ಹಚ್ಚೆಗಳು,ರಂಗೋಲಿಗಳು :
ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ಕಲಾತ್ಮಕತೆಯಿರುತ್ತದೆ. ಆ ಕಲಾತ್ಮಕತೆಯನ್ನು ಆಸ್ವಾದಿಸುವ ಮನಸ್ಥಿತಿ ಬೇಕು. ಅಂತಹ ಕಲಾಕೃತಿಗಳನ್ನು ಸೃಜಿಸುವ ಸೃಜನಶೀಲ ಶಕ್ತಿಯನ್ನು ಆದಿಮಾನವನಿಂದ ಆಧುನಿಕ ಮಾನವನ ತನಕ ಕಾಣುತ್ತೇವೆ.
ಪ್ರಾಚೀನ ಮಾನವನ ಇಂತಹ ಸೃಜನಶೀಲ ಮನಸ್ಸಿನ ಅಭಿವ್ಯಕ್ತಿಯನ್ನು ಅವನು ಗುಡ್ಡ ಮತ್ತು ಬಂಡೆಯ ಮೇಲೆ ಬರೆಯುತ್ತಿದ್ದ ಚಿತ್ತಾರಗಳಲ್ಲಿ ಕಾಣಬಹುದು. ಅಲ್ಲಿಂದ ಆದಿಗೊಂಡು ಅವನು ಅನೇಕ ಘಟ್ಟಗಳಲ್ಲಿ ಸಾಗಿ ಬರುತ್ತಲೇ ಅವನ್ನು ಮುಂದುವರಿಸಿಕೊಂಡು ಬಂದಿದ್ದಾನೆ. ಅಂತಹ ಚಿತ್ರಗಳನ್ನು ನಾವು ಇಂದಿಗೂ ಗುಹೆ ಮತ್ತು ಬಂಡೆಗಲ್ಲುಗಳ ಮೇಲೆ ಕಾಣಬಹುದಾಗಿದೆ. ಅಲ್ಲದೆ ಆಧುನಿಕ ಕಾಲದಲ್ಲಿಯೂ ಅನೇಕ ಬಗೆಯ ಚಿತ್ತಾರಗಳನ್ನು ಕಾಣಬಹುದಾಗಿದೆ. ಆದ್ದರಿಂದ ಆದಿ ಮಾನವನಿಂದ ಆಧುನಿಕ ಮಾನವನ ತನಕ ಅವನ ಕಲಾತ್ಮಕತೆಯನ್ನು ಅವುಗಳಿಗೆ ಬಳಸಿಕೊಂಡಿರುವ ಮಾಧ್ಯಮಗಳನ್ನು ಜನಪದ ಚಿತ್ತಾರಗಳ ಹಿನ್ನೆಲೆಯಲ್ಲಿ ನೋಡಬಹುದು.
ಹಚ್ಚೆ ಕಲೆಮನುಷ್ಯರೊಂದಿಗೆ ಶಾಶ್ವತವಾಗಿ ಬರುವಂತಹ ಏಕೈಕ ಆಸ್ತಿಯೆಂದು ಕರೆಯುವ ಹಚ್ಚೆಯೂ ಜನಪದ ಕಲೆಗಳಲ್ಲಿ ಮುಖ್ಯವಾದುದಾಗಿದೆ. ಇದು ಮನುಷ್ಯನ ಬದುಕಿನುದ್ದಕ್ಕೂ ಜೊತೆಜೊತೆಯಾಗಿ ಧಾರ್ಮಿಕ ಹಿನ್ನಲೆಯೊಂದಿಗೆ ಬೆಳೆದು ಬರುತ್ತಿರುವ ಕಲೆ ಎನ್ನಬಹುದು. ಮುತ್ತೈದೆಯರ ಸೌಂದರ್ಯದ ಸಂಕೇತವಾಗಿ ಮಾನವನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿದಂದಿನಿಂದ ವೈವಿಧ್ಯಮಯವಾಗಿ ಇದು ಜೊತೆಗೂಡಿ ಬರುತ್ತಲೇ ಇದೆ. ಹಿಂದು ಸಂಸ್ಕೃತಿಯಲ್ಲಿ ಅದರಲ್ಲೂ ತಳ ಸಮುದಾಯದಲ್ಲಿ ಈ ಹಚ್ಚೆಗೆ ತುಂಬಾ ಗೌರವವಿದೆ.ಹಚ್ಚಕಲೆ ಜಾತಿ ಮತ್ತು ಜನಾಂಗಿಕವಾಗಿ ವೈವಿಧ್ಯತೆಯನ್ನು ಪಡೆಯುತ್ತಾ ಹೋಗುತ್ತದೆ. ಅನ್ಯ ಜಾತಿಗಳಲ್ಲಿ ಹಚ್ಚೆಯನ್ನು ಹಾಕಿಸಿಕೊಳ್ಳುವುದು ಕಡಿಮೆ. ಹಾಕಿಸಿಕೊಂಡರೂ ಕೆಲವೊಂದು ಚಿತ್ರ ವಿನ್ಯಾಸಗಳನ್ನು ಹಾಕಿಸಿಕೊಳ್ಳುವುದುಂಟು. ವೈಷ್ಣವರು ಚಕ್ರಾಂಕನ, ಶೈವರಾದರೆ `ತ್ರಿಪುಂಡ್ರ', 'ತ್ರಿಶೂಲ', ಲಿಂಗ, ಬಸವ, ನಂದಿ, ಧ್ವಜದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಕ್ರೈಸ್ತರು ಶಿಲುಬೆ, ಪಕ್ಷಿಯನ್ನು ಹಾಕಿಸಿಕೊಳ್ಳುತ್ತಾರೆ. ಇತರೆ ಜನಾಂಗಗಳು ಆಂಜನೇಯ ಮುಂತಾದ ಚಿತ್ರಗಳನ್ನು ಹಾಕಿಸಿಕೊಳ್ಳುತ್ತಾರೆ.ಹಚ್ಚೆ ಸೌಂದರ್ಯದ ಸಂಕೇತ, ಅದು ನಮ್ಮ ಜೊತೆಯಲ್ಲಿ ಬರುತ್ತದೆ, ಅದನ್ನು ಹಾಕಿಸಿರುವವರ ನೆನಪು ಸದಾ ಕಾಲವಿರುತ್ತದೆ ಎಂಬ ನಂಬಿಕೆಗಳಿವೆ. ಹೀಗಾಗಿ ಇದು ಪವಿತ್ರ ಸ್ಥಾನವನ್ನು ಪಡೆದಿದೆ.ಹಚ್ಚೆಯನ್ನು ಕಾಡಿಗೆ, ಚಿಮಣಿ ಎಣ್ಣೆಯ ದೀಪದಿಂದ ಸಂಗ್ರಹಿಸಿದ ಕಪ್ಪುಕುಡಿ, ತೋಡಿ ಸೊಪ್ಪು, ಕಾಡಿಗೆಗರುವಿನ ರಸದಲ್ಲಿ ಬೆರೆಸಿ ಮೂರು ಸೂಜಿಗಳಿಂದ ಚುಚ್ಚುತ್ತಾರೆ. ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತರು ಹಚ್ಚೆಯನ್ನು ಹಾಕುತ್ತಾರೆ. ಜನಪದರು ಹಾಕಿಸಿಕೊಳ್ಳುವ ಹಚ್ಚೆಗಳನ್ನು ಅವುಗಳನ್ನು ಹಾಕುವ ಸ್ಥಳಗಳನ್ನು ಕೆಳಕಂಡಂತೆ ನೀಡಬಹುದು.
ಹಣೆಯ ಮೇಲಿನ ಹಚ್ಚೆಹಣೆಯ ಮೇಲಿನ ಹಚ್ಚೆಯ ಕಲೆಗಳನ್ನು ಗುಮ್ಮಡಿಗಿಂಜ (ಕುಂಬಳ ಬೀಜ) ಚಂದ್ರಮ (ಚಂದ್ರ) ಸೂರ್ಯ (ಸೂರ್ಯ) ನಿಲುವನಾಮು(ಉದ್ದನೆಯ ನಾಮ) -ಇತ್ಯಾದಿಗಳಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ ನಿಲುವನಾಮವನ್ನು ಗಂಡಸರು ಹಾಕಿಸಿಕೊಳ್ಳುವುದುಂಟು. ಉಳಿದಂತೆ ಬಹುತೇಕ ಮುಖದ ಮೇಲಿನ ಹಚ್ಚೆ ಚಿತ್ತಾರಗಳನ್ನು ಹೆಂಗಸರು ಹಾಕಿಸಿಕೊಳ್ಳುತ್ತಾರೆ. ಅದರಲ್ಲೂ ತಳ ಸಮುದಾಯದ ಜನರಲ್ಲಿ ಕಡ್ಡಾಯವಾಗಿ ಹಾಕಿಸಿಕೊಳ್ಳುತ್ತಾರೆ.ಮುಂಗೈ ಮೇಲಿನ ಹಚ್ಚೆಗಳುಗಂಡಸರು ಹಾಗೂ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆಗಳಲ್ಲಿ ಶ್ರೀಕೃಷ್ಣನ ತೊಟ್ಟಿಲು. ಮುತ್ಯಾಲಮುಗ್ಗು, ಆಂಜನೇಯ, ಮಲ್ಲಿಮೊಗ್ಗೆ. ಮುತ್ಯಾಲ ಆರತಿ. ಜಾಕಾಯಿಪೆಟ್ಟಿಗೆ. ಪಗಬಂಡಿ. ಶ್ರೀರಾಮುಲು ತೊಟ್ಲಿ (ಶ್ರೀರಾಮನ ತೊಟ್ಟಿಲು), ಮುಂಗೈಯ ಎದುರಿಗೆ ಹಾಕಿಸಿಕೊಳ್ಳುವ ಎದುರು ಬಾಸಿಂಗಾಲು (ಎದುರು ಬಾಸಿಂಗಗಳು) -ಇತ್ಯಾದಿ ಕೈ ಮತ್ತು ಬೆರಳುಗಳ ಮೇಲಿನ ಹಚ್ಚೆಗಳುವಿಶೇಷವಾಗಿ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆ ಚಿತ್ತಾರಗಳಲ್ಲಿ ಪೊಯ್ಯಿಗುಂಡ್ಲು (ಒಲೆಗುಂಡುಗಳು) ಮೊಲ್ಲಿಮೊಗ್ಗ (ಮಲ್ಲಿಗೆ ಮೊಗ್ಗು) ಸ್ಯಾಪಮುಳ್ಳು (ಮೀನಿನ ಮುಳ್ಳು) ಇತ್ಯಾದಿ ಪ್ರಕಾರಗಳು ಪ್ರಮುಖವಾದವುಗಳು.ಆಧುನಿಕತೆಯ ಅಬ್ಬರದಲ್ಲಿ ದೇಸಿ ಹಚ್ಚೆಕಲೆ ತನ್ನ ಸಾಚಾತನವನ್ನು ಕಳೆದುಕೊಳ್ಳುತ್ತಿದೆ. ದೇಸಿ ಹಚ್ಚೆಕಲೆಯ ಸ್ಥಾನವನ್ನು ಆಧುನಿಕ ಯಾಂತ್ರಿಕ ಹಚ್ಚೆ ಕಲೆ ಕಬಳಿಸುತ್ತಿದೆ. ಇದರಿಂದ ಪರಂಪರಾಗತ ಜನಪದ ಚಿತ್ತಾರಗಳು ಅವನತಿಯ ಹಂಚಿಗೆ ಬಂದು ತಲುಪಿವೆ.ರಂಗೋಲಿ ಜನಪದರು ತಮ್ಮ ಪರಿಸರದಲ್ಲಿ ನೋಡುವ ವಸ್ತು, ಪ್ರಾಣಿಗಳನ್ನು ತಮ್ಮ ಮನೆಯ ಗೋಡೆಗಳ ಮೇಲೆ, ಪಡಸಾಲೆಯಲ್ಲಿ. ನಡುಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದರು. ಅದಕ್ಕೆ ಅವರು ಮನೆಗಳನ್ನು ಕೆಮ್ಮಣ್ಣಿನಿಂದ ಅಲಂಕರಿಸಿ, ಅದರ ಮೇಲೆ ಅಕ್ಕಿ ಹಿಟ್ಟಿನಿಂದ ಮಾಡಿದ ವಿವಿಧ ಬಗೆಯ ಚಿತ್ರಗಳನ್ನು ಬರೆಯುತ್ತಿದ್ದರು. ಕೆಲವರು ಬಿಳಿ ಗೋಡೆಗಳಿಗೆ ನೀಲಿಯಿಂದ ಚಿತ್ತಾರಗಳನ್ನು
ಬರೆಯಿತ್ತಿರುವುದನ್ನು ಕಾಣಬಹುದು. ನಡುಮನೆಯಲ್ಲಿ ಮಣ್ಣಿನಿಂದಲೇ ನವಿಲು, ಸೂರ್ಯ, ಚಂದ್ರ ಮತ್ತು ಇತರೆ ಪ್ರಾಣಿಗಳನ್ನು ಮಾಡುತ್ತಿದ್ದುದು ಮತ್ತು ಬರೆಯುತ್ತಿದ್ದುದು ಅವರ ಕಲಾವಂತಿಕೆಯನ್ನು ಸೂಚಿಸುತ್ತದೆ. ಇಂದಿಗೂ ಇವರ ಮನೆಗಳಲ್ಲಿ ವಿವಾಹ ಮತ್ತು ಇತರೆ ಕೆಲವು ವಿಶೇಷ ದಿನಗಳಲ್ಲಿ ಇಂತಹ ಚಿತ್ತಾರಗಳನ್ನು ಬರೆಯುತ್ತಾರೆ. ಭಾರತದಲ್ಲಿ ರಂಗವಲ್ಲಿಯೂ ಪುರಾತನ ಕಾಲದಿಂದಲೂ ಬಂದ ಗೃಹಾಲಂಕಾರದ ಒಂದು ಕಲೆಯಾಗಿದೆ. ಪುರಾಣ, ಕಾವ್ಯ, ಇತಿಹಾಸ ಮೊದಲಾದ ಸಾಹಿತ್ಯಗಳಲ್ಲಿ ರಂಗವಲ್ಲಿಯ ಉಲ್ಲೇಖಗಳಿವೆ. ಅರವತ್ನಾಲ್ಕು ಕಲೆಗಳಲ್ಲಿ ರಂಗವಲ್ಲಿಯೂ ಒಂದಾಗಿದೆ.ಮನೆಯನ್ನು ಸಾರಿಸುವ ಸಂದರ್ಭದಲ್ಲೂ ಸಗಣಿಯನ್ನು ಕಲಾತ್ಮಕವಾಗಿ ಸಾರಿಸುತ್ತಾರೆ. ಅದರ ಮೇಲೆ ಸುದ್ದೆ ಮಣ್ಣಿನಿಂದ ರಂಗೋಲಿ ಬಿಡಿಸುವುದು, ಆ ಮುಗ್ಗಿಗೆ ಎರೆಮಣ್ಣಿನಿಂದ ಅಡ್ಡಪಟ್ಟಿ ತೆಗೆಯುವುದು. ಹೂವು ಕಾಯಿಗಳನ್ನು ರಂಗೋಲಿಯಲ್ಲಿ ಬಿಡಿಸುವುದು ರೂಢಿಯಲ್ಲಿದೆ. ಹುಣ್ಣಿಮೆಯ ದಿನಗಳಲ್ಲಿ ಹಾಕುವ ಕಲಾತ್ಮಕ
ರಂಗೋಲಿಗಳನ್ನು ಕಾಣುತ್ತೇವೆ. ಇವು ಹೆಂಗಳೆಯರ ಕಲಾಸಿರಿಯನ್ನು ಪ್ರತಿನಿಧಿಸುವಂತಹವುಗಳು ಆಗಿವೆ.ಮದುವೆಯ ಸಂದರ್ಭದಲ್ಲಿ ಹೆಂಗಸರ ಮತ್ತು ಗಂಡಸರ ಕಲಾಸಿರಿಯ ಅಭಿವ್ಯಕ್ತಿಯನ್ನು ವಿಶೇಷವಾಗಿ ಕಾಣುತ್ತೇವೆ. ಮನೆಯ ಹೆಬ್ಬಾಗಿಲಿನ ಬಲಗಡೆ ಮದುಮಕ್ಕಳು ಕುಳಿತುಕೊಳ್ಳುವ ಭಾಗವನ್ನು ಕೆಮ್ಮಣ್ಣು ಮತ್ತು ಸುಣ್ಣಗಳಿಂದ ವಿವಿಧ ಆಕೃತಿಯ ಚಿತ್ತಾರಗಳನ್ನು ಬಿಡಿಸಿ ಅಲಂಕರಿಸಲಾಗುತ್ತದೆ. ಅಲ್ಲಿ ವಿಶೇಷವಾಗಿ ಪ್ರಕೃತಿ ದೇವರುಗಳಾದ ಸೂರ್ಯ, ಚಂದ್ರ ಮುಂತಾದವುಗಳನ್ನು ಬಿಡಿಸುತ್ತಿದರು. ಆದರೆ ಈಗ ಆಧುನಿಕ ಮದುವೆಯ ಏರ್ಪಾಟುಗಳು, ಇವುಗಳನ್ನು ಮರೆಯುವಂತೆ ಮಾಡಿವೆ.ಮನೆಯಲ್ಲಿ ಗೋಡೆಗಳನ್ನು ಅಲಂಕರಿಸುವುದಷ್ಟೇ ಅಲ್ಲದೆ, ಮನೆಯ ಬಾಗಿಲಿಗೆ ಹಾಕುವ ಕಸೂತಿ ಕಲೆಗಳು, ಅವುಗಳ ಮೇಲೆ ಬಿಡಿಸುವ ವಿಭಿನ್ನ ಚಿತ್ತಾರಗಳು, ಗೋಡೆಯ ಅಂಚುಗಳ ಮೇಲಿನ ಕಲೆ ಮತ್ತು ಸ್ತ್ರೀಯರು ಹಾಕಿಕೊಳ್ಳುವ ಮೇಂದಿಯ ವಿವಿಧ ಬಗೆಯ ಚಿತ್ತಾರಗಳು ಅವರ ಕಲಾಭಿರುಚಿಯ ಸಂಕೇತವೆಂದು ಕರೆಯಬಹುದಾಗಿದೆ.ಜನಪದರು ನೇಯುತ್ತಿದ್ದ, ಸಿರಿಚಾಪೆಗಳು, ಬಟ್ಟೆಗಳು. ಅದರ ಮೇಲೆ ಬಿಡಿಸುವ ಪ್ರಾದೇಶಿಕ ಪ್ರಾಣಿ ಪಕ್ಷಿಗಳ ಚಿತ್ರಗಳು ಅವರ ಕಲಾವಂತಿಕೆಯ ನಿದರ್ಶನಗಳಾಗಿವೆ. ಇವು ಅವರ ಮನಸ್ಥಿತಿಯನ್ನು, ಅವರ ಸಂಸ್ಕೃತಿಯನ್ನು ಪ್ರತಿನಿಧಿಸುವ ಪ್ರಮುಖ ಸಾಧನಗಳಾಗಿವೆ.
ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ಕಲಾತ್ಮಕತೆಯಿರುತ್ತದೆ. ಆ ಕಲಾತ್ಮಕತೆಯನ್ನು ಆಸ್ವಾದಿಸುವ ಮನಸ್ಥಿತಿ ಬೇಕು. ಅಂತಹ ಕಲಾಕೃತಿಗಳನ್ನು ಸೃಜಿಸುವ ಸೃಜನಶೀಲ ಶಕ್ತಿಯನ್ನು ಆದಿಮಾನವನಿಂದ ಆಧುನಿಕ ಮಾನವನ ತನಕ ಕಾಣುತ್ತೇವೆ.
ಪ್ರಾಚೀನ ಮಾನವನ ಇಂತಹ ಸೃಜನಶೀಲ ಮನಸ್ಸಿನ ಅಭಿವ್ಯಕ್ತಿಯನ್ನು ಅವನು ಗುಡ್ಡ ಮತ್ತು ಬಂಡೆಯ ಮೇಲೆ ಬರೆಯುತ್ತಿದ್ದ ಚಿತ್ತಾರಗಳಲ್ಲಿ ಕಾಣಬಹುದು. ಅಲ್ಲಿಂದ ಆದಿಗೊಂಡು ಅವನು ಅನೇಕ ಘಟ್ಟಗಳಲ್ಲಿ ಸಾಗಿ ಬರುತ್ತಲೇ ಅವನ್ನು ಮುಂದುವರಿಸಿಕೊಂಡು ಬಂದಿದ್ದಾನೆ. ಅಂತಹ ಚಿತ್ರಗಳನ್ನು ನಾವು ಇಂದಿಗೂ ಗುಹೆ ಮತ್ತು ಬಂಡೆಗಲ್ಲುಗಳ ಮೇಲೆ ಕಾಣಬಹುದಾಗಿದೆ. ಅಲ್ಲದೆ ಆಧುನಿಕ ಕಾಲದಲ್ಲಿಯೂ ಅನೇಕ ಬಗೆಯ ಚಿತ್ತಾರಗಳನ್ನು ಕಾಣಬಹುದಾಗಿದೆ. ಆದ್ದರಿಂದ ಆದಿ ಮಾನವನಿಂದ ಆಧುನಿಕ ಮಾನವನ ತನಕ ಅವನ ಕಲಾತ್ಮಕತೆಯನ್ನು ಅವುಗಳಿಗೆ ಬಳಸಿಕೊಂಡಿರುವ ಮಾಧ್ಯಮಗಳನ್ನು ಜನಪದ ಚಿತ್ತಾರಗಳ ಹಿನ್ನೆಲೆಯಲ್ಲಿ ನೋಡಬಹುದು.
ಹಚ್ಚೆ ಕಲೆಮನುಷ್ಯರೊಂದಿಗೆ ಶಾಶ್ವತವಾಗಿ ಬರುವಂತಹ ಏಕೈಕ ಆಸ್ತಿಯೆಂದು ಕರೆಯುವ ಹಚ್ಚೆಯೂ ಜನಪದ ಕಲೆಗಳಲ್ಲಿ ಮುಖ್ಯವಾದುದಾಗಿದೆ. ಇದು ಮನುಷ್ಯನ ಬದುಕಿನುದ್ದಕ್ಕೂ ಜೊತೆಜೊತೆಯಾಗಿ ಧಾರ್ಮಿಕ ಹಿನ್ನಲೆಯೊಂದಿಗೆ ಬೆಳೆದು ಬರುತ್ತಿರುವ ಕಲೆ ಎನ್ನಬಹುದು. ಮುತ್ತೈದೆಯರ ಸೌಂದರ್ಯದ ಸಂಕೇತವಾಗಿ ಮಾನವನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿದಂದಿನಿಂದ ವೈವಿಧ್ಯಮಯವಾಗಿ ಇದು ಜೊತೆಗೂಡಿ ಬರುತ್ತಲೇ ಇದೆ. ಹಿಂದು ಸಂಸ್ಕೃತಿಯಲ್ಲಿ ಅದರಲ್ಲೂ ತಳ ಸಮುದಾಯದಲ್ಲಿ ಈ ಹಚ್ಚೆಗೆ ತುಂಬಾ ಗೌರವವಿದೆ.ಹಚ್ಚಕಲೆ ಜಾತಿ ಮತ್ತು ಜನಾಂಗಿಕವಾಗಿ ವೈವಿಧ್ಯತೆಯನ್ನು ಪಡೆಯುತ್ತಾ ಹೋಗುತ್ತದೆ. ಅನ್ಯ ಜಾತಿಗಳಲ್ಲಿ ಹಚ್ಚೆಯನ್ನು ಹಾಕಿಸಿಕೊಳ್ಳುವುದು ಕಡಿಮೆ. ಹಾಕಿಸಿಕೊಂಡರೂ ಕೆಲವೊಂದು ಚಿತ್ರ ವಿನ್ಯಾಸಗಳನ್ನು ಹಾಕಿಸಿಕೊಳ್ಳುವುದುಂಟು. ವೈಷ್ಣವರು ಚಕ್ರಾಂಕನ, ಶೈವರಾದರೆ `ತ್ರಿಪುಂಡ್ರ', 'ತ್ರಿಶೂಲ', ಲಿಂಗ, ಬಸವ, ನಂದಿ, ಧ್ವಜದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಕ್ರೈಸ್ತರು ಶಿಲುಬೆ, ಪಕ್ಷಿಯನ್ನು ಹಾಕಿಸಿಕೊಳ್ಳುತ್ತಾರೆ. ಇತರೆ ಜನಾಂಗಗಳು ಆಂಜನೇಯ ಮುಂತಾದ ಚಿತ್ರಗಳನ್ನು ಹಾಕಿಸಿಕೊಳ್ಳುತ್ತಾರೆ.ಹಚ್ಚೆ ಸೌಂದರ್ಯದ ಸಂಕೇತ, ಅದು ನಮ್ಮ ಜೊತೆಯಲ್ಲಿ ಬರುತ್ತದೆ, ಅದನ್ನು ಹಾಕಿಸಿರುವವರ ನೆನಪು ಸದಾ ಕಾಲವಿರುತ್ತದೆ ಎಂಬ ನಂಬಿಕೆಗಳಿವೆ. ಹೀಗಾಗಿ ಇದು ಪವಿತ್ರ ಸ್ಥಾನವನ್ನು ಪಡೆದಿದೆ.ಹಚ್ಚೆಯನ್ನು ಕಾಡಿಗೆ, ಚಿಮಣಿ ಎಣ್ಣೆಯ ದೀಪದಿಂದ ಸಂಗ್ರಹಿಸಿದ ಕಪ್ಪುಕುಡಿ, ತೋಡಿ ಸೊಪ್ಪು, ಕಾಡಿಗೆಗರುವಿನ ರಸದಲ್ಲಿ ಬೆರೆಸಿ ಮೂರು ಸೂಜಿಗಳಿಂದ ಚುಚ್ಚುತ್ತಾರೆ. ಕೊರವಂಜಿ, ಒಡ್ಡರು, ಬೇಡರು ಮತ್ತು ಕಿಳ್ಳೆಕ್ಯಾತರು ಹಚ್ಚೆಯನ್ನು ಹಾಕುತ್ತಾರೆ. ಜನಪದರು ಹಾಕಿಸಿಕೊಳ್ಳುವ ಹಚ್ಚೆಗಳನ್ನು ಅವುಗಳನ್ನು ಹಾಕುವ ಸ್ಥಳಗಳನ್ನು ಕೆಳಕಂಡಂತೆ ನೀಡಬಹುದು.
ಹಣೆಯ ಮೇಲಿನ ಹಚ್ಚೆಹಣೆಯ ಮೇಲಿನ ಹಚ್ಚೆಯ ಕಲೆಗಳನ್ನು ಗುಮ್ಮಡಿಗಿಂಜ (ಕುಂಬಳ ಬೀಜ) ಚಂದ್ರಮ (ಚಂದ್ರ) ಸೂರ್ಯ (ಸೂರ್ಯ) ನಿಲುವನಾಮು(ಉದ್ದನೆಯ ನಾಮ) -ಇತ್ಯಾದಿಗಳಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ ನಿಲುವನಾಮವನ್ನು ಗಂಡಸರು ಹಾಕಿಸಿಕೊಳ್ಳುವುದುಂಟು. ಉಳಿದಂತೆ ಬಹುತೇಕ ಮುಖದ ಮೇಲಿನ ಹಚ್ಚೆ ಚಿತ್ತಾರಗಳನ್ನು ಹೆಂಗಸರು ಹಾಕಿಸಿಕೊಳ್ಳುತ್ತಾರೆ. ಅದರಲ್ಲೂ ತಳ ಸಮುದಾಯದ ಜನರಲ್ಲಿ ಕಡ್ಡಾಯವಾಗಿ ಹಾಕಿಸಿಕೊಳ್ಳುತ್ತಾರೆ.ಮುಂಗೈ ಮೇಲಿನ ಹಚ್ಚೆಗಳುಗಂಡಸರು ಹಾಗೂ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆಗಳಲ್ಲಿ ಶ್ರೀಕೃಷ್ಣನ ತೊಟ್ಟಿಲು. ಮುತ್ಯಾಲಮುಗ್ಗು, ಆಂಜನೇಯ, ಮಲ್ಲಿಮೊಗ್ಗೆ. ಮುತ್ಯಾಲ ಆರತಿ. ಜಾಕಾಯಿಪೆಟ್ಟಿಗೆ. ಪಗಬಂಡಿ. ಶ್ರೀರಾಮುಲು ತೊಟ್ಲಿ (ಶ್ರೀರಾಮನ ತೊಟ್ಟಿಲು), ಮುಂಗೈಯ ಎದುರಿಗೆ ಹಾಕಿಸಿಕೊಳ್ಳುವ ಎದುರು ಬಾಸಿಂಗಾಲು (ಎದುರು ಬಾಸಿಂಗಗಳು) -ಇತ್ಯಾದಿ ಕೈ ಮತ್ತು ಬೆರಳುಗಳ ಮೇಲಿನ ಹಚ್ಚೆಗಳುವಿಶೇಷವಾಗಿ ಹೆಂಗಸರು ಹಾಕಿಸಿಕೊಳ್ಳುವ ಹಚ್ಚೆ ಚಿತ್ತಾರಗಳಲ್ಲಿ ಪೊಯ್ಯಿಗುಂಡ್ಲು (ಒಲೆಗುಂಡುಗಳು) ಮೊಲ್ಲಿಮೊಗ್ಗ (ಮಲ್ಲಿಗೆ ಮೊಗ್ಗು) ಸ್ಯಾಪಮುಳ್ಳು (ಮೀನಿನ ಮುಳ್ಳು) ಇತ್ಯಾದಿ ಪ್ರಕಾರಗಳು ಪ್ರಮುಖವಾದವುಗಳು.ಆಧುನಿಕತೆಯ ಅಬ್ಬರದಲ್ಲಿ ದೇಸಿ ಹಚ್ಚೆಕಲೆ ತನ್ನ ಸಾಚಾತನವನ್ನು ಕಳೆದುಕೊಳ್ಳುತ್ತಿದೆ. ದೇಸಿ ಹಚ್ಚೆಕಲೆಯ ಸ್ಥಾನವನ್ನು ಆಧುನಿಕ ಯಾಂತ್ರಿಕ ಹಚ್ಚೆ ಕಲೆ ಕಬಳಿಸುತ್ತಿದೆ. ಇದರಿಂದ ಪರಂಪರಾಗತ ಜನಪದ ಚಿತ್ತಾರಗಳು ಅವನತಿಯ ಹಂಚಿಗೆ ಬಂದು ತಲುಪಿವೆ.ರಂಗೋಲಿ ಜನಪದರು ತಮ್ಮ ಪರಿಸರದಲ್ಲಿ ನೋಡುವ ವಸ್ತು, ಪ್ರಾಣಿಗಳನ್ನು ತಮ್ಮ ಮನೆಯ ಗೋಡೆಗಳ ಮೇಲೆ, ಪಡಸಾಲೆಯಲ್ಲಿ. ನಡುಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದರು. ಅದಕ್ಕೆ ಅವರು ಮನೆಗಳನ್ನು ಕೆಮ್ಮಣ್ಣಿನಿಂದ ಅಲಂಕರಿಸಿ, ಅದರ ಮೇಲೆ ಅಕ್ಕಿ ಹಿಟ್ಟಿನಿಂದ ಮಾಡಿದ ವಿವಿಧ ಬಗೆಯ ಚಿತ್ರಗಳನ್ನು ಬರೆಯುತ್ತಿದ್ದರು. ಕೆಲವರು ಬಿಳಿ ಗೋಡೆಗಳಿಗೆ ನೀಲಿಯಿಂದ ಚಿತ್ತಾರಗಳನ್ನು
- ಜಿ.ಶ್ರೀನಿವಾಸಯ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