ಹೆಚ್ಚಾಗುತ್ತಿದೆ.
                                             
ಬಿದಿರು ಬುಟ್ಟಿಗಳು
                                    

ಮಣ್ಣಿನ ಪಾತ್ರೆ-ಪರಡಿಗಳು

    ಹಿಂದೆ ಅಡಿಗೆಯ ಮನೆಯಲ್ಲಿ 'ಒಂಟಿಪೊಯ್ಯಿ' (ಕುಂಬಾರೊಲೆ) ಮತ್ತು ದೇಸಿಯವಾಗಿ ಸ್ವತಃ ಹುತ್ತದ ಮಣ್ಣು ಮತ್ತು ಇಟ್ಟಿಗೆಗಳನ್ನು ಬಳಸಿ ಹಾಕಿರುವ ಎರಡು ತೂತು ಒಲೆ ಇರುತ್ತಿತ್ತು. ಅಕ್ಕಿಯನ್ನಿಟ್ಟಿರುವ 'ಗುಡುವ' (ಗುಡಾಣ), 'ಬಾನೆ', ಹಿಟ್ಟು ಮಾಡಲು ಬಳಸಿವ 'ಸಂಗಟಿಸಟ್ಟಿ' (ಹಿಟ್ಟುಗೋಲು), ಅದರ ಮೇಲೆ  ಮುಚ್ಚುವ 'ಮೂಗಟಿ'(ಚಟ್ಣ), ಸಾರನ್ನು ಮಾಡಲು  ಬಳಸುವ 'ಸ್ಯಾರುಸಟ್ಟಿ', (ಸಾರು ಮಡಿಕೆ) ಅದರ ಮೇಲೆ ಮುಚ್ಚುವ 'ಮೂಗಟಿ' (ಚಟ್ಣ), ಸ್ಯಾರನ್ನು ಬಸಿಯಲು ಬಳಸುವ 'ಗಿದ್ದಿ'(ಕುಡಿಕೆ), 'ಬೊಪ್ಪುಲು'.(ಮರಗಿ) ನೀರನ್ನು ಕುಡಿಯಲು ಉಪಯೋಗಿಸುವ 'ಮುಂತುಲು' (ಕುಡಿಕೆ), ನೀರನ್ನು ತುಂಬಿಡುತ್ತಿದ್ದ 'ಗೆಡಿಗಲು', 'ಕಡವಲು'(ಕೊಡ/ಹರಿವೆ) ,ಹಾಲು ಕಡಿಯಲು ಬಳಸುತ್ತಿದ್ದ 'ಪಾಲಸಟ್ಟಿ' (ಹಾಲುಮಡಿಕೆ), ತುಪ್ಪವನ್ನು ಶೇಖರಿಸುತ್ತಿದ್ದ 'ನೆಯ್ಯಿಮುಂತಾ' (ತುಪ್ಪದ ಕುಡಿಕೆ), ಹಾಲನ್ನು ಕರೆಯಲು ಬಳಸುತ್ತಿದ್ದ 'ಪಾಲಮುಂತ' (ಹಾಲು 
ಅಳತೆ ಪರಿಕರಗಳು-ತೂಮು, ಸೇರು,ಪಡಿ.ಅರಪಡಿ,ಸೊಲಿಗೆ.ಚಟಾಕು
ಕುಡಿಕೆ),ಅಡಿಗೆಯ ಪಾತ್ರೆಯಿಂದ ತೆಗೆದ  'ಮಾಡುಗೋಕ' (ಮುಸುರೆ) ನ್ನು ಹಾಕಲು ಅಲ್ಲೇ ಇಟ್ಟು ಕೊಂಡಿರುತ್ತಿದ್ದ 'ಕುಡಿತಿಬಾನ', ಅಕ್ಕಿಕಾಳುಗಳನ್ನು ಹಾಕಿಕೊಳ್ಳುವ 'ದಂತುಲು' (ಅರಕಲ ಗಡಿಗೆಗಳು) ಮತ್ತು 'ಕುಮ್ಮರ ಗಾದುಲು' (ಕುಂಬಾರ ವಾಡೆ ಕಣಜಗಳು) ಮುಂತಾದ ಮಣ್ಣಿನ ಪಾತ್ರೆ-ಪರಡಿಗಳು ಅಲ್ಲಿರುತ್ತಿದ್ದವು.
                  
ದಾಗಿರಿ-ಬೀಸುವಕಲ್ಲು(ರಾಗಿಕಲ್ಲು)
                                
   ನಡುಮನೆಯಲ್ಲಿ ''ದೀಗೂಡಿ'ನಲ್ಲಿ 'ದೀಪಾಂತಿ'ಗಳು ಇರುತ್ತಿದ್ದವು. ಗುಡಿಸಿಲ್ಲು ಮತ್ತು ಸುಟ್ಟಿಲ್ಲುಗಳಲ್ಲಿ ಕುಂಬಾರವಾಡೆಗಳು ಅರಕಲ ಗಡಿಗೆಗಳೂ ಅಲ್ಲೆ ಜೋಡಿಸಿರುವುದುದುಂಟು.
   ಆದರೆ ಮಣ್ಣಿನ ಪಾತ್ರೆಗಳ ಬಳಕೆ ಅಪರೂವಾಗುತ್ತಿದೆ. ಶುಭಾಶುಭ ಕಾರ್ಯಕ್ರಮಗಳಲ್ಲಿ ಮತ್ತು ಮನೆಯ ಅಡಿಗೆ ತಯಾರಿಕೆಯಲ್ಲಿ ಇವುಗಳಲ್ಲಿ, ಕೆಲವು ಪಾತ್ರೆಗಳ ಉಪಯೋಗ ಹಳ್ಳಿಗಾಡಿನಲ್ಲಿ ಈ ಜನಾಂಗದಲ್ಲಿ ಚಾಲ್ತಿಯಲ್ಲಿದೆ.

ಮರದ ಸಾಮಾನುಗಳು

   ಹಾಲನ್ನು ಕಡಿಯಲು ಬಳಸುವ 'ಸಲ್ಲಗುತ್ತಿ'(ಕಡೆಗೋಲು), ಸೊಪ್ಪನ್ನು ಅರೆಯಲು ಬಳಸಿತ್ತಿದ್ದ'ಪೊಪ್ಪುಗುತ್ತಿ' (ಮಸೆಗೋಲು) ಹಿಟ್ಟನ್ನು ಕಲಕಲು ಬಳಸುವ 'ಸಂಗಟಿಗಟ್ಟಿ' (ಹಿಟ್ಟಗೋಲು), ಹಿಟ್ಟಬಾನೆಯ ಕಂಟಕ್ಕೆ ಹಾಕುತ್ತಿದ್ದ'ಮೆಟ್ಟಗಟ್ಟಿ' (ಮೆಟ್ಟುಗೋಲು), ಸಾರನ್ನು ಹಾಕಲು ಬಳಸುತ್ತಿದ್ದ'ಸಿಪ್ಪಗಟ್ಟಿ' (ಸೊಟ್ಟಗೋಲು)ಗಳು. ಉಪ್ಪು ಹಾಕಲು ಬಳಸುವ'ಎದರುಬುರ್ರ'( ಬಿದಿರು ಬುರೆಗಳು),ಮುದ್ದೆ ಮಾಡಲು ಬಳಸುವ 'ಮುದ್ದೆ ಚಟ್ನ' ಕುಟ್ಟುವ ಸಾಧನವಾದ'ರೋಕಿಲಿ' (ಒನಕೆ, ಮತ್ತು 'ಕುದುರು'(ಕುಂದಲಿಗೆ),ಬೀಸುವ ಸಾಧನವಾದ'ಸ್ಯಾಟ್ಲು' (ಮೊರಗಳು), ಹೊಡೆಯುವ ಸಾಮಾನಾದ 'ಕೊಡಿತಿ'ಗಳು, ಅಡಿಗೆ ಸಾಮಾನುಗಳಾದ 'ಸಾಸ್ತೇಲು ಕುರುಡು' (ಶಾವಿಗೆ ಕುರುಡು), ಧವಸ ಧಾನ್ಯ ಹೊರಲು ಬಳಸುವ 'ದಾಗಿರಿ' (ಹಿಟಗೆರಿಸಿ), 'ಗಂಪಾ' (ಹೆಡಿಗೆ),' ಪುಟಿಕೆ' -ಮುಂತಾದ ಸಾಮಾನುಗಳಿರುತ್ತವೆ. 
ಬಿದಿರು ಬುರುಡೆಗಳು

                                 
   ಅಡ್ಡಿಪಿಲ್ಲು ಅಲ್ಲದ ಮನೆಗಳಲ್ಲಿ ಎಲ್ಲಾ ಸಾಮಾನುಗಳೂ ಒಟ್ಟೊಟ್ಟಿಗೆ ಇರುವುದುಂಟು. ದಿಗೂಡಲ್ಲಿ ಮರದ ಕುಂಕುಮಭರಣಿ, 'ದುವ್ವಾಣಿ' (ಬಾಚಣಿಗೆ), 'ಈರಬಾಣಿ' (ಸೀರಣಿಗೆ), ಮತ್ತು ದೇವರ ಪಟಗಳನ್ನಿಡಲು ಬಳಸುವ 'ಪಟಾಲು ಚಕ್ಕ'(ದೇವರ ಪಟಗಳನ್ನಿಡುವ ಮರದ ಹಲಗೆ),'ಕಳಸದ ಪೀಠ', ಕುಳಿತುಕೊಳ್ಳಲು ಬಳಸುವ 'ಚಕ್ಕಪೀಠಲು'- ಮುಂತಾದವುಗಳು ನಡು ಮನೆಯಲ್ಲಿ ಇರುವುದುಂಟು.
   ಕತ್ತರಿಸುವ ಸಾಧನಗಳಾದ-'ಸುರಕತ್ತಿ', 'ಮಚ್ಚುಗತ್ತಿ' (ಕೊಡಲಿ), 'ಮಲಸುರಿ', 'ಕತ್ತಿಪೀಟ' ಮತ್ತು ಮಾಂಸ ಕತ್ತರಿಸುವ 'ಮರದುಂಡು'-ಮುಂತಾದ ಪರಿಕರಗಳು ಇರುತ್ತವೆ.
   ಕೃಷಿ ಸಂಬಂಧಿ ಉಪಕರಣಗಳಾದ_ ಮಕ್ಕರಿ, ಗೊಡ್ಲಿ, ದ್ವಾಕರಬಾರೆ, ಕಕ್ಕುಕೊಡಲಿ, ಗುದ್ದಲಿ, ಸಲಿಕೆ, ಪಿಕಾಸಿ, ದೋಟಿಸಿವ, ಎತ್ತುಗಳಿಗೆ ಬೀಜ(ತರಡು) ಹೊಡೆಯುವ 'ಇರ್ಕಟ್ಟಿ', ನೀರೆತ್ತವ 'ಗೂಡೆ, ಪಶುಗಳಿಗೆ ಔಷಧಿ ಹಾಕುವ 'ಗೊಟ್ಟ'ಗಳು, ಎತ್ತುಗಳನ್ನು ಹೊಡೆಯುವ 'ಸಾಟಿಕಟ್ಟಿ'  (ಚಾಟಿಗೋಲು), ಪಶುಗಳಿಗೆ ಮೂಗು ಚುಚ್ಚಲು ಬಳಸುವ 'ಮುಗಿದಾಡು ಕಡ್ಡಿ' (ಮೂಗುದಾರ ಹಾಕಲು ಚುಚ್ಚುವ ಕಡ್ಡಿ), ನೇಗಿಲು ಮತ್ತು ಬಂಡಿಗೆ ಎತ್ತುಗಳನ್ನು ಕಟ್ಟಲು ಬಳಸುವ 'ಲೋಗಾಡಿಕಡ್ಡಿ' ಮತ್ತು 'ಪಲುಪುಲು'(ಜತ್ತಿಗೆ), ಮುಗಿಜಿಂಬ್ರಾ (ಕುಕ್ಕೆ) -ಮುಂತಾದ ಪರಿಕರಗಳು ಅಲ್ಲಿರುವುದು ಕಾಣಬಹುದು.
                                      
ಲೋಹದ ಗಂಟೆಗಳು

    ಜನಜೀವನಕ್ಕೆ  ಮತ್ತು ಬೇಟೆಗೆ ಸಂಬಂಧಿಸಿದ ಪರಿಕರಗಳು-ಮೀನನ್ನು ಹಿಡಿಯಲು ಬಳಸುವ 'ಕೊಡುಮೆ', 'ಗುದ್ದಿಕಟ್ಟಿ'(ಬಾಗಿರುವ ಕಡ್ಡಿ), 'ಸೋಟಾಕಟ್ಟಿ', 'ಅನಸುಲುಕಟ್ಟಿ, 'ಬಲ್ಲೆಮು' ಕ್ಯಾಟಲುಬಿಲ್ಲು, ಒಂಟೀಲ್ಲುದೆಬ್ಬಾ, ಮರದ ಬೋನು, ಪಾದಿಗಳು,ಮಕ್ಕಳಾಡುವ ಮರದ ಬೊಂಬೆಗಳು-ಮುಂತಾದ ಬೇಟೆಯ ಮತ್ತು ಜನಜೀವನದ ಪರಿಕರಗಳು ಕೆಲವು ವೇಳೆ ಮನೆಯಲ್ಲಿರುತ್ತವೆ.

ಲೋಹ, ಕಲ್ಲು ಮತ್ತು ಇತರ ಸಾಧನಗಳು.























    ದೇವರಿಗೆ ಆರತಿಯೆತ್ತಲೂ ಅನ್ನ ಬಡಿಸಲು ಮತ್ತು ಮದುವೆಯಲ್ಲಿ ಒಸಗೆಯಿಡಲು ಬಳಸುವ ಹಿತ್ತಾಳೆಯ 'ಮಂಗಳಾರತಿ ತಟ್ಟೆ, ನಲುಗು ತಟ್ಟೆ, ಕೈಯ್ಯಿ ತಟ್ಟೆಗಳನ್ನು ಇವರಲ್ಲಿ ಕಾಣುತ್ತೇವೆ. ಊಟ ಮಾಡಲು ಬಳಸುವ ಹಿತ್ತಾಳೆ ತಟ್ಟೆಗಳು. ಕಂಚುತಟ್ಟೆಗಳು ಕಂಡುಬರುತ್ತವೆ. ನೀರನ್ನು ತುಂಬಿಸಿಡಲೂ ಮತ್ತು ತರಲು ಬಳಸುವ ಬಿಂದಿಗೆ, ಕೊಳಗ, ಅಂಡಗಳನ್ನು ಕಾಣಬಹುದು. ಅಲ್ಲದೆ ನೀರು ಕುಡಿಯಲು ಬಳಸುತ್ತಿದ್ದ ಹಿತ್ತಾಳೆ, ಕಂಚು ಮತ್ತು ಅಲವರ ಗ್ಲಾಸುಗಳು ಇಂದಿನ ತನಕ ಬಳಸುತ್ತಿದ್ದರು. ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಹಾಕಲು 'ಪಾಲಾಡಿ'(ಹಾಲಾಡಿ)ಯನ್ನು ಬಳಸುತ್ತಿದ್ದರು. ಧವಸ ಧಾನ್ಯಗಳನ್ನು ಮತ್ತು ತುಪ್ಪ ಅಳೆದು ಕೊಡಲು-ಇಬ್ಬಳಿಗೆ, ಸೇರು, ಪಡಿ, ಪಾವು ಮತ್ತು ಚಟಾಕುಗಳನ್ನು 
ಜಾಲಾರಲು ಪಿಲಂಗೋವಿ

                                  

ಉಪಯೋಗಿಸುತ್ತಿದ್ದರು. ಸಾರಾಯಿಯನ್ನು ಅಳೆದು ಕೊಡುವ ಸಲುವಾಗಿ ಲೋಹದ 'ದರಾಮು ಗ್ಲಾಸು'ಗಳು ಇವರಲ್ಲಿದ್ದವು. ಎತ್ತಿನ ಕೊರಳು ಮತ್ತು ಕೊಂಬುಗಳನ್ನು  ಅಲಂಕರಿಸುತ್ತಿದ್ದ 'ಕೊರಳುಗಂಟೆಗಳು', 'ಗಗ್ಗರ ಮತ್ತು ಕೊಂಬುಕುಪ್ಪಗಳ ಕಿಂಕಿಣಿ ನಾದ ಯಾಕೋ ಕಡಿಮೆಯಾಗುತ್ತಿದೆ. ಮನೆಯ ಗೂಟಕ್ಕೆ ನೇತಾಡುತ್ತಿದ್ದ 'ಕಹಳೆ' ತನ್ನ ಗಂಟಲ ಧ್ವನಿಯನ್ನು ಕಳೆದುಕೊಂಡಿದೆ.
                                                             
ಗುಡಾಣ

    ಆದರೆ ಇವರ ಬದುಕಿಗೆ ಎಲ್ಲರಂತೆ ಅಲ್ಯೂಮಿನೀಯಂ ಮತ್ತು ಸ್ಟೀಲ್ ಲೋಹಗಳು ಪ್ರವೇಶ ಮಾಡಿವೆ. ಆದರೂ ಬಹುತೇಕ ಜನರು ಬಳಸದಿದ್ದರೂ ಪ್ರತಿಷ್ಠೆಗಾಗಿಯಾದರೂ ಲೋಹದ ಸಾಮಾನುಗಳನ್ನು ಇಟ್ಟುಕೊಂಡಿರುವುದು ಕಾಣಬುಹುದಾಗಿದೆ.
    ಕಲ್ಲಿನ ಸಾಮಾನುಗಳಾದ ಮಸೆಗಲ್ಲು, ಗುಂಡುಕಲ್ಲು, ರುಬ್ಬುಗುಂಡು ಮತ್ತು ಬೀಸುವ ಕಲ್ಲು ಅಲ್ಲಲ್ಲಿ ಇನ್ನೂ ಬಳಕೆಯಾಗುತ್ತಿವೆ. ನವನಾಗರಿಕತೆಯ ಸಾಧನಗಳಾದ ಮಿಕ್ಸೀಯಿಂದ ಮಸೆಗಲ್ಲು, ಗುಂಡುಕಲ್ಲು ಮತ್ತು ರುಬ್ಬುವ ಕಲ್ಲುಗಳು ಮೂಲೆ ಸೇರುವಂತಾಯಿತು. ಬತ್ತ ಮತ್ತು ರಾಗಿ ಕುಟ್ಟುವ ಯಂತ್ರಗಳ ಪ್ರವೇಶದಿಂದ ದೇಸಿಯವಾದ ಇಂತಹ ಪರಿಕರಗಳು ನಡು ಮುರಿಸಿಕೊಂಡು ತೆವಳುವಂತಾಗಿದೆ.
ಹೆಡಿಗೆ(ಗಂಪ)

                                
    ಮನೆಯಲ್ಲಿ ಜನಜೀವನಕ್ಕೆ ಪೂರಕವಾಗಿರುವ ಅನೇಕ ಬಗೆಯ ಪರಿಕರಗಳನ್ನು ಕಾಣಬಹುದು. ಅನ್ನ, ತುಪ್ಪ -ಇನ್ನಿತರೆ ಪದಾರ್ಥಗಳನ್ನು ಬೆಕ್ಕು ಮತ್ತು ಮಕ್ಕಳ ಕೈಗೆ ಸಿಗದಂತಿರಲು ನಮ್ಮ ಜನರು ಹಗ್ಗದ ಹುರಿಯಿಂದ ಮಾಡಲ್ಪಟ್ಟ 'ಉಟ್ಟಿ'ಯನ್ನು ಬಳಸುತ್ತಿದ್ದರು. ನೀರನ್ನು ಹೊತೊಯ್ಯಲು'ಸೊರಬುರುಡೆ'ಗಳನ್ನು ಉಪಯೋಗಿಸುತ್ತಿದ್ದರು. ಏತದ ಬಾನೆಗಳು ನೀರಾವರಿಗೆ ಅಲ್ಲದೆ, ಹಿಂದೆ ಅನ್ನ ಸಂತರ್ಪಣೆಯಲ್ಲಿ ಅನ್ನ ಬಡಿಸುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು.
   ಜಾನಪದ ಕಲಾ ಮತ್ತು ಕುಲ ಕಸುಬಿನ ಪರಿಕರಗಳಾದ -ಉರುಮು. ಮದ್ದಿಲಿ, ರಂಡೋಲು, ಕೊಳಲು, ಇತ್ಯಾದಿಗಳ ಚರ್ಮವಾದ್ಯಗಳ ಧ್ವನಿ ತಣ್ಣಗಾಗುತ್ತಿದೆ. ಅದರ ಬದಲಿಗೆ ಅದರ ವಾರಸುದಾರರಾಗಿ ಬಂದಿರುವ 'ಪೈಬರ್ ಹಾಳೆ'ಯ ವಾದ್ಯಗಳು ರಾರಾಜಿಸುತ್ತಿವೆ. ಹೀಗೆ ದೇಸೀಯತೆಯ ಮೇಲೆ ಆಧುನಿಕತೆಯ ದಾಳಿ ತೀವ್ರತೆಯನ್ನು ಎಲ್ಲೆಡೆಯಲ್ಲೂ ಕಾಣುತ್ತಿದ್ದೇವೆ.

ಮಂಗಳವಾರ, ಜನವರಿ 10, 2012

ಛಲವಾದಿ ಸಂಸ್ಕೃತಿಯ ಮೂಲ ಮತ್ತು ಪ್ರಸಾರ-ಕಿರು ನೋಟ   

            ಒಂದು ಜನಾಂಗದ ಸಾಂಸ್ಕೃತಿಕ ಅಧ್ಯಯನವೆಂದರೆ ಆಯಾ ಜನಾಂಗಗಳ ಆದಿಮ ರೂಪಗಳ ಪುನರ್ಮನನ ಮಾಡುವುದು ಎಂದು ಹೇಳಬೇಕಾಗುತ್ತದೆ. ಒಂದು ಕಡೆ ನಾಗಾಲೋಟದಲ್ಲಿ ಸಾಗುತ್ತಿರುವ ನವನಾಗರಿಕತೆ ಹಾಗೂ ಜಾಗತೀಕರಣದ ದಟ್ಟ ಪ್ರಭಾವದ ನಡುವೆಯೂ ತಮ್ಮ ಸಂಸ್ಕೃತಿಗಳ ಮೂಲ ಬೇರುಗಳನ್ನು ತಡಕಾಡುವ, ಅದರ ವಿವರಗಳನ್ನು ದಾಖಲಿಸುವ ಪ್ರಯತ್ನಗಳನ್ನು ಮಾಡುವುದು ಈಗ ಅನಿವಾರ್ಯವಾಗಿದೆ.  ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಮೂಲ ಆಶಯದೊಂದಿಗೆ ಕೋಲಾರ ಜಿಲ್ಲೆಯ ಛಲವಾದಿ ಸಂಸ್ಕೃತಿಯ ಅಧ್ಯಯನಕ್ಕೆ ತೊಡಗಲಾಗಿದೆ. ಇದು ಜನಾಂಗಿಕ ಅಧ್ಯಯನದ ಮೊದಲ ಪ್ರಯತ್ನವಾಗಿದೆ. ಹಲವು ಕುತೂಹಲಕರ ಸಾಂಸ್ಕೃತಿಕ ಅಂಶಗಳನ್ನು ಹೊಂದಿರುವ ಇದು, ಸಾಂಸ್ಕೃತಿಕ ಅಧ್ಯಯನದಲ್ಲಿ ಒಂದು ನೂತನ ಆಲೋಚನಾ ಕ್ರಮವನ್ನು ಉಂಟು ಮಾಡಬಲ್ಲದೆಂದು ಹೇಳಬಹುದು. 
            ಹಿಂದೂ ಸಮಾಜದಲ್ಲಿ ಕಾಣಬರುವಷ್ಟು ವಿವಿಧ ಮತ, ಜಾತಿ, ಕುಲಧರ್ಮಗಳು ಪ್ರಪಂಚದ ಮತ್ತಾವ ಸಮಾಜಗಳಲ್ಲಿಯೂ ಕಾಣುವುದಿಲ್ಲವೆಂದು ಹೇಳಬಹುದು. ಸೂಕ್ಷ್ಮವಾಗಿ ಪರಿಶೀಲಿಸಿದರೆ ಸಮಾಜದಲ್ಲಿನ ಪ್ರತಿಯೊಂದು ಕುಲಧರ್ಮ, ಪಂಥ ಮತ್ತು ಜಾತಿಗಳು, ಶಾಸ್ತ್ರ ಪುರಾಣಗಳ ಆಧಾರಿತ ಪೂವರ್ೇತಿಹಾಸವನ್ನು ಪಡೆದಿದೆ. ಇದರಿಂದ ಪ್ರತಿಯೊಂದು ಕುಲಧರ್ಮವೂ ತನ್ನ ತನವನ್ನು ಉಳಿಸಿಕೊಂಡು ತನ್ನದೇ ಆದ ಸಂಸ್ಕೃತಿ, ನಾಗರಿಕತೆ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಹಿಂದೂ ಸಮಾಜವೆಂಬ ಸಾಮೂಹಿಕ ಧರ್ಮದಡಿಯಲ್ಲಿ ಸ್ವತಂತ್ರ ಘಟಕಗಳಾಗಿ ನಿಂತಿವೆ. ಆದರೆ ಛಲವಾದಿ ಸಂಸ್ಕೃತಿಗೆ ಇಂತಹ ಭವ್ಯ ಪೌರಾಣಿಕ ಹಿನ್ನೆಲೆಯಿದ್ದರು ಅದನ್ನು ಮರೆಯಾಗಿಸಿ, ಅದರ ಮೇಲೆ ಇಚ್ಚಿತ ಮೌಲ್ಯಗಳನ್ನು ಹೇರುತ್ತಾ ಅನಾದಿ ಕಾಲದಿಂದಲೂ  ತಮ್ಮ ಅಡಿಯಾಳಾಗಿಸಿಕೊಂಡು ಶೋಷಿಸುತ್ತಾ ಬಂದಿರುವ ಶಿಷ್ಟಸಂಸ್ಕೃತಿಯ ಕರಾಳ ಮುಖಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ. ಅಧ್ಯಯನದಲ್ಲಿ ಅವರ ಪೌರಾಣಿಕ ಹಿನ್ನೆಲೆಗಳನ್ನು ತಡಕಿ ತೆಗೆಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಅದು ಸಾಹಿತ್ಯ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಮಹತ್ವದ ಕಾರ್ಯವೆಂದು ಹೇಳಬಹುದು.
        ಚಾತರ್ುವಣರ್ಾಶ್ರಮ ಧರ್ಮಗಳನ್ನು ಸೃಷ್ಟಿಸಿ, ಪೋಷಿಸಿ, ಬೋಧಿಸಿ. ಬೆಳೆಸಿದ ಹಿಂದೂ ಸಮಾಜ, ಯಾವ ನಿಶ್ಚಿತ ಘಟ್ಟವನ್ನು ತಲುಪಿದೆ ಎಂದು ಊಹಿಸಲಾಗದು. ಭಾರತೀಯ ಸಮಾಜದಲ್ಲಿ, ಹಲವು ಕುಯುಕ್ತಿ ಬುದ್ಧಿಜೀವಿಗಳು ಧರ್ಮ ನೀತಿಗಳನ್ನು, ಮಾಮರ್ಿಕವಾಗಿ ತಮ್ಮ ಸ್ವಾರ್ಥಸಾಧನೆಗೆ ಆಳವಡಿಸಿಕೊಂಡಿರುವುದು ಕಾಣಬಹುದು. ಅಲ್ಲದೆ ಚಾತುವಣರ್ಾಶ್ರಮದ ಅಡಿಯಲ್ಲಿ ಔದ್ಯೋಗಿಕ ತಾರತಮ್ಯ, ಮೇಲು-ಕೀಳು, ಉತ್ತಮ-ಅಧಮ, ಪಂಚಮ-ಪರಿಚಾರಕರೆಂಬ ಅನುಚಿತ ಭಾವನೆಗಳ ವಿಷಬೀಜಗಳನ್ನು ಬಿತ್ತಿ, ಇದೀಗ ದುಭರ್ಾವನೆಗಳ ಜನರ ಸಮೂಹವನ್ನು ರೂಪಿಸಿದರುೆ.1 ಹೀಗೆ ಮಾನವನ ಬಾಂಧವ್ಯಕ್ಕೆ ಅನ್ಯಾಯವೆಸಗುತ್ತಾ ಬಂದರು. ಇದರಿಂದ ಹಲವರು ಬುದ್ಧಿಜೀವಿಗಳಾಗಿ, ಕೆಲವರು ಇವರ ಸೇವೆಗಾಗಿ, ಹಲವರು ಶ್ರಮಜೀವಿಗಳಾಗಿ ಮತ್ತೆ ಕೆಲವರು ಉತ್ತಮ ಮತ್ತು ಅಧಮ ವೃತ್ತಿಗಳಲ್ಲಿ ವಿಂಗಡಣೆಗೊಂಡರು. ಫಲಾಪೇಕ್ಷೆ ಪಡೆದ ಒಬ್ಬನು ಮತ್ತೊಬ್ಬನ ಉದ್ಯೋಗವನ್ನು ಅವಲಂಬಿಸದೆ, ತನ್ನ ಕೆಲಸವನ್ನೆ ಮುಂದುವರಿಸಿದರೆ  ಮೋಕ್ಷವನ್ನು ಪಡೆಯಬಹುದೆಂಬ ಸುಳ್ಳು ನಂಬಿಕೆಯನ್ನು ಜಾರಿಗೆ ತಂದರು. ತತ್ಪರಿಣಾಮವಾಗಿ ವೃತ್ತಿಗಳು ವಂಶಪಾರಂಪರಿಕತೆಯನ್ನು ಪಡೆದವು. ನಿಟ್ಟಿನಲ್ಲಿ ಛಲವಾದಿಗಳು ಕುಲ ವೃತ್ತಿಗಳಿಗೆ ಒಳಪಡುವಂತಾಯಿತು.
         ಶಿಷ್ಟವರ್ಗ ಇಂತಹ ಅನ್ಯಾಯಗಳನ್ನು ತಮ್ಮವರಲ್ಲಿಯೇ ಹಲವರಿಗೆ, ಬಹು ಯಶಸ್ವಿಯಾಗಿ ಪ್ರಯೋಗಿಸಿರುವುದನ್ನು ಕಾಣಬಹುದು. ವೇದಪುರಾಣಗಳಲ್ಲಿನ ಮೂಲತತ್ವಗಳಿಗೆ ಜಾಣ್ಮೆಯಿಂದ ಅಪಾರ್ಥಗಳನ್ನು ಕಲ್ಪಿಸಿದರು. ಚಾತುರ್ವಣರ್ಾಶ್ರಮಗಳ ಅಡಿಪಾಯದಲ್ಲಿ ಕ್ರಮೇಣ ಹುಟ್ಟು ಮತ್ತು ವಂಶಾವಳಿಗೆ ಪ್ರಾಧಾನ್ಯತೆಯನ್ನು ಕೊಡುತ್ತಾ ನೂರಾರು ಜಾತಿ ಅವುಗಳ ಧರ್ಮ ನೀತಿಗಳನ್ನು ನಿರೂಪಿಸಿದರು. ಅಂತೆಯೇ ಹಲವು ಗುರುಪೀಠ ಸಿಂಹಾಸನಾಧಿಪತಿಗಳು ಉದ್ಭವಿಸಿದರು. ಹಲವು ಪೌರಾಣಿಕ ಗ್ರಂಥಗಳನ್ನು ಬರೆದರು. ಅವುಗಳನ್ನು ಭದ್ರವಾಗಿ ರಕ್ಷಿಸಿದರು. ಆದರೆ ಇಲ್ಲಿನ ಅಪೂರ್ವ ಪೌರಾಣಿಕ ಹಿನ್ನಲೆಯಿರುವ ಅನೇಕ ಜನಾಂಗಗಳನ್ನು ನಿರ್ಲಕ್ಷಿಸಿದರು. ಅಂತಹ ನಿರ್ಲಕ್ಷಿತ ಜನಾಂಗದಲ್ಲಿ ಛಲವಾದಿ ಜನಾಂಗವೂ ಒಂದಾಗಿದೆ. ನಿರ್ಲಕ್ಷ್ಯಕ್ಕೆ ಕಾರಣಗಳನ್ನು ಹುಡುಕುವ ಪ್ರಯತ್ನವನ್ನು ಮಾಡಲಾಗಿದೆ.
    ಭಾರತದ ಮೂಲನಿವಾಸಿಗಳಾಗಿ ದ್ರಾವಿಡ ಸಂಸ್ಕೃತಿಯನ್ನು ಹೊಂದಿದವರಾಗಿ, ವೇದಾತೀತನಾದ ಶಿವನನ್ನು ತಮ್ಮ ಆರಾಧ್ಯ ದೈವವನ್ನಾಗಿ ಪಡೆದುಕೊಂಡು ಆದಿಶೈವಭಕ್ತರಾಗಿ ಬೆಳೆದು ಬಂದ, ಒಂದು ಪುರಾತನ ಜನಾಂಗವೆ ಛಲವಾದಿ ಜನಾಂಗವಾಗಿದೆ. ಅನಾದಿ ಕಾಲದಿಂದಲೂ ಶಿವ ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿ ಇವರ ಪಾತ್ರ ಹಿರಿಯದೆಂದು ಹೇಳಬಹುದಾಗಿದೆ. ಆದರೆ ಹಲವಾರು ಸಂಕ್ರಮಣಗಳಿಗೆ ಒಳಗಾಗಿ ಅವರ ಬದುಕು ಹೀನಾಯವಾಗಿ ಮಾರ್ಪಟ್ಟಿತು. ಇಂದಿಗೂ ಶಿವಭಕ್ತರಾಗಿ ಜೀವಿಸುತ್ತಿದ್ದು, ಆಚಾರ ನಡವಳಿಕೆಗಳಲ್ಲಿ ಶೈವ ಸಂಪ್ರದಾಯವನ್ನು ಬಿಡದೆ ಅನುಸರಿಸುತ್ತಲೇ ಬಂದಿದ್ದಾರೆ. ಅದರ ಸ್ಪಷ್ಟ ಕುರುಹುಗಳು ಇಂದಿಗೂ ಇವರಲ್ಲಿ ಉಳಿದಿವೆ. ಅವರ ಸಾಂಸ್ಕೃತಿಕ ಬದುಕಿನಲ್ಲಿ ಅವನ್ನು ಹುಡುಕುವ ಪ್ರಯತ್ನವೇ ಅಧ್ಯಯನವೆಂದು ಹೇಳಬಹುದು.
                                                        
