ಹಚ್ಚೆ ಕಲೆಮನುಷ್ಯರೊಂದಿಗೆ ಶಾಶ್ವತವಾಗಿ ಬರುವಂತಹ ಏಕೈಕ ಆಸ್ತಿಯೆಂದು ಕರೆಯುವ ಹಚ್ಚೆಯೂ ಜನಪದ ಕಲೆಗಳಲ್ಲಿ ಮುಖ್ಯವಾದುದಾಗಿದೆ. ಇದು ಮನುಷ್ಯನ ಬದುಕಿನುದ್ದಕ್ಕೂ ಜೊತೆಜೊತೆಯಾಗಿ ಧಾರ್ಮಿಕ ಹಿನ್ನಲೆಯೊಂದಿಗೆ ಬೆಳೆದು ಬರುತ್ತಿರುವ ಕಲೆ ಎನ್ನಬಹುದು. ಮುತ್ತೈದೆಯರ ಸೌಂದರ್ಯದ ಸಂಕೇತವಾಗಿ ಮಾನವನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿದಂದಿನಿಂದ ವೈವಿಧ್ಯಮಯವಾಗಿ ಇದು ಜೊತೆಗೂಡಿ ಬರುತ್ತಲೇ ಇದೆ. ಹಿಂದು ಸಂಸ್ಕೃತಿಯಲ್ಲಿ ಅದರಲ್ಲೂ ತಳ ಸಮುದಾಯದಲ್ಲಿ ಈ ಹಚ್ಚೆಗೆ ತುಂಬಾ ಗೌರವವಿದೆ.ಹಚ್ಚಕಲೆ ಜಾತಿ ಮತ್ತು ಜನಾಂಗಿಕವಾಗಿ ವೈವಿಧ್ಯತೆಯನ್ನು ಪಡೆಯುತ್ತಾ ಹೋಗುತ್ತದೆ. ಅನ್ಯ ಜಾತಿಗಳಲ್ಲಿ ಹಚ್ಚೆಯನ್ನು ಹಾಕಿಸಿಕೊಳ್ಳುವುದು ಕಡಿಮೆ. ಹಾಕಿಸಿಕೊಂಡರೂ ಕೆಲವೊಂದು ಚಿತ್ರ ವಿನ್ಯಾಸಗಳನ್ನು ಹಾಕಿಸಿಕೊಳ್ಳುವುದುಂಟು. ವೈಷ್ಣವರು ಚಕ್ರಾಂಕನ, ಶೈವರಾದರೆ `ತ್ರಿಪುಂಡ್ರ', 'ತ್ರಿಶೂಲ', ಲಿಂಗ, ಬಸವ, ನಂದಿ, ಧ್ವಜದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಕ್ರೈಸ್ತರು ಶಿಲುಬೆ, ಪಕ್ಷಿಯನ್ನು ಹಾಕಿಸಿಕೊಳ್ಳುತ್ತಾರೆ. ಇತರೆ ಜನಾಂಗಗಳು ಆಂಜನೇಯ ಮುಂತಾದ ಚಿತ್ರಗಳನ್ನು ಹಾಕಿಸಿಕೊಳ್ಳುತ್ತಾರೆ.ಹಚ್ಚೆ ಸೌಂದರ್ಯದ ಸಂಕೇತ, ಅದು ನಮ್ಮ ಜೊತೆಯಲ್ಲಿ ಬರುತ್ತದೆ, ಅದನ್ನು ಹಾಕಿಸಿರುವವರ ನೆನಪು ಸದಾ ಕಾಲವಿರುತ್ತದೆ ಎಂಬ ನಂಬಿಕೆಗಳಿವೆ. ಹೀಗಾಗಿ ಇದು ಪವಿತ್ರ ಸ್ಥಾನವನ್ನು ಪಡೆದಿದೆ.ಹಚ್ಚೆಯನ್ನು ಕಾಡಿಗೆ, ಚಿಮಣಿ ಎಣ್ಣೆಯ ದೀಪದಿಂದ ಸಂಗ್ರಹಿಸಿದ ಕಪ್ಪುಕುಡಿ, ತೋಡಿ ಸೊಪ್ಪು, ಕಾಡಿಗೆಗರುವಿನ ರಸದಲ್ಲಿ ಬೆರೆಸಿ ಮೂರು ಸೂಜಿಗಳಿಂದ ಚುಚ್ಚುತ್ತಾರೆ. ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತರು ಹಚ್ಚೆಯನ್ನು ಹಾಕುತ್ತಾರೆ. ಹಚ್ಚೆಯನ್ನು ಕಾಡಿಗೆ, ಚಿಮಣಿ ಎಣ್ಣೆಯ ದೀಪದಿಂದ ಸಂಗ್ರಹಿಸಿದ ಕಪ್ಪುಕುಡಿ, ತೋಡಿ ಸೊಪ್ಪು, ಕಾಡಿಗೆಗರುವಿನ ರಸದಲ್ಲಿ ಬೆರೆಸಿ ಮೂರು ಸೂಜಿಗಳಿಂದ ಚುಚ್ಚುತ್ತಾರೆ. ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತರು ಹಚ್ಚೆಯನ್ನು ಹಾಕುತ್ತಾರೆ. ಜನಪದರು ಹಾಕಿಸಿಕೊಳ್ಳುವ ಹಚ್ಚೆಗಳನ್ನು ಅವುಗಳನ್ನು ಹಾಕುವ ಸ್ಥಳಗಳನ್ನು ಕೆಳಕಂಡಂತೆ ನೀಡಬಹುದು.
ಶನಿವಾರ, ಅಕ್ಟೋಬರ್ 2, 2010
ಗುರುವಾರ, ಸೆಪ್ಟೆಂಬರ್ 30, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)