ಸಹೃದಯತೆಯ ಬರದಲ್ಲಿ ಸೊರಗುತ್ತಿರುವ ಜಾನಪದ ಕಲೆಗಳು. ಕನ್ನಡನಾಡು ಚಿನ್ನದಬೀಡು; ಕವಿಗಳ ನಾಡು ಕಲೆಗಳ ಬೀಡು ಎಂಬ ಅಲಂಕಾರಿಕ ವೈಭವದ ಬಣ್ಣದ ಮಾತಿನಲ್ಲಿ ಮೈಮರೆತಿರುವ ನಾವು ನಮ್ಮ ನೆಲದ ಪರಿಸರದಲ್ಲಿ ಅರಳಿದ ಜಾನಪದ ಕಲೆಗಳಿಗೆ ಬಂಗಾರದ ಮೆರಗಿತ್ತು ಆಧರಿಸಿಟ್ಟುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. 'ಜಾನಪದ ಕಲಾಸಿರಿ'ಯನ್ನು ನಿರ್ಲಕ್ಷ್ಯಕ್ಕೀಡು ಮಾಡಿ ಬಡವರಲ್ಲಿ 'ಬಡವ'ರಾಗುತ್ತಿದ್ದೇವೆ. ಆಧುನೀಕರಣ ಅಬ್ಬರದ ನಡುವೆ 'ಆಶ್ರಯದಾತ'ರಿಲ್ಲದೆ ಅನೇಕ ಕಲಾರೂಪಗಳು ಕೊರಗಿ ಕೈಕಾಲುಗಳು ಮುರಿದುಕೊಂಡು ತೆವಲುತ್ತಿವೆ. ಕಲಿಯುವ ಕಲಾಸಕ್ತರಿಲ್ಲದೆ ತಮ್ಮ ಕೊನೆಯ ಕೊಂಡಿಗಳನ್ನು ಕಳಚಿಕೊಳ್ಳುತ್ತಿವೆ ; ತನ್ನ ಸಾಚಾತನವನ್ನು ಕಳೆದುಕೊಂಡು ಇಂದು ಬಹುತೇಕ ಪ್ರದರ್ಶನಾತ್ಮಕ ಕಲಾ ಪ್ರಕಾರಗಳು ವ್ಯಾಪಾರೀರಣಗೊಳ್ಳುತ್ತಿವೆ. ಅಂತಹ ಜಾನಪದ ಕಲಾ ಪಕಾರಗಳಲ್ಲಿ ಪ್ರಾತಿನಿಧಿಕವಾಗಿ ಕೇಳಿಕೆ ಮತ್ತು ತೊಗಲುಗೊಂಬೆಯಾಟವನ್ನು ಇಲ್ಲಿ ಚಚರ್ಿಸಲಾಗಿದೆ. 
ಕೇಳಿಕೆ:
ಕೇಳಿಕೆ ಕನ್ನಡ ನಾಡಿನಲ್ಲಿ ಬಯಲಾಟ,ದೊಡ್ಡಾಟ ಮತ್ತು ಸಣ್ಣಾಟವೆಂದು ಖ್ಯಾತಿ ಪಡೆದ ಜಾನಪದ ಪ್ರದರ್ಶನಾತ್ಮಕ ಕಲಾ ಪ್ರಕಾರಗಳಲ್ಲಿ ಕೇಳಿಕೆಯು ಒಂದು. ಕಂದೆಲುಗು ನೆಲದಲ್ಲಿ ಕೇಳಿಕೆಯೆಂದೇ ಪಂಡಿತ ಪಾಮರರ ಮನ ಗೆದ್ದದ್ದು. ಗ್ರಾಮೀಣ ಪರಿಸರದ ಈ ಕೇಳಿಕೆಗಳ ಕಲಾವಿದರು 'ವಿರಾಟ ಪರ್ವ','ಕುರುಕ್ಷೇತ್ರ','ಸಂಪೂರ್ಣ ರಾಮಾಯಣಂ', ಚಂಚುಲಕ್ಷ್ಮಿ, ನಲ್ಲತಂಗಿ, ಸಾಸೂಲು ಚಿನ್ನಮ್ಮ, ದಸಿಂಗರಾಜು, ಮಾಯಲ ಮರಾಠಿ, ಮುಂತಾದ ನಾಟಕಗಳಲ್ಲಿ ಮಿಂಚಿ ಅಪಾರ ಅಭಿಮಾನಿ ಆಶ್ರಯದಾತರ ಬಳಗವನ್ನು ಪಡೆದಿದ್ದರು.