    ಶೈವ ಸಂಪ್ರದಾಯದಲ್ಲಿ ಸರ್ವಸೃಷ್ಟಿಕರ್ತನಾದ ಶಿವನನ್ನು ಪಂಚಾನನ, ಪಂಚಮುಖ ಎಂಬ ಹೆಸರುಗಳಿಂದ ಆರಾಧಿಸವವರಲ್ಲಿ ಪಾಶುಪತ. ಕಾಳಾಮುಖ, ಪಂಚಮುಖ, ಲಕುಳ, ಮಾಹೇಶ್ವರ ಮತ್ತು ಕಾಪಾಲಿಕರೆಂಬ ಪಂಚಶೈವ ಸಂಪ್ರದಾಯಗಳಿದ್ದವು. ಇವುಗಳಲ್ಲಿ ಕಾಳಾಮುಖ ಮತ್ತು ಕಾಪಾಲಿಕ ಸಂಪ್ರದಾಯಗಳು ಪ್ರಮುಖವಾದವುಗಳು. ಕಾಳಾಮುಖಿಗಳು ಬ್ರಹ್ಮಚರ್ಯ ವ್ರತವನ್ನು ಆಚರಿಸಿ ಯೋಗಾಭ್ಯಾಸಗಳಿಂದ, ಸದಾಚಾರ ಸದ್ವರ್ತನೆಗಳಿಂದ ಲಿಂಗಪೂಜೆ ಮತ್ತು ಅದರ ಧಾರಣೆಗಳಿಂದ ಜೀವಿಸತೊಡಗಿದರು. ಆದರೆ ಕಾಪಾಲಿಕ ಸಂಪ್ರದಾಯದವರು ಕಾಳಭೈರವನ ಆರಾಧಕರಾಗಿ ದೇವತೆಯ ಹೆಸರಿನಲ್ಲಿ ಪ್ರಾಣಿ ಬಲಿಯನ್ನು ನೀಡಿ, ಕಾಳಿ, ಚಾಮುಂಡಿ, ಶಕ್ತಿ, ದುಗರ್ಿ ಮುಂತಾದ ಹೆಸರುಗಳಿಂದ, ಅವು ಪಾರ್ವತಿಯ ಅವತಾರವೆಂದು ನೈವೇಧ್ಯವನ್ನು ದೇವಿಗೆ ಅಪರ್ಿಸುತ್ತಾ ಲಿಂಗಪೂಜೆಯನ್ನು ಮಾಡುತ್ತಿದ್ದರು. ಜನಾಂಗದವರು ಮೊದಲಿಗೆ ಕಾಳಾಮುಖ ಸಂಪ್ರದಾಯವದರಾಗಿದ್ದು ಕ್ರಮೇಣ ಕಾಪಾಲಿಕ ಸಂಪ್ರದಾಯದವರಲ್ಲಿಯೂ ಬೆರೆಯ ತೊಡಗಿದರು. ಇಂದಿಗೂ ಜನಾಂಗ ಕಪಾಲಿಕರ ಸಂಪ್ರದಾಯಗಳನ್ನು ತಮ್ಮ ಸಂಸ್ಕೃತಿಯಲ್ಲಿ ಉಳಿಸಿಕೊಂಡಿದೆ. ಇವರ ಮದುವೆ, ಮರಣ ಸಂಸ್ಕಾರಗಳು, ಜನಪದ ವೈದ್ಯ, ಆಚಾರ ವಿಚಾರಗಳಲ್ಲಿ ಅವುಗಳನ್ನು ಕಾಣಬಹುದು.  ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ಭವ್ಯವಾದ ಪ್ರಾಚೀನ ಪಂಥಗಳ ಹೊಸ ಆಲೋಚನೆಗಳನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಬಹುದಾಗಿದೆ. ಅದಕ್ಕೆ ಅಧ್ಯಯನ ಮಹತ್ವದ್ದಾಗಿದೆ. 
  ವಿವಿಧ ವಾದ್ಯಕಾರಾಗಿದ್ದ ಛಲವಾದಿಗಳು, ಕಾಪಾಲಿಕರ ಪೂಜಾ ಸಂಪ್ರದಾಯದಲ್ಲಿ ಅವುಗಳನ್ನು ನುಡಿಸುತ್ತಾ ಅವರ ಸಂಪ್ರದಾಯಗಳಲ್ಲೂ ಭಾಗಿಯಾದರು. ಅವರ ಆಚಾರ ,ನಡವಳಿಕೆಗಳು ತಮ್ಮ ಧರ್ಮಕ್ಕೆ ಅಳವಡಿಸಿಕೊಂಡರು. ಹೀಗೆ ಸದಾಚಾರಿಗಳಿಂದಲೂ ಸುತ್ತಮುತ್ತಲ ಜನರಿಂದಲೂ, ಶೈವ ಸಂಪ್ರದಾಯಸ್ಥ ವಿವಿಧ ಸಂಪ್ರದಾಯದವರಿಂದಲೂ, ಇವರು ನಿರ್ಲಕ್ಷಕ್ಕೆ ಒಳಗಾದರು. ದಿಸೆಯಲ್ಲಿ ಉತ್ತಮರೆಂದು ಹೇಳಿಕೊಳ್ಳುವ ಸಮಾಜದ ಕೆಲವು ಶಿಷ್ಟವರ್ಗಗಳು ,ಅಲ್ಪ ಸಂಖ್ಯಾತರಾಗಿ ಕುಂಠಿತ ಆಥರ್ಿಕ ಪರಿಸ್ಥಿತಿಯಿಂದ ಅಲ್ಲಲ್ಲಿ ನೆಲೆಸಿದ್ದ ಜನರನ್ನು ತಮ್ಮ ಸೇವಾ ವೃತ್ತಿಗೆ, ಸಮಯ ಸಂದರ್ಭವನ್ನು ಅರಿತು ಬಲತ್ಕರಿಸ ತೊಡಗಿದರು. ಜೊತೆಗೆ ಇವರ ಪೂರ್ವ ಇತಿಹಾಸದ  ಆಚಾರ ವಿಚಾರಗಳನ್ನು, ಭಕ್ತಿಭಾವಗಳನ್ನು ಅನುಸರಿಸಲು ಎಡೆಗೊಡದಾದರು. ಹೀಗೆ ಭೌಗೋಳಿಕ, ಸಾಂಸ್ಕೃತಿಕ ಮತ್ತು ಪರಿಸರದ ವೈವಿಧ್ಯತೆಗಳಿಗೆ ಗುರಿಮಾಡಿದ ಶಿಷ್ಟವರ್ಗ ಜನರ ಪೌರಾಣಿಕ ಹಿನ್ನಲೆ, ಪೂವರ್ೇತಿಹಾಸ , ನಾಗರಿಕತೆ. ನಡವಳಿಕೆ, ಉದ್ಯೋಗ ಮುಂತಾದವುಗಳನ್ನು ನಿಗೂಢವಾಗಿರಿಸಿ, ಅವುಗಳ ವಿಚಾರ ವಿನಿಮಯಕ್ಕಾಗಲಿ, ಬೆಳವಣಿಗೆಗಾಗಲಿ, ಅನುವು ನೀಡದಾದರು. ಇದರಿಂದ ಉತ್ತಮ ಪರಂಪರೆ ಮತ್ತು ಇತಿಹಾಸಗಳ ಆಲೋಚನೆಗಳೆಲ್ಲಾ ಮಾಯವಾಗಿ ಮೌಢ್ಯಕ್ಕೆ ಬಲಿಯಾದರು ಮತ್ತು ತಮ್ಮ ಅಪೂರ್ವ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಮರೆತು ಹೋದರು. ಅದನ್ನು ಹೆಕ್ಕಿ ತೆಗೆಯುವ ಪ್ರಯತ್ನವೇ ಅಧ್ಯಯನದ ಆಶಯವಾಗಿದೆ.
                         
     ಕಾಲನಂತರದಲ್ಲಿ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಸಂಭವಿಸಿದ ಧರ್ಮ ಸಂಕ್ರಮಣದ ಬಿಸಿ ಇವರ ಮೇಲೆ ಯಥೇಚ್ಛವಾಗಿ ಆಗತೊಡಗಿದೆ. ಶುದ್ಧ ಶೈವಾಚಾರಿಗಳಾಗಿದ್ದ ಇವರ ಮೇಲೆ ಶಂಕರಾಚಾರ್ಯ ಹಾಗೂ ಶ್ರೀರಾಮಾನುಜಾಚಾರ್ಯರ ಪ್ರಭಾವವಾಯಿತು. ಅದರಿಂದ ಆಕಷರ್ಿತರಾದ ಅವರು, ಅದ್ವೈತ ಮತ್ತು ವಿಶಿಷ್ಟಾಧ್ವೈತ ವಿಚಾರಗಳಿಗೂ ಇವರು ಒಳಪಟ್ಟರು. ಅಲ್ಲದೆ ತತ್ವಗಳಿಂದ ಪ್ರಚೋಧಿತರಾಗಿ, ಶೈವಾಚರಣೆಯ ಜೊತೆಜೊತೆಯಲ್ಲಿಯೇ ನಾರಾಯಣನ ಪೂಜೆಯನ್ನು ಮಾಡಲು ತೊಡಗಿದರು. ಇದರಿಂದ ಜನರಲ್ಲಿ ಹರಿಹರರೆಂಬ ಭೇದವು ತೊಲಗಿ ಏಕದೈವೋಪಾಸಕ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತು. ಅಂದರೆ ಇವರ ಮನೆದೇವರುಗಳು ಶಿವ ಸಾಂಕೇತಿಕವಾಗಿ ಮತ್ತು ನಾರಾಯಣ ಸಾಂಕೇತಿಕವಾಗಿರುವುದನ್ನು ಕಾಣಬಹುದು. ಅದರಿಂದ ಇವರಲ್ಲಿ ಮೂಲ ಶೈವಾರಾಧಕರನ್ನು 'ಪ್ರಕೃತರು' ಎಂದೂ ವೈಷ್ಣವ ಆರಾಧಕರನ್ನು 'ತಿರುನಾಮದಾರೆಂದು' ಕರೆಯುತ್ತಾರೆ. ಇವೆರಡು ಸಂಪ್ರದಾಯಗಳು ಭಿನ್ನ ಸಾಂಸ್ಕೃತಿಕ ಆಶಯಗಳನ್ನು ಪಡೆದಿವೆ. ಅವುಗಳ ಅಧ್ಯಯನ ಸಂಸ್ಕೃತಿಯ ದೃಷ್ಟಿಯಿಂದ ವಿಶೇಷವೆಂದು ಹೇಳಬಹುದು.
  ದೇಶದಾದ್ಯಂತ ಸ್ಥಾಪಿಸಿರುವ ಜಗದ್ಗುರು ಸಿಂಹಾಸನಾದಿ ಪೀಠಗಳಲ್ಲಿಯೂ ಲಿಂಗಧಾರಣೆ ಹಾಗೂ ಅದರ ಪೂವರ್ಾಚನೆಗಳಿಂದ ಪರಶಿವನನ್ನು  ಆರಾಧಿಸುವಲ್ಲಿಯೂ, ದಲಿತ ಜನಾಂಗದವರು ಭಾಗಿಗಳಾಗಿ, ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು, ಕಹಳೆ, ಸೂರ್ಯವಾದನ ಮತ್ತು ಚಂದ್ರವಾದನಗಳನ್ನು ನುಡಿಸಲು ಹಕ್ಕುದಾರಾಗಿರುವುದರಿಂದಲೂ, ಕಾಲಗಳಲ್ಲಿ ಹೆಚ್ಚು ಹೆಚ್ಚಾಗಿ ಬಿಳಿಯ ಉಡುಪನ್ನು ಧರಿಸುವವರಾಗಿದ್ದರಿಂದಲೂ, ಇವರು ಏಕವಣರ್ಾತ್ಮಕರು. ಇವರಿಗೆ ಬ್ರಾಹ್ಮಣರಿಗೆ ಇರುವಂತೆ, ಷಟ್ ಕಮರ್ಾಚರಣೆಗಳು ಇಲ್ಲದಿರುವುದರಿಂದ  ಇವರನ್ನು ಏಕೋದೇವೋಪಾಸಕರೆಂದು ಪರಿಗಣಿಸಿ ಚಾತುರ್ವಣಾತ್ಮಕ ವೈದಿಕ ಧರ್ಮದಡಿಯಲ್ಲಿ ಬರುವ ವರ್ಗವಲ್ಲವೆಂಬುದನ್ನು ಇವರ ಪೌರಾಣಿಕ ಹಿನ್ನಲೆ, ಅಂದಿನ ಅವರ ನಾಗರಿಕತೆ ಮತ್ತು ಸಂಸ್ಕೃತಿಯಿಂದ ತಿಳಿದು ಬರುತ್ತದೆ2 ಆದರೂ ಒಂದು ಅರ್ಥಹೀನ ಸಂಪ್ರದಾಯಗಳಿಂದಲೂ, ಸುಧಾರಿತ ಆಥರ್ಿಕ ವ್ಯವಸ್ಥೆಗಳಿಂದಲೂ, ಅಪ್ರಮಾಣಿಕ ಗುಂಪುಗುಳಿತನಗಳಿಂದಲೂ ಮೊರೆಯಿತ್ತಿರುವ ನಮ್ಮ ಸಮಾಜವೂ ದಲಿತರ ಇಂದಿನ ನಿಸ್ಸಹಾಯಕತೆ ಮತ್ತು ಮುಗ್ಧತೆಗಳನ್ನು ಗಮನಿಸಿ ಇವರನ್ನು ಸೇವಾ ವೃತ್ತಿಗೆ  ಬಲಾತ್ಕರಿಸಿ ಶೋಷಣೆ ಮಾಡುತ್ತಿರುವುದು ನಿಜವಾಗಿಯೂ ಅನ್ಯಾಯವೆಂದು ಹೇಳಬೇಕಾಗುತ್ತದೆ.
       ದಿಸೆಯಲ್ಲಿ ಅವರ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಅನಿವಾರ್ಯತೆಯನ್ನು ಮನಗಾಣಬಹುದು. ಅಧ್ಯಯನವು ಕನ್ನಡ ಸಾಹಿತ್ಯಕ್ಕೆ ಮತ್ತು ಸಂಸ್ಕೃತಿಗೆ ಹೊಸ ಆಲೋಚನೆಗಳಿಗೆ ಅವಕಾಶ ಒದಗಿಸುತ್ತದೆ.
. ಛಲವಾದಿ ಪದದ ರೂಪ ನಿಷ್ಪತ್ತಿ

   ಕೋಲಾರ ಜಿಲ್ಲೆಯಲ್ಲಿ ಜನಾಂಗದವರನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಸಲಾದೋಳ್ಳು,. ,ಚಲುವಾದುಲು, ಮಾಲೋಳ್ಳು, ಹೊಲೆಯರು, ಬಲಗೈಯವರು, ಆದಿಕನರ್ಾಟಕ ,ಆದಿದ್ರಾವಿಡ-ಮುಂತಾದ ಹೆಸರುಗಳಿಂದ ಪ್ರಾದೇಶಿಕವಾಗಿ ಕರೆಯುತ್ತಾರೆ. ಆದರೆ ಎಲ್ಲಾ ಹೊಲೆಯರು ಛಲವಾದಿಗಳಲ್ಲ; ಆದರೆ ಛಲವಾದಿಗಳೆಲ್ಲ ಹೊಲೆಯರೆ ಆಗಿದ್ದಾರೆ. ಇವರನ್ನು ಪ್ರಾದೇಶಿಕವಾಗಿ 'ಸಲಾದೋಳ್ಳು'ಎಂದು ಕರೆಯುವುದು ರೂಢಿಯಾಗಿದೆ.
   'ಚಲುವಾದಿ' ಎಂದರೆ ದೃಢಸಂಕಲ್ಪವುರುವವನು, ಕುಳವಾಡಿ1,ಎಂದೂ  'ಚಲುವಾದಿ'. 'ಸಲಾದಿಗಳು', 'ಚೆನ್ನಯ್ಯ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. 'ಛಲವಾದಿ' ಎಂಬ ಪದದ ಜಾನಪದೀಯ ರೂಪವಾಗಿ, ಜನರ ಆಡುನುಡಿಯಲ್ಲಿ ಮಾರ್ಪಟ್ಟಿದೆ. ಆದರೂ ಗ್ರಾಮಗಳಲ್ಲಿ ಇಂದಿಗೂ ಅವರನ್ನು 'ಛಲವಾದಿ' ಎಂದು ಕರೆಯುವುದಿಲ್ಲ. 'ಸಲಾದಿ'ಎಂತಲೇ ಸರಳೀಕರಿಸಿ ಕರೆಯುವುದನ್ನು ಕಾಣುತ್ತೇವೆ. ಶಿವನ 'ಛಲ'ತೀರಿಸಲು ಹುಟ್ಟಿ ಬಂದವನಾದುದುರಿಂದ, ಶಿವಾಂಶ ಸಂಭೂತನಾದ ಛಲದಂಕಮಲ್ಲನ ವಂಶದವರಾದುರಿಂದ ಅವರನ್ನು 'ಛಲ'ಕ್ಕೆ ಛಲವಾದಿ ಎಂದು ಪುರಾಣಗಳಲ್ಲಿ ಕರೆದಿರುವುದು ಕಾಣಬುಹುದಾಗಿದೆ. ಅವನ ವಂಶಸ್ಥರನ್ನು 'ಛಲವಾದಿ'ಗಳೆಂದು ಕಾರಣದಿಂದ ಕರೆಯುತ್ತಾರೆ.
     ಕೋಲಾರ ಜಿಲ್ಲೆಯಲ್ಲಿ ಇವರನ್ನು ಕೆಲವು ಕಡೆ 'ಸಲಾದೊಳು'್ಳ ಎಂದು ಕರೆಯುತ್ತಾರೆ. ಅಲ್ಲದೆ 'ಮಾಲೋಳ್ಳು' ಮತ್ತು 'ಹೊಲೆಯ'ರೆಂದು ಸಾಂಸ್ಕೃತಿಕ ಹಿನ್ನಲೆಯಲ್ಲಿ  ಕರೆಯುವುದುಂಟು. ಆದರೆ ದಾಖಲೆಗಳಲ್ಲಿ ಕೆಲವು ತಾಲೂಕುಗಳಲ್ಲಿ 'ಆದಿಕನರ್ಾಟಕ' ಅಥವಾ 'ಆದಿದ್ರಾವಿಡ'ರೆಂದು ನಮೂದಾಗಿರುವುದನ್ನು ಕಾಣಬಹುದು. ಇದಕ್ಕೆ ಒಂದು ಕಾರಣವೂ ಇದೆ.1919 ಹೊತ್ತಿಗೆ ದಕ್ಷಿಣ ಭಾರತದ ವಿವಿಧ ಪ್ರಾಂತೀಯ ಸಕರ್ಾರಗಳು ಏಕ ಮಾದರಿಯ 'ನಿಮ್ನ ವರ್ಗಗಳ ಮೀಸಲಾತಿಯನ್ನು ಜಾರಿಗೊಳಿಸಿದ್ದವು. ಇದಾದನಂತರ 1922ರಲ್ಲಿ ಮದ್ರಾಸು ಪ್ರಾಂತೀಯ ಶಾಸಕಾಂಗ ಸಭೆಯೂ ಒಂದು ಮಹತ್ವದ ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯದಲ್ಲಿ ಶೋಷಿತ ಪಂಚಮ, ಅಸ್ಪೃಶ್ಯ ಹಾಗೂ ಇವುಗಳ ಉಪಜಾತಿಗಳೆಲ್ಲರೂ ಒಂದೇ ಎನ್ನುವಂತೆ ಮಾಡಲು ಐತಿಹಾಸಿಕ ನಿರ್ಣಯ ಕೈಗೊಂಡಿತು ಇದರ ಪ್ರಕಾರ  ಕನ್ನಡ ಭಾಷೆಯನ್ನಾಡುವವರೆಲ್ಲಾ 'ಆದಿಕನರ್ಾಟಕ, ತಮಿಳು ಮತ್ತು ಮಳೆಯಾಳಂ ಭಾಷಿಕರನ್ನು 'ಆದಿದ್ರಾವಿಡ' ಹಾಗೂ ತೆಲುಗು ಭಾಷಿಕರನ್ನು 'ಆದಿ ಆಂಧ್ರ'ರೆಂದು ಶಾಸಕಾಂಗ ಸಭೆ ನಾಮಕರಣ ಮಾಡಿತು2ಅಂದಿನಿಂದ ಇವರನ್ನು ಹೆಸರುಗಳಿಂದ ಕರೆಯುತ್ತಾರೆ. ಅಲ್ಲದೆ 1931 ನಂತರ ಅಂಬೇಡ್ಕರ್ ಅವರ ವಿಚಾರ ಧಾರೆಗೆ ಒಳಗಾಗಿ ಅಲ್ಲಲ್ಲಿ 'ಶೋಷಿತ ಜಾತಿಗಳ ಸಂಘ'ಗಳನ್ನು ಸಂಘಟಿಸಿದರು. ಇಂತಹ ಸಭೆಗಳಲ್ಲಿ ಜಾತಿಸೂಚಕ ಮತ್ತು ನಿಂದಾ ಪದಗಳ ಮೂಲಕ ಸಮುದಾಯಗಳನ್ನು ಗುತರ್ಿಸಬಾರದೆಂಬ ನಿರ್ಣಯಗಳನ್ನು ತೆಗೆದುಕೊಂಡರು. ಅಂದಿನಿಂದ ಎಲ್ಲಾ ಪ್ರಾಂತ್ಯಗಳಲ್ಲೂ ಹೊಸ ನಾಮಾಂಕಿತಗಳು ಜಾರಿಗೆ ಬಂದವು. ಅದಕ್ಕೂ ಪೂರ್ವದಲ್ಲಿ ಇವರನ್ನು 'ಸಲಾದಿವಾಳ್ಳೆಂದು ಪ್ರಾದೇಶಿಕವಾಗಿ ಕರೆಯುವುದು ವಾಡಿಕೆಯಲ್ಲಿತ್ತು. ಆದರೂ ಸಕರ್ಾರಿ ಜನಗಣತಿಯಲ್ಲಿ ಇವರ ಸಂಖ್ಯೆ, ಜಿಲ್ಲೆಯಲ್ಲಿ ಛಲವಾದಿ/ಚೆನ್ನಯ್ಯಗಳ-ಸುಮಾರು 0.5% ಜನರು ಇದ್ದಾರೆಂದು ದಾಖಲೆಗಳು ಹೇಳುತ್ತವೆ.3
ಪುರಾಣಗಳಲ್ಲಿ ಛಲದಂಕಮಲ್ಲ ಮತ್ತು ಅವನ ಪರಂಪರೆ:

        ಹಿಂದೆ ಸುರರು, ಯಕ್ಷರು ಮತ್ತು ಗಂಧರ್ವರೂ ಪ್ರಯಾಗದಲ್ಲಿ ಲೋಕಕಲ್ಯಾಣಾರ್ಥಕವಾಗಿ ಒಂದು ಮಹಾಯಾಗವನ್ನು ಏರ್ಪಡಿಸಿದರು. ಅದರ ಅಧ್ಯಕ್ಷತೆಯನ್ನು ಶಿವನು ವಹಿಸಿದ್ದನು. ಇದರಲ್ಲಿ ಮಹಾಋಷಿಗಳು, ನವಬ್ರಹ್ಮರೂ, ದೇವತೆಗಳೂ, ಜ್ಞಾನಿಗಳು, ವೇದವಿದ್ವಾಂಸರೂ ಅಲ್ಲದೆ ವಿಷ್ಣು ಬ್ರಹ್ಮಾದಿಗಳೂ ಭಾಗವಹಿಸಿದ್ದರು. ಇದೇ ಸಭೆಗೆ ಪ್ರಜಾಪತಿಗಳಲ್ಲಿ ಮುಖ್ಯನೂ ಬ್ರಹ್ಮಾಂಡಾಧಿಪತಿಯೂ ಆದ ದಕ್ಷಬ್ರಹ್ಮನೂ ಆಕಸ್ಮಿಕವಾಗಿ ಆಗಮಿಸಿದನು.
    ದಕ್ಷಬ್ರಹ್ಮನಿಗೆ ಸಕಲ ದೇವಾದಿದೇವತೆಗಳೂ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ನಮಸ್ಕರಿಸಿ ಪೂಜೆಯನ್ನು ಮಾಡಿ ಹಿಂದಿರುಗುತ್ತಿದ್ದರು. ಆದರೆ ಲೀಲಾಮಯನಾದ ಶಿವನು ನಮಸ್ಕರಿಸದೇ ಮೌನ ತಾಳಿದನು. ತುಂಬಾ ಗವರ್ಿಷ್ಠನೂ ಬ್ರಹ್ಮಾಂಡಾಧಿಪತಿಯೆಂಬ ಅಹಂಬಾವವುಳ್ಳವನೂ ಆದ ದಕ್ಷಬ್ರಹ್ಮನು ಶಿವನ ಮೌನವನ್ನು ಅನ್ಯತಾ ಭಾವಿಸಿದನು. ಕೋಪಗೊಂಡು ಕ್ರೂರ ದೃಷ್ಟಿಯಿಂದ ನೋಡಿದನು. ಅಲ್ಲದೆ ಎಲೈ ರುದ್ರನೇ ! ಭೂತ ಪ್ರೇತಗಳಿಂದ ಕೂಡಿ , ಗವರ್ಿಷ್ಟನಾಗಿ ಸದಾಚಾರವರಿಯದ ಕಾಮುಖನಾಗಿರುವ ನೀನು ಸಭೆಯ ಘನತೆಗೆ ಕುಂದನ್ನು ಉಂಟು ಮಾಡಿರುವೆ . ಆದುದರಿಂದ ನೀನು ಯಾವ ಯಜ್ಞಗಳಲ್ಲಿಯೂ ಪ್ರವೇಶವಿಲ್ಲದವನಾಗು. ಜಾತಿ ಕುಲಗೋತ್ರಗಳು ಇಲ್ಲದವನೂ, ಸ್ಮಶಾನ ವಾಸಿಯಾಗಿ ಅಪವಿತ್ರನಾಗುವ ನಿನಗೆ ಸುರರೊಡನೆ ಯಾವ ಯಜ್ಞ ಭಾಗವೂ ಇಲ್ಲವಾಗಲಿ ಎಂಬ ಕಠೋರವಾದ ಶಾಪವಿತ್ತನು.4
    ಇದರಿಂದ ನಂದೀಶ್ವರನು ಕೋಪಗೊಂಡನು. ದಕ್ಷಬ್ರಹ್ಮನನ್ನು ಕುರಿತು ಎಲೈ ದಕ್ಷ, ನೀನು ಮಹಾ ಮೂಢನು, ಮೂರ್ಖನು, ದುಷ್ಟನು ಆದ ಕಾರಣ ಶಿವನನ್ನು ಯಜ್ಞ ಬಾಹ್ಯನಾಗುವಂತೆ ಶಪಿಸಿರುವೆ. ಶಂಕರನು, ಸೃಷ್ಟಿ, ಲಯ ಸ್ಥಿತಿಗೆ ಅಧಿಪತಿಯಾಗಿರುವವನು ಎಂಬುದು ನಿನಗೆ ತಿಳಿದಿಲ್ಲವೆ, ಎಂದು ಅವನನ್ನು ತಿರಸ್ಕರಿಸಿ ನುಡಿದನು. ಆಗ ದಕ್ಷನಿಗೆ ಜ್ಞಾನೋದಯದ ಬದಲಿಗೆ  ಕೋಪ ಉಂಟಾಗಿ ನಂದಿಯನ್ನು ಶಿವಗಣವನ್ನು ಶಪಿಸಿದನು.  ಎಲೈ ನಂದಿ ಮತ್ತು ರುದ್ರ ಗಣಗಳೇ! ನೀವು ವೇದ ಬಾಹ್ಯರಾಗಿರಿ , ವೇದ ಮಾರ್ಗವನ್ನು ತ್ಯಜಿಸಿರಿ, ಮಹಷರ್ಿಗಳು ನಿಮ್ಮನ್ನು ಬಹಿಷ್ಕರಿಸಲಿ ,ನಾಸ್ತಿಕರಾಗಿ ಶಿಷ್ಟಾಚಾರವನ್ನು ಬಿಟ್ಟು ಮದ್ಯಪಾನಾದಿಗಳನ್ನು ಮಾಡುತ್ತಾ ಅಪವಿತ್ರವಾದ ಮೂಳೆಗಳನ್ನು ಧರಿಸಿರಿ  ಎಂದು ಶಪಿಸಿದನು.
    ಶಿಲಾದನ ಪುತ್ರನಾದ ನಂದಿಯು ದಕ್ಷನನ್ನು ಕುರಿತು ಎಲೈ ದಕ್ಷಬ್ರಹ್ಮ! ಶಿವ ದ್ವೇಷಿಯಾದ ನೀನು ವೇದವಾದವನ್ನೆ ಮಾಡುವವನಾದರೂ ವೇದಕ್ಕೆ ವಿಪರೀತದ ಅರ್ಥವನ್ನು ಮಾಡುತ್ತಾ ಮೂಢತೆಯಿಂದ  ಅದೇ ವೇದಾರ್ಥ, ಬೇರೆಯಿಲ್ಲ ಎಂದು ವಾದಿಸುವ ವೈದಿಕ ನಾಸ್ತಿಕನಾಗಿ ಜನಿಸು. ಕೇವಲ ಕಾಮ ಪ್ರಧಾನನಾಗಿ ,ಯಜ್ಞ ಯಾಗಾದಿಗಳಿಂದ ಸ್ವರ್ಗದಲ್ಲಿ ಆಸಕ್ತನಾಗಿದ್ದು , ಮುಕ್ತಿಮಾರ್ಗಕ್ಕೆ ಬರದಂತವನಾಗು . ನಿನ್ನವರು ಕ್ರೋಧ ,ಲೋಭ ,ಮದ ಮತ್ತು ಮತ್ಸರಗಳುಳ್ಳ ಭಿಕ್ಷುಕರಾಗಿ ಮಯರ್ಾದೆಯಿಲ್ಲದವರಾಗಿರಿ. ವೇದಮಾರ್ಗದಿಂದ ಶೂದ್ರರಿಗೆ ಕರ್ಮಗಳನ್ನು ಮಾಡಿಸುವವರಾಗಿ ಸದಾ ದುದರ್ಾನಗಳನ್ನೆ ತೆಗೆದುಕೊಳ್ಳುತ್ತಾ ದರಿದ್ರರಾಗಿರಿ ಎಂಬ ಮರುಶಾಪವನ್ನಿತ್ತನು. ರೀತಿಯ ಶಾಪ ಮರುಶಾಪಗಳಿಂದ ಸಭೆಯ ಶಾಂತ ವಾತಾವರಣವು ಕದಡಿತು. ಇದುವಿರವಿಗೂ ಮೌನವಾಗಿದ್ದ ಶಿವನು ನಂದೀಶ್ವರನನ್ನು ಸಮಾಧಾನಗೊಳಿಸಿದನು. ತನಗೆ ಯಾವ ಶಾಪವೂ ತಟ್ಟುವುದಿಲ್ಲವೆಂದು ಆಶರ್ೀದಿಸಿದನು. ವಿಷ್ಣುಬ್ರಹ್ಮಾದಿ ದೇವತೆಗಳು ಶಾಂತಿ ಕಾಪಾಡುವಂತೆ ಭಿನ್ನವಿಸಿದರು. ಯಾಗವೂ ಪೂರ್ಣವಾಯಿತು. ಆದರೆ ದಕ್ಷನಿಗೆ ಶಿವನ ಮೇಲಿನ ಕೋಪತಾಪಗಳು ದೂರವಾಗಲಿಲ್ಲ.  ಸೂಕ್ತ ಸಮಯದಲ್ಲಿ ಶಿವನಿಗೆ ದ್ರೋಹ ಮತ್ತು ಅಪಮಾನವನ್ನು ಮಾಡಲೇಬೇಕೆಂಬ ದೃಢನಿಶ್ಚಯಕ್ಕೆ ಬಂದನು.
    ಕೆಲಕಾಲದ ನಂತರ ದಕ್ಷನು ತನ್ನಲ್ಲಿನ ಅಹಂ ಮತ್ತು ಶಿವನಿಗೆ ಅಪಮಾನ ಮಾಡುವ ದುರುದ್ದೇಶದಿಂದ ಒಂದು ಮಹಾಯಜ್ಞವನ್ನು ಆರಂಭಿಸಿದನು. ಯಜ್ಞ ಕಾಲದಲ್ಲಿ ಶಿವನನ್ನು ಆಹ್ವಾನಿಸುವುದಾಗಲಿ ಕೊನೆಗೆ ದೇವಾಸುರರ ಸಮ್ಮುಖದಲ್ಲಿ ಯಜ್ಞಭಾಗವನ್ನು ಅವನಿಗೆ ನೀಡುವುದಾಗಲೀ ಮಾಡಬಾರದೆಂದು ತೀಮರ್ಾನಿಸಿದನು. ಶಿವನನ್ನುಳಿದು, ದೇವಾಸುರನ್ನೂ ಮಹಾಮುನಿಗಳನ್ನೂ ಆಹ್ವಾನಿಸಿದನು.
    ತನ್ನ ಹಿರಿಯ ಮಗಳಾದ ಸತಿದೇವಿಯನ್ನು ಬಿಟ್ಟು ಉಳಿದ ಏಳು ಜನ ಪುತ್ರಿಯರನ್ನು ಮತ್ತು ಅವರ ಕುಟುಂಬ ವರ್ಗದವರನ್ನು ಆಮಂತ್ರಿಸಿದನು. ಅವರನ್ನು ಅತಿ ವಿಜೃಂಭಣೆಯಿಂದ ಬರ ಮಾಡಿಕೊಂಡನು. ಯಜ್ಞಕಾರ್ಯವನ್ನು 'ಕನಖಲ'ವೆಂಬ ತೀರ್ಥಕ್ಷೇತ್ರದಲ್ಲಿ ನಡೆಸಲು ನಿರ್ಧರಿಸಿದನು. ಅಷ್ಟದಿಕ್ಪಾಲಕರು, ಯಜ್ಞಶಾಲೆಯ ದ್ವಾರಪಾಲಕರಾಗಿಯೂ ಮಹಾವಿಷ್ಣುವು, ಅಧಿಷ್ಠಕತೃವಾಗಿಯೂ ಬ್ರಹ್ಮನೂ, ವೇದ ಮಂತ್ರಗಳ ನಿದರ್ೇಶಕನಾಗಿಯೂ ಭೃಗುಮುನಿ ಮುಂತಾದ ತಫೋಧನರು ಋತ್ವಿಜರಾಗಿಯೂ ಯಜ್ಞಕಾರ್ಯಕ್ಕೆ ನಿಂತರು. ಗಂಧರ್ವ, ವಿದ್ಯಾಧರ, ಸಿದ್ಧ, ದ್ವಾದಶಾಧಿತ್ಯ, ನಾಗಪುರುಷ ,ಕಿನ್ನರ, ಕಿಂಪುರುಷರೂ ರಾಜಷರ್ಿ ಅಷ್ಟುವಸುಗಳು ಮುಂತಾದ ಗಣದೇವತೆಗಳೂ ಯಜ್ಞದಲ್ಲಿ ಭಾಗವಹಿಸಿದರು. ಆದರೆ ಶಿವನೂ ಕಾಣಲಿಲ್ಲ. ಇದನ್ನು ದಧೀಚಿ ಮುನಿಯು ಗಮನಿಸಿದನು. ಅಲ್ಲದೆ ಎಲ್ಲರಿಗೂ ಕೇಳುವಂತೆ ಶಿವನೇಕೆ ಕಾರ್ಯಕ್ಕೆ ಬಂದಿಲ್ಲವೆಂದೂ, ಶಿವನ ಅನುಗ್ರಹವಿಲ್ಲದ ಕಾರ್ಯಗಳು ಅಮಂಗಳಕರವೂ ಅಸಂಪೂರ್ಣವೂ ಆಗುವವುಎಂದು ದಧಿಚಿ ಮುನಿಯು ಹೇಳಿದನು. ಆದರೆ ದಕ್ಷನು ಕೋಪದಿಂದ ಶಿವನನ್ನು ಅಪಹಾಸ್ಯ ಮಾಡುತ್ತಾ ದಧೀಚಿ ಮುನಿಯನ್ನು ಕುರಿತು ಸಕಲ ಕಾರಣಕತೃವೂ ಸಕಲ ರಕ್ಷಕನೂ ಸವರ್ಾಂತರಯಾಮಿಯಾದ, ಯಾವ ದೇವನಲ್ಲಿ ವೇದಗಳು ಯಜ್ಞಗಳು ಮಿಕ್ಕೆಲ್ಲಾ ವೈದಿಕ ಲೌಕಿಕ ಕರ್ಮಗಳು ನೆಲೆಸಿರುತ್ತವೆಯೋ ಅಂತಹ ಮಾಹಾವಿಷ್ಣುವೇ ಯಜ್ಞಾದಿಷ್ಠಾಕತೃವಾಗಿರುವಾಗ, ಜನಪಿತಾಮಹನೂ ವೇದ ಪುರುಷ ಉಪನಿಷತ್ತುಗಳು, ಇವುಗಳೊಡನೆ ಬಂದಿರುವ ಬ್ರಹನೇ ಯಜ್ಞ ಕಾರ್ಯನಿರತನಾಗಿರುವಾಗ, ವೇದಾಂತಗಳ ಸಂಪೂರ್ಣ ರಹಸ್ಯಗಳನ್ನು ಬಲ್ಲ ತಪೋದನರೂ ಜಿತೇಂದ್ರರೂ ಶಾಂತರೂ ಆದ ನೀವೆಲ್ಲಾ ಭಾಗಿಗಳಾಗಿರುವಾಗ , ದುರಹಂಕಾರಿಯೂ ಭೂತಪ್ರೇತಗಳಿಗೆ ಒಡೆಯನಾದ ಮೂಢ ಶಿವನಿಲ್ಲದೆ ತೊಂದರೆಯಾಗದು ಎಂದು ಹೇಳಿದನು. ಇದರಿಂದ ಕೋಪಗೊಂಡ ದಿಧೀಚಿ ಮುನಿಯು ದೇವಾನುದೇವತೆಗಳ, ಋಷಿಗಳ ಸಮ್ಮುಖದಲ್ಲಿ ಎಲೈ ದಕ್ಷಬ್ರಹ್ಮನೇ ! ಸರ್ವಕರ್ತನಾದ ಶಿವನನ್ನು ಇಂತಹ ಮಹಾಯಜ್ಞ ಕಾಲದಲ್ಲಿ ಉದಾಸೀನಿಸುವುದು ಸರ್ವದಾ ಸಲ್ಲದು. ಶಿವನಿಲ್ಲದ ಯಜ್ಞವು ಅಪೂರ್ಣ. ಈಗಲೂ ಸಮಯ ಮೀರಿಲ್ಲ ಶಿವನನ್ನು ಆಹ್ವಾನಿಸು. ಯಜ್ಞ ಕಾರ್ಯವನ್ನು ಪೂರ್ಣಗೊಳಿಸುಎಂದು ದೃಢ ಹೇಳಿದನು. ಆದರೆ ದಕ್ಷಬ್ರಹ್ಮನು ಅತೀವ ಕೋಪದಿಂದ ಶಿವನಿಂದೆಯನ್ನು ಮುಂದುವರಿಸಿದನು. ಇದರಿಂದ ಮನನೊಂದ ಮುನಿಯು ದಕ್ಷನಿಗೆ  ಮುಂದೆ ನಿನಗೆ ಅಮಂಗಳವಾಗುವುದು ಎಂದು ಸೂಚಿಸಿ ತನ್ನ ಆಶ್ರಮಕ್ಕೆ ತೆರಳಿದನು. ಮುನಿಯ ಮಾರ್ಗವನ್ನೇ ಅನೇಕ ಶಿವಭಕ್ತರೂ ಅನುಸರಿಸಿದರು. ದಕ್ಷಬ್ರಹ್ಮನಿಗೆ ಶಾಪವನ್ನಿತ್ತು ತಮ್ಮ ತಮ್ಮ ಆಶ್ರಮಗಳಿಗೆ ಹಿಂದಿರುಗಿದರು. ಶಿವ ದೋಹಿಯಾದ ದಕ್ಷನ ಮನವಿಯ ಮೇರೆಗೆ ಮುನಿವರ್ಯರು ಯಜ್ಞಕಾರ್ಯವನ್ನು ಮುಂದುವರಿಸಲು ಸಿದ್ಧರಾದರು.5
   ದಕ್ಷಬ್ರಹ್ಮನ ಹಿರಿಯ ಮಗಳಾದ ಸತಿದೇವಿಯು ತನ್ನ ಪ್ರಾಣ ಸಖಿಯಾದ ವಿಜಯೆಯಿಂದ ಯಜ್ಞದ ಸುದ್ಧಿಯನ್ನು ಅರಿತಳು. ಯಜ್ಞ ಕಾರ್ಯಕ್ಕೆ ಹೋಗುವ ಆಸೆಯನ್ನು ತಳೆದಳು. ತನ್ನ ಪತಿಯಾದ ಶಿವನಲ್ಲಿ ಮೊರೆಯಿಟ್ಟಳು. ಆದರೆ ಶಿವನು, ಕರೆಯದೆ ಹೋಗುವುದು ಅವಮಾನಕ್ಕೆ ಆಹ್ವಾನ ನೀಡಿದಂತೆ ಎಂದು ಹೇಳಿದನಾದರೂ ಸತಿದೇವಿಯ ಅಭಿಲಾಸೆ ಬದಲಾಗಲಿಲ್ಲ. ಶಿವನು ಒಲ್ಲದ ಮನಸಿನಿಂದ ಸಮ್ಮತಿ ಸೂಚಿಸಿದರು. ಸವರ್ಾಲಂಕಾರ ಭೂಷಿತೆಯಾಗಿ ನಂದೀಶ್ವರ ಮತ್ತು ಅರವತ್ತು ಸಾವಿರ ಗಣಗಳೊಡಗೂಡಿ ತಂದೆಯ ಯಾಗ ಶಾಲೆಗೆ ಅತುತ್ಸಾಹದಿಂದ ತೆರಳಿ ಬಂದರು.
    ಯಜ್ಞ ಶಾಲೆಗೆ ಬಂದ ಸತಿದೇವಿಯನ್ನು ಕಂಡು ತಾಯಿ ಹಷರ್ಿತಳಾದಳು. ಆದರೆ ತಂದೆಯಾದ ದಕ್ಷನು ನಿರಾಸಕ್ತ ಮುಖ ಭಾವವನ್ನು ತಳೆದನು. ಅಲ್ಲಿನ ಯಜ್ಞ ಕಾರ್ಯಕ್ರಮಗಳನ್ನು ಸತಿದೇವಿಯು ಗಮನಿಸಿದಳು. ಕಾರ್ಯದಲ್ಲಿ ದೇವಾನು ದೇವತೆಗಳೂ ಮಹಷರ್ಿಗಳು ಭಾಗವಹಿಸಿರುವುದನ್ನು ಕಂಡಳು. ಶಿವನಿಗೆ ಆಹ್ವಾನ ನೀಡದಿರುವುದು ,ಶಿವನ ಅನುಪಸ್ಥಿತಿಯಿಂದ ಮನ ನೊಂದಳು. ತನ್ನ ತಂದೆ ಹಾಗೂ ಅಲ್ಲಿ ಅಲ್ಲಿ ನೆರೆದಿದ್ದ ಸರ್ವರನ್ನು ಕುರಿತು ಎಲೈ ದಕ್ಷ ತಂದೆಯೇ! ಶಿವನು, ಪರಮ ಮಂಗಳ ಸ್ವರೂಪದವನೂ ಯಜ್ಞ ಸ್ವರೂಪಿಯೂ ಯಜ್ಞ ಸಾಧಕನೂ ಸ್ಮರಿಸಿದ ಮಾತ್ರಕ್ಕೆ ಪರಿಶುದ್ಧಗೊಳಿಸುವವನೂ ಆಗಿರುವನು. ದ್ರವ್ಯ , ಮಂತ್ರ, ಹವ್ಯ, ಕವ್ಯ ಮೂಂತಾದ ಯಜ್ಞಾಂಗಗಳೆಲ್ಲವೂ ಶಿವ ಸ್ವರೂಪಿಗಳು. ಅಂತಹ ಶಿವನನ್ನೇ  ಆಹ್ವಾನಿಸದೇ ನೆರೆವೇರಿಸುತ್ತಿರುವ ಕಾರ್ಯವು ಅಪವಿತ್ರವೆಂಬುದನ್ನು ಅರಿಯಲಾರೆಯಾ? ಎಂದು ಕಠೋರವಾಗಿ ನುಡಿದಳು.
    ಸತಿದೇವಿಯ ಮಾತುಗಳಿಂದ ದಕ್ಷನು ಕೋಪಗೊಂಡನು. ಅಲ್ಲದೆ ಮಗಳಾದ ಸತಿದೇವಿಯನ್ನು ಹಾಗೂ ಅವಳ ಪತಿಯಾದ ಶಿವನನ್ನು ಹೀಯಾಳಿಸಿದನು. ಅವಳಿಗೆ ಯಾವ ಗೌರವ ,ಮನ್ನಣೆಯನ್ನು ನೀಡದೆ ತುಂಬಾ ಅಪಮಾನದ ನುಡಿಗಳನ್ನು ನುಡಿದನು. ಅಲ್ಲದೆ ಎಲೌ ಸತಿಯೇ ! ನಿಮ್ಮ ಪತಿಯು ಅಮಂಗಳಕರನೂ ಕುಲಗೋತ್ರವಿಲ್ಲದವನೂ ವೇದಮಾರ್ಗಗಳಿಂದ ಬಹಿಷ್ಕೃತನೂ ಭೂತಪ್ರೇತ ಪಿಶಾಚಿಗಳಿಗೆ ಅಧಿಪತಿಯೂ ಮತ್ತು ಅಪವಿತ್ರನೂ ಆಗಿರುವನು. ಬ್ರಹ್ಮನ ಮರುಳು ಮಾತುಗಳಿಗೆ ಮಣಿದು ನಿನ್ನನ್ನು ಅವನಿಗೆ ಕೊಟ್ಟು ಮದುವೆ ಮಾಡಿದೆನು. ಇಂತಹವನ ಸತಿಯಾದ ನೀನು ನಿನ್ನ ಗೌರವವನ್ನು ಮೊದಲು ಕಾಪಾಡಿಕೋ ಎಂದು ಕಟುವಾಗಿ ನುಡಿದನು. ಶಿವನಿಂದೆ ಮತ್ತು ಆತ್ಮಗೌರವವನ್ನು ಧೂಳೀಪಟವಾಗಿಸುವ ಮಾತುಗಳಿಂದ ತಲ್ಲಣಗೊಂಡಳು. ಮಾನಸಿಕ ಉದ್ವೇಗ ಮತ್ತು ಅಪಮಾನಗಳಿಂದ ಅನ್ಯಮಾರ್ಗ ಕಾಣದೆ ಒಂದು ಸೂಕ್ತ ನಿಧರ್ಾರಕ್ಕೆ ಬಂದಳು. ತನ್ನ ತಂದೆಯನ್ನು ಕುರಿತು  ನೀನು ಸ್ವಲ್ಪ ಕಾಲದಲ್ಲಿಯೇ ಮಹತ್ತರವಾದ ದುಃಖವನ್ನು ಅನುಭವಿಸಿ, ಮರಣ ಕಾಲದಲ್ಲಿ ಮಹಾಯಾತನೆಯನ್ನು ಹೊಂದುವೆ ಎಂದು ಶಾಪವಿತ್ತಳು.
     ಸತಿದೇವಿಗೆ ತನ್ನ ಆತ್ಮ ಗೌರವ ಹಾಳು ಮಾಡಿಕೊಂಡಿರುವ ತನ್ನ ದೇಹ ಅಪವಿತ್ರವೆಂಬ ಭಾವನೆ ಉಂಟಾಯಿತು. ಯಜ್ಞಶಾಲೆಯ ಉತ್ತರ ದಿಕ್ಕಿನಲ್ಲಿರುವ ಯಜ್ಞ ಕುಂಡದ ಹತ್ತಿರಕ್ಕೆ ನಡೆದು, ಯೋಗಮಾರ್ಗದಿಂದ ತಾನೇ ಉತ್ಪಾದಿಸಿಕೊಂಡ ಅಗ್ನಿಯಿಂದ ತನ್ನ ಶರೀರವನ್ನು ದಹಿಸಿಕೊಂಡಳು. ಇದರಿಂದ ದೇವಾನುದೇವತೆಗಳೂ  ದುಃಖತಪ್ತರಾದರು. ಪ್ರಥಮಗಣಗಳೂ ನಂದೀಶ್ವರನೂ ಕೋಪದಿಂದ ತಮ್ಮ ಆಯುಧಗಳನ್ನು ಝಳಪಿಸುತ್ತಾ ಹಾಹಾಕಾರ ಮಾಡಿದರು. ದೇವತೆಗಳು, ದೇವಮುನಿಗಳು ಭಯಭೀತರಾಗಿ ಮುಂದಿನ ಪರಿಣಾಮವನ್ನು ಕಾತುರತೆಯಿಂದ ನೋಡುತ್ತಿದ್ದರು.
    ಒಂದು ಮಹೂರ್ತ ಕಾಲದೊಳಗೆ  ಆಕಾಶದಲ್ಲಿ ಮಿಂಚಿನ ಪ್ರಭೆಯುಂಟಾಗಿ, ಕಠೋರವಾದ ಹಾಗೂ ಸ್ಪಷ್ಟವಾದ ಅಶರೀವಾಣಿ ಕೇಳಿಬಂದಿತು. ಎಲೈ ದಕ್ಷನೇ ! ನೀನು ದುರಾಚಾರಿಯೂ ದುರಹಂಕಾರಿಯೂ ಆಗಿ ಶಿವನ ವೈರವನ್ನು ತಳೆದು ಆತನ ಸತಿದೇವಿಯನ್ನು ಅವಮಾನಿಸಿರುವೆ. ಕೊನೆಗೆ ಆಕೆಯು ತನ್ನ ಪ್ರಾಣವನ್ನು ಯಾಗಶಾಲೆಯಲ್ಲೆ ತೆತ್ತಳು. ಪರಮಭಕ್ತನಾದ ದಧಿಚಿಯ ಮಾತುಗಳನ್ನು ಗಮನಿಸಲಿಲ್ಲ. ಸತಿದೇವಿಯ ಪ್ರಾಣರ್ಾಪಣೆಯಿಂದ ನಿನಗೆ ಸ್ತ್ರೀಹತ್ಯಾ ದೋಷವು ಬಂದಿರುವುದು. ಎಲೈ ದೇವದಾನವರುಗಳೇ! ದುರಾತ್ಮನಾದ ದಕ್ಷಬ್ರಹ್ಮನಿಗೆ ಯಜ್ಞ ಸಹಾಯವನ್ನು ತೊರೆದು ನಿಮ್ಮ ನಿಮ್ಮ ಸ್ಥಾನಗಳಿಗೆ ಮರಳಿ. ತಡ ಮಾಡಬೇಡಿರಿ. ಪರಮಶಿವನ ರುದ್ರಾವತಾರವುಂಟಾಗುವುದು. ಅಶರೀರವಾಣಿಯಿಂದ ದೇವಾನುದೇವತೆಗಳು ಭಯಗೊಂಡರು.
     ಆಗ ಆಗಸದಲ್ಲಿ ಮತ್ತೊಮ್ಮೆ ಭಯಂಕರ ಶಬ್ದವುಂಟಾಗಿ ವಾಯುವಿನಲ್ಲಿ ಪ್ರತಿಧ್ವನಿಗೊಡುತ್ತಿರಲು, ನಂದೀಶ್ವರನು, ತಾಯಿಯಾದ ಸತಿದೇವಿಯ ಪ್ರಾಣರ್ಾಪಣೆಯಿಂದ ಮಹಾಕೋಪಗೊಂಡು, ದಿವ್ಯಧ್ವನಿಯ ದಿಕ್ಕನ್ನೆ ನೋಡುತ್ತಿರಲು ಪರಮಶಿವನ ಅಂಶದಿಂದ ಉಂಟಾದ ಒಂದು ದೃಢಕಾಯದ ಪುರುಷಾಕೃತಿಯು ಆಕಾಶದಲ್ಲಿ ಉದ್ಭವಿಸಿ, ಶಿವನಾಮಸ್ಮರಣೆ ಮಾಡುತ್ತಾ, ನಂದೀಶನಿಗೆ ನಮಸ್ಕರಿಸಿ ಹೀಗೆ ನುಡಿಯಿತು. ಗಗನೋದ್ಭವನಾದ ನಾನು ಶಿವನ ವಾಂಛಲ್ಯವೇ ಆಗಿರುವೆನು. ಈಗ ನನ್ನಿಂದ ಆಗಬೇಕಾದುದೇನು? ಎಂದು ನಂದೀಶ್ವರನನ್ನು ಬೇಡಿದನು. ಆಗ ನಂದೀಶ್ವರನು ಶಿವನಾಮ ಸ್ಮರಣೆ ಮಾಡುತ್ತಾ ಶಿವದೂತನಾಗಿ ಆಕಾಶದಿಂದ ಉದ್ಭವಿಸಿರುವವನು ನೀನು. ಆದುದುರಿಂದ ಅವನಿಗೆ 'ಛಲದಂಕಮಲ್ಲ'ನೆಂದು ಹೆಸರಿಟ್ಟನು. ಅಲ್ಲದೆ ಸಂತಸದಿಂದ ತನ್ನಲ್ಲಿನ ಒಂದು ಮಹಾಗದೆಯನ್ನು ಅವನಿಗೆ ಕೊಟ್ಟನು.  ಮಹಾಗದೆಯಿಂದ ದಕ್ಷನನ್ನು, ಅವನಿಗೆ ಸಹಾಯಕರಾಗಿ ಬರುವ ಎಲ್ಲರನ್ನೂ ಸಂಹರಿಸಿ, ಶಿವನ 'ಛಲ'ವನ್ನು ಪೂರ್ಣಗೊಳಿಸು ಎಂದು ಆಶರ್ೀವದಿಸಿದನು.
    ವೇಳೆಗಾಗಲೆ ದಕ್ಷನ ಸಂಹಾರಕ್ಕಾಗಿ ಪ್ರಥಮ ಗಣಗಳು ಮುಂದಾಗಿದ್ದವು. ಜತೆಗೆ ಛಲದಂಕಮಲ್ಲನೂ ನಂದೀಶ್ವರರ ಆಜ್ಞೆಯಂತೆ ದಕ್ಷನ ಸಹಾಯಕರನ್ನು ನಾಶಗೊಳಿಸುತ್ತಿರುವುದನ್ನು ದಕ್ಷನು ಗಮನಿಸಿ ಭಯಗೊಂಡನು. ಹೆದರುತ್ತಾ ಅಧ್ವಯರ್ುವಾದ ಭೃಗುಮುನಿಯನ್ನು ಆಶ್ರಯಿಸಿದನು. ಆಗ ಮುನಿಯು ಯಜ್ಞ ಶತ್ರುವನ್ನು ನಾಶ ಮಾಡುವ ಯಜರ್ುವೇದದ ವಾಕ್ಯದಿಂದ ಹೋಮ ಮಾಡಿದನು. ಕೂಡಲೇ ಅಗ್ನಿಯಿಂದ ಋಭುಗಲೆಂಬ ರಾಕ್ಷಸರು ಸಹಸ್ರ ಸಂಖ್ಯೆಯಲ್ಲಿ ಜನಿಸಿದರು. ಪ್ರಥಮ ಗಣಗಳೊಡನೆ ಬೆಂಕಿಯ ಕೊಳ್ಳಿಗಳಿಂದ ಕಾದಾಡಿದರು. ಆದರೆ ಛಲದಂಕಮಲ್ಲನು ಇವರನ್ನೆಲ್ಲ ಸಂಹರಿಸಿದನು. ಅಲ್ಲದೆ ಯಾಗ ರಕ್ಷಕರನ್ನು ಸಂಹರಿಸುತ್ತಿದ್ದನು. ಇದನ್ನು ಕಂಡ ದಕ್ಷನು ಭಯಗೊಂಡು ವಿಷ್ಣುವಿನ ಮೊರೆಯೊಕ್ಕನು.
     ಹಿಂದೆ ಕ್ಷುವ-ದಧೀಚಿ ಮತ್ತು ವಿಷ್ಣುವಿಗೆ ಸಂವಾದ ಏರ್ಪಟ್ಟಿತ್ತು. ಆಗ ಯುದ್ಧದ ಸಮಯದಲ್ಲಿ ಎಲ್ಲಾ ದೇವಗಣಗಳೊಂದಿಗೆ ದಗ್ಧನಾಬೇಕೆನ್ನುವ ಶಾಪವನ್ನು ದಧೀಚಿಯಿಂದ ಪಡೆದಿದ್ದನು. ಆದರೆ ಶಿವನನ್ನು ಆತನ ಅಪಾರ  ಮಹಿಮೆಯನ್ನು ಅಲಕ್ಷಿಸಿ, ಮಾಯಗೊಳಗಾಗಿ ದಕ್ಷನ ಯಜ್ಞಕ್ಕೆ ಹಾಗೂ ಅವನ ಬೆಂಬಲಕ್ಕೆ ಒಪ್ಪಿದ್ದನು.6 ಹೀಗಾಗಿ ಹರಿಯು ಇಂದ್ರಾದಿ ದೇವತೆಗಳೊಡನೆ ಯುದ್ಧಕ್ಕೆ ನಿಂತನು. ಆಗ ಛಲದಂಕಮಲ್ಲನನ್ನು ಮುಂದಿಟ್ಟುಕೊಂಡು ನಂದೀಶ್ವರರೂ ಮತ್ತು ರುದ್ರಗಣಾಧಿಪರೂ ಯುದ್ಧಕ್ಕೆ ನಿಂತರು. ಉಭಯರೂ ಘೋರವಾದ ಯುದ್ಧ ಮಾಡುತ್ತಿರಲು ಬ್ರಹ್ಮಾಂಡದಲ್ಲೆಲ್ಲಾ ಹಾಹಾಕಾರವುಂಟಾಯಿತು.
    ಸಮಯದಲ್ಲಿ ನಂದೀಶ್ವರನು ಶಿವನಿಗೆ ವಿದ್ಯಮಾನಗಳನ್ನು ತಿಳಿಸಿ ,ಅಪ್ಪಣೆ ಪಡೆಯಲು ಆಕಾಶ ಮಾರ್ಗಕ್ಕೇರಿದನು. ಆದರೆ ದಕ್ಷನ ಸಹಾಯಕರು ತಡೆದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಛಲದಂಕಮಲ್ಲನು ಆಗಸಕ್ಕೇರಿ ಶತ್ರುಗಳನ್ನು ತಡೆದು ಸದೆಬಡಿದನು. ಅಲ್ಲದೆ ನಂದೀಶ್ವರರೊಡನೆ ಕೈಲಾಸಕ್ಕೆ ತೆರಳಿ ಶಿವನನ್ನು ಕಂಡು ನಮಸ್ಕರಿಸಿದನು. ಆದರೆ ತನ್ನ ದಿವ್ಯದೃಷ್ಟಿಯಿಂದಲೇ ಎಲ್ಲವನ್ನೂ ಗ್ರಹಿಸಿದ್ದ ಶಿವನೂ ಮೌನವಾಗೇ ಇದ್ದನು.
    ದುಃಖಿತನಾದ ನಂದೀಶ್ವರನು ಸತಿದೇವಿಯ ಪ್ರಾಣರ್ಾಪಣೆಯ ವಿಷಯವನ್ನು ಶಿವನಿಗೆ ಹೇಳಲು ಭಯಗೊಂಡನು. ತನ್ನ ಜೊತೆಗಿದ್ದ ಛಲದಂಕಮಲ್ಲನ ಪರಿಚಯ ಮತ್ತು ಪರಾಕ್ರಮವನ್ನು ಶಿವನಿಗೆ ತಿಳಿಸಿದನು. ಆಗ ಛಲದಂಕಮಲ್ಲನು ಶಿವನಿಗೆ ನಮಿಸಿ ಸತಿದೇವಿಯ ಪ್ರಾಣರ್ಾಪಣೆಯ ಸುದ್ಧಿಯನ್ನು ಶಿವನಿಗೆ ತಿಳಿಸಿದನು. ಆದರೆ ಮೌನಿಯಾಗಿದ್ದ ಶಿವನು ವಾತರ್ೆಯನ್ನು ಕೇಳಿ ಕೋಪೋದ್ರೇಕಗೊಂಡನು. ಕೂಡಲೇ ಶಿವನು ತನ್ನ ಜಟೆಯನ್ನು ಗಿರಿವೃಂದಕ್ಕೆ ಅಪ್ಪಳಿಸಿದನು. ಜಟೆಯು ಇಭ್ಭಾಗವಾಗಿ ಪ್ರಳಯಕಾಲದ ನಾದ ಹೊರಡಿಸಿತು. ಜಟೆಯ ಒಂದು ಭಾಗದಿಂದ ಸಹಸ್ರ ತೋಳುಗಳುಳ್ಳ, ಭೂಮಂಡಲನ್ನೇ ಆಕ್ರಮಿಸಿಕೊಳ್ಳಬಲ್ಲ ,ಕೇವಲ ಹತ್ತು ಅಂಗುಲ ಮಾತ್ರ ಆಕ್ರಮಿಸಿಕೊಂಡಿದ್ದಂತಹ ,ಪ್ರಳಯಾಗ್ನಿಯಂತೆ ಭಯಂಕರವಾಗಿರುವ ಎತ್ತರದ ವೀರಭದ್ರನು ಉದಯಿಸಿದನು. ಆಗ ಶಿವನ ಜಟೆಯ ಎರಡನೆಯ ಭಾಗದಿಂದ ಮಹಾಭಯಂಕರಳಾದ ಮಹಾಕಾಳಿಯೂ ಅನೇಕ ವಿಧ ಭೂತ ಗಣಂಗಳು ಉಗಮವಾದವು.7 ಇವರು ತಮ್ಮ ಕಾರ್ಯವೇನೆಂದು ವಿನಂತಿಸಿದರು.
    ಆಗ ಶಿವನು ದಕ್ಷಬ್ರಹ್ಮನು ಮಹಾ ದುರಹಂಕಾರಿಯಾಗಿ ,ದ್ವೇಷಾಸೂಯೆ ಪರನಾಗಿ, ಸತಿದೇವಿಯ ಪ್ರಾಣರ್ಾಪಣೆಗೆ ಕಾರಣನಾಗಿರುವನು. ಈಗ ಯಜ್ಞವನ್ನು ಪೂರ್ಣಗೊಳಿಸಲು ಹರಿ-ಬ್ರಹ್ಮಾದಿಗಳ ನೆರವು ಪಡೆದಿರುವನು. ನೀವು ಛಲದಂಕಮಲ್ಲನೊಡಗೂಡಿ ಯಜ್ಞವನ್ನು ನಾಶಗೊಳಿಸಿರಿ. ಛಲವನ್ನು ಮೀರಿ ಗರ್ವದಿಂದ ವತರ್ಿಸುವರನ್ನು ಅಗ್ನಿ ಜ್ವಾಲೆಗಳಿಂದ ಸುಟ್ಟು ಭಸ್ಮ ಮಾಡಿ. ವಿಷ್ಣು-ಬ್ರಹ್ಮಾದಿಗಳು ನಿಮ್ಮೊಡನೆ ಯುದ್ಧಕ್ಕೆ ನಿಂತರ ಅವರನ್ನೂ ಅಕರ್ಷಣ ಮಂತ್ರದಿಂದ ಆಕಷರ್ಿಸಿ ನಾಶಗೊಳಿಸಿ. ದಕ್ಞಬ್ರಹ್ಮ ,ಅವನ ಪತ್ನಿ, ಪುತ್ರ ಹಾಗೂ ಪರಿವಾರದವರನ್ನೂ ಸಂಹರಿಸಿ ಯಜ್ಞ ಸೋಮವನ್ನು ಪಾನ ಮಾಡಿ ಬನ್ನಿ. ಇದೇ ನನ್ನ ಛಲ ಎಂದು ಆಜ್ಞಾಪಿಸಿದನು. ಎಲ್ಲರೂ ಛಲದಂಕಮಲ್ಲನ ಜೊತೆಗೆ ಯುದ್ಧಕ್ಕೆ ಹೊರಟರು.
                          
    ಶಿವನ ವಾಂಛಲ್ಯದಿಂದ ಬಂದ ಗಗನೋದ್ಭವರಿಗೂ ದಕ್ಷನ ಸಹಾಯಕರಿಗೂ ಘನ ಘೋರವಾದ ಯುದ್ಧ ಆರಂಭವಾಯಿತು. ವಿಷ್ಣುವು ಇವರ ಘೋರ ಯುದ್ಧದ ಸಾಹಸವನ್ನು ಅರಿತು ,ಇವರ ನಾಶಕ್ಕಾಗಿ ದಶದಿಕ್ಕುಗಳಿಂದ ಸುಡುತ್ತಾ ಬರುವಂತೆ ತನ್ನ ಚಕ್ರವನ್ನು ಪ್ರಯೋಗಿಸಿದನು.  ಕ್ಷೇತ್ರಪಾಲನೆಂಬುವನು ವೇಗದ ಚಕ್ರವನ್ನು ನುಂಗಿದನು. ಹೀಗೆ ನುಂಗಿದವನ ಮುಖವನ್ನು ಅದುಮಿದ ಹರಿಯು ಚಕ್ರವನ್ನು ತೆಗೆದು ವೀರಭದ್ರನ ಮೇಲೆ ಪ್ರಯೋಗಿಸಿದನು. ವೀರಭದ್ರನು ಶಿವ ನಾಮ ಸ್ಮರಣೆ ಮಾಡಿ ಅದನ್ನು ನಿಷ್ಕಿಯೆಗೊಳಿಸಿದನು. ಅಲ್ಲದೆ ತ್ರಿಶೂಲವನ್ನು ಹರಿಯ ಎದೆಗೆ ನಾಟುವಂತೆ ಪ್ರಯೋಗಿಸಿ ಮೂಛರ್ೆಗೊಳಿಸಿದನು. ಚಕ್ರವನ್ನು ಸ್ತಂಭಿಸಿದನು.
    ಹೀಗೆ ಮಹಾವಿಷ್ಣುವೇ ಅಪಜಯ ಪಾಲಾದುದನ್ನು ಕಂಡು, ಯಜ್ಞ ಪುರುಷನು ಭಯಗ್ರಸ್ಥನಾದನು. ಅಲ್ಲದೆ ಮೃಗವೇಷವನ್ನು ತೊಟ್ಟು ಪಲಾಯನ ಮಾಡಲು ಯತ್ನಿಸಿದನು. ಇದನ್ನು ಕಂಡ ವೀರಭದ್ರನು ಅದರ ಕತ್ತನ್ನು ಕತ್ತರಿಸಿದನು. ಆಗ ಪವಿತ್ರವಾದ ಯಜ್ಞಾಗ್ನಿಯಲ್ಲಿ ಶಿವಗಣಂಗಳು ಆಮೇಧ್ಯಗಳನ್ನು ಹಾಕಿ ಯಜ್ಞಾಪವಿತ್ರತೆಯನ್ನುಂಟು ಮಾಡಿದರು.
   ಘಟನೆಗಳನ್ನೆಲ್ಲ ಭಯಗ್ರಸ್ಥನಾಗಿ ಗಮನಿಸುತ್ತಿದ್ದ ದಕ್ಷಬ್ರಹ್ಮನು ಅಂತವರ್ೇದಿಯ ಮಧ್ಯಭಾಗದಲ್ಲಿ ಅಡಗಿ ಕುಳಿತಿದ್ದನು. ಇದನ್ನು ಕಂಡ ವೀರಭದ್ರನು ಅವನನ್ನು ಮೇಲಕ್ಕೆಳೆದು ಅವನ ಶಿರವನ್ನು ಕತ್ತಿಯಿಂದ ಮತ್ತು ಬೇರೆ ಅಸ್ತ್ರಗಳಿಂದ ಉರುಳಿಸುವ ಪಯತ್ನ ಮಾಡಿದನು. ಆದರೆ ಅದು ಅಸಾಧ್ಯವಾದಾಗ ದಕ್ಷನ ಎದೆಯನ್ನು ಕಾಲಿನಿಂದ ಅದುಮಿ ,ತನ್ನ ಕೈಗಳಿಂದ ಅವನ ಶಿರವನ್ನು ತಿರುವಿ ಮುರಿದು ಹಾಕಿದನು. ಶಿವನ ವಾಂಛಲ್ಯವನ್ನು ಹೊತ್ತು ಅತಿ ಪರಾಕ್ರಮದಿಂದ ಹೋರಾಡುತ್ತಿದ್ದ ಛಲದಂಕಮಲ್ಲನು ವೀರಭದ್ರನು ತುಂಡರಿಸಿದ ದಕ್ಷನ ರುಂಡವನ್ನು ಕಂಡನು. ಅದು ರಣಭಾಗದಲ್ಲಿ ರಕ್ತ ಸುರಿಯುತ್ತಿದ್ದರೂ ನಗುಮುಖದಿಂದ ಇರುವುದನ್ನು ಕಂಡನು. ತಾನೇ ವಧಿಸಬೇಕು, ಎಂಬ ಮನಸ್ಥಿತಿಯಿಂದಿದ್ದ ಇವನಿಗೆ ಇದರಿಂದ ಆಶಾಭಂಗವಾಯಿತು. ಒಟ್ಟಾರೆ ದಕ್ಷನ ಸಂಹಾರ ವೀರಭದ್ರನಿಂದ ಆಗಿರುವುದು ತಿಳಿದು ಹಷರ್ೋದ್ಗಾರ ಮಾಡಿದನು. ಆದರೂ ದಕ್ಷ ಬ್ರಹ್ಮನ ರುಂಡವನ್ನು ಕಂಡೊಡನೆ ಅವನ ಕೋಪತಾಪಗಳು ಮಿತಿಮೀರಿದವು. ತನ್ನ ಛಲವನ್ನು ಶಿವನ ವಾಂಛಲ್ಯವನ್ನು ತೀರಿಸಿಕೊಳ್ಳುವ ಸದವಕಾಶವಿದು ಎಂದು ತಿಳಿದನು. ರುಂಡವನ್ನು ತೆಗೆದು ಯಜ್ಞಕುಂಡದಲ್ಲಿ ಎಸೆದನು. ರುಂಡವು ಭಸ್ಮವಾಗುವ ಮುನ್ನವೇ ಅವನಿಗೆ ಶಾಪವನ್ನು ನೀಡಿತು. ನಿನಗೆ ಶಿವನಾಮಸ್ಮರಣೆ ಮರೆಯಲಿ. ನಿನ್ನ ವಂಶ ವೃದ್ಧಿಯಾಗದಿರಲಿ ಎಂದು ಹೇಳಿ ಅಮರತ್ವವನ್ನು ಪಡೆಯಿತು.
         
ಛಲವಾದಿ ಜನಾಂಗದ  ಪ್ರಾಚೀನತೆ ಮತ್ತು ಪರಂಪರೆ

     ಛಲವಾದಿ ಜನಾಂಗ ಅಪೂರ್ವವಾದ ಪೌರಾಣಿಕ ಹಿನ್ನಲೆಯನ್ನು ಪಡೆದಿದೆ. ಅವರ ಪ್ರಾಚೀನ ಸಂಸ್ಕೃತಿ , ನಡವಳಿಕೆ ಮತ್ತು ಆಚಾರ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿ ಇದನ್ನು ಸಾದರ ಪಡಿಸುತ್ತವೆ. ಆದರೂ ಇವರ ಇಂದಿನ ಸಾಮಾಜಿಕ ನಡವಳಿಕೆಗಳು ಅವರ ನಾಗರಿಕತೆ ಮತ್ತು ಜೀವನ ಕ್ರಮಗಳು ತುಂಬಾ ನಿರಾಶದಾಯಕವಾಗಿವೆ. ಇವರು ಭಾರತದ ಮೂಲ ನಿವಾಸಿಗಳು. ವೇದಾತೀತವಾದ ಶಿವನ ಆರಾಧಕರು. ಆದಿ ಶೈವಭಕ್ತರಾಗಿ ಬೆಳೆದು ಬಂದ ಒಂದು ವಿಶಿಷ್ಟ ಜನ ಸಮುದಾಯ. ಹರಹರಿ ಭೇದವೆನಿಸದ ಧಾಮರ್ಿಕತೆಯ ಬದುಕು. ಅಂದಿನಿಂದ ಇಂದಿನವರಿಗೆ ತಮ್ಮ ಮೂಲ ಸಂಸ್ಕೃತಿಯನ್ನು ಕಾಯ್ದುಕೊಂಡು ಬಂದವರು. ಇಂತಹ ಸಮುದಾಯ ತಮ್ಮದೆ ಪೌರಾಣಿಕ ಹಿನ್ನಲೆಯನ್ನು ಪಡೆದಿವೆ. ಶಿಷ್ಟ ಸಂಸ್ಕೃತಿಯಷ್ಟೆ ಸಾಮಾಜಿಕ ಸ್ಥಾನಮಾನಗಳನ್ನು ಪಡೆದಿದೆ. ಆದರೆ ಪರಿಷ್ಕೃತ ಮುದ್ರಣಗೊಂಡ ಪುರಾಣ ಕೃತಿಗಳು ಇವನ್ನು ಮರೆಮಾಡಿವೆ. ಸಾಮಾಜಿಕ ಕೆಳಸ್ತರಕ್ಕೆ ಇವರನ್ನು ನೂಕಿವೆ. ಆದರೆ ಕೆಲವು ಮಠಮಾನ್ಯಗಳು ಇಂದಿಗೂ ಅವರ ಸಾಮಾಜಿಕ ಸ್ಥಾನಮಾನದ ಹಿನ್ನಲೆಯನ್ನು ಒದಗಿಸಿಕೊಡಬಲ್ಲವು. ಅಂತಹ ಕೆಲವು ದಾಖಲೆಗಳ ಸಂಕ್ಷಿಪ್ತ ಮಾಹಿತಿಯನ್ನು ಮುಂದೆ ನೀಡಿದೆ.
         ಪುರಾಣ ಪ್ರಸಿದ್ಧ ಛಲದಂಕಮಲ್ಲನ ವಂಶಸ್ಥರನ್ನು ಛಲವಾದಿ ಜನಾಂಗವೆಂದು ಕರೆಯುವರು. ಜನಾಂಗದವರು ಆಂಧ್ರಪ್ರದೇಶ. ಕನರ್ಾಟಕ, ಮಹಾರಾಷ್ಟ್ರ, ತಮಿಳುನಾಡು ,ಕೇರಳ ಮುಂತಾದ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಭೌಗೋಳಿಕ ಕಾರಣಗಳಿಂದ  ಸಾಮಾಜಿಕ ಮತ್ತು ಸಾಂಸ್ಕೃತಿಕ ಭಿನ್ನತೆಯನ್ನು ಪಡೆದಿರುವರು.
        ಕನರ್ಾಟಕದಲ್ಲಿ ಮತದವರನ್ನು ಭಿನ್ನ ಹೆಸರುಗಳಿಂದ ಕರೆಯುವರು. ಹಾಗೆಯೇ ಕೋಲಾರ ಜಿಲ್ಲೆಯಲ್ಲೂ ಬೇರೆ ಬೇರೆ ಹೆಸರುಗಳಿವೆ. ಹೊಲೆಯರು. ಮಾಲರು. ಆದಿದ್ರಾವಿಡ. ಆದಿಕನರ್ಾಟಕ, ಚಲುವಾದಿ, ತೋಟಿಗರು, ಬಲಗೈಯವರು, ಸಲಾದಿವಾಳ್ಳು  ಇತ್ಯಾದಿ ಹೆಸರುಗಳಿಂದ ಕರೆಯತ್ತಾರೆ. ಕೆಲವು ಕಡೆ ಚಲುವಾದಿಗಳೆಂದು ಪ್ರತ್ಯೆಕ ಹೆಸರಿನಿಂದ ಕರೆಯುವರು, ಆದರೆ ಕೋಲಾರ ಜಿಲ್ಲೆಯಲ್ಲಿ ಮನೆಯ ಹೆಸರು ಛಲವಾದಿಯವರೆಂದು ಇದ್ದರೂ ಇವರನ್ನು ಆದಿಕನರ್ಾಟಕ. ಆದಿದ್ರಾವಿಡ ಅಥವಾ ಮಾಲ (ಹೊಲೆಯರು)ಎಂದು ಕರೆಯುವರು. ಒಟ್ಟಾರೆ ಅಸ್ಪೃಶ್ಯರೆಂದು ಪರಿಗಣಿಸಿದ್ದಾರೆ. ಇಂತಹ ಹೆಸರುಗಳ ಪ್ರಾಪ್ತಿಗೂ ಒಂದೊಂದು ಹಿನ್ನಲೆಯಿರುತ್ತದೆ.
      ನಾವು ಯಾವುದೇ ಒಂದು ಜನಾಂಗದ ಇತಿಹಾಸವನ್ನು ತಿಳಿಯಲು ನಮಗೆ ಹಲವಾರು ಆಕರಗಳ ಆವಶ್ಯಕವಿದೆ. ಅವುಗಳಲ್ಲಿ ಶಾಸನಗಳು, ವಿದೇಶಿಯರ ಬರಹಗಳು. ನಾಣ್ಯಗಳು ಮತ್ತು ಸಾಹಿತ್ಯ ಕೃತಿಗಳು ಮುಖ್ಯ. ಶಿಷ್ಟ ಸಂಸ್ಕೃತಿಗಳ ಬಗ್ಗೆ ಇವು ಹೇರಳವಾಗಿ ಸಿಗುತ್ತವೆ. ಆದರೆ ಪರಿಶಿಷ್ಟ ಸಂಸ್ಕೃತಿಗಳ ವಿಷಯದಲ್ಲಿ ಇವು ಮೂಕವಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಅವರ ಇತಿಹಾಸವನ್ನು ತಿಳಿಯಲು ಜನಪದ ಹಾಡುಗಳು, ಐತಿಹ್ಯ, ಪುರಾಣ ಹಾಗೂ ದಂತ ಕಥೆಗಳನ್ನು ಆಧರಿಸಬೇಕಾಗುತ್ತದೆ.
ಪುರಾಣಗಳಲ್ಲಿ ಛಲವಾದಿ ಜನಾಂಗದ ಪ್ರಸ್ತಾಪ
   ದಕ್ಷಬ್ರಹ್ಮನ ಯಜ್ಞಕ್ಕೆ ಶಿವನಿಗೆ ಆಹ್ವಾನವಿರುವುದಿಲ್ಲ. ಆದರೂ ಸತಿದೇವಿಯೊಡನೆ ಯಜ್ಞಕ್ಕೆ ಬಂದನು. ಸತಿದೇವಿಯ ತಂದೆತಾಯಿಗಳು ಅವರನ್ನು ಅವಮಾನಿಸುವರು. ಇದನ್ನು ಸಹಿಸದೆ ಆಕೆ ಯಜ್ಞಕುಂಡಕ್ಕೆ ಹಾರುವಳು. ಇದರಿಂದ ಶಿವನು ಮಾಹಾ ಕ್ರೋಧಗೊಂಡನು. ತದೇಕಚಿತ್ತದಿಂದ ಆಗಸವನ್ನು ನೋಡುತ್ತಿರಲು ಒಬ್ಬ ವೀರಪುರುಷನು ಉದ್ಭವಿಸಿದನು. ಅವನು ಶಿವನಿಗೆ ವಂದಿಸಿ ಅಪ್ಪಣೆಗಾಗಿ ಕಾದನು. ಹೀಗೆ ಉದ್ಭವಾದವನಿಗೆ ನಂದಿಜ ಅಥವಾ ಛಲದಂಕಮಲ್ಲನೆಂಬ ಹೆಸರಿದೆ. ಈತನು ನಂದೀಶ್ವರ ,ವೀರಭದ್ರ ಜತೆಗೂಡಿ ಯುದ್ಧ ನಿಂತನು. ದಕ್ಷಬ್ರಹ್ಮನೊಡನೆ ಘೋರವಾದ ಯುದ್ಧ ಮಾಡಿದರು. ಸಮಯದಲ್ಲಿ ವೀರಭದ್ರನು ದಕ್ಷಬ್ರಹ್ಮನ ರುಂಡವನ್ನು ಕತ್ತರಿಸಿದನು. ರುಂಡವನ್ನು ಛಲದಂಕಮಲ್ಲನು ಯಜ್ಞಕುಂಡಕ್ಕೆ ಎಸೆದನು ಅಲ್ಲದೆ ಶಿವಾಂಶ ಸಂಭೂತನಾದ ಇವನು ಶಿವನ ಛಲವನ್ನು ತನ್ನ ಕೋಪವನ್ನು ನೀಗಿಸಿಕೊಂಡನು. ಆದರೆ ರುಂಡವು ಭಸ್ಮವಾಗುವ ಮೊದಲು ಛಲದಂಕಮಲ್ಲನಿಗೆ ನಿನ್ನ ವಂಶವು ವೃದ್ಧಿಯಾಗದಿರಲಿ ಎಂದು ಶಾಪವಿತ್ತಿತು.
   ಶಾಪದಿಂದ ಈತನಿಗೆ ಶಿವಸ್ಮರಣೆ ತಪ್ಪಿತು. ವಿಕಾರ ರೂಪವನ್ನು ಪಡೆದ. ಕನಿಕರಗೊಂಡ ನಾರದರು ಷಟ್ ಋಷಿಗಳಿಂದ ಇವನ ಶಾಪ ವಿಮೋಚನೆ ಮಾಡಿಸಿದ. ಅಲ್ಲದೆ ಋಷಿಗಳಿಂದ ಸಕಲ ವಿದ್ಯೆಗಳನ್ನು, ಬ್ರಹ್ಮಜ್ಞಾನವನ್ನು, ಮಹಾಮಂತ್ರಾಸ್ತ್ರಗಳನ್ನು ಬೋಧಿಸಿ ಪರಾಕ್ರಮಿಯಾಗಿಸಿದ. ಇದಕ್ಕೆ ಪ್ರತಿಫಲವಾಗಿ ಛಲದಂಕಮಲ್ಲನು, ಯಜ್ಞಕಾರ್ಯಕ್ಕೆ ಕಂಟಕವಾಗಿದ್ದ ರಾಕ್ಷಸರನ್ನು ತನ್ನ ಶಕ್ತಿಯಿಂದ ಕೊಂದ. ಆದರೆ ರಾಕ್ಷಸರು ಸಕಲ ವಿದ್ಯೆಯೂ ಮರೆತು ಹೋಗಲಿ ಎಂದು ಶಾಪವಿತ್ತರು. ಇದರಿಂದ ಮತ್ತೆ ಶಾಪಗ್ರಸ್ಥನಾದನು.
    ಲೋಕಕಂಟಕನಾದ ತಾರಕಾಸುರನ ಸಂಹಾರ ಅನಿವಾರ್ಯವಾಗಿತ್ತು. ಇದರಿಂದ ಶಿವಪಾರ್ವತಿಯರ ಸಮಾಗಮದ ಅನಿವಾರ್ಯತೆ ಇತ್ತು. ಆದರೆ ಶಿವನು ಉಗ್ರ ತಪ್ಪಸ್ಸಿನಲ್ಲಿದ್ದ. ದೇವತೆಗಳ ಅಪ್ಪಣೆಯಂತೆ ಶಿವನನ್ನು ಎಚ್ಚರಗೊಳಿಸುವ ಕಾರ್ಯಕ್ಕೆ ಮನ್ಮಥನು ಅಣಿಯಾದ. ಆದರೆ ಶಿವ ತನ್ನ ಪಾಲನೇತ್ರಗಳಿಂದ ಮನ್ಮಥನನ್ನು ಸುಟ್ಟ. ರತಿಯ ಬೇಡಿಕೆಯಂತೆ ಮನ್ಮಥನ ಭಸ್ಮವನ್ನು ಗಂಗೆಯಲ್ಲಿ ವಿಲೀನಗೊಳಿಸಲಾಯಿತು. ಅನಂಗನಾಗಿ ಮನ್ಮಥನು ರತಿಯನ್ನು ಕೂಡುವನು. ಸಂದರ್ಭದಲ್ಲಿ ಶಾಪಗ್ರಸ್ಥನಾದ ಛಲದಂಕಮಲ್ಲನು ಗಂಗೆಯಲ್ಲಿ ಮಿಂದು ಶಾಪಮುಕ್ತನಾದನು.
  ಅಲ್ಲದೆ ಶಿವನನ್ನು ಕುರಿತು ಉಗ್ರ ತಪ್ಪಸ್ಸನ್ನು ಮಾಡಿದನು. ತಪ್ಪಸ್ಸಿಗೆ ಮೆಚ್ಚಿದ ಶಿವನು  ನಿನ್ನ ವಿವಾಹವು ಬ್ರಹ್ಮ ಕುವರಿಯಾದ ಮಾಯಾದೆಶಿಯೊಡನೆ ನಡೆಯಲಿ, ಅದೂ ಶಿವ ಪಾರ್ವತಿಯ ಕಲ್ಯಾಣದ ಸಮಯದಲ್ಲಿ ನಡೆಯುವಂತಾಗಲಿ, ಅಲ್ಲದೆ ನಿಮ್ಮಿಬ್ಬರಿಂದ ಹುಟ್ಟುವ ವಂಶಜರು 'ಛಲವಾದಿ' ಮತದವರಾಗಲಿ ಎಂದು ವರವಿತ್ತನು.8
   ಸತಿದೇವಿಯು ದಕ್ಷಬ್ರಹ್ಮನ ಅವಮಾನದಿಂದ ಪ್ರಾಣತೆತ್ತಳು. ಯಜ್ಞಕೊಂಡದಲ್ಲಿ ಅಸಿನೀಗಿದ ತನ್ನ ಪತ್ನಿಯ ಎಲ್ಲಾ ಕರ್ಮಕಾರ್ಯಗಳನ್ನು ಶಿವನ ಅಣತಿಯಂತೆ ಛಲದಂಕಮಲ್ಲನು ಮಾಡಿದನು. ಇದರಿಂದ  ತೃಪ್ತಗೊಂಡ ಶಿವನು  ನಂದಿಯ ಮುಂಭಾಗದಲ್ಲಿ ಗಂಟೆಬಟ್ಟಲು, ಲಿಂಗಮುದ್ರೆಗಳನ್ನು ಸ್ಥಾಪಿಸಿ ಅವುಗಳನ್ನು ಛಲದಂಕಮಲ್ಲನ ವಂಶಜರು ಹಿಡಿಯಬೇಕೆಂದು ಆಶರ್ೀವದಿಸಿದನು. ಇಂದಿಗೂ ವಂಶಸ್ಥರು ಕಾರ್ಯವನ್ನು ಮಾಡುತ್ತಿದ್ದಾರೆ.
   ಗಿರಿಜಾ ಕಲ್ಯಾಣದ ಸಮಯದಲ್ಲೆ ಛಲದಂಕಮಲ್ಲನ ಕಲ್ಯಾಣವೂ ನಡೆಯುವುದೆಂದು ನಿಶ್ಚಯಿಸಲಾಯಿತು. ಷಟ್ ಋಷಿಗಳು ಕನ್ಯಾಥರ್ಿಗಳಾಗಿ ಬ್ರಹ್ಮನಲ್ಲಿಗೆ ತೆರಳಿ ,ಅವನಿಗೆ ಶಿವನ ವರವನ್ನು ತಿಳಿಸಿದರು. ಬ್ರಹ್ಮನು ಸಂತೋಷವಾಗಿ ಒಪ್ಪಿ ತನ್ನ ಮಗಳಾದ ಮಾಯಾದೆಶೆಯನ್ನು ಛಲದಂಕಮಲ್ಲನಿಗೆ ಕನ್ಯಾದಾನ ಮಾಡಿಲು ಒಪ್ಪಿಗೆ ಸೂಚಿಸಿದನು.
     ಶಿವ ಪಾರ್ವತಿಯರ ಕಲ್ಯಾಣ ಮತ್ತು ಛಲದಂಕಮಲ್ಲ ಮತ್ತು ಮಾಯಾದೆಶೆಯರ ವಿವಾಹಗಳು ನೆರವೇರಬೇಕಾಗಿತ್ತು. ಇದರೊಂದಿಗೆ ಇಪ್ಪೇಳು ಕೋಟಿ ಪ್ರಥಮ ಗಣಂಗಳ ಸಮೂಹಕ್ಕೂ ಪಂಚಮುಖ ಗಣೇಶರಿಗೂ ವಿವಾಹಗಳು ಏಪರ್ಾಟಾದವು.9
     ವಿವಾಹ ಕಾರ್ಯಕ್ಕೆ ಬೇಕಾದ ತಾಳಿಗಳನ್ನು ಮಾಡಿಸಲು ಬೇಕಾದ ಚಿನ್ನವನ್ನು ಬೃಹಸ್ಪತಿ ಸಹೋದರಿ, ಬ್ರಹ್ಮಜ್ಞಾನವುಳ್ಳ ವಿಶ್ರುತೆ ಮತ್ತು ಪ್ರಭಾಸನೆಂಬುವರಲ್ಲಿ ಜನಿಸಿದ ತ್ವಷ್ಟು ಎಂಬ ಅಕ್ಕಸಾಲಿಗನಿಗೆ ಕೊಟ್ಟು ಸಕಾಲದಲ್ಲಿ ಸಿದ್ಧಗೊಳಿಸಿ ಕೊಡುವಂತೆ ಅಪ್ಪಣೆ ಮಾಡಲಾಯಿತು.  ಅದರಂತೆ ತ್ವಷ್ಟುವು ಇಪ್ಪತ್ತೇಳು ಸಾವಿರ ತಾಳಿಗಳನ್ನು ಹಾಗೂ ಶಿವ ಪಾರ್ವತಿ ಮತ್ತು ಛಲದಂಕಮಲ್ಲ ಮತ್ತು ಮಾಯಾದೆಶೆಯರಿಗಾಗಿ ಸುಮಾಂಗಲ್ಯ, ಮಂಗಳ ಗುಂಡು ತಾಳಿಗಳನ್ನು ಕಾಲಕ್ಕೆ ಮುಂಚೆಯೇ ಸಿದ್ಧಪಡಿಸಿದನು.
      ಸೂತ್ರ ರೂಪದ ತಾಳಿಗಳನ್ನು ತರಲು ಶಿವನು ನಾರದನನ್ನು ಕಳುಹಿಸಿದನು. ನಾರದರು ಬಂದು ತ್ವಷ್ಟುವಿಗೆ ತಾನು ಬಂದ ಕಾರಣವನ್ನು ತಿಳಿಸಿದನು. ಆಗ ಅವನು ತಾಳಿಯನ್ನು ಮಾಡಿದ ನಾನೇ ವಧುವಿಗೆ ಪತಿಯಾಗಲು ಅರ್ಹನಾಗಿದ್ದೇನೆ. ಆದುದರಿಂದ ತಾಳಿಗಳನ್ನು ನಾನು ಕೊಡುವುದಿಲ್ಲ. ಹಾಗೆ ಕೊಟ್ಟರೂ ಪತಿಯ ಸ್ಥಾನವು ನನಗೆ ಬರುವುದು.ಎಂದು ಹೇಳಿ ತಾಳಿ ಕೊಡಲು ನಿರಾಕರಿಸಿದನು. ಮಾತುಗಳಿಗೆ ಕೋಪಗೊಂಡ ನಾರದ ಎಲೈ ಭ್ರಷ್ಟನೇ! ಎಂತಹ ಅಸಮಂಜಸ ಮಾತುಗಳನ್ನು ಆಡುತ್ತಿರುವೆ. ದುಬರ್ುದ್ಧಿಯ ಮಾತುಗಳಿಗಾಗಿ ನಿನ್ನ ತಲೆಯು ಎರಡು ಹೋಳಾಗಲಿ ಎಂದು ಶಾಪವಿತ್ತನು.  ನಂತರ ನಾರದರು ಶಿವನಿಗೆ ವರದಿಯನ್ನು ಒಪ್ಪಿಸಿದರು.
      ಆಗ ಶಿವನು ಬ್ರಹ್ಮನನ್ನು ತ್ವಷ್ಟುವಿನಲ್ಲಿಗೆ ಕಳುಹಿಸಿದನು. ಆಗ ಬ್ರಹ್ಮನನ್ನು ಕುರಿತು ತ್ವಷ್ಟುವೂ ನೀನೂ ಪೂಜ್ಯನಲ್ಲಿ ಪೂಜ್ಯನಾಗಿ ನಡುತಲೆಯನ್ನು ಕಳೆದುಕೊಂಡು, ತಾಳಿಯನ್ನು ತೆಗೆದುಕೊಂಡು ಹೋಗಲು ಬಂದಿರುವ ನೀನು ಅವಿವೇಕಿಯೇ ಸರಿ. ನಾನು ಸೃಷ್ಟಿಸಿದ ಮಂಗಳ ತಾಳಿಯನ್ನು ಕೊಟ್ಟ ಮೇಲೆ ನಾನೇ ಗಂಡನಲ್ಲವೇ? ಪಂಡಿತರು ಇದನ್ನು ಅರಿಯರೇ. ಶಿವನಿಗೆ ಇದು ತಿಳಿಯದೆ. ನಾನೆಂದೂ ತಾಳಿಯನ್ನು ಕೊಡುವುದಿಲ್ಲವೆಂದು ಮೂದಲಿಸಿದನು. ಆಗ ಬ್ರಹ್ಮನು ಅವನ ಮೇಲೆ ಕೋಪಗೊಂಡನು. ಎಲೈ ನೀಚನೇ! ನಿನ್ನ ತಲೆಯು ಒಬ್ಬ ಶಿವಶಕ್ತಿಯುಳ್ಳವನಿಂದಲೇ ತುಂಡರಿಸಿ ಹೋಗಲಿ. ನಿನ್ನ ತಲೆಯು ಅಪರಾಧದ ಮಾತುಗಳನ್ನು ಆಡಿದಕ್ಕೆ ನಾದ ಬೆರೆಸಿದ ಗಂಟೆಯಾಗಲಿ. ನಿನ್ನ ಹೆಂಡತಿಯು ಶೆರೆ ಹೋಗಲಿಎಂದು ಶಾಪ ನೀಡಿದನು. ಬ್ರಹ್ಮನು ಶಿವನಿಗೆ ಸಂದರ್ಭವನ್ನು ವಿವರಿಸಿದನು. ಇದರಿಂದ ಶಿವನು ರೌದ್ರನಾದನು.
    ಶಿವನು ಛಲದಂಕಮಲ್ಲನನ್ನು ಕರೆಸಿದನು. ಸಂದರ್ಭವನ್ನು ಸೂಕ್ಷ್ಮವಾಗಿ ವಿವರಿಸಿದನು. ಮದಾಂಧನಾದ ತುಷ್ಟನಿಂದ ತಾಳಿಯನ್ನು ತರಲು ಅಪ್ಪಣೆ ಮಾಡಿದನು. ಛಲಕ್ಕೆ ಮರು ಹೆಸರಾದ ಅವನು ತ್ವಷ್ಟುವನ್ನು ಸಂಧಿಸಿದನು. ಸೂತ್ರ ರೂಪದ ತಾಳಿಯನ್ನು ಕೊಡುವಂತೆ ಕಟುವಾಗಿ ಕೇಳಿದನು. ಆದರೆ ಅವನು ತಾಳಿಯನ್ನು ಕೊಡೊಪ್ಪದೆ ಯುದ್ಧಕ್ಕೆ ಸಿದ್ಧನಾದನು. ಅಲ್ಲದೆ ಛಲದಂಕಮಲ್ಲನನ್ನು ಕುರಿತು ಎಲೋ ಶಿವದೂತನೇ! ನೀನು ಬಲಾಢ್ಯನಿರಬಹುದು. ಆದರೆ ನಾರದ ಮತ್ತು ಬ್ರಹ್ಮರು ಸಹ ಪ್ರತಿ ಮಾತಾಡದೆ ಕೇವಲ ಶಾಪ ನೀಡಿ ಹೋದರು. ಆದರೆ ನೀನು ನನ್ನನ್ನು ಮೂದಲಿಸಿ ಮಾತಾಡಿ ತಾಳಿಯನ್ನು ಪಡೆಯಲು ಅಪೇಕ್ಷಿಸಿರುವೆ. ತಾಳಿಯನ್ನು ಸೃಷ್ಟಿಸಿ ಶಿವನಿಗೆ ಕೊಟ್ಟ ಮೇಲೆ ವಧುವಿಗೆ ನಾನೇ ಗಂಡನಲ್ಲವೆ ಮೂರ್ಖ. ಗಜರ್ಿಸದೆ ತೊಲಗಿ ಹೋಗು ಎಂದು ಕಟುವಾಗಿ ನುಡಿದನು.
      ಪಾರ್ವತಿಗೆ ತಾನು ಪತಿಯ ಸಮಾನ ಎಂಬ ಮಾತು ಕಿವಿಗೆ ತಾಕಿದ ಕೂಡಲೆ ಛಲದಂಕಮಲ್ಲನ ರಕ್ತವು ಕುದಿಯಿತು. ಅತೀವ ಕೋಪದಿಂದ ಎಲೋ ತುಷ್ಟ! ನಿನ್ನ ದಿಟ್ಟತನದ ಮಾತನ್ನು ನಿಲ್ಲಿಸು. ತಾಳಿಯನ್ನು ಮೊದಲು ಕೊಡು. ತಡಮಾಡಬೇಡ. ನಾರದ ಬ್ರಹ್ಮರು ನಿನಗೆ ನೀಡಿರುವ  ಶಾಪಗಳು ಫಲಿಸುವ ಕಾಲ ಸಮೀಪಿಸುತ್ತಿದೆ ಎಂದು ಗಜರ್ಿಸಿ ತನ್ನಲ್ಲಿದ್ದ ಚಂದ್ರಾಯುಧವನ್ನು ತೆಗೆದು ಝಳಪಿಸಿ ಅವನ ಶಿರಕ್ಕೆ ಹೊಡೆದನು. ಕೂಡಲೆ ಅವನ ಶಿರ ಹೊಡೆದು ಎರಡು ತುಂಡುಗಳಾಗಿ ಬಿದ್ದಿತು. ಇದನ್ನು ಕಂಡ ಅವನ ಹೆಂಡತಿ ಗೋಳಾಡುತ್ತಾ ಧೈನ್ಯದಿಂದ ನನ್ನ ಗಂಡನ ಗರ್ವವನ್ನು ಮತ್ತು ಉದ್ಧಟತನವನ್ನು ಮುರಿದು ಸಾರ್ಥಕ ಮಾಡಿರುವ ಶಿವರೂಪನೇ! ದಯ ಮಾಡಿ ನಿನ್ನ ಹಸ್ತದಿಂದಲೇ ನನ್ನ ಪತಿಯ ಶಿರವು ಹಾಳಾಗದಂತೆಯೂ ಅದರ ಸಾರ್ಥಕತೆಯನ್ನು ಸಾಧಿಸಿ ನನ್ನನ್ನು ಧನ್ಯಳನ್ನಾಗಿ ಮಾಡು ಎಂದು ಪ್ರಾಥರ್ಿಸಿದಳು.
     ಆಗ ಛಲದಂಕಮಲ್ಲನು ಧರೆಗುರುಳಿದ ತ್ವಷ್ಟನ ತಲೆಯನ್ನು ಎರಡು ಭಾಗ ಮಾಡಿ ಅವುಗಳಲ್ಲಿ ತಲೆಯ ಹಿಂಭಾಗದ ಭಾಗವನ್ನು ಬಟ್ಟಲನ್ನಾಗಿಯೂ ಮುಖವಿರುವ ಭಾಗವನ್ನು ನಾಲಗೆಯುಳ್ಳ ಗಂಟೆಯನ್ನಾಗಿ, ಬೆನ್ನೆಲುಬಿನ ಭಾಗವನ್ನು ಮುಖದ ಗಂಟೆಗೆ ಪಟ್ಟಿಯನ್ನಾಗಿ ಮಾಡಿ, ಅವನ ಕರಳುಗಳನ್ನೇ ಸರಪಳಿಯಂತೆ ಮಾಡಿ, ಪಟ್ಟಿಯ ಸೂತ್ರಕ್ಕೆ ಹಚ್ಚಿಸಿ ಸಿದ್ಧಗೊಸಿದನು. ಬಟ್ಟಲಿನಲ್ಲಿ ಶಿವ ಪಾರ್ವತಿ ಧರಿಸಬೇಕಾಗಿದ್ದ ಮಂಗಳಸೂತ್ರ ರೂಪತಾಳಿಯನ್ನು ಇರಿಸಿ ಬಿಳಿ ಬಟ್ಟೆಯನ್ನು ಅದರ ಮೇಲೆ ಹೊದಿಸಿ, ಹದಗೊಳಿಸಿ ಅವಳ ಹೆಗಲಿಗೇರಿಸಿದನು. ತನ್ನ ಎಡಗಾಲಿನಿಂದ ಗಂಟೆಯನ್ನು ತಾಡನ ಮಾಡುತ್ತಾ, ನಾದದೊಡನೆ ಮಂಗಳ ಸೂತ್ರವಿರಿಸಿದ್ದ ಬಟ್ಟಲನ್ನು, ತನ್ನ ಹಸ್ತದಲ್ಲಿರಿಕೊಂಡು ಶಿವನ ಹತ್ತಿರಕ್ಕೆ ಇಬ್ಬರೂ ಬಂದರು.
     ಹೀಗೆ ದುರಳ ತ್ವಷ್ಟನನ್ನು ಸಂಹರಿಸಿ, ಅವನ ಹೆಂಡತಿಯ ಹೆಗಲ ಮೇಲೆ ಗಂಡನ ಮುಖವಾಡದ ಗಂಟೆಯನ್ನು ಹೊರಿಸಿಕೊಂಡು ಶಿವನನ್ನು ಸಂಧಿಸಿದನು. ಹಸ್ತ ಬಟ್ಟಲೊಳಗಿರುವ ಮಂಗಳ ಸೂತ್ರ ತಾಳಿಯನ್ನು ಶಿವನಿಗೆ ಸಮಪರ್ಿಸಿದನು. ಇಂತಹ ವಾಂಛಲ್ಯದ ಕಾರ್ಯವನ್ನು ತನ್ನ 'ಛಲ'ದಿಂದಲೇ ಸಾಧಿಸಿದನು. ಆದುದರಿಂದ ಇವನ್ನು 'ಛಲಕ್ಕೆ ಛಲವಾದಿ' ಎಂದೂ, ಜಯಶೀಲನೆಂದು ಶಿವನು ಹರಿಸಿದನು.  ಅಲ್ಲದೆ ಮುಖಮುದ್ರೆಯ ಗಂಟೆ ಬಟ್ಟಲಿಗೆ ಲಿಂಗ, ಬಸವ ಮುದ್ರಿಕೆಯನ್ನು ಜೋಡಿಸಿಕೊಳ್ಳಲು ಅನುಮತಿ ನೀಡಿದನು.
    ಸಂದರ್ಭದಲ್ಲಿ ತ್ವಷ್ಟನ ಹೆಂಡತಿ, ಶಿವನ ಮತ್ತು ಅವನ ಸಭೆಯ ಶಿವಗಣಂಗಳ ದರ್ಶನ ಪಡೆದು ಧನ್ಯಳಾದಳು. ಅವಳಿಗೆ ಲಿಂಗಧಾರಣೆಯ ಸಂಸ್ಕಾರವನ್ನು ಮಾಡಿ ಹರಿಸಿದನು.
     ಶಿವನು, ಲಿಂಗ, ಬಸವ ಮುದ್ರಿತ ಗಂಟೆ ಬಟ್ಟಲನ್ನು ಛಲದಂಕಮಲ್ಲನಿಗೆ ನೀಡಿ, ಕೆಲವು ಆಶರ್ೀವಚನಗಳನ್ನು ನೀಡಿದನು. ಶಿವಗಣಂಗಳನ್ನು ಯಾಚಿಸಿ, ಭವಿಗಣಂಗಳನ್ನೂ ಮೆಟ್ಟಕೂಡದು, ಪ್ರಥಮ ಗಣಂಗಳನ್ನು ಕಂಡ ಕೂಡಲೇ ಅವರನ್ನು ವಿನುತಿಸಿ ಅವರ ನುಡಿ ಮೀರದಂತೆ ನಡೆಯಬೇಕು. ಹೀಗೆಂದು ಪ್ರಥಮಗಣರು ಇವನ ಬಗ್ಗೆ ಸಾರಿರುವ ಬಿರುದು, ಎಂದು ಆಶರ್ೀವದಿಸಿದರು. ಆದುದರಿಂದ ಲಿಂಗ, ಬಸವ ಮುದ್ರಿತ ಗಂಟೆಬಟ್ಟಲನ್ನು ಉಪಯೋಗಿಸಲು ನೀನು ಹಾಗೂ ನಿನ್ನ ಮುಂದಿನ ಪೀಳಿಗೆಯವರು ಬದ್ಧರಾಗಿರುವರು. ಅದನ್ನು ಶಿವಭಕ್ತರ ಸರ್ವ ಶುಭ ಕಾರ್ಯಗಳಲ್ಲಿಯೂ ಪ್ರಪ್ರಥಮವಾಗಿ ಛಲವಾದಿಯು ಎಡಗಾಲಿನಿಂದ ಸ್ಪಶರ್ಿಸಿ ಪೂಜಿಸಿದ ನಂತರ ತಮ್ಮ ಕಾರ್ಯಗಳನ್ನು ಮುಂದುವರಿಸಬೇಕು ಎಂಬ ನಿರ್ಣಯವನ್ನು ಸೂಚಿಸಿದರು.
     ಇಂದಿಗೂ ಸಂಪ್ರದಾಯಸ್ಥ ವೀರಶೈವರೂ ಶೆಟ್ಟಿ ಬಣಜಿಗರಾದಿಯಾಗಿ ಅವರಲ್ಲಿನ ಜನನ ಮರಣ ಮತ್ತು ಎಲ್ಲಾ ಶುಭಕಾರ್ಯಗಳಿಗೆ ಛಲವಾದಿಯನ್ನು ಕರೆಯುತ್ತಾರೆ. ಅವನು ಲಿಂಗ, ಬಸವ ಸಮೇತದ ಗಂಟೆಬಟ್ಟಲಿನೊಡನೆ ಬರುತ್ತಾನೆ. ಅವನಿಂದ ಅವುಗಳ ಪ್ರಥಮ ಪೂಜೆ ಮಾಡಿಸುವ ರೂಢಿಯಿದೆ. ಅಲ್ಲದೆ ಮೆರವಣಿಗೆ, ಸ್ಮಶಾನಯಾತ್ರೆಗೂ ಗಂಟೆಬಟ್ಟಲಿನ ಛಲವಾದಿಯೂ ಮುಂದೆ ಹೋಗುವನು. ಹೀಗೆ ಛಲದಂಕಮಲ್ಲನು ತನ್ನ ಶೌರ್ಯ ಪರಾಕ್ರಮಗಳಿಂದ ಶಿವ ಪಾರ್ವತಿಯರ ಹಾಗೂ ತನ್ನ ಕಲ್ಯಾಣಕ್ಕೂ ಅನುವು ಮಾಡಿಕೊಟ್ಟನು. ಎಲ್ಲಾ ದೇವಾಸುರರ ಪ್ರೀತಿ ಗೌರವಕ್ಕೆ ಆಶರ್ೀವಾದಗಳಿಗೆ ಪಾತ್ರನಾದನು.10      
   ಏಕಕಾಲದಲ್ಲಿ ಶಿವ-ಪಾರ್ವತಿ ಮತ್ತು ಛಲದಂಕಮಲ-್ಲಮಾಯಾದೆಶಿಯರ ವಿವಾಹಗಳು ಏರ್ಪಟ್ಟವು. ವಿವಾಹಗಳ ಸಭೆಯಲ್ಲಿ ದೇವಗಣಗಳು, ಋಷಿಗಳಿದ್ದರು. ಸಭೆಯಲ್ಲಿ ವಿಷ್ಣುವು ಛಲದಂಕಮಲ್ಲನ ಪರಾಕ್ರಮಗಳನ್ನು ಪ್ರಶಂಸಿಸಿದನು. ಅಲ್ಲದೆ ತನ್ನಲ್ಲಿದ್ದ ಅತಿಭಾರವಾದ 'ಜಂಬೂಕ ತುತ್ತೂರಿ' (ಕಹಳೆ) ಯನ್ನು ನೀಡಿದನು. ಜತೆಗೆ ಅದರ ಮರ್ಮವನ್ನು ತಿಳಿಸಿದನು. ವಾದ್ಯದ ವಾದನದಿಂದ ಋಷಿ ಮತ್ತು ದೇವಗಣಗಳು ರೋಮಾಂಚನಗೊಂಡವು.    
   ಶಿವನು ವಾದನವನ್ನು ಕೇಳಿ ಸಂತಸಗೊಂಡನು. ಅಲ್ಲದೆ ತನ್ನ ಉದ್ಧಾತ ಪ್ರೀತಿಗಾಗಿ ಮತ್ತು 'ಛಲ'ಕ್ಕಾಗಿ ಹೋರಾಡಿದ ಛಲದಂಕಮಲ್ಲನಿಗೆ 'ಚಂದ್ರವಾದನ' ಮತ್ತು 'ಸೂರ್ಯವಾದನ'ವನ್ನು ನೀಡಿದನು. ಜೊತೆಗೆ ಅದರ ಮರ್ಮವನ್ನು ತಿಳಿಸಿದನು. ಅಂದಿನಿಂದ  ಸರ್ವ ಮಂಗಳ ಕಾರ್ಯಗಳಲ್ಲಿ ,ಮಠಗಳಲ್ಲಿ ಮತ್ತು ಗುರು ಪೀಠಗಳಲ್ಲಿ ಕಂಚಿನ ಕಹಳೆ ಓಲಗ ಮತ್ತು ನಗಾರಿಗಳನ್ನು ಶುಭ ಸೂಚಕಗಳಾಗಿ ಬಳಸಲಾಗುತ್ತದೆ. ಇವುಗಳಿಲ್ಲದೆ ಯಾವ ಪೀಠ ,ಸಿಂಹಾಸನಗಳೂ ನಡೆಸುವ ಶುಭಕಾರ್ಯಗಳು ಅಪೂರ್ಣ ಹಾಗೂ ಅಶುಭವೆಂದು ಆಶರ್ೀವದಿಸಿದನು. ಇಂದಿಗೂ ಛಲವಾದಿಗಳು ರಥಸಪ್ತಮಿ ಅಥವಾ ಮಠಮಾನ್ಯಗಳ ಪೂಜಾಕಾರ್ಯಕ್ರಮಗಳಲ್ಲಿ ವಾದನಗಳೊಂದಿಗೆ ಭಾಗವಹಿಸುತ್ತಾರೆ.11
   ಹೀಗೆ ಪಡೆದ ವಾದನಗಳನ್ನು ಛಲದಮಕಮಲ್ಲನು ದೇವಗಣಸಭೆಯಲ್ಲಿ ನುಡಿಸಿದನು. ತನ್ನ ಕಲಾಪ್ರತಿಭೆಯಿಂದ ಬೇರಾವ ಕಾರ್ಯಕ್ರಮವೂ ನಡೆಯದಂತೆ ಮಾಡಿದನು ಇದರಿಂದ ಕುಪಿತಗೊಂಡ ದೇವತೆಗಳು ಭೂಮಿಯಲ್ಲಿ ಹುಟ್ಟುವಂತೆ ಶಾಪವಿತ್ತರು. ನಿರಾಶಗೊಂಡ ಛಲದಂಕಮಲ್ಲನ ಮಡದಿ ಮಾಯಾದೆಶಿಯು, ಎಲ್ಲಾ ದೇವತೆಗಳಿಗೂ ನೀವೂ ಭೂಲೋಕದಲ್ಲಿ ಜನಿಸುವಂತಾಗಲಿಯೆಂದು ಮರುಶಾಪವಿತ್ತಳು. ಇದರಿಂದ ತ್ರಿಮೂತರ್ಿಗಳಾದಿಯಾಗಿ ಎಲ್ಲರೂ ಭೂಮಿಯಲ್ಲಿ ಜನಿಸಿದರು.
      ಛಲದಣಕಮಲ್ಲನು ಓರ್ವ ಅಪ್ಸರೆಯು ಗಂಗಾಸ್ನಾನ ಮಾಡಿದ್ದರಿಂದ ಗರ್ಭಧರಿಸಿ ಗಂಡುಶಿಶುವಾಗಿ ಜನಿಸಿದನು. ಮಗುವನ್ನು ನಾರದರು ಆಗಸ್ತ್ಯಾಶ್ರಮಕ್ಕೆ ತಂದು ಅದರಿಂದ ಭವಿಷ್ಯವನ್ನು ನುಡಿಸಿ, ಇವನು ಛಲದಂಕಮಲ್ಲನೆಂದೂ ಈಗ ಇವನು 'ಛಲವಾದಿ'ಎಂಬ ಹೆಸರಿನಿಂದ ನಿಮ್ಮಲ್ಲಿ ಬೆಳೆಯುತ್ತಿರುವನೆಂದು ಮಗುವನ್ನು ಹರಿಸಿ ಬಿಟ್ಟು ಹೋದನು. ಸಮಯದಲ್ಲಿ ಶಿವನೂ ಭೂಬಾಗದಲ್ಲಿ ರೇವಣಸಿದ್ಧೇಶ್ವರರಾಗಿ ಜನಿಸಿದ್ದನು. ಛಲವಾದಿಯು ರೇವಣಸಿದ್ದೇಶ್ವರರ ಜತೆಗೂಡಿ ಕೊಲ್ಲಪುರಿಯಲ್ಲಿ ದುಷ್ಟರಾಗಿ ವತರ್ಿಸುತ್ತಿದ್ದ, ನವಕೋಟಿ ಸಿದ್ಧರನ್ನು ಸಂಹರಿಸಿದನು. ಮಾಯಾದೆಶಿಯೂ ಊರ್ವಶಿಯ ಗರ್ಭದಿಂದ ಜನಿಸಿ ಸಿದ್ಧರಲ್ಲಿ ವನದ ಸಿದ್ಧಮ್ಮನಾಗಿ ಬೆಳೆದಿದ್ದಳು. ಛಲವಾದಿಗೂ ಮತ್ತು ವನದ ಸಿದ್ಧಮ್ಮನಿಗೂ ವಿವಾಹವಾಗಿ ವೀರಕಂಠನೆಂಬುವವನು ಜನಿಸಿದನು. ಈತನು ಬ್ರಹ್ಮಜ್ಞಾನಿಯಾದ ಮಹಾತಪಸ್ಸಿನಿಂದ  ಪರಾಶರಮುನಿಯಾಗಿ ಗಾಯತ್ರಿ ಸೂತ್ರರಿಗೆ ಜನಿಸಿದ ಸಶಿಲೆಯೊಡನೆ ವಿವಾಹವಾದನು. ಇವರಿಂದ ವೈವಜ್ಞನೆಂಬುವವನು ಜನಿಸಿದ. ಪ್ರಾಪ್ತವಯಸ್ಕನಾದ ಮೇಲೆ, ಒಕ್ಕಲುತನದ ನಾಗಮ್ಮನ ಮಗಳು ಕಮಲಾದೇವಿಯೊಡನೆ ವಿವಾಹವಾಗಿ ಇವರಿಂದ ಶ್ರೀಕಂಠನೆಂಬುವವನು ಜನಿಸಿದನು. ಇವನು ವಯಸ್ಕನಾದ ನಂತರ ತನ್ನ ತಾಯಿಯ ವಂಶದಲ್ಲಿ ಹುಟ್ಟಿದ ನಾಗಲಾದೇವಿಯನ್ನು ವಿವಾಹವಾದನು. ಇವರಿಬ್ಬರ ಸಮಾಗಮದಿಂದ ದಯಾಸಿಂಧುವೆಂಬುವವನು ಹುಟ್ಟಿ ಬಂದನು. ದಯಾಸಿಂಧು ಕೊಲ್ಲಾಪುರಿಗೆ ಬಂದು ಅಲ್ಲಿದ್ದ ಅಗಣಿ ಹೊನ್ನಮ್ಮನೆಂಬುವವಳನ್ನು ಮದುವೆಯಾದನು. ಇವರಿಂದ ನಾಗೇಂದ್ರನೆಂಬುವವನು ಉಗಮವಾದನು. ಇವನು ಅಕ್ಕಮ್ಮನೆಂಬುವವಳನ್ನು ವರಿಸಿದ್ದರಿಂದ ಅವರಿಗೆ ಚೆನ್ನಪ್ಪನೆಂಬುವವನು ಜನಿಸಿದನು. ಚೆನ್ನಪ್ಪನ ಮಗನೇ ಅಗಣಿ ಹೊನ್ನಯ್ಯ. ಚೆನ್ನಯ್ಯ ಮತ್ತು ಅಗಣಿ ಹೊನ್ನಯ್ಯ ಎಂಬುವವರು ಭಂಡಾರಿ ಬಸವಣ್ಣನ ಸಿಷ್ಯರಾದರೂ. ಇಂದಿಗೂ ಹೊನ್ನಯ್ಯನವರ ಸಂತತಿಯವರನ್ನು ಛಲವಾದಿಗಳೆಂದು ಕರೆಯಲಾಗುತ್ತದೆ.
ಬ್ರಹ್ಮಾಂಡ ಪುರಾಣದಲ್ಲಿ ಛಲವಾದಿ ಜನಾಂಗದ ಪ್ರಸ್ತಾಪ

     ಛಲವಾದಿ ಜನಾಂಗ ಮತ್ತು ಇತರ ಅನೇಕ ಮತ್ಗಲ ಸಂಬಂಧ ಕುರಿತು ಬ್ರಹಾಂಡಪುರಾಣದಲ್ಲಿ ಕೆಳಗಿನ ನಿರೂಪಣೆ ಇರುವುದನ್ನು ಗಮನಿಸಬಹುದು.
    ಶುದ್ಧಶೈವ, ವೀರಶೈವ, ಮಾರ್ಗಶೈವ, ಕ್ರಿಯಾಶೈವ ಮತ್ತು ಜ್ಞಾನಶೈವಗಳು ಇವು ಪಂಚಶೈವಗಳು. ಮಹತು ಮಲ್ಲಿಕಾಜರ್ುನ ಚರಲಿಂಗಕ್ಕೆ ಸಲ್ಲುವುದು. ಮಲ್ಲಿಕಾಜರ್ುನ ಚರಲಿಂಗಕ್ಕೆ ಲಿಂಗ ಸರ್ವತ್ರವಾದ ಸಚರಾಚರ ಕುಲದವರಿಗೆ ಕುಲ ಮಹಾಲಿಂಗವಾದನು. ಶ್ರೋತ್ರಿಯ್ಯ, ಶೇಷ ಸನ್ಯಾಸಿ, ಉಪಾಧ್ಯಾಯಭಟ್ಟ, ಜೋಯಿಸ ವೈದಿಕ, ದಾಸೋಹವೆಂಬ ಭಾಗವತ, ಸೋಹವೆಂಬ ಸ್ಮಾರ್ತ, ವೇದಾಭ್ಯಾಸಿ ವೈಷ್ಣವ, ಇಂತೀ ಹತ್ತು ಕುಲದ ಬ್ರಾಹ್ಮಣರಿಗೆ  ಬಾಲಬ್ರಹ್ಮೇಶ್ರ ಲಿಂಗವಾದನು. ವಾಳ ಕ್ಷತ್ರಿಯ ಮೊದಲಾದ ಹನ್ನೊಂದು ಮಿಶ್ರಗೋತ್ರಕ್ಕೆ ವೈದ್ಯನಾಥ ಪರ್ವತದ ಆರೋರ್ಯಮನ್ನಪತಿ ವೈಜನಾಥ ಲಿಂಗವಾದನು. ಈಶಜ, ರುದ್ರಜ, ವಿಷ್ನಜ, ಬ್ರಹ್ಮಜ, ಇಂದ್ರಜ- ಇಂತೀ ಐದು ಮೂತರ್ಿಗಳು ಕೂಡಿದ ಪಂಚಕುಲ ನಿಮರ್ಾಣ ವೇದಮೂತರ್ಿಗೆ ಗುರುಲಿಂಗ ಜಂಗಮವೆಂಬ ತ್ರಿಗುಣಾತ್ಮಕ ಲಿಂಗವಾದುದು. ಜಗದ್ಗುರು ಪೀಠಗಳು- ಕೊಲ್ಲಿಪಾಕ, ಶ್ರೀಶೈಲ, ಉಜ್ಜಯನಿ, ಹಿಮವತ್ ಕೇದಾರ (ಕಾಶಿ) ಬಾಳೆಹೊನ್ನೂರುಗಳು ಅಧಿಕೃತ ಗುರುಪೀಠಗಳಾಗಿದ್ದು, 18 ಪಣಕಟ್ಟಿನ ಕುಲಸ್ಥರು ಮಠಗಳಿಗೆ ನಡೆದುಕೊಳ್ಳುವರು.
    ಛಲಕ್ಕೆ ಛಲವಾದಿಗಳು, ಶೆಟ್ಟಿ ಕುಲಸ್ಥರು, ಏಕಾದಶ ರುದ್ರರು, ದೇಸಾಯಿಗಳು, ಭಕ್ತ ಬಣಜಿಗರು, ಪಂಜಾಮಗ ರುದ್ರರೂ ಹದಿನೆಂಟು ಪಣಕೆ ಸೇರಿದ ಶೆಟ್ಟಿ ಪಣಸ್ಥರು-ಇವರೇ ಪಂಚ ಸಿಂಹಾಸನಗಳಲ್ಲಿ ಗಂಟೆ ಬಟ್ಟಲು, ಲಿಂಗಮುದ್ರೆಯನ್ನು ಹಿಡಿಯುಲು ಕರ್ತವ್ಯಶೀಲರು.
                                         
     ಪಂಚ ಶೈವಗಳು- ಶುದ್ಧ ಶೈವ ,ವೀರಶೈವ,  ಮಾರ್ಗಶೈವ,  ಕ್ರಿಯಾಶೈವಾ, ಮತ್ತು  ಜ್ಞಾನ ಶೈವಾ. ಮಹತು ಮಲ್ಲಕಾಜರ್ುನ ಚರಲಿಂಗಕ್ಕೆ ಸಲ್ಲುವುದು. ಮಲ್ಲಿಕಾಜರ್ುನ ಚರಲಿಂಗಕ್ಕೆ ಲಿಂಗವಾದ ಸಚರಾಚರ ಕುಲದವರಿಗೆ ಕುಲ ಮಹಾ ಲಿಂಗವಾದನು. ಶ್ರೋತ್ರಿಯ್ಯ, ಶೇಷ ಸನ್ಯಾಸಿ, ಉಪಾಧ್ಯಾಯಭಟ್ಟ, ಸೋಹವೆಂಬ ಸ್ಮಾರ್ತ ,ವೇದಾಭ್ಯಾಸಿ ವೈಷ್ಣವ, ಇಂತೀ ಹತ್ತು ಕುಲದ ಬ್ರಾಹ್ಮಣರಿಗೆ ಬಾಲ ಬ್ರಹ್ಮೆಶ್ವರ ಲಿಂಗವಾದನು. ವಾಳ ಕ್ಷತ್ರಿಯ ಮುಂತಾದ ಹನ್ನೊಂದು ಮಿಶ್ರ ಗೋತ್ರಕ್ಕೆ ವೈದ್ಯನಾಥ ಪರ್ವತದ ಆರೋರಮನ್ಯಪತಿ  ವೈಜ್ಯನಾಥ ಲಿಂಗವಾದನು. ಈಶಜ, ರುದ್ರಜ, ವಿಷ್ಣುಜ, ಇಂದ್ರಜ, ಬ್ರಹ್ಮಜ ಇಂತಿ ಐದು ಮೂತರ್ಿಗಳು ಕೂಡಿದ ಪಂಚಕುಲ ನಿಮರ್ಾಣ ವೇದಮೂತರ್ಿಗೆ ಗುರು ಲಿಂಗ ಜಂಗಮವೆಂಬ ತ್ರಿಗುಣಾತ್ಮಕ ಲಿಂಗವಾದನು. ದಂಡಹೇತಿ, ತದೋಡಿ ಮೊದಲಾದ ಹತ್ತು ಕುಲದ ಶೂದ್ರರಿಗೆ ವೇಳೀ ಶಂಕರನು ಲಿಂಗವಾದನು.
     ಆದಿ ರುದ್ರನ ಬಲ ಕಕ್ಷಿಯಲ್ಲಿ ಹುಟ್ಟಿದ ವಾಣಿಜ್ಯ ಬಣಜಿಗರಿಗೆ ಹದಿಮೂರು ಕುಲ ಮಿಶ್ರವಾಗಿದೆ. ನಾಮಂಗಳು (ಅಂದರೆ ಸಾಲೂಮೂಲೆ), ಸಮಸಂಖ್ಯಾತರು, ಹರ ಸಮಯರು, ಪರಶಿವ ಪೃಥ್ವಿಶೆಟ್ಟಿ, ಹರ ಮುಂಮುಡಿದ ದಂಡರು, ವಿಷ್ಣು ಪಟ್ಟಣಶೆಟ್ಟಿ, ಬ್ರಹ್ಮನಾಡ ನಾಲಗೆಯವರು, ಇಂದ್ರಮೆಂಡು ಗುದ್ದಲಿಯವರು, ಅಷ್ಟ ಭೈರವರು, ಛಲಕ್ಕೆ ಛಲವಾದಿ, ಅಷ್ಟವಸುಗಳು ಎಲ್ಲರೂ ಶೆಟ್ಟಿಗುಣ ವ್ಯವಹಾರಿಗಳು. ಚಂದ್ರಾದಿತ್ಯ ನವ ಗ್ರಹಗಳು, ಶೆಟ್ಟಿ ಗುತ್ತರು, ಏಕಾದಶ ರುದ್ರರು, ದೇಸಾಯಿಗಳು, ಭಕ್ತ ಬಣಜಿಗರು, ಪಂಚಾಂಗ ರುದ್ರರೇ ಸೇರಿ ಇಟ್ಟುದುದೇ ಬೊಟ್ಟು, ಕಟ್ಟಿದುದೇ ಪಟ್ಟಣ. ಪಟ್ಟಣದವರು ಬಣಜು ಸಮಯರು. ಎಲ್ಲಾ ರಾಯರಿಗೆ ಸೊಸಲು ಪಟ್ಟವಾದರೆ, ಭಾರ ಮಾರ್ಗದ ಶೆಟ್ಟಿ ಬಣಜರಾಯರಿಗೆ ಮೊಣಕಾಲು ಪಟ್ಟ. ಇನ್ನು ಶತ ರುದ್ರರು, ದೇಶಮುಖಗಳು, ಗಂಗೆವಾಳ ಕುಸುಮ ರುದ್ರರು, ಚತುರ್ದಶ ಭುವನದ ಊರೂರು ಪ್ರಭುಗಳು ಅಲ್ಲಮಪ್ರಭುದೇವರ ವಂಶವೂ. ಇಂತೀ ಹದಿಮೂರು ಕುಲದ ಬಣಜರಾಯರಿಗೆ ,ಮಹೇಶ್ವರ ಗೋತ್ರ, ಅರವಿಂದ ವಂಶ, ಸರ್ವಕೇಣಿ ವ್ಯವಹಾರವೇ ಕುಲಾಗಮ. ಕುಲದೈವ ಗೌರಿಶಂಕರ. ಲಿಂಗ ಚರಲಿಂಗದ ಶಾಖೆ. ಇಂತೀ ಕುಲದವರಿಗೆ ಪಂಚ ಸಿಂಹಾಸನಗಳು, ಪವಿತ್ರವಾದ ಜಗದ್ಗುರು ಪೀಠಗಳಾಗಿರುತ್ತವೆ.
     ಛಲವಾದಿ ಜನಾಂಗದವರು ಹದಿನೆಂಟು ಪಣಕ್ಕೆ ಸೇರಿದ ಶೆಟ್ಟಿಪಟ್ಟಣಸ್ಥರು. ಇವರೆ ಪಂಚ ಸಿಂಹಾಸನಗಳಲ್ಲಿ ಗಂಟೆ ಬಟ್ಟಲು, ಲಿಂಗ ಮುದ್ರೆಯನ್ನು ಹಿಡಿಯುವ ಅಧಿಕಾರ ಇರುವವರು. ಜನಾಂಗದವರು ಅಪವಿತ್ರರಲ್ಲ ಆಚಾರಶಿಲರಾಗಿರುತ್ತಾರೆ.
     ಅನಾದಿ ಕಾಲದಿಂದಲೂ ಇವರು ಶಿವಾಚಾರದಲ್ಲಿಯೂ, ಅನಂತರ ರಾಮಾನುಜಾ ಮತ್ತು ಶಂಕರಾಚಾರ್ಯ ಕಾರಣದಿಂದ ವೈಷ್ಣವ ಸಂಪ್ರದಾಯದಲ್ಲಿಯೂ ಬಂದಿರುವುದರಿಂದ ಛಲವಾದಿಗಳು ಜಾತಿಹೀನರಲ್ಲ. ಕೆಲವು ನಿಸ್ಸಹಾಯಕ ಸನ್ನಿವೇಶಗಳ ಒತ್ತಡಕ್ಕೆ ಮಣಿದು ಆಚಾರಹೀನರಾಗಿರಬಹುದು. ಆದರೆ ಅಪವಿತ್ರರಲ್ಲ ಎಂಬುದನ್ನು ಇಂತಹ ಐತಿಹಾಸಿಕ ನಿರೂಪಣೆಗಳು ಸ್ಪಷ್ಟಪಡಿಸುತ್ತವೆ.
ಛಲವಾದಿ ಜನಾಂಗದ ಐತಿಹಾಸಿಕ ಮಹತ್ವ

     ಛಲವಾದಿಗಳು ಭವ್ಯವಾದ ಐತಿಹಾಸಿಕ ಹಿನ್ನಲೆಯನ್ನು ಪಡೆದವರಾಗಿದ್ದಾರೆ. ಅವರ ಇತಿಹಾಸದ ಬಗ್ಗೆ ಅನೇಕ ಮಾಹಿತಿಗಳು ನಮಗೆ ದೊರೆಯುತ್ತವೆ. ಅದರಲ್ಲೂ ಕುಲಚಾರಗಳಿಗೆ ಸಂಬಂಧಿಸಿ ಮಠಗಳಲ್ಲಿ ದಾಖಲೆಗಳನ್ನು ನಾವು ಇಂದಿಗೂ ಕಾಣಬುಹುದಾಗಿದೆ. ಅಂತಹ ದಾಖಲೆಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ.
    ಶ್ರೀಶೈಲ ಮಠಕ್ಕೂ ಛಲವಾದಿಗಳಿಗೂ ಅವಿನಾಭಾವ ಸಂಬಂಧವಿದೆ.  ಹನ್ನೆರಡನೆಯ ಶತಮಾನದವರಾದ ಶ್ರೀ ಜಗದ್ಗುರು ಚಂದ್ರಗುಂಡ ಶಿವಾಚಾರ್ಯರು, ತಮ್ಮ ಶ್ರೀಶೈಲ ಮಠದಲ್ಲಿದ್ದ ಗುರುಕುಲದೊಳಗೆ 'ಅನುಭವ ಕೇಂದ್ರ'ವನ್ನು ಸ್ಥಾಪಿಸಿದರು. ಅದರಲ್ಲಿ ದೇವರದಾಸಿಮಯ್ಯ, ಶಿವದಾಸಿಮಯ್ಯ ಮತ್ತು ತುರುಗಾಯಿ ರಾಮಣ್ಣಗಳೆ ಮೊದಲಾದವರನ್ನು ಶಿವಾನುಭವದಲ್ಲಿ ಪಳಗಿಸಿ ಸೂಳ್ನುಡಿಗಳನ್ನು ರಚಿಸಲು ಪ್ರೇರೇಪಿಸಿ ಸಫಲರಾದರು. ಅಪ್ರತಿಮ ಅಸ್ಪೃಶೋದ್ಧಾರಮಣಿಹ! ಜೊತೆಗೆ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದರು. ಹದಿನೆಂಟು ಕುಲದವರಿಗೆ ಶಿವದೀಕ್ಷಾ ಸಂಸ್ಕಾರವನ್ನೂ ಮಾಡಿ ಅನುಗ್ರಹಿಸಿ ವೀರಶೈವರನ್ನಾಗಿಸುವ ಮೂಲಕ ಅಪ್ರತಿಮರನ್ನಾಗಿ ಮಾಡಿದರು. ಛಲವಾದಿಯನ್ನು ಏರ್ಪಡಿಸುವ ಮೂಲಕ ಅಸ್ಪೃಶೋದ್ಧಾರ ಕ್ರಾಂತಿಗೆ ನಾಂದಿಯನ್ನು ಹಾಡಿದರು. ಜೊತೆಗೆ ಸಜ್ಜನ, ದೇವಾಂಗ ,ಕವಾಡಿಗ (ಗೌಳಿಗ), ಹೂಗಾರ ಡೋಹರಾದಿಗಳ ಇಡೀ ಗುಂಪುಗಳನ್ನೆಲ್ಲಾ ವೀರಶೈವರನ್ನಾಗಿಸಿ, ಇಂದಿಗೂ ಅವರು ವೀರಶೈವರಾಗಿ ಮುಂದುವರಿಯುವಂತೆ ಮಾಡಿದುದು ಸಮಾಜೋದ್ಧಾರದ ಚರಿತ್ರೆಯಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲು ಮಾಡುವಂತಹದ್ದು.12
    ಚಂದ್ರಗುಂಡ ಶಿವಾಚಾರ್ಯರು, ನಾಡಿನಾದ್ಯಂತ ನೂರಾರು ಸ್ಥಳಗಳಲ್ಲಿ, ವೀರಶೈವಕ್ಕೆ ಮೂಲಪುರುಷನಾದ ವೀರಭದ್ರನ ಮೂತರ್ಿಗಳನ್ನು ಸ್ಥಾಪಿಸಿದ್ದಾರೆ. ಅವುಗಳಲ್ಲಿ ರಾಚೋಟಿ, ಹಂಪೆ, ಗೊಡಚಿ, ನಂದಿಬೆಟ್ಟ. ಗೂಳೂರು ಮುಖ್ಯವಾದವು. ಚಿಕ್ಕಬಳ್ಳಾಪುರದ ವಾಪಸಂದ್ರ, ಕೋಲಾರ ,ಗೋಳಾಪುರ , ಗುಡಿಬಂಡೆ ,ಹುಣಸಮಾರನಹಳ್ಳಿ ಪೆನುಗೊಂಡಗಳಲ್ಲಿ ಮಠಗಳನ್ನು ನಿಮರ್ಿಸಿದ್ದಾರೆ. ಬಳಿಕ ಚೋಳಮಂಡಲಕ್ಕೆ ಆಗಮಿಸಿ, ಗೂಳೂರಿನಲ್ಲಿ ಮಠವನ್ನಿ ನಿಮರ್ಿಸಿ ಛಲವಾದಿಗಳ ಅಧಿಕೃತ ಗುರುವೆನಿಸಿಕೊಂಡರು.
   ಕರಿಬಸವೇಂದ್ರರು ಹನ್ನೆರಡನೆಯ ಶತಮಾನದವರು. ಕಲ್ಯಾಣದ ಶರಣರ ಸಮಕಾಲೀನರು. ಅಲ್ಲಮಪ್ರಭುವಿನ ಜೊತೆಗಿದ್ದೂ ಜ್ಯೋತಿರ್ಮಯರಾದವರು.ಅಲ್ಲದೆ ಮಡಿವಾಲ ಮಾಚಿದೇವ  ,ಹಡಪದ ಅಪ್ಪಣ್ಣ ಮೊದಲಾದವರಿಗೆ ವೀರಶೈವ ದೀಕ್ಷೆಯನ್ನು ನೀಡಿದವರು.13
     ಇಮ್ಮಡಿ ಕರಿಬಸವದೇಶೀಕೇಂದ್ರರ ಹನ್ನೆರಡನೆಯ ಶತಮಾನದವರು. ಇವರು ಕೂಡಲ ಸಂಗಮ ಕ್ಷೇತ್ರಕ್ಕೆ ಬಂದು ಅಲ್ಲಿದ್ದ ಜಾತವೇದಮುನಿಗೆ ಹೊಯ್ಕೈಯಾಗಿ ನಿಂತು ಭಾಗದಲ್ಲಿನ ಜನರಿಗೆ ಶಿವದೀಕ್ಷೆಯನ್ನು ಕರುಣಿಸಿ ವೀರಶೈವರನ್ನಾಗಿಸಿದರು. ಅಲ್ಲದೆ ಜಾತವೇದಮುನಿ ಶಿವಾಚಾರ್ಯರ ಗುರುಕುಲ ಮತ್ತು ಲಿಂಗಾರ್ಚನ ಮಂಟಪಗಳು ನಡೆಯಲು ನೆರವಾಗುವರು. ಅದೇ ಕೂಡಲಸಂಗಮ ಗ್ರಾಮ ಪಾಟೀಲ ಮನೆತನದವರಿಗೆಲ್ಲಾ ಶಿವದೀಕ್ಷೆಯನ್ನು ನೀಡಿ, ಅವರುಗಳಿಂದ ಊರಲ್ಲಿ ಮಠ ಮಾನ್ಯಗಳನ್ನು ಕಾಣಿಕೆಯಾಗಿ ಸ್ವೀಕರಿಸಿ ಅಲ್ಲಿಯೇ ನೆಲೆನಿಂತು ಐಕ್ಯರಾದರೂ .ಇಂದಿಗೂ ಮಠ ಮತ್ತು ಗದ್ದುಗೆಗಳು ಇವೆ. ಇದರಿಂದ ಛಲವಾದಿ ಸಂಪ್ರದಾಯವೂ ದಕ್ಷಿಣದಿಂದ ಉತ್ತರಕ್ಕೆ ಹರಿದಿರುವ ಸಾಧ್ಯತೆ ಇದೆ.
    ಇಮ್ಮಡಿ ಕರಿಬಸವರಾಜ ದೇಶೀಕೇಂದ್ರರು, ಕನ್ನಡನಾಡಿನ ಮೂಲೆ ಮೂಲೆಗಳನ್ನು ಸುತ್ತಿ ಶಿಷ್ಯರನ್ನು ಮತ್ತು ಶಾಖಾಮಠಗಳನ್ನು ಸ್ಥಾಪಿಸಿದರು. ರಾಮದುರ್ಗ ,ಕುಷ್ಟಗಿ ,ಹೊಸಪೇಟೆ ,ಭಾವಿಹಳ್ಳಿ ,ಉಕ್ಕಡಗಾತ್ರಿ ,ಶಿರಾ ,ಹೊನ್ನಾಳಿ ,ಶಿವಗಂಗಾ , ನಂಜನಗೂಡು , ಮೈಸೂರು ,ಪಿರಿಯಾಪಟ್ಟಣ , ರಬಕವಿ , ಗೆಜ್ಜೆಬಾವಿ , ತೊರಗಲ್ಲು ,ಬಾಗಿಲಕೋಟೆ , ಬಳ್ಳಾರಿ , ಬಳಗಾನೂರು , ವಿಡದಹಳ್ಳಿ , ಕೇಸಂಪೇಟೆ ,ರಾಯಚೂರು ,ಕಲಬುಗರ್ಿ ,ಬೀದರ , ಶಿರಹಟ್ಟಿ , ಕೊಟ್ಟೂರು , ಹಾಲನಹಳ್ಳಿ , ಗಂಜಹಾಲ ,ಹಾವೇರಿ ,ಲಕ್ಷ್ಮೇಶ್ವರ ,ದಾರವಾಡ ,ಹುಬ್ಬಳ್ಳಿ ,ಬೆಂಗಳೂರು , ಮಡಶಿರ , ಗೊಳ್ಳಾಪುರ ,ತಲಮರಲ , ಧರ್ಮವರ , ಕನಿಮಕ್ಕಲ , ಮೊದಲಾದ ಸಾವಿರಾರು ಮಠಗಳನ್ನು ಸ್ಥಾಪಿಸಿ ಶಿಷ್ಯಕೋಟ್ಯ ಮೇಲೆ ಅಪಾರ ಪ್ರಭಾವನ್ನು ಬೀರಿದರು. ಅಲ್ಲದೆ ಮಠಗಳು ಛಲವಾದಿಗಳಿಗೆ ಅಧಿಕೃತ ಮಠಗಳಾಗಿವೆ. ಮಠಾಧೀಶರು ಕುಲ ಗುರುಗಳಾಗಿದ್ದರು.
     ಕ್ರಿ.. 14 ಶತಮಾನದಲ್ಲಿ ಕ್ರಿಯಾಶಕ್ತಿಯೊಡೆಯರು ಪೀಠಾದಿಪತಿಗಳಾಗಿ, ಹಕ್ಕಬುಕ್ಕರಿಗೆ ವಿಜಯನಗರ ಸಾಮ್ರಾಜ ಸ್ಥಾಪನೆಗೆ ನೆರವಾದರು. 14ಶತಮಾನದಲ್ಲಿ ಬಂದ ಕಂಚಿಯ ಕರಿಬಸವೇಂದ್ರರು -ಇವರು ತಮಿಳು ನಾಡಿನಲ್ಲಿ ತಮ್ಮ ಪ್ರಭಾವನ್ನು ಬೀರಿದರು. ಕಂಚಿ ,ವಾಲಾಜಪೇಟ , ಅರುಣಾಚಲ ,ಚಿದಂಬರ , ಮಧುರ ,ರಾಮೇಶ್ವರ . ಕುಂಭಕೋಣಂ ಮೊದಲಾದ ನಗರಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ ಶಿಷ್ಯವೃಂದವನ್ನು ಬೆಳೆಸಿದರು.
     16ಶತಮಾನದಲ್ಲಿ ಕಾಶಿ ಕರಿಬಸವೇಂದ್ರರು -ಆಂಧ್ರ ಪ್ರಾಂತ್ಯದಲ್ಲಿ ಶಿಷ್ಯಾರ್ಚನೆಯನ್ನು ಮಾಡಿ ಕಲ್ಯಾಣದುರ್ಗ ,ರಾಮದುರ್ಗ ,ಗುಂತಕಲ್ಲು , ವಿಜಯವಾಡ ,ಕರ್ನೂಲು ,ಪಾಮದುರ್ತಿ ,ಪುಟ್ಟಪರ್ತಿ , ಉರಮಕೊಂಡ ,ಮೊದಲಾದ ಊರುಗಳಲ್ಲಿ ಶಾಖಾ ಮಠಗಳನ್ನು ರೂಪಿಸಿದರು. ನಂತರ ಗದುಗಿನ ನಗರದಲ್ಲಿ ಐಕ್ಯರಾದರು. ಅದು ಇಂದು ಡೊಂಬಳದ ತೋಂಟದಾರ್ಯರ ಮಠವಾಗಿದೆ.  ಆದರೆ ಮಧ್ಯದಲ್ಲಿ ಕರಿಬಸವೇಂದ್ರರ ಗದ್ದುಗೆ ಇಂದಿಗೂ ಇದೆ. ಉತ್ತರ ಕನರ್ಾಟಕದ ಕೆಲವು ಛಲವಾದಿಗಳು ಮಠಕ್ಕೆ ನಡೆದುಕೊಳ್ಳುತ್ತಾರೆ.
    ಶ್ರೀಶೈಲಪಂಡಿತಾರಾದ್ಯ ಶಿವಾಚಾರ್ಯರು ಶ್ರೀಶೈಲ ಪರ್ವತದಲ್ಲಿ 'ಸೂರ್ಯಸಿಂಹಾಸನ' ಎಂಬ ಹೆಸರಿನಿಂದ ಜಗದ್ಗುರು ಪೀಠವನ್ನು ಸ್ಥಾಪಿಸಿ ವೀರಶೈವ ಮಠಸ್ಥಾಪನಾಚಾರ್ಯರೆನಿಸಿಕೊಂಡರೆಂದು ಶೈವಾಗಮಗಳಲ್ಲಿ ಹೇಳಿದೆ.
    ಕ್ರಿ..405 ರಲ್ಲಿ ಭಾರತದೇಶಕ್ಕೆ ಬಂದ ಚೀನಾ ದೇಶದ ಫಾಹಿಯಾನ್ನು ಶ್ರೀಶೈಲದ ಮೇಲೆ ಪಾರಾವತಮಠ ಎಂಬ ಹೆಸರಿನ ಮಠವಿದೆಯೆಂದು ಬರೆದಿದ್ದಾನೆ.14 ಕ್ರಿ..ಒಂದನೆಯ ಶತಮಾನದಲ್ಲಿ ಅಂದರೆ ಸುಮಾರು 2000ವರ್ಷಗಳ ಹಿಂದೆ, ಅಲ್ಲಿ ಒಂದು ಮಠವೂ ಮಾತ್ರ ಇದ್ದಿತ್ತೆಂದು ತಿಳಿದು ಬರುತ್ತದೆ. ಆದರೆ ಈಗ ಅನೇಕವು ಇವೆ. ಅನೇಕವೂ ಕಾಣೆಯಾಗಿವೆ. 'ಸೂರ್ಯ ಸಿಂಹಾಸನ ಮಠ' ಅಂದರೆ ಮಠಗಳಲ್ಲಿರುವ ಗುರುಪೀಠಗಳನ್ನು ಸಿಂಹಾಸನಗಳೆಂದು ಕರೆಯುವರು. ಹೀಗೆ ವ್ಯವಹರಿಸುವ ಗುರು ಪೀಠಗಳು ವೀರಸಿಂಹಾಸನ (ಬಾಳೇಹೊನ್ನೂರು) ಸದ್ಧರ್ಮ ಸಿಂಹಾಸನ (ಉಜ್ಜಯಿನಿ) ವೈರಾಗ್ಯ ಸಿಂಹಾಸನ (ಹಿಮವತ್ಕೇದಾರ) ಸೂರ್ಯಸಿಂಹಾಸನ (ಶ್ರೀಶೈಲ) ಜ್ಞಾನಸಿಂಹಾಸನ( ಕಾಶೀ) ಎಂದು ಪಂಚ ಸಿಂಹಾಸನಗಳಿವೆ. ಆದರೆ ಎಲ್ಲೂ ಸಿಂಹಾಸನದ ಬಗ್ಗೆ ಹೀಗೆ ಪ್ರಸ್ತಾಪವಾಗಿಲ್ಲ. ಪರ್ವತ ಪುರಾಣಂ-ಪೋಲಮರಾಜು, ಶೇಷನಾಥ ಎಂಬ ಇಬ್ಬರು ಕವಿಗಳು ಇದರ ಸೂಕ್ಷ್ಮ ವಿವರಗಳನ್ನು ನೀಡಿದ್ದಾರೆ. ಶ್ರೀಶೈಲದ ಮೇಲಿನ ಸೂರ್ಯತಾಟಿ, ಸೂರ್ಯಕುಂಡ ,ಸೂರ್ಯೇಶ್ವರಗಳೇ ಇವು. ಎಂದು ವಣರ್ಿಸಿದ್ದಾರೆ. ಸೂರ್ಯಸಿಂಹಾಸವೆಂಬ ಹೆಸರುಬಹಳ ಕಾಲದಿಂದ ವ್ಯಹಹಾರದಲ್ಲಿದೆ. ವೀರಶೈವರು (ಲಿಂಗದಾರಿಗಳು) ಮತ್ತು ಶ್ರೇಷ್ಠಪಣ (ಬಲಗೈಪಣ)ಎಂಬ ಹದಿನೆಂಟು ಜಾತಿಗಳವರಲ್ಲಿಯೂ ಸೂರ್ಯಸಿಂಹಾಸನದ ಪ್ರಶಂಸೆಯು ಅವರ ನೈಮಿತ್ತಿಕ ಕ್ರಿಯೆಗಳಲ್ಲಿ ಕಂಡುಬರುತ್ತದೆ. ಅವರ ಮದುವೆಯ ಕಾರ್ಯಗಳ ಶಿವಾಸನವು ಸೂರ್ಯ ಸಿಂಹಾಸನದ ಕುರುಹು ಆಗಿದೆ.
     ಶ್ರೀಶೈಲ ನಿಡುಮಾಮುಡಿ ಮಠದಲ್ಲಿರುವ ಶಾಸನಗಳಿಂದ ವಿಜಯನಗರದರಸರು ಮತ್ತು ಅವರ ಸಾಮಂತರಿಗೆ  ದೇಶಿಕೇಂದ್ರರು ರಾಜಗುರುಗಳಾಗಿದ್ದಂತೆ ತಿಳಿದು ಬರುತ್ತದೆ. ಶಾತವಾಹನರಿಗೆ (ಕ್ರಿ.ಪೂ 225- ಕ್ರಿ. 227) ಪಲ್ಲವರಿಗೆ (ಕ್ರಿ..225-340) ಇಕ್ಷ್ವಾಕುರಾಜರಿಗೆ (ಕ್ರಿ.250-340 ) ವಿಷ್ಣುಕುಂಡಿನರಾಜರೂ(ಕ್ರಿ..350-610) ಕಾಕಾತೀಯ (ಕ್ರಿ..1089-1323), ವಿಜಯನಗರ (ಕ್ರಿ..13336-1500) ಅರಸರೂ ಅವರ ಸಾಮಂತರೂ ಅನಂತರ ಆಳಿದ ರೆಡ್ಡಿರಾಜರೂ ಸಹ ಶ್ರೀಶೈಲ ಪೀಠಕ್ಕೆ ಶಿಷ್ಯರಾಗಿದ್ದರು. ನಿಡುಮಾಮಿಡಿ ದೇಶಿಕೇಂದ್ರರು ಇವರಿಗೆ ರಾಜಗುರುಗಳಾಗಿದ್ದರು. ವಂಶಗಳು ನಶಿಸಿರುವುದರಿಂದ ಅವು ವಿಸ್ತೃತವಾಗಿವೆ. ಆದರೆ ಜಾತಿಗಳಿಗೆ ಸೇರಿದವರು ಇಂದಿಗೂ ಸಹಾ ನಿಡಿಮಾಮಡಿತ ಸೂರ್ಯಸಿಂಹಾಸನವನ್ನು ಗುರು ಪೀಠವಾಗಿ ವ್ಯವಹರಿಸಿಕೊಳ್ಳುವುದು ಮತ್ರ ಉಳಿದಿದೆ.16
                                                          
     ನಿಡುಮಾಮಿಡಿ ಶ್ರೀಶೈಲ ಪೀಠಾಧಿಪತಿಗಳನ್ನು ಆರಾಧಿಸಿದ ರಾಜರು-ಪಲ್ಲವರು(ಕ್ರಿ..5-6ಶತಮಾನ) ಲಿಂಗದಾರಿಗಳು ಎಂಬ ವಿಷಯವನ್ನು ಮಾಮಲ್ಲಪುರಂ ,ತಿರಿಚನಾಪಲ್ಲಿ ,ಕಂಚಿ ಮೊದಲಾದ ಕಡೆ ದೊರೆತಿರುವ ಶಿಲಾಶಾಸನಗಳು ಘೋಷಿಸಿವೆ.16 ಇವರಲ್ಲಿ ಗುಣಭರ, ಅತ್ಯಪ್ರಕಾರ ಮುಕ್ಯರು. ಇಂತಹ ರಾಜರಿಗೆ ಲಿಂಗ ದೀಕ್ಷೆ ನೀಡಿದವರು ಶ್ರೀ ಶೈಲ ಸೂರ್ಯಸಿಂಹಾಸನಧೀಶ್ವರರು. ಶ್ರೀ ಶೈಲದಲ್ಲಿರುವ ಸೂರ್ಯಸಿಂಹಾಸನಮಠವನ್ನು ಕಟ್ಟಿಸಿದವರು ಪಲ್ಲವರಾಜರೆಂದು ವ್ಯಕ್ತವಾಗುತ್ತದೆ. ಏಕೆಂದರೆ ಶ್ರೀಶೈಲದಲ್ಲಿರುವ ಶಿಲ್ಪವೂ ಪಲ್ಲವರ ಕಾಲದೆಂದು ನಿರ್ಧರಿಸಲಾಗಿದೆ. ಇದನ್ನು ಪಾಲ್ಕುರಿಕಿ ಸೋಮನಾಥನು ತನ್ನ ಪಂಡಿತಾರಾಧ್ಯ ಚೆರಿತ್ರೆಯಲ್ಲಿ(ಪರ್ವತ ಪ್ರಕೃಣದಲ್ಲಿ) ವಣರ್ಿಸಿದ್ದಾನೆ.
           ಭುವಿ ಬಲ್ಹವ ವಂಶಮುನ ಬುಟ್ಟಿ... ಶ್ರೀಗಿರಿ ಕೇತಿಂಚಿ...
            ಯೊಕ್ಕ ಮಠಮುಗಟ್ಟಿಂಚಿ ...ಬಹತ್ತವಿನಿಯೋಗಮು ನತಿ|
            ಪ್ರೀತಿನಪರ್ಿಂಚಿ...
ಎಂಬಲ್ಲಿ ಪಲ್ಲವ ರಾಜರು ಅಲ್ಲಿ ಗುರುವಿಗೆ ಮಠವನ್ನು ಕಟ್ಟಿಸಿಕೊಟ್ಟು ಅವರಿಗೆ ಬಾಹತ್ತ ವಿನಿಹೋಗ ಎಂದರೆ 72 ಬಿರಿದುಗಳನ್ನು ಅಪರ್ಿಸಿದ್ದರೆಂದು ವಣರ್ಿಸಲಾಗಿದೆ. ಪೀಠಾಧಿಪತಿಗಳನ್ನು ಪಲ್ಲವ ಅರಸರು ಪೂಜಿಸಿ ಗೌರವಿಸಿದ್ದರು. 6-7 ಶತಮಾನಗಳಲ್ಲಿ ತಿಮೂಲಕ ಎಂಬ ಮಹಾಶಯರು ವೀರಶೈವ ತತ್ವಗಳನ್ನು ಪ್ರತಿಪಾದಿಸಲಿಕ್ಕೆ ಪೀಠದ ಆಚಾರ್ಯರ ಪ್ರಭಾವವಿರಬೇಕು. ಕ್ರಿ..8ಶತಮಾನದಲ್ಲಿ ಶಂಕರಾಚಾರ್ಯರೊಡನೆ ವಾದಿಸಿದ ಶಿರೋವ್ರತಿ (ಶಿರಸಿಲಿಂಗದಾರಿ) ಜಂಗಮ ನೀಲಕಂಠರು ಶಿವಾಚಾರ್ಯರೆನಿಸಿ ಶ್ರೀಶೈಲದಲ್ಲಿದ್ದುದು.-ಇವೆಲ್ಲವನ್ನು ಗಮನಿಸಿದರೆ ಪೀಠಾಧಿಪತಿಗಳು ರಾಜಾಧಿರಾಜಮಾನ್ಯರಾಗಿ ಕ್ರಿ..10ಶತಮಾನದವರಿಗೂ ಪ್ರಖ್ಯಾತವಾಗಿದ್ದ ಅಂಶವು ಚಾರಿತ್ರಿಕ ದೃಷ್ಟಿಯಿಂದಲೂ ಸಿದ್ಧವಾಗುತ್ತದೆ.
    ಮೇಲಿನ ರಾಜ ಸಂತತಿಗಳು ಕೋಲಾರ ಪ್ರಾಂತ್ಯವನ್ನು ಆಳ್ವಿಕೆ ಮಾಡಿದ್ದಾರೆ. ಅವರ ಆಳ್ವಿಕೆಯಲ್ಲಿ ಛಲವಾದಿಗಳಿಗೆ ಉನ್ನತವಾದ ಸ್ಥಾನ ಲಭಿಸಿರಬೇಕು. ಅವರ ಕಾಲದಲ್ಲಿ ಪಣ ವ್ಯವಸ್ಥೆಯೂ ಜಾರಿಗೆ ಬಂದಿರಬಹುದೇ ? ಎಂಬ ಊಹೆಗೂ ಅವಕಾಶವಿದೆ. ಆದರೆ ಅದಕ್ಕೆ ತಕ್ಕುದಾದ ಆಧಾರಗಳು. ಸಿಗುವುದಿಲ್ಲ. ಒಟ್ಟಾರೆ ಅವರ ಅವಧಿಯಲ್ಲಿ ಶೈವ ಸಂಪ್ರದಾಯ ಉತ್ಕೃಷ್ಟ ಸ್ಥಿತಿಯಲ್ಲಿತ್ತು. ಎಂಬುದಕ್ಕೆ ಇವು ಪೂರಕ ಮಾಹಿತಿಗಳು ಆಗಬಲ್ಲವು.
    ಪದ್ಯ ಭಾಗದಲ್ಲಿ ಶಿವ ಲಿಂಗ ದೀಕ್ಷೆಯನ್ನು ಹಲವು ಜಾತಿ ಕುಲದವರಿಗೆ ನೀಡಿ ಅವರನ್ನು ಶಿವಾಚಾರಕ್ಕೆ ಒಳಪಡಿಸಲಾಯಿತು ಎಂಬ ಪ್ರಸ್ತಾಪಕ್ಕೆ ಇಂಬು ಕೊಡುತ್ತದೆ.
   || ಇವ್ವಿಧಂಬುನ ನದ್ವಿಪ್ರಜನಂಬುಲಕು ಲಿಂಗಧಾರಣಂಬುಲು ಗಾವಿಂಚಿ ವೀರಶೈವಾಚಾರ ಮರ್ಮಂಬುಲುಪದೇಶಿಂಚಿ ನಪ್ಪಂಡಿತ ಸಮುದಯಂಬುನಕು ನಿಜಗುರು ಪಂಡಿತಾರಾಧ್ಯ ಯಶೋವಿಶೇಷ ವಿಭೂಷಿತುಲಗುಟಂಜೇಸಿ ಪಂಡಿತಾರಾಧ್ಯುಲನಿ ಯನ್ವರ್ಥಕಂಬುಗು ನಾಮದೇಯಂಬೊನರಿಂಚಿ ಸಂತೋಷಿಂಪಜೇಸಿ ವಾರಲಚೇ ನನೇಕ ವಿಧಂಬುಲುಗಾ ಪೂಜಲುಗೈಕೋನಿ ವೀರಶೈವಾಚಾರ ಸಿದ್ಧಾಂತ ವಿಚಕ್ಷುಣಡೀತಡಿನಿ ಕಾಶೀಪುರಂಬುನ ಗಲ ಜನುಲೆಲ್ಲ ತನ್ನಬೊಗಡ ನಿತ್ಯನಂದುಂಡೈಯಂದು ಕೊನ್ನಿದಿನಂಬುಲುಂಡಿಯಂತ ನಪ್ವರಂಬು ವೆಡಿಲಿ ಯನೇಕ ಶಿಷ್ಯಜನ ಸಮೇತುಂಡೈ ಸೌರಾಷ್ಟ್ರ ಮಹಾರಾಷ್ಟ್ರ ಬರ್ಬರ ಅಂಗ ಕುಕರ ಕಾಶ ಕರೂರ ವಿದಭರ್ಾಂಗ ಕಳಿಂಗ ಕಾಶ್ಮೀರ ಕೋಸಲ ಕೊಂಕಣ ಚೋಳ ಕಣರ್ಾಟಕ ಆಂಧ್ರಾಧಿ ನಾನಾವಿಧ ದೇಶಂಬುಲ ಸಂಚರಿಂಚುಚು ಶಿವದೂಷಕಕುಲೈನ ವಾರಿನಿ ನಿಗ್ರಹಿಂಪುಚು ವಾರಿಕಿ ನಿಷ್ಟಲಿಂಧಾರಣ ಪಂಚಾಕ್ಷರೀಮಂತ್ರಂ ವೀರಶೈವಾಚಾರಿಕಮುಲನುಪದೇಶಿಂಚಿ ವಚ್ಚು ವಾರಲವೆಂಬಡಿ ದೋಟ್ಕೋನಿ ಮರಲ ಶ್ರೀಶೈಲಂಬುನಕು ವಚ್ಚಿಯಂದು17
     ವಿಜಯನಗರದ ಕೃಷ್ಣದೇವರಾಯ (1509-1530) ಪ್ರಖ್ಯಾತ || ಕರಿಬಸವಸ್ವಾಮಿಗಳನ್ನು ಮೊದಲು ಉಪರಾಜಧಾನಿಯಾದ ಪೆನುಗೊಂಡಕ್ಕೂ ಅನಂತರ ಹಂಪೆಗೂ ಬರಮಾಡಿಕೊಂಡು ಅವರಿಗೆ ಒಂದು ಮಠವನ್ನು ಕಟ್ಟಿಸಿಕೊಟ್ಟನು. ಅಲ್ಲಿ ಮಠದ ಪಕ್ಕದಲ್ಲೇ ಉದ್ದಾವೀರಭದ್ರನ್ನು ಪ್ರತಿಷ್ಟಾಪಿಸಿದನು. ವಿಜಯನಗರದ ಅಚ್ಚುತರಾಯನು 1530-1542 ಸುಮಾರಿನಲ್ಲಿ ಪೆನುಗೊಂಡೆದ ಅರಮನೆಯಲ್ಲಿ ಇಮ್ಮಡಿ ಕರಿಬಸವೇಂದ್ರರನ್ನು ಬರಮಾಡಿಕೊಂಡು ವಿಶೇಷವಾಗಿ ಸನ್ಮಾನಿಸಿ ಒಂದು ಶಾಸನವನ್ನು ಬರೆಸಿಕೊಟ್ಟರು. ಇದು ಛಲವಾದಿ ಮತ್ತು ಹದಿನೆಂಟು ಪಣಸ್ಥರಿಗೆ ಅವರು ನೀಡುತ್ತಿದ್ದ ಮಹತ್ವವನ್ನು ಅದು ವಿಶದ ಪಡಿಸುತ್ತದೆ.
 ಶ್ರೀ ಮನ್ನಿಡುಮಾಮಿಡಿ ಸ್ವಾಮುಲ್ಕು ಅಷ್ಟಾವರಣಂ ಸಾಲುಮೂಲ ದ್ಯಾವರ ದೇಶಮುದ್ರ ಶೆಟ್ಟಿಶ್ಯಾನುಬೋಗಲು ಯದುವೇಲ್ಪು ಕಾವುಕಮ್ಮಟಂ ದ್ಯಾವರಕೊಂಡ ಡೆಬ್ಬಯ್ಯೇಲು ಕುಲಂ.ಇದಿ ಪೆನುಗೊಂಡ ಕನಕಪುರಾಯಿ ಸಿಂಹಾಸನಂ ನಿಡುಮಾಮಿಡಿ ಜಂಗಮಯ್ಯ ಪಂಡಿತಾರಾಧ್ಯ ಸೂರ್ಯಸಿಂಹಾಸನಾನಿಕಿ ನಡಿವವಲಯು ಅಚ್ಚುತರಾಯಯಲು ಶಿಷ್ಯಲು ಅಗುಟೆ ಸಾಕ್ಷಿ ಶ್ರೀ ಶ್ರೀ ಶ್ರೀ( ಶಾಸನವು ಪೀಠದಲ್ಲಿರುವ ಓಲೆಗರಿ ಪ್ರತಿ ''ಪ್ರತಿಯಲ್ಲಿದೆ)
  ಮೈಸೂರು ಅರಸ(ಚಿಕ್ಕದೇವರಾಜ ಒಡೆಯರು1672-1704) ಅವರು ಗೌರವಿಸಿ ನಂಜನಗೂಡಲ್ಲಿ ಮಠವನ್ನು ಕಟ್ಟಿಸಿಕೊಟ್ಟನು.
     13ಶತಮಾನದಲ್ಲಿ ಶ್ರೀಶೈಲ ರಾಜ್ಯವನ್ನು ಆಳುತ್ತಿದ್ದ ರೆಡ್ಡಿವಂಶಸ್ಥರಿಗೆ ಶಿವದೀಕ್ಷೆಯನ್ನಿತ್ತರು. ರೆಡ್ಡಿ ಜನಾಂಗಕ್ಕೆ ಸೇರಿದ ಪೋಕನಾಟಿ ರಡ್ಡಿಗಳು, ಮೊರಸುಗೌಡರಿಗೆ ಬೆರಳುಕೊಡುವ ಒಕ್ಕಲಿಗರಿಗೆ , ಚಟಮಿಟ ರೆಡ್ಡಿಗಳು ,ಪಂಟರೆಡ್ಡಿಗಳಿಗೆ ಮುಂತಾದ ಅನೇಕ ರೆಡ್ಡಿ ವಂಶೀಯರು ಪೀಠದ ಶಿಷ್ಯರಾಗಿದ್ದಾರೆ. ವೈಶ್ಯರಿಗೆ ಲಿಂಗದೀಕ್ಷೆಯನ್ನು ನೀಡಿದರು. ಯಲಮಿರೆಡ್ಡಿ ಜನಾಂಗಕ್ಕೆ ಲಿಂಗದಾರಣೆ-ಶಿವಗಂಗೆಯ ಗಂಗಾಧರಗೌಡ ,ನಂದಿಯ ನಂದಿಗೌಡರು ,ಹೀಗೆ ಆರಾಧ್ಯ ಬ್ರಾಹ್ಮಣರು ,ಹೈಹಯವಂಶದ ಕ್ಷತ್ರಿಯರು ,ಪೆನುಗೊಂಡ ಮತ್ತು ಮಹಾನಂದಿಯ  ವೈಶ್ಯರು .ರೆಡ್ಡಿ ಜನಾಂಗದಲ್ಲಿ-ಪಾಕನಾಟಿ ,ಪೋಕನಾಟಿ ,ಹೇಮ ,ಬಾಲ ,ನೆರವಲ ,ಪಾಲೇಗಾರರು ,ದೇಸಾಯಿಗಳು ,ಪಾಂಡ್ಯರು ,ಬಳ್ಳಾರಿವಣಿಜರು ,ಬಣಜಿಗರು ,ಪಂಚಾಲದವರು ,ಮಹೇಶ್ವರರು ,ಹೂಗಾರರು ,ಕವಾಡಿಗರು ,ಸಾಲೆ ,ಶೀಲವಂತ ,ಕುರುಬ ,ಕುಂಬಾರರು ,ಬೆಸ್ತ ,ನಾಯಿಂದ ,ಈಡಿಗ ,ಗಾಣಿಗ ,ದೇವಾಂಗ ,ಮಡಿವಾಳ ,ಪಂಡಾರರು,ಬುಡುಬುಡುಕಿ ,ಮೇದರು ,ಉಪ್ಪಾರ ,ಜೋಗಿ ,ಜಂಗಾಲು ,ದೊಮ್ಮರ ಬೋಗದ ,ಬಳೆಯ ,ವೀರಮುಷ್ಠಿ , ಮೊಚ್ಚೆ, ಎಲೆಯವರು -ಮುಂತಾದ ಲಿಂಗಿ ಮತ್ತು ಅಲಿಂಗಿ ಜನಾಂಗಗಳು ಇಂದಿಗೂ ಪೀಠದ ಶಿಷ್ಯರಾಗಿ ತಮ್ಮ ತಮ್ಮ ಜಾತಿಯ ಕಟ್ಟುಕಟ್ಟಲೆಗಳನ್ನು ಪೀಠದಲ್ಲಿ ಬಗೆ ಹರಿಸಿಕೊಳ್ಳುತ್ತಿರುವುದು ಪೀಠದ ಚೆರಿತ್ರೆಯಲ್ಲಿ ವಿಶಿಷ್ಟವಾದ ಅಂಶವಾಗಿದೆ.
     ಹದಿನೆಂಟು ಕುಲಸ್ಥರಾದ ಜನಸಾಮಾನ್ಯರನ್ನು ಸಂಸ್ಕರಿಸಿ ಪಣಕಟ್ಟನ್ನು ನಿಮರ್ಿಸಿದ ,ದಲಿತೋದ್ಧಾರ ಕಾರ್ಯವನ್ನು ದೇವರದಾಸಿಮಯ್ಯನಲ್ಲಿ ಪ್ರೇರೇಪಿಸಿದವರು, ಚಂದ್ರಗುಂಡ ದೇಶಿಕೇಂದ್ರ ಸ್ವಾಮಿಗಳೆಂದು ತಿಳಿದು ಬರುತ್ತದೆ.18 ಶ್ರೀಶೈಲದಿಂದ ಬಂದ ಚಂದ್ರಗುಂಡ ದೇಶಿ ಕೇಂದ್ರರನ್ನು ಕೋಲಾರ ಪ್ರಾಂತ್ಯದ 18ಪಣಕಟ್ಟಿನ ಜನರು ಧರ್ಮ ಗುರುಗಳಾಗಿ ಗೌರವಿಸಿದ್ದಾರೆ.
    ಹೊಯ್ಸಳರನ್ನು ಪ್ರತ್ಯೆಕಿಸಿ ವಿಜಯನಗರ ಕಾಲದಲ್ಲಿ ಪೆನೊಂಡ ಮತ್ತು ರಾಜದಾನಿ ಹಂಪೆಗೆ ಮತ್ತು ಪೀಠಕ್ಕೆ ಹೆಚ್ಚು ಸಾಮಿಪ್ಯವಿತ್ತು. ಮತ್ತು ರಾಜಗುರುವಾಗಿದ್ದ ಕಾರಣದಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆಯಿತು. ಚೋಳರ ಕಾಲದಲ್ಲಿ ಚಂದ್ರಗುಂಡ ದೇಶೀಕೇಂದ್ರರು, ಹೊಯ್ಸಳರ ಕಾಲದಲ್ಲಿ(ನಿಡಗಲ್ಲುಚೋಳ) ಕರಿಬಸವೇಂದ್ರರು, ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಕಾಶೀವಿಲಾಸ ಕ್ರಿಯಾಶಕ್ತಿದೇವ ವಡೆಯರು ಮತ್ತು ಚಂದ್ರಭೂಷಣದೇವ ವಡೆಯರ ಪ್ರಭಾವವನ್ನು ಹದಿನೆಂಟು ಕುಲಸ್ಥರ ಮೇಲೆ ಆಗಿರುವುದು ಕಾಣಬಹುದು.   
      11ಶತಮಾನದಲ್ಲಿ ಚೋಳರಾಜ ರಾಜೇಂದ್ರಚೋಳನು ಕನರ್ಾಟಕದಲ್ಲಿನ ಗಂಗವಾಡಿಯನ್ನು(ಕೋಲಾರ ಪ್ರಾಂತ್ಯ) ಗೆದ್ದು ನಂತರ ಚಂದ್ರಗುಂಡ ದೇಶೀಕೇಂದ್ರರಿಗೆ ಸಮೀಪವಾದಂತಿದೆ. 12ಶತಮಾನದಲ್ಲಿ ಚಾಲುಕ್ಯ ಚಕ್ರವತರ್ಿ ಜಗದೇಕಮಲ್ಲನ ಮಹಾಮಂಡಲಾಧೀಶನಾದ ಇರುಂಗೋಳ ಚೋಳನು (ಕ್ರಿ..1139) ಅನಂತಪುರಂ ರಾಜ್ಯದಲ್ಲಿನ ಗುಯಲೂರನ್ನು (ಗೂಳೂರು)ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ಮಾಡಿದನು. ಇದು ಆಗಿನ ಕನರ್ಾಟಕವಾಗಿತ್ತು. ಇದು ಶಾಸನಗಳಿಂದ  ಸ್ಟಷ್ಟವಾಗುತ್ತದೆ.
       ಚಂದ್ರಗುಂಡ ದೇಶಿ ಕೇಂದ್ರರು,  ಕೋಲಾರ ವಾಪಸಂದ್ರ, ಚಿಕ್ಕಬಳ್ಳಾಪುರಂ, ಮಂಚನಬೆಲೆ ,ಗುಡಿಬಂಡೆ, ಹುಣಸಮಾರನಹಳ್ಳಿ, ಲೇಪಾಕ್ಷಿ, ಪೆನುಗೊಂಡ, ಐತಾಂಡ್ಲಹಳ್ಳಿ, ಬೆಟ್ಟದಪುರ ಮೊದಲಾದ ಕಡೆ ಶಾಖಾಮಠಗಳನ್ನು ಸ್ಥಾಪಿಸಿದರು. ತಮ್ಮ ಪೀಠದಲ್ಲಿ ಗಾಣ, ಬಣಜಿಗರಿಗೆ ಬಳೆಗಳನ್ನು, ಮತ್ತು ಹದಿನೆಂಟು ಕುಲಸ್ಥರಿಗೆ ಕುಲ ಸಾಧನಗಳನ್ನು  ವಿತರಿಸುತ್ತಿದ್ದರು. ಹೂ ಮಾರುವವರು, ಈಡಿಗ, ಬೆಸ್ತ, ಕುಂಬಾರ, ಸಿಂಪಿಗ ಮೊದಲಾದ ಹಿಂದುಳಿದ 18 ಜಾತಿಗಳನ್ನು ಶಿವಾಚಾರಕ್ಕೆ ಒಳಪಡಿಸಿದರು. ಇಂದಿಗೂ ಜಾತಿಗಳಿಗೆ ಗುರುಗಳು ಪೀಠಾಧ್ಯಕ್ಷರೇ ಆಗಿದ್ದಾರೆ. ಕನರ್ಾಟಕ ಮತ್ತು ಆಂಧ್ರದಲ್ಲಿ ಜಾತಿಗಳವರು ಅಲ್ಲದೆ ವಿವಿಧ ಜಾತಿಗಳವರೂ, ಬುಡಕಟ್ಟು ಜನಗಳು ಶಿಷ್ಯರಾಗಿದ್ದಾರೆ. ಮಠಕ್ಕೆ ಛಲವಾದಿಗಳ ಪರಂಪರಾಗತ ಸೇವೆಯನ್ನು ವಿಶೇಷವಾಗಿ ಸ್ಮರಿಸಬೇಕಾಗಿದೆ
    ಗುಮ್ಮನಾಯಕನಪಾಳ್ಯದ ಪಾಳೇಗಾರರು(ಕ್ರಿ..1242ಆರಂಭ) ಮತ್ತು ಮಠಕ್ಕೆ ಅವಿನಾಭಾವ ಸಂಬಂಧವಿದೆ. ಇವರು ಪೀಠಕ್ಕೆ  ವಿಧೇಯರಾಗಿದ್ದರು ಅಲ್ಲದೆ ಮಠವೂ ಇವರಿಗೆ ಆಡಳಿತ ಮಾರ್ಗದರ್ಶನವನ್ನು ನೀಡುತ್ತಿತ್ತು. ಛಲವಾದಿಗಳನ್ನು ಮಠಕ್ಕೆ ಕಳುಹಿಸಬೇಕೆಂಬ ಆದೇಶಗಳನ್ನೂ ಸಹಾ ಹೊರಡಿಸುತ್ತಿದ್ದರು. ಅಲ್ಲದೆ 18 ಕುಲಗಳ ಸಂಕೇತವಾದ ಗಂಟೆಬಟ್ಟಲನ್ನು ಹೊರುವ ಛಲವಾದಿಗಳನ್ನು ಪೀಠಕ್ಕೆ ಕಳುಹಿಸುವ ಅಧಿಕಾರವೂ ಪಾಳೆಗಾರರಿಗಿತ್ತು. ಶ್ರೀಶೈಲದಿಂದ ಬಂದ ನಾಯಕರು ಗುಮ್ಮನಾಯಕಪಾಳ್ಯವನ್ನು ಆಳ್ವಿಕೆ ಮಾಡುತ್ತಿದ್ದರು. ಇವರಲ್ಲಿ ಬಹುಶಃ ಎರಡು ಬಣಗಳಾಗಿರುವ ಸಾಧ್ಯತೆ ಇದೆ. ಅವರಲ್ಲಿ 'ಇರೋಳ್ಲು'ಮತ್ತು 'ಕಾಮಾಳ್ಳು' ಅನ್ನು ಹೆಸರಿನಿಂದ ಕರೆಯಲ್ಪಟ್ಟರು. ಇರೋಳ್ಳ ಶಾಖೆಗೆ ಸಂಬಂಧಿಸಿದವರು-ಈಶ್ವರ, ಬೈರವ ,ಶ್ರೀಶೈಲ ಮಲ್ಲಿಕಾಜರ್ುನ .ವೆಂಕಟೇಶ್ವರ ಮೊದಲಾದ ಶೈವಪರ ದೇವತೆಗಳನ್ನು ಪೂಜಿಸುತ್ತಾ ಬಂದರು. ಎರಡನೇಯ ಶಾಖೆಯಾದ ಕಾಮಾಳ್ಳು ಶಾಖೆಗೆ ಸಂಬಂಧಿಸಿದವರು ಖಾದ್ರಿ ನರಸಿಂಹನನ್ನು ಪೂಜಿಸುತ್ತಾ ಬಂದಿದ್ದಾರೆ. ಪಾಳೇಗಾರರ ಆಳ್ವಿಕೆಯ ಶಾಖೆಗಳ ಛಲವಾದಿಗಳ ಕುಲಗೋತ್ರಗಳ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ. ಛಲವಾದಿಗಳಲ್ಲಿ ಖಾದ್ರಿಯ ನರಸಿಂಹನ ಒಕ್ಕಲು ಮತ್ತು ವೆಂಕಟರಮಣನ ಒಕ್ಕಲೆಂದು ಎರಡು ಪಂಗಡಗಳಿವೆ. ತಮ್ಮ ಆಳ್ವಿಕೆಯ ಕಾಲಘಟ್ಟದಲ್ಲಿ ಸಮಾಜದ ಮೇಲೆ ಪ್ರಭಾವವನ್ನು ಬೀರಿರುವ ಸಾಧ್ಯತೆಯಿಂದಲೇ ಅವರ ಗೋತ್ರಗಳು ಇವರ ಮೇಲೆ ಪ್ರಭಾವ ಬೀರಿವೆ. ಆದರೆ  ಎರಡು ಶಾಖೆಗಳಿಗೂ ಗುರುಪೀಠ ಗೂಳೂರು ಮಹಾಸಂಸ್ಥಾನ ಪೀಠವಾಗಿದೆ.
     ಗುಮ್ಮನಾಯಕನಪಾಳ್ಯದ ಪಾಳೇಗಾರ ಚಿನ್ನಮನಾಯಕನು ವ್ಯವಸಾಯ ಮಾಡುವವರನ್ನು ಕೈಕೆಲಸಗಳನ್ನು ಮಾಡುವವರನ್ನು ಒಂದುಗೂಡಿಸಿದನು. ಕುಲಾಚಾರವನ್ನು ತಿಳಿಸಿದನು. ಅವರ ಅಚಾರ ವಿಚಾರಗಳನ್ನು ತಿಳಿಸಿದನು. ಇದರಿಂದ ಅವನನ್ನು ಆಚಾರ್ಯನೆಂದು-'ಮಹಾನಾಯಕಾಚಾರ'ನೆಂಬ ಬಿರಿದಿನಿಂದ ಕರೆದರು.20 18 ಪಣಕಟ್ಟಿನವರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಟ್ಟನು. ಪೀಠದ ಶಿಷ್ಯನಾಗಿ ಅದರ ಮಾರ್ಗದರ್ಶನದಂತೆ ಕುಲಾಚಾರವನ್ನು, ಕುಲನಿಯಮಗಳನ್ನು 18ಜಾತಿಗಳವರಿಗೆ ತಿಳಿಸಿಕೊಟ್ಟನು. ಗುಮ್ಮನಾಯಕನಪಾಳ್ಯದಲ್ಲಿ ಮಠದ ಒಂದು ಶಾಖಾಮಠವೂ ಇತ್ತು.
     ಶ್ರೀ ಕೃಷ್ಣದೇವರಾಯನಿಂದ ಅಚ್ಚುತರಾಯನ ಕಾಲದವರಿಗೂ ರಾಜರು ಮಠದ ಸಂಬಂಧದೊಂದಿಗೆ 18 ಕುಲಸ್ಥರ  ಸೇವೆಯನ್ನು ಮಾಡುತ್ತಾ ಬಂದರು. ಪೀಠದ ಮೂಲಗುರುಗಳು ರಥಸಪ್ತಮಿ ದಿನದಂದು ಪೀಠಾವರೋಹಣ ಮಾಡುವುದು ಪದ್ಧತಿ. ಸಮಯದಲ್ಲಿ ಛಲವಾದಿಗಳು ದೇಶಮುದ್ರೆ ಗಂಟೆಬಟ್ಟಲನ್ನು ತಂದು ಗುರು ಪೀಠಕ್ಕೆ ಭಕ್ತ ಭಾವವನ್ನು ತೋರುತ್ತಿದ್ದರು

                                                                                   
     ನಿಡುಮಾಮಿಡಿ ಮಠಕ್ಕೆ ಗೂಳೂರು ಚಲವಾದಿಗಳು ಹೇಳುವಂತೆ-ಗೂಳೂರು, ಮಾರ್ಗಾನುಕುಂಟೆ, ಹೊನ್ನಂಪಲ್ಲಿ, ನಲ್ಲಪುರೆಡ್ಡೇಪಲ್ಲಿ, ತಿಮ್ಮಂಪಲ್ಲಿ, ನರಾವುಲಪಲ್ಲಿ, ನಂಜಿರೆಡ್ಡಿಪಲ್ಲಿ, ನರಸಾಪುರ, ಮೂಲ ಚಿನ್ನೇಪಲ್ಲಿ, ಮೊಟಕಪಲ್ಲಿ, ಮೊಲಕುಸೆರ್ವುಪಲ್ಲಿ, ಸದ್ದಪಲ್ಲಿ, ಜಲಾಜಿರ್ಲ, ಮಾಡಂಪಲ್ಲಿ, ಎಗುವಯ್ಯವಾರಪಲ್ಲಿ. ದಿಗುವಯ್ಯವಾರಪಲ್ಲಿ, ಕೊತ್ತನೂರು, ರಾಯದುರ್ಗಂಪಲ್ಲಿ ಮೊದಲಾದ 18 ಪ್ರಾಂತ್ಯಗಳು ಅದರಲ್ಲಿನ ಕುಲಾಚಾರರು (ಭಜಂತಿಗಳು, ಅಗಸರು, ಬಲಿಜಿಗರು, ಕುಂಬಾರರು, ಗಾಣಿಗರು, ಲಿಂಗಾಯತರು ಮತ್ತು ಶೆಟ್ಟಿ ಬಣಜಿಗರು-ಇತ್ಯಾದಿ) ಮಠದ ಅಧಿಪತ್ಯಕ್ಕೆ ಒಳಪಟ್ಟಿದ್ದರು. ದೇಶಮುದ್ರೆ ಗಂಟೆ ಬಟ್ಟಲನ್ನು 18 ಕುಲವರು ತಮ್ಮ ಶುಭಾಶುಭ ಕಾರ್ಯಗಳಲ್ಲಿ ಬಳಸುತ್ತಿದ್ದರು. ಇಂದಿಗೂ ಆಚಾರ ಮುಂದುವರಿದಿದೆ
ಪುಲ್ಲಕವಿಯ 'ಪಂಡಿತಾರಾಧ್ಯ ಚರಿತ್ರೆ' ಮತ್ತು ಛಲವಾದಿ ಸಂಸ್ಕೃತಿ
    ತೆಲುಗಿನ ಪುಲ್ಲಕವಿಯು ತನ್ನ ಕೃತಿಯಲ್ಲಿ ಕೋಲಾರ ಪ್ರಾಂತ್ಯದ ನಿಡುಮಾಮಿಡಿ ಮಠವನ್ನು ಅಲ್ಲಿನ ಕುಲಾಚಾರವನ್ನು ಕುರಿತು ವಿಜಯನಗರದ ಅರಸ ಅಚ್ಚತರಾಯನು ಹೊರಡಿಸಿದ ಆದೇಶವನ್ನು ಮತ್ತು ಛಲವಾದಿ ಸಂಸ್ಕ್ರತಿಯ ವಿವರಗಳನ್ನು ದಾಖಲಿಸಿದೆ.
ಶ್ರೀ ಮಾನ್ ನಿಡುಮಾಮಿಡಿ ಸ್ವಾಮುಲಕು ಅಷ್ಟಾವರಣ, ಸಾಲುಮೂಲ ದ್ಯಾವರ, ದೇಶಮುದ್ರ, ಶೆಟ್ಟಿ ,ಶ್ಯಾನುಬೊಗಲು ಎದುವೇಲ್ಪು, ಕಾಪುಕಮ್ಮಟ, ದ್ಯಾವರಕೊಂಡಾ, ಡೆಬ್ಬೇಡುಕುಲಂ, ಇದಿ ಪೆನುಗೊಂಡ ಕನಕಪುರಾಯ ಸಿಂಹಾಸನಮ್ ನಿಡುಮಾಮಿಡಿ ಜಂಗಮಯ್ಯ ಪಂಡಿತಾರಾಧ್ಯ ಸೂರ್ಯಸಿಂಹಾಸನಾನಿಕಿ ನಡಿವ ವಲಯು. ಅಚ್ಚುತರಾಯಲು ಶಿಷ್ಯಲು ಆಗುಟಿ ಸಾಕ್ಷಿ ಶ್ರೀ ಶ್ರೀ ಶ್ರೀ.
   ಮೇಲಿನ ವಿವರದಿಂದ ಸಮಾಜದ 27 ಕುಲಗಳು ಮಠಕ್ಕೆ ನಡೆದುಕೊಳ್ಳಬೇಕೆಂಬುದರ ವಿವರವಿದೆ.
  ಕನರ್ಾಟಕದಲ್ಲಿ ಪಣವ್ಯವಸ್ಥೆಯನ್ನು ಕುರಿತಂತೆ ವಿವಿಧ ಮಹತ್ವದ ದಾಖಲೆಗಳು(ಕೋಲಾರ ಜಿಲ್ಲೆ)
    ಕನರ್ಾಟಕದ ಪಣವ್ಯವಸ್ಥೆಯ ಬಗ್ಗೆ ಕ್ರಿ..1809ರಲ್ಲಿ  ಪ್ರಾನ್ಸಿಸ್ ಬುಕನಾನ್ 18ಕುಲಸ್ಥರು ಮತ್ತು ಅವರಿಗೆ ಅಧಿಕೃತ ಶಿವದೀಕ್ಷೆ ನೀಡುವ ಅಧಿಕಾರ ಕೆಲವು ಮಠಾದೀಶರಿಗೆ ಇದ್ದುದನ್ನು ಸ್ಪಷ್ಟಪಡಿಸುತ್ತಾನೆ. “There is a tribe of oil makers.who is their mills use only ox.and who are called Heganigaru.they call themselves jotyphanadas: and they are not followers of Brahmins,don’t acknowledge themselves to be sudras…they are tribe Karnataka extraction and and besides their proper business of  making oil. They cultivate the fields and gardens and deal in grain and cloth.they have hereditary chiefs called chittigaras who with the advice of a council of ten settle all disputes and purnish transgressions against the rules of cast…the joytypanada are devided in to four or five families and man can’t many a women of his own family.they all wear the linga .and of course shiva in the principal object of their worship…ther guru is cari-Baswa-uppa. the Nidamavudy swamulu.who sends his disciples to eecive thei contributions to eat their vicutals , and to give them holy water”  ( Francis Buchanan.Ajourney from madras theought the countries of mysore. Canara and Malabar vol ii 1807.london AGS New dehlli reprit 1988,pp 154,55)19
      in this state, the agricultural,artisan and trading castes are termed ‘panas’ or professions,which are 18 in number.these panas are devided into two divisions- called Balagai and yadagai( corresponding to tamil valangai and Edangai) or Right and Left hands.A large number of castes belong to one or other of these divisions.Although the Right hand and Left hand factions are said to include only 18 trades, there are many castes which adhere to one side or the other, but their numbers do not seem to be taken into account.All Bhramans, Kshatriyas and afew others are considered as neutral.It is impossible to obtain authentic lists of the castes belonging to the two divisions. The lists vary from locality to locality”(C.Hayavadana Rao,Mysore Gazetteer,vol 1.1927.Pp 179-80)21
ಇದರೊಂದಿಗೆ ಹಯವದನರಾವ್ ಅವರು ಹದಿನೆಂಟು ಪಣಗಳ(ಬಲಗೈ) ಪಟ್ಟಿಯನ್ನು ಮತ್ತು ಒಂಭತ್ತು(ಎಡಗೈ) ಪಣದ ಪಟ್ಟಿಯನ್ನು ಕೆಳಗಿನಂತೆ ನೀಡಿರುವರು.
ಹದಿನೆಂಟು ಪಣದ ಪಟ್ಟಿ-                                     ಒಂಬತ್ತು ಪಣದ ಪಟ್ಟಿ-
1 . ಬಣಜಿಗ                                                 1 . ಪಂಚಾಲರು(ಬಡಗಿ,ಕಂಚುಗಾರ,ಕಮ್ಮಾರ,
2 . ಒಕ್ಕಲಿಗ                                                  ಕಲ್ಕುಟಿಗ,ಅಕ್ಕಸಾಲಿಗ(ವಿಶ್ವಕರ್ಮದ ಪಂಚಕುಲಗಳು)
3 . ಗಾಣಿಗ(ಒಂಟೆತ್ತು)                                   2 . ಭೇರಿ(ನಗರ್ತರು)
4 . ರಂಗಾರೆ (ಬಣ್ನ ಹಾಕುವವರು)                    3 . ದೇವಾಂಗ
5 . ಲಾಡ (ಮರಾಠಿ ವ್ಯಾಪಾರಸ್ಥರು)                  4 . ಹೆಗ್ಗಾಣಿಗ (ಎರಡೆತ್ತು)
6 . ಗುಜರಾತಿ( ಗುಜರತಿ ವ್ಯಾಪರಸ್ಥರು)       5 . ಗೊಲ್ಲ
7 . ಕಾಮಾಟಿ(ಕೂಲಿಗಾರರು)        6 . ಬೇಡ
8 . ಜೈನ ಅಥವಾ ಕೋಮಟಿ        7 .ಯಾಕುಲ ಅಥವಾ ತೊರೆಯ
9 . ಕುರುಬ                    8 . ಪಳ್ಳಿ ಅಥವಾ ತಿಗಳ
10. ಕುಂಬಾರ                   9 .ಮಾದಿಗ\ಸಿಂಧ್ ಮಾದಿಗರು
11. ಅಗಸ
12. ಬೆಸ್ತ
13. ಪದ್ಮಸಾಲೆ
14. ನಾಯಿಂದ
15. ಉಪ್ಪಾರ
16. ಚಿತ್ರಗಾರ
17.ಗೊಲ್ಲ
18. ಹೊಲೆಯ\ಛಲವಾದಿ
      ಮೇಲಿನ ಪಟ್ಟಿಯೂ ಪ್ರಾದೇಶಿಕ ಭಿನ್ನತೆಯನ್ನು ಪಡೆದುದಾಗಿದೆ.ಆಂಧ್ರ ಮತ್ತು ಕನರ್ಾಟಕದ ಗಡಿಭಾಗಗಳಲ್ಲಿ ಬ್ರಾಹ್ಮಣರು ಎಡಗೈ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ, ಕೋಮಟಿಗರು ,ಗೊಲ್ಲರು ಎಡಗೈ ಗುಂಪಿಗೆ ಸೇರಬೇಕಾಗುತ್ತದೆ. ಬಲಗೈನ ಪಟ್ಟಿಯ ಕೋಮಟಿ ಮತ್ತು ಗೊಲ್ಲರ ಜಾಗಕ್ಕೆ ಎಡಗೈ ಪಟ್ಟಿಯ ಬೇಡ ಮತ್ತು ತೊರೆಯ ಸೇರಿದರೇ ಸರಿಯಾಗುವುದು.
    ಮೇಲಿನ ಪಣ ಸಮಾಜದ ಪಟ್ಟಿಯಲ್ಲಿ ಬಣಜಿಗರು ಹದಿನೆಂಟು ಪಣದ ಕುಲದವರ ನಾಯಕರಾಗಿರುತ್ತಾರೆ. ಕುಲದವರ ಕುಲ ಚಿಹ್ನೆಗಳನ್ನು(ನೆಗಿಲು.ತಕ್ಕಡಿ,ಚಕ್ರ,ಕತ್ತರಿ,ಗುದ್ದಿ,ಕತ್ತಿ  ಮುಂತಾದ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಗಂಟೆ ಬಟ್ಟಲು)'ದೇಶಮುದ್ರೆ ಗಂಟೆಬಟ್ಟಲು'ನ್ನು ಕುಲದವರ ಶುಭಾಶುಭ ಕಾರ್ಯಕ್ರಮಗಳಲ್ಲಿ ಹೊರುವ ಅಧಿಕಾರವನ್ನು '()ಲುವಾದಿ' ಕುಲಸ್ಥರದಾಗಿರುತ್ತದೆ. ಹಾಗೆಯೇ ಒಂಭತ್ತು ಪಣಸಮಾಜದ ನಾಯಕರಾಗಿ ನಗರ್ತರು ಅಥವಾ ಬೇರಿಗಳಾಗಿರುತ್ತಾರೆ .ಅವರ ಕುಲಚಿಹ್ನೆಗಳನ್ನು ಹೊರುವ ಅಧಿಕಾರ ಸಿಂಧ್ ಮಾದಿಗರದಾಗಿರುತ್ತದೆ. ಛಲವಾದಿಗಳು ಇಂದಿಗೂ ಕುಲಾಚಾರವನ್ನು ಹಲವು ಕಡೆ ನಡೆಸುತ್ತಾ ಬರುತ್ತಿದ್ದಾರೆ.

ಛಲವಾದಿ ಜನಾಂಗಕ್ಕೆ ಅನಾದಿಕಾಲದಿಂದ ಬಂದ ಬಿರಿದುಗಳು

     ಛಲವಾದಿ ಜನಾಂಗಕ್ಕೆ ಪೂರ್ವದಿಂದಲೂ ಅನೇಕ ಸವಲತ್ತುಗಳನ್ನು ರಾಜ ಮಹಾರಾಜರ ಕಾಲದಲ್ಲಿ ನೀಡಲಾಗಿತ್ತು. ಸವಲತ್ತುಳಿಗಾಗಿ ಪರಸ್ಪರ ಪಣ ಸಮಾಜದಲ್ಲೇ ಹಲವು ಬಾರಿ ಜಗಳಗಳು ನಡೆದಿವೆ. ನಂತರ ಕುಲಪಂಚಾಯ್ತಿಗಳಲ್ಲಿ ಅವನ್ನು ನಿವಾರಿಕೊಂಡು ಪರಸ್ಟರ ಷರತ್ತು ಪತ್ರಗಳನ್ನು ಬರೆದುಕೊಂಡಿರುವುದುಂಟು. ಹಾಗಾದರೆ ಛಲವಾದಿಗಳಿಗೆ ಶಾಸನಗಳು ರಾಜ ಮಹಾರಾಜರು ನೀಡಿದ್ದ ಬಿರಿದು ,ಸವಲತ್ತುಗಳು ಹೀಗಿವೆ.
   ಕಂಚಿ ಶಾಸನ ಮತ್ತು ಕ್ರಿ..1778ನೇ ಏಳನೇಯ ತಾರೀಕು ಮರ್ಕುಂ ನಂ 19 ರಲ್ಲಿ ಶ್ರೀರಂಗ ಪಟ್ಟಣದ ಜಿಲ್ಲಾ ಕೋಟರ್ು ಟಿಪ್ಪು ಸುಲ್ತಾನರ ಕಾಲದಲ್ಲಿ ಸಹಾ ಸಮರ್ಥನೆಗೊಂಡು ಅಂಗೀಕಾರ ಮುದ್ರೆಯನ್ನು ಪಡೆದಿದೆ. ವಿವರಣೆಯು ಕಂಚೀ ಪಟ್ಟಣದ ದೇಗುಲಗಳಲ್ಲೂ ಮತ್ತು ಕಂಚಿಯ ಶಾಸನದಲ್ಲೂ ಇರುವುದೆಂದು ಸ್ಪಷ್ಟವಾಗುತ್ತದೆ. ಅದರ ವಿವರ ಹೀಗಿದೆ-
   ಛಲವಾದಿ ಚನ್ನಯ್ಯನ ಕುಲದ ಪದ್ದತಿಯ ಪ್ರಕಾರ ಇವರ ಎಲ್ಲಾ ಶುಭ ಮಹೂರ್ತಗಳಲ್ಲಿಯೂ ಚಂದ್ರಗಾವಿಯ ಕುದುರೆ,ಮೊಜರೆ ರುಮಾಲು, ಶಾಲು,ಕಲ್ಕಿ ತುರಾಯಿ ,ಚಂದ್ರಗಾವಿ ಪಾಗು, ಬಿಳಿ ಛತ್ರಿ,ಚಾಮರ, ಕವದಿಗಾಲು ಪಾಪೋಜು, ಹೊಕ್ಕಳುಗಂಟೆ ಹುಲಿಚರ್ಮ, ಕಾಲುಕಡಗ, ಬಿಳಿತ ತಳಿ, ಸಿಂಹದಾಳ, ಗಂಡುಬೇರುಂಡ ನಿಶಾನಿ,ಮಕರತೋರಣ, ಮಹೂರ್ತದ ಚಪ್ಪರದಲ್ಲಿ 12 ಕಂಭ,12ಕುಂಭ,ತಂಡಲು ಬಾಸಿಂಗ,ಜೋಡುಪಂಜು,ಜೋಡು ಕಳಸ,ಬಿಳಿಕುದುರೆ,ಬಸವನ ಮೆರವಣಿಗೆ,ಲಿಂಗಮುದ್ರೆಯ ಗಂಟೆಬಟ್ಟಲು,ಸಮಗಮೇಶ್ವರನ ಗದ್ದುಗೆ ಪೂಜೆ, ಪೇಟೆಯಲ್ಲಿ ಮೆವಣಿಗೆ ಸಲ್ಲುವುದು, ಬಲಗಾಲು ಗಂಟೆ, ಗಗ್ಗರಿ,ಗದ್ದಿಗೆ ವಾದ್ಯಗಳು, ಮದ್ದಳೆ ,ತಾಳ, ತಮಟೆ ,ಅರೆಮೇಳ,ಪಂಚಕಾಶಿ ಜಾಲರ,ಸಮ್ಮಾಳ,ಗಿಡಿಬಿಡಿ ,ಕಹಳೆ, ಸಮ್ಮಾಳದ ಮೇಲಿನ ಕೆಂಪುಜಾಲರ ಕಂಚಿನ ಕೊಂಬು, ಹುಲಿಚರ್ಮ ದಾರಣೆ, ಹೂವಿನಕುಚ್ಚು, ವರನ ಕೈಯಲ್ಲಿ ಮಾಂಗಲ್ಯಧಾರಣೆ, ಲಗ್ನ ಮತ್ತು ಶುಭ ಕಾರ್ಯಗಳು ಮಾಡುವಾಗ ಸ್ತ್ರೀಯರು ಭಿಳಿ ಸೀರೆಯನ್ನು ಮತ್ತು ಕುಪ್ಪಸವನ್ನು ಧರಿಸುವುದು. ಶಾಸನಕ್ಕೆ ಚಪ್ಪನೈವತ್ತಾರು ದೇಶಗಳ ರಾಜರು ಒಪ್ಪಿಗೆ ಸೂಚಿಸಿದ್ದಾರೆ. ಕಂಚೀಪಟ್ಟಣದಲ್ಲಿ ಶ್ರೀ ಸಂಗಮೇಶ್ವರನ ಮಠ ಸ್ಥಾಪನೆಯಾಗಿರುತ್ತದೆ. ಇದರ ಖಚರ್ು ಬಾಬ್ತು ಛಲವಾದಿ ಚೆನ್ನಯ್ಯನ ಕುಲದವರೆಲ್ಲರೂ ಮನೆಯೊಂದಕ್ಕೆ ಆರುಹಣ(ಮೂವತ್ತು ಪಾವಲಿಗಳು)ಕಾಣಿಕೆಯನ್ನು ಸಲ್ಲಿಸುವುದು. ಶ್ರೀ ಮಹಾ ಮಹಾ...ಶಿವಾ..ಶಿವಾಚಾರಗುರು ಲಿಂಗಜಂಗಮ ಭೂಬಾರದಲ್ಲಿ ..ದಿಗ್ದೇಶದಲ್ಲಿ.. ಮೊದಲಾದ ಸಿಂಹಾಸನಗಳಲ್ಲಿ ಕೂಟಿ ಕುಳಿತಿರುವಂತಹ ಸ್ವದೇಶದ ಪರದೇಶವೂ ಉಭಯಸ್ಥರಾದಾಯಾವಳಿ ಮುಖ್ಯಾರಾದ ಪೃಥ್ವಶೆಟ್ಟಿ,ಬಾಸ್ಕರಣ್ಣನವರು ಮೊದಲಾದ ಸಾಲುಮೂಲೆ ಸಮಸ್ಥರಾದಂತಹವರು ದೇಶದವರು ಧನಪಾಲಶೆಟ್ಟಿ,ಕುಮಾರ ಮುತ್ಯಾಲಶೆಟ್ಟಿ ಇನ್ನು ಮುಂತಾದವರು ಶಾಸನಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ21(ಛಲದಂಕ ಮಲ್ಲ ಮತ್ತು ಅವನ ಪರಮಪರೆ .ಡಿ.ಕೃಷ್ಣಯ್ಯ.1983ಪುಟ 78-80)
     ಶಾಸನ ಮತ್ತು ಇಲ್ಲಿನ ವಿವರಗಳಿಂದ ಛಲವಾದಿಗಳ ಆಚಾರ- ವಿಚಾರ ,ಕುಲಪದ್ಧತಿಗಳು ತುಂಬಾ ಪ್ರಾಚೀನವಾದವುಗಳೆಂದೂ ಹಿಂದೂ ಸಮಾಜದಲ್ಲಿ ಅವರ ಸಾಮಾಜಿಕ ಜೀವನ ಉತ್ತಮವಾಗಿತ್ತೆಂದು ಸ್ಪಷ್ಟವಾಗುತ್ತದೆ.
               
 ಮೌಖಿಕ   ಹಿನ್ನಲೆ

ಐತಿಹ್ಯ ಒಂದು: ಐತಿಹ್ಯವೂ ಛಲವಾದಿಯ ಚೆನ್ನಯನು ಪಾರ್ವತಿಯ ಮುಟ್ಟು ಬಟ್ಟೆಯಲ್ಲಿ ಹುಟ್ಟಿದವನೆಂದು ಅವನು ಶಿ ಪಾರ್ವತಿಯರ ಮಗನೆಂದು ಹೇಳುವಂತಿದೆ.
   ಪಾರ್ವತಿಯು ಒಂದು ಸಾರಿ ಮುಟ್ಟಾಗಿ ಬಟ್ಟೆಗಳನ್ನು ಕಳಚಿ ಬಚ್ಚಲು ಮನೆಯಲ್ಲಿ ಬಿಟ್ಟಿದ್ದಳು. ಬಚ್ಚಲ ಮನೆಯ ಬಟ್ಟೆಯಲ್ಲಿ ಒಂದು ಸುಂದರವಾದ ಮಗುವು ಜನಿಸಿತು. ಅದನ್ನು ಬೀದಿಗೆ ಬಿಡಲು ಒಪ್ಪದೆ ಅದಕ್ಕೆ ಚೆನ್ನಯ್ಯನೆಂದು ಹೆಸರಿಟ್ಟು ಸಾಕಿದಳು. ಅವನು ಕಾಮಧೇನುವನ್ನು ಕಾಯುತ್ತಾ ಬೆಳೆಯುತ್ತಿದ್ದನು. ಆದರೆ ಶಿವನುಯಾವುದೇ ಕಾರಣಕ್ಕೂ ಅವನಿಗೆ ಬೆಣ್ಣೆ ಮತ್ತು ಹಾಲಿನ ಕೆನೆಯಂತಹ ಪದಾರ್ಥಗಳನ್ನು ನೀಡಬಾರದೆಂದುಹೇಳಿದ್ದನು.
   ಪಾರ್ವತಿ ಒಂದು ದಿನ ಮಜ್ಜಿಗೆ ಕಡಿದು ಬೆಣ್ಣೆಯನ್ನು ತೆಗೆದಳು. ಪಾತ್ರೆಯಲ್ಲಿದ್ದ ಅಳಿದುಳಿದಿದ್ದನ್ನು ತೆಗೆದು ಬಂಡೆಯ ಮೇಲಿಟ್ಟು ಮರೆತಳು. ಆದರೆ ಇದನ್ನು ಚೆನ್ನನು ತಿಂದನು. ಬೆಣ್ಣೆಯ ವ್ಯರ್ಥ ಪದಾರ್ಥವೇ ಇಷ್ಟು ಚೆನ್ನಾಗಿರಬೇಕಾದರೇ ಹಾಲನ್ನು ನೀಡುವ ಗೋವು ಎಷ್ಟು ಚೆನ್ನಾಗಿರಬೇಕೆಂದು ದುರಾಲೋಚನೆ ಮಾಡಿದನು. ಗೋವುಗಳನ್ನು ಕಾಡಿಗೆ ಬಿಟ್ಟುಕೊಂಡು ಹೋದನು.
  ಕಾಡಿನಲ್ಲಿ ಗೋವಿನ(ಕಾಮಧೇನು) ತಲೆಯನ್ನು ಹೊಡೆದು ಸಾಯಿಸುತ್ತಾನೆ. ಆದರೆ ಅದನ್ನು ಸೇವಿಸಲಾಗಲಿಲ್ಲ. ವಿಷಯವು ಶಿವನಿಗೆ ತಿಳಿಯಿತು. ಆಗ ಶಿವನು ತನ್ನ ಕಮಂಡಲದಿಂದ ನೀರನ್ನು ತೆಗೆದು ಭೂಮಿಯ ಮೇಲೆ ಹಾಕಿದನು ಆಗ ತನ್ನೆಲ್ಲ ಪರಿಕರಗಳಿಂದ ಜಾಂಬುವಮುನಿ ಎದ್ದು ಬರುತ್ತಾನೆ. ಕಾಮಧೇನುವನ್ನು ಕೊಯ್ದು ಎಲ್ಲಾ ಕುಲಸ್ಥರಿಗೂ ಭಾಗಗಳನ್ನು ಹಾಕಿ ಹಂಚುತ್ತಾನೆ. ಕಾಮಧೇನುವಿನ ಮೈಯ ನೆಲದ ಮಾಂಸವನ್ನು ಮಾದಿಗರವನು ಮೇಲಿನ ಮಾಂಸವನ್ನು ಹೊಲೆಯರವನು ತೆಗೆದುಕೊಂಡರು. ಹಿಂದೆ ಊರಿನಲ್ಲಿ ಸತ್ತ ಪ್ರಾಣಿಯ ಮಾಂಸವನ್ನು ಮೇಲಿನ ಮಾಂಸವನ್ನು ಹೊಲೆಯರು, ಅಡಿಭಾಗವನ್ನು ಮಾದಿಗರು ಹಂಚಿಕೊಳ್ಳುತ್ತಿದ್ದರು. ಹೀಗೆ ಎಲ್ಲಾ ಕುಲಸ್ತರೂ ಮಾಂಸವನ್ನು ಹಂಚಿಕೊಳ್ಳುವಷ್ಟರಲ್ಲಿ ಜೋರಾಗಿ ಮಳೆ ಬಂದಿತು. ಅಲ್ಲೇ ಇದ್ದ ಒಂದು 'ದದ್ದಲ'(ಹಾಳುದೇಗುಲ)ಕ್ಕೆ ಹೋದರು. ಆದರೆ ಮಾಲ-ಮಾದಿಗರ ಇವರಿಬ್ಬರೂ ಪಡಸಾಲೆಯಲ್ಲಿ ಒಬ್ಬನು ಮತ್ತೊಂದು ಪಡಸಾಲೆಯಲ್ಲಿ ಒಬ್ಬನು ನಿಂತುಕೊಂಡರು. ಆದ್ದರಿಂದ ಅವರಿಗೆ ಎಡಗೈ ಮತ್ತು ಬಲಗೈಯವರು ಎಂದು, ಅಂದು ಎಲ್ಲ ಕುಲಸ್ಥರು ಕರೆದರು ಎಂದು ಹೇಳುತ್ತಾರೆ.
  ಕೋಲಾರ ಜಿಲ್ಲೆಯಲ್ಲಿ ಅಸ್ತಿತ್ವವಿರುವ ಈರಗಾಡು-ಬೀರಗಾಡು ಎಂಬ ಕುರುಬರ ದ್ಯಾವರು ಸಂಪ್ರದಾಯದ ಕುರುಹು ಆಗಿರಹುದೇ? ಎಂಬ ಪ್ರಶ್ನೆ ಮೂಡುತ್ತದೆ
       ಇಂದು ನವನಾಗರೀಕತೆ ಮತ್ತು ಜಾಗತೀರಣದ ಸಂದರ್ಭದಲ್ಲಿ, ಭಾರತದಲ್ಲಿರುವ ಅನೇಕ ಜಾತಿ ಮತ್ತು ಜನಾಂಗಗಳನಗ್ನು ಪರಿಶೋಧಿಸಲಾಗಿ, ಅವುಗಳಲ್ಲಿ ಕೆಲವೇ ಕೆಲವು ಮಾತ್ರ ತಮ್ಮ ಸಾಂಸ್ಕೃತಿಕ ಅನನ್ಯೆತೆಯಿಂದ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿವೆ. ಅಂತಹವುಗಳಲ್ಲಿ ಛಲವಾದಿ ಜನಾಂಗವೂ ಒಂದು. ಪ್ರತಿಯೊಂದು ಸಂಸ್ಕೃತಿಯೂ ತನ್ನ ಅನನ್ಯತೆಯನ್ನು ಪೋಷಿಸಿಕೊಂಡು ಬರುವಂತೆ ಛಲವಾದಿ ಸಂಸ್ಕೃತಿಯೂ ನಿಟ್ಟಿನಲ್ಲಿ ಮುಂದೆ ಇದೆ ಎಂದು ಹೇಳಬಹುದು. ಹಿನ್ನೆಲೆಯಲ್ಲಿ ಮಾನವ ಕುಲಶಾಸ್ತ್ರ ಮತ್ತು ಸಮಾಜಶಾಸ್ತ್ರಜ್ಞರು ಇವರನ್ನು ದ್ರಾವಿಡ ಸಂಸ್ಕೃತಿಯ ಜನವರ್ಗವೆಂದು ನಿಧರ್ಾರ ಮಾಡಿದ್ದಾರೆ.

                                             - ಡಾ.ಜಿ.ಶ್ರೀನಿವಾಸಯ್ಯ.