ನಾಡಿನ ಬಹುತೇಕ ಬಯಲಾಟಗಳ ಪ್ರದರ್ಶನ ಭಾಷೆ ಕನ್ನಡ. ಕೇಳಿಕೆ ಪ್ರಕಾರ ವಿಶೇಷ ಆದರಣೆಗೆ ಒಳಗಾಗಿ ಪ್ರದರ್ಶನವಾಗುತ್ತಿದ್ದುದು ಗಡಿನಾಡಿನ ನೆಲಗಳಲ್ಲಿ. ಆದುದರಿಂದ ಆ ನೆಲದ ಭಾಷೆಯೇ ಅದರ ಪ್ರದರ್ಶಕ ಭಾಷೆಯಾಗಿರುತ್ತಿತ್ತು. ಕನ್ನಡ ಮತ್ತು ತಮಿಳು ಸೀಮೆಗಳಲ್ಲಿ ಕೇಳಿಕೆಯನ್ನು ಆಧರಿಸಿ ಅಭಿಮಾನ ತೋರಿದ್ದರೂ ಇದರ ಮೂಲನೆಲ ಮತ್ತು ಭಾಷೆ ತೆಲುಗುನಾಡು. ಆದರೆ ವೃತ್ತಿ ತಂಡಗಳಿಂದ ಪ್ರದಶರ್ಿತವಾಗುತ್ತಿದ್ದ ಈ ದೃಶ್ಯಕಾವ್ಯವು ಹವ್ಯಾಸಿಗಳನ್ನು ತನ್ನ ತೆಕ್ಕೆಗೆ ಸೆಳೆದುದುಂಟು. ಜನಮನವನ್ನು ರಂಜಿಸಿ ಕನ್ನಡ ನೆಲದಲ್ಲೂ ಪಾದವೂರಿತು.
ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು ಎಂಬಂತೆ ಒಂದು ಗ್ರಾಮದಲ್ಲಿ 'ಕೇಳಿಕೆ' ಎಂದರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನ ತಂಡೋಪ ತಂಡವಾಗಿ ಬಂದು ನೋಡಿ ಆನಂದಿಸುತ್ತಿದ್ದರು ; ಅಭಿನಂಧಿಸುತ್ತಿದ್ದರು. ಮರುದಿನ ಬೆಳಕಿಗೆ ಬರುವ ಕಲಾವಿದರಿಗೆ ತಮ್ಮ ಕೈಲಾದಷ್ಟು ದುಡ್ಡು-ದುಗಾಣಿಯನ್ನೋ, ಧವಸ-ದಾನ್ಯಗಳನ್ನೋ ಬಟ್ಟೆ ಬರೆಗಳನ್ನೋ ನೀಡಿ, ನಟರನ್ನು ನಟನೆಯನ್ನು ಮೆಚ್ಚಿಕೊಂಡು 'ಪೊಗಡು'(ಹೊಗಳಿಕೆ) ಕೊಡುತ್ತಿದ್ದರು. ಅಲ್ಲದೆ ಮತ್ತೊಂದು ದಿನದ ನಾಟಕ ಪದರ್ಶನಕ್ಕೆ ಅನುವು ಮಾಡಿಕೊಟ್ಟು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಇಂದು ಆಶ್ರಯದಾತರಿಲ್ಲದೆ ವೃತ್ತಿ ಕಲಾ ತಂಡಗಳು ಕ್ಷೀಣಿಸುತ್ತಿವೆ. ಹವ್ಯಾಸಿ ಕಲಾವಿದರ ಆಸಕ್ತಿ ನೆಲೆಯಲ್ಲಿ ಅಷ್ಟಿಷ್ಟು ಉಸಿರು ಉಳಿಸಿಕೊಂಡಿರುವ ಕೇಳಿಕೆಗಳಿಗೆ ಹಿಂದಿನ ಆದರಾಭಿಮಾನ ವ್ಯಾಪಕತೆ ಇಲ್ಲದಾಗಿದೆ. ಹವ್ಯಾಸಿಗಳ ಆಸಕ್ತಿಯಿಂದಷ್ಟೆ ನಾಡಿನ ಗಡಿಗಳಲ್ಲಿ ಉಳಿದುಕೊಂಡಿರುವ ಕೇಳಿಕೆಗಳಿಗೆ ಪರಂಪರಾಗತ ಸಾಂಪ್ರದಾಯಿಕ ನೆಲೆಯಿಲ್ಲದಾಗಿದೆ. ಇಂದಿನ ಕೇಳಿಕೆಗಳಲ್ಲಿ ಸೊರಗಿದ ಸಂಗೀತಾಲಾಪನೆ ಕೇಳಿ ಬರುತ್ತಿದೆ. ಅದ್ಭುತ ಗಾನಲಹರಿಯ ವಿಶಿಷ್ಟ ಗತ್ತು ಗಮ್ಮತ್ತುಗಳಲ್ಲಿ ಹಾಡಿ ರಂಜಿಸುತ್ತಿದ್ದ ಕಲಾವಿದರು ಮರೆಯಾಗಿದ್ದಾರೆ. ಹವ್ಯಾಸಿಗಳಲ್ಲಿ ಮಾತ್ರವಲ್ಲದೆ ವೃತ್ತಿ ಕಲಾವಿದರಲ್ಲೂ ಈ ಕೊರತೆಯಿದೆ. ಪರಂಪರೆಯನ್ನು ಅರಿತ ಕಲಿಕೆಯ ಕೊರತೆ, ಜತೆಗೆ ಅದರಲ್ಲಿ ಕ್ಷೀಣಿಸಿದ ಆಸಕ್ತಿ ಇದಕ್ಕೆ ಕಾರಣವಾಗಿದೆ. ಇದನ್ನು ನೀಗಲು ಮಾತುಗಾರಿಕೆಗೆ ಇಲಿದಂತೆ ಕಾಣುತ್ತದೆ. ಹಳೆಯ ಮಟ್ಟುಗಳು ,ಕಂದಸೀಸಪದ್ಯಗಳು ಮರೆಗೆ ಸರಿದು ಅವುಗಳ ಸ್ಥಾನದಲ್ಲಿ ಪೌರಾಣಿಕ ಸಿನಿಮಾದ ಜನಪ್ರಿಯ ಹಾಡುಗಳು ಹಾಗೂ ಭಕ್ತಿ ಗೀತೆಗಳು ಬಳಕೆಗೆ ಬಂದಿವೆ. ಇದರ ಪರಿಣಾಮ ಹಿಮ್ಮೇಳದ ಅಗತ್ಯ ಹಾಗೂ ಮಹತ್ವ ಕಡಿಮೆಯಾಗಿದೆ. ತಾಳ, ದಪು, ಮುಖವೀಣೆ, ಶೃತಿಪೆಟ್ಟಿಗೆಗಳು ಅನಾಥವಾಗಿ ಮೂಲೆಗುಂಪಾಗ ತೊಡಗಿವೆ. ಅವುಗಳ ಸ್ಥಾನದಲ್ಲಿ ತಬಲ, ಹಾಮರ್ೋನಿಯಂ ಹಾಗೂ ಪೀಟೀಲುಗಳಂತಹ ಆಧುನಿಕ ವಾದ್ಯ ಪರಿಕರಗಳು ಬಾಯಾಡಿಸುತ್ತಿವೆ. ನಟರ ನಟನೆ, ಕುಣಿತ, ಹಾವಭಾವ ಪ್ರದರ್ಶನ, ಜಾನಪದೀಯ ಗತ್ತು ಗಮ್ಮತ್ತುಗಳು ಉಚ್ಚಾಟನೆಗೊಂಡು ಸಿನಿಮಾ ನಟರ ಅನುಕರಣೆ ಮೆರೆದು ಕೃತಕತೆ ಎದ್ದು ಕುಣಿದಿದೆ. ಬಣ್ಣ ತೆಳುವಾಗಿ ಬಿಟ್ಟಿದೆ. ಹೊಸ ಪ್ಯಾಷನ್ನಿನೊಂದಿಗೆ ಸೇರ್ಪಡೆಯಾಗಿರುವ ಕಪ್ಪು ಕನ್ನಡಕ ,ಕೈಗಡಿಯಾರಗಳು ಕಣ್ಣು ಮನಸ್ಸಿಗೆ ಕಿರಿಕಿಯನ್ನುಂಟು ಮಾಡುತ್ತಿವೆ.ಇವು ಕೃತಕತೆಯನ್ನು ಪೋಷಿಸಲು ಮತ್ತಷ್ಟು ಸಹಕಾರಿಯಾಗಿವೆ. ಇದನ್ನು ಸಹಿಸಿಕೊಂಡರೆ ಕೇಳಿಕೆ ಬದಲಾದ ಪರಿಸರ ಮನೋಭಾವಗಳ ನಡುವೆಯೂ ಹವ್ಯಾಸಿಗಳಿಂದಾಗಿ ಉಳಿದಿದೆ ಎಂಬುದರಿಂದಷ್ಟೆ ಸಮಾಧಾನ ಪಡಬೇಕಾಗಿದೆ. ಕಾಲಧರ್ಮಕ್ಕೆ ಅನುಗುಣವಾದ ಬದಲಾವಣೆ ತಪ್ಪಲ್ಲ. ಹಾಗೆಂದು ಪರಂಪರೆಯಿಂದ ದೂರ ಮಾಡಿ ಕೃತಕತೆಯ ಹಂದರದಲ್ಲಿ ನಲುಗುವುದು ಕ್ಷಮ್ಯವಲ್ಲ. ಮೂಲದ ರಂಗನ್ನೆ ತೊಳೆಯುವುದು ಪರಂಪರೆಗಷ್ಟೆ ಅಲ್ಲ ಮುಂದಿನ ಪೀಳಿಗೆಯನ್ನು ವಂಚಿಸಿದಂತೆಯೇ. ಇಂದು ಕೇಳಿಕೆಯ ಅನಪೇಕ್ಷಿತ ಬದಲಾವಣೆ ಅಥವಾ ಮಾಪರ್ಾಡಿಗೆ ಯಾವ ಶಾಸ್ತ್ರೀಯ ಸೈದ್ಧಾಂತಿಕ ಇಲ್ಲವೇ ಸಾಂಪ್ರದಾಯಿಕ ತಳಹದಿಯೂ ಇಲ್ಲವಾಗಿದೆ. ಮೂಲ ಕಲಾವಂತಿಕೆಯನ್ನು ಹಾಳು ಮಾಡುವ ಯಾವುದೇ 'ಆಧುನೀಕರಣ' ಪ್ರತಿಯೊಂದು ಸಾಂಪ್ರದಾಯಿಕ ಕಲೆಗೆ ಮಾರಕವೆಂದೇ ಹೇಳಬೇಕಾಗುತ್ತದೆ.
ತೊಗಲುಗೊಂಬೆಯಾಟ:
ತೊಗಲುಗೊಂಬೆಯಾಟ ಕೇಳಿಕೆಯ ಮತ್ತೊಂದು ಪ್ರಾಚೀನ ಜಾನಪದ ಕಲಾ ಪ್ರಕಾರವೇ ತೊಗಲುಗೊಂಬೆಯಾಟ. ಅವಸಾನದ ಅಂಚಿನಲ್ಲಿರುವ ಜನಪ್ರಿಯ ಜಾನಪದ ಪ್ರದರ್ಶನ ಕಲೆಗಳಲ್ಲಿ ಆದಿ ಸ್ಥಾನದಲ್ಲಿದೆ. ಚಲನಚಿತ್ರಗಳ ಕನಸೂ ಸಾಧ್ಯವಿಲ್ಲದ ಸಂದರ್ಭದಲ್ಲಿ ಮನರಂಜನೆಯ ಕಾರಣದಿಂದ ಜನರ ಆದರಾಭಿಮಾನಗಳನ್ನುಗಳಿಸಿದ್ದ ಆಟವಿದು. ಗೊಂಬೆಗಳೊಂದಿಗೆ ಬಿಚ್ಚುತ್ತಿದ್ದ ಮಾಯಾಲೋಕ ಇಂದಿನ ಸಿನಿಮಾಗಳಷ್ಟೆ ರಂಗಿನ ಮೋಡಿಯದಾಗಿತ್ತು. ಕೇಳಿಕೆಯಂತೆಯೇ ತೊಗಲುಗೊಂಬೆಯಾಟ ಕಟ್ಟಿಸಿವಲ್ಲಿದ್ದ ಪುರುಷಾರ್ಥ ಅದ್ಬುತವಾದುದಾಗಿದೆ. ಮನರಂಜನೆ, ಧಾಮರ್ಿಕ ಆಶಯ ಹಾಗೂ ಸಮುದಾಯದ ಕಲ್ಯಾಣದ ಬಯಕೆ ಗೊಂಬೆಯಾಟದವರಿಗೆ ಹೊಟ್ಟೆಪಾಡಿನ ವೃತ್ತಿಯಷ್ಟೆ ಆಗಿರಲಿಲ್ಲ. ಜನಪರ ನಂಬಿಕೆ ಆಶಯಗಳು ಇವರದಾಗಿದ್ದವು.
ತೊಗಲುಗೊಂಬೆಯಾಟ ಏರಿದ ಎತ್ತರ ಎಷ್ಟು ಹೆಮ್ಮೆಯದೋ ಅದು ಕಂಡ ಪಾತಾಳ ಅಷ್ಟೇ ವಿಷಾದನೀಯ.
ತೊಗಲುಗೊಂಬೆಯಾಟವೇ ಕುಲವೃತ್ತಿಯಾದ ಒಂದು ತಂಡ, ಸಂಪತ್ತು ಸಂಪನ್ನವಾಗದಿದ್ದರೂ ಹೊಟ್ಟೆ ಬಟ್ಟೆಗೆ ಪರದಾಡಿಸದೇ ದಿನ ನಡೆಸಿತ್ತು. ಹೊಸ ನೀರಾಗಿ ಬಂದ ಸಿನಿಮಾ ನಂತರ ದೂರದರ್ಶನ ಮತ್ತು ಇತರ ದೃಶ್ಯ ಮಾದ್ಯಮಗಳು ತೊಗಲುಗೊಂಬೆಯಾಟವನ್ನು ಅಣಕಿಸಿದವು. ಗೊಂಬೆಗಳು ಮೂಕವಾದವು. ಆಡಿಸುವ ಕೈಗಳು ಕುಣಿಸುವ ಕಾಲುಗಳು ಅಚಲವಾದವು. ಹಾಡುವ ಬಾಯಿ ಬರಿದಾಗಿ ನಿಟ್ಟುಸಿರು ಹೊರಬಿತ್ತು. ಆದರೆ ಜನ ಮನಸ್ಸು ಕೇಳಿಕೆಯ ಗುಂಗಿನಿಂದ ದೂರವಾಗಿರಲ್ಲಿಲ್ಲ. ಒಲ್ಲದ ಮನಸ್ಸಿನಿಂದ ತಂಡ ತೊಗಲುಗೊಂಬೆಗಳನ್ನು ಮೂಟೆಕಟ್ಟಿ ಆ ಪ್ರಸಂಗವನ್ನೆ ಮಾರ್ಪಡಿಸಿ ಬಣ್ಣ ಃಚ್ಚಿ ಪರದೆಯ ಮುಂದಕ್ಕೆ ಬಂದರು. ಅಗತ್ಯಕ್ಕೆ ಗೊಂಬೆಗಳು ಹಣವಾಗಿ ಮಾರ್ಪಟ್ಟಿತು. ಕಾಲಗತಿಯಲ್ಲಿ ಜನರ ಆಕರ್ಷಣೆಗೆ ಕೇಳಿಕೆಗಳು ಒಳಗಾದಾಗ ತಂಡಕ್ಕೆ ಬೇರೆ ದಾರಿ ಕಾಣದೆ ಬದುಕು ಮಾರ್ಗಗಳನ್ನು ಹುಡುಕುವುದು ಅನಿವಾರ್ಯವಾಯಿತು.ತಂಡ ಒಡೆಯಿತು. ಕೆಲವರು ಕೃಷಿ ಕಾಮರ್ಿಕರಾದರೆ ಕೆಲವರು ರಿಕಾಡರ್ುಡ್ಯಾನ್ಸು ಕಲಿತು ಜಾತ್ರೆ-ಉತ್ಸವಗಳಲ್ಲಿ ಕುಣಿದು ದಣಿದರು.ಇದೂ ತುಂಬಾ ದಿನ ಸಾಗಲಿಲ್ಲ; ಹೊಟ್ಟೆ ತುಂಬಲ್ಲಿಲ್ಲ. ಅವರಿಗೆ ತೋಚಿದ ವೃತ್ತಿಗಳನ್ನು ಅವಲಂಭಸಿದರು. ಇನ್ನೂ ಹಲವರು ಏನೂ ಮಾಡಲು ಮನಸ್ಸು ಒಪ್ಪದವರು ನಿರಾಸೆಯ ಬುತ್ತಿ ಎದೆಗೊತ್ತಿ ಗೊಂಬೆಗಳೊಂದಿಗಿನ ಬದುಕನ್ನು ಪ್ರೀತಿಸಿದರು.ಭವಿಷ್ಯದ ಕನಸು ಫಲ ನೀಡೀತೆಂದು ಹಂಬಲಿಸಿದ್ದರಿಂದ ತೊಗಲುಗೊಂಬೆ ಉಳಿದುಕೊಂಡಿತು. ಹೀಗೆ ಉಳಿದುಕೊಂಡ ಈ ಕಲೆ-ಕಲಾವಿದ,
ನವನಾಗರಿಕವೆಂದು ಬೀಗುವ ಆಧುನಿಕ ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಕಪಿ ಮುಷ್ಠಿಗೆ ಸಿಲುಕಿ ನರುಳುತ್ತಿವೆ. ಇಂಥ ವಂಚನೆಯ ನಡುವೆಯೂ ಯಾವುದೋ ಯುಗದ ನಿಗೂಢ ಕನಸುಗಳನ್ನು ಬಿಚ್ಚಿಡುತ್ತ ಚಿಂದಿ ಬದುಕು ತುಂಬಿದ ವೇದನೆಯನ್ನು ನುಂಗಿಕೊಂಡು ಗೊಂಬೆಗಳಿಗೆ ಮಾತುಕೊಟ್ಟು ರಂಜಿಸುತ್ತಿದ್ದಾರೆ. ನಿಶ್ಚಿತ ನಾಳೆಯ ಅನಿಶ್ಚಿತ ಬದುಕನ್ನು ನಡೆಸುವ ದಾರಿಯನ್ನು ಹುಡುಕ್ಕುತ್ತಾ, ಬರಿಗೈಯ ಅಜೀವಗಳ ನರಳುವಿಕೆ ನಮ್ಮನ್ನು ನಾಚಿಸುತ್ತಿದೆ. ಕನಿಷ್ಟ ಅವರ ವೇದನೆಯನ್ನು ಎದೆಯ ಹತ್ತಿರಕ್ಕೆ ತಂದುಕೊಳ್ಳುವಂತಾದರೆ, ಕಲೆ-ಕಲಾವಿದರಿಗೆ ಅವರ ಬಾಳಿಗೆ ನವಚೈತನ್ಯದ ಕಿರಣವಾದರೂ ಕಂಡೀತು. ಬುರ್ರಕಥೆ ಪ್ರಸ್ತುತ ಅನೇಕ ಕಲೆಗಳು ಹೊಸ ಪೀಳಿಗೆಯ ಅವಕೃಪೆಗೆ ಒಳಗಾಗ ತೊಡಗಿದ್ದು ಆಧುನಿಕ ಮನರಂಜನಾ ಸಾಧನಗಳ ಪ್ರವೇಶದಿಂದ ಎಂದು ಹೇಳಬಹುದು. ಜನಪದರಿಗೆ ಇವುಗಳಲ್ಲಿ ಕಂಡ ಥ್ರಿಲ್ ಜಾನಪದ ಕಲೆಗಳಲ್ಲಿ ಕಾಣಲಿಲ್ಲ. ಕಲಾರೂಪಗಳ ಬಗ್ಗೆ ಮೂಲಭೂತ ಒಲವು ಇಲ್ಲದರ ಕಾರಣದಿಂದ ಅವು ತೀವತರ ನಿರ್ಲಷ್ಯಕ್ಕೆ ಒಳಪಟ್ಟವು. ಜಾಗತೀಕರಣದ ಈ ಸಂದರ್ಭದಲ್ಲಿ ಇವುಗಳ ರಕ್ಷಣೆ ಮತ್ತು ಪೋಷಣೆ ಹಿಂದೆಂದಿಗಿಂತಲೂ ಈಗ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಹೃದಯರು, ಅಕಾಡೆಮಿಗಳು,ವಿಶ್ವವಿದ್ಯಾಲಯಗಳು,ಸಕರ್ಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಇವುಗಳ ಆಶ್ರದಾತರಾಗಬೇಕಾಗಿದೆ. ಮುಂದಿನ ತಲೆಮಾರಿಗೆ ಭವ್ಯ ಜಾನಪದ ಪರಂಪರೆಯ ಕಲಾಸಿರಿಯನ್ನು ಉಳಿಸಲು ನಾವೆಲ್ಲಾ ಇಂದು ಸಕ್ರಿಯರಾಗಬೇಕಾದ ಅನಿವಾರ್ಯತೆ ಇದೆ.
ಕೇಳಿಕೆ:
ಕೇಳಿಕೆ ಕನ್ನಡ ನಾಡಿನಲ್ಲಿ ಬಯಲಾಟ,ದೊಡ್ಡಾಟ ಮತ್ತು ಸಣ್ಣಾಟವೆಂದು ಖ್ಯಾತಿ ಪಡೆದ ಜಾನಪದ ಪ್ರದರ್ಶನಾತ್ಮಕ ಕಲಾ ಪ್ರಕಾರಗಳಲ್ಲಿ ಕೇಳಿಕೆಯು ಒಂದು. ಕಂದೆಲುಗು ನೆಲದಲ್ಲಿ ಕೇಳಿಕೆಯೆಂದೇ ಪಂಡಿತ ಪಾಮರರ ಮನ ಗೆದ್ದದ್ದು. ಗ್ರಾಮೀಣ ಪರಿಸರದ ಈ ಕೇಳಿಕೆಗಳ ಕಲಾವಿದರು 'ವಿರಾಟ ಪರ್ವ','ಕುರುಕ್ಷೇತ್ರ','ಸಂಪೂರ್ಣ ರಾಮಾಯಣಂ', ಚಂಚುಲಕ್ಷ್ಮಿ, ನಲ್ಲತಂಗಿ, ಸಾಸೂಲು ಚಿನ್ನಮ್ಮ, ದಸಿಂಗರಾಜು, ಮಾಯಲ ಮರಾಠಿ, ಮುಂತಾದ ನಾಟಕಗಳಲ್ಲಿ ಮಿಂಚಿ ಅಪಾರ ಅಭಿಮಾನಿ ಆಶ್ರಯದಾತರ ಬಳಗವನ್ನು ಪಡೆದಿದ್ದರು.
ನಾಡಿನ ಬಹುತೇಕ ಬಯಲಾಟಗಳ ಪ್ರದರ್ಶನ ಭಾಷೆ ಕನ್ನಡ. ಕೇಳಿಕೆ ಪ್ರಕಾರ ವಿಶೇಷ ಆದರಣೆಗೆ ಒಳಗಾಗಿ ಪ್ರದರ್ಶನವಾಗುತ್ತಿದ್ದುದು ಗಡಿನಾಡಿನ ನೆಲಗಳಲ್ಲಿ. ಆದುದರಿಂದ ಆ ನೆಲದ ಭಾಷೆಯೇ ಅದರ ಪ್ರದರ್ಶಕ ಭಾಷೆಯಾಗಿರುತ್ತಿತ್ತು. ಕನ್ನಡ ಮತ್ತು ತಮಿಳು ಸೀಮೆಗಳಲ್ಲಿ ಕೇಳಿಕೆಯನ್ನು ಆಧರಿಸಿ ಅಭಿಮಾನ ತೋರಿದ್ದರೂ ಇದರ ಮೂಲನೆಲ ಮತ್ತು ಭಾಷೆ ತೆಲುಗುನಾಡು. ಆದರೆ ವೃತ್ತಿ ತಂಡಗಳಿಂದ ಪ್ರದಶರ್ಿತವಾಗುತ್ತಿದ್ದ ಈ ದೃಶ್ಯಕಾವ್ಯವು ಹವ್ಯಾಸಿಗಳನ್ನು ತನ್ನ ತೆಕ್ಕೆಗೆ ಸೆಳೆದುದುಂಟು. ಜನಮನವನ್ನು ರಂಜಿಸಿ ಕನ್ನಡ ನೆಲದಲ್ಲೂ ಪಾದವೂರಿತು.
ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು ಎಂಬಂತೆ ಒಂದು ಗ್ರಾಮದಲ್ಲಿ 'ಕೇಳಿಕೆ' ಎಂದರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನ ತಂಡೋಪ ತಂಡವಾಗಿ ಬಂದು ನೋಡಿ ಆನಂದಿಸುತ್ತಿದ್ದರು ; ಅಭಿನಂಧಿಸುತ್ತಿದ್ದರು. ಮರುದಿನ ಬೆಳಕಿಗೆ ಬರುವ ಕಲಾವಿದರಿಗೆ ತಮ್ಮ ಕೈಲಾದಷ್ಟು ದುಡ್ಡು-ದುಗಾಣಿಯನ್ನೋ, ಧವಸ-ದಾನ್ಯಗಳನ್ನೋ ಬಟ್ಟೆ ಬರೆಗಳನ್ನೋ ನೀಡಿ, ನಟರನ್ನು ನಟನೆಯನ್ನು ಮೆಚ್ಚಿಕೊಂಡು 'ಪೊಗಡು'(ಹೊಗಳಿಕೆ) ಕೊಡುತ್ತಿದ್ದರು. ಅಲ್ಲದೆ ಮತ್ತೊಂದು ದಿನದ ನಾಟಕ ಪದರ್ಶನಕ್ಕೆ ಅನುವು ಮಾಡಿಕೊಟ್ಟು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಇಂದು ಆಶ್ರಯದಾತರಿಲ್ಲದೆ ವೃತ್ತಿ ಕಲಾ ತಂಡಗಳು ಕ್ಷೀಣಿಸುತ್ತಿವೆ. ಹವ್ಯಾಸಿ ಕಲಾವಿದರ ಆಸಕ್ತಿ ನೆಲೆಯಲ್ಲಿ ಅಷ್ಟಿಷ್ಟು ಉಸಿರು ಉಳಿಸಿಕೊಂಡಿರುವ ಕೇಳಿಕೆಗಳಿಗೆ ಹಿಂದಿನ ಆದರಾಭಿಮಾನ ವ್ಯಾಪಕತೆ ಇಲ್ಲದಾಗಿದೆ. ಹವ್ಯಾಸಿಗಳ ಆಸಕ್ತಿಯಿಂದಷ್ಟೆ ನಾಡಿನ ಗಡಿಗಳಲ್ಲಿ ಉಳಿದುಕೊಂಡಿರುವ ಕೇಳಿಕೆಗಳಿಗೆ ಪರಂಪರಾಗತ ಸಾಂಪ್ರದಾಯಿಕ ನೆಲೆಯಿಲ್ಲದಾಗಿದೆ. ಇಂದಿನ ಕೇಳಿಕೆಗಳಲ್ಲಿ ಸೊರಗಿದ ಸಂಗೀತಾಲಾಪನೆ ಕೇಳಿ ಬರುತ್ತಿದೆ. ಅದ್ಭುತ ಗಾನಲಹರಿಯ ವಿಶಿಷ್ಟ ಗತ್ತು ಗಮ್ಮತ್ತುಗಳಲ್ಲಿ ಹಾಡಿ ರಂಜಿಸುತ್ತಿದ್ದ ಕಲಾವಿದರು ಮರೆಯಾಗಿದ್ದಾರೆ. ಹವ್ಯಾಸಿಗಳಲ್ಲಿ ಮಾತ್ರವಲ್ಲದೆ ವೃತ್ತಿ ಕಲಾವಿದರಲ್ಲೂ ಈ ಕೊರತೆಯಿದೆ. ಪರಂಪರೆಯನ್ನು ಅರಿತ ಕಲಿಕೆಯ ಕೊರತೆ, ಜತೆಗೆ ಅದರಲ್ಲಿ ಕ್ಷೀಣಿಸಿದ ಆಸಕ್ತಿ ಇದಕ್ಕೆ ಕಾರಣವಾಗಿದೆ. ಇದನ್ನು ನೀಗಲು ಮಾತುಗಾರಿಕೆಗೆ ಇಲಿದಂತೆ ಕಾಣುತ್ತದೆ. ಹಳೆಯ ಮಟ್ಟುಗಳು ,ಕಂದಸೀಸಪದ್ಯಗಳು ಮರೆಗೆ ಸರಿದು ಅವುಗಳ ಸ್ಥಾನದಲ್ಲಿ ಪೌರಾಣಿಕ ಸಿನಿಮಾದ ಜನಪ್ರಿಯ ಹಾಡುಗಳು ಹಾಗೂ ಭಕ್ತಿ ಗೀತೆಗಳು ಬಳಕೆಗೆ ಬಂದಿವೆ. ಇದರ ಪರಿಣಾಮ ಹಿಮ್ಮೇಳದ ಅಗತ್ಯ ಹಾಗೂ ಮಹತ್ವ ಕಡಿಮೆಯಾಗಿದೆ. ತಾಳ, ದಪು, ಮುಖವೀಣೆ, ಶೃತಿಪೆಟ್ಟಿಗೆಗಳು ಅನಾಥವಾಗಿ ಮೂಲೆಗುಂಪಾಗ ತೊಡಗಿವೆ. ಅವುಗಳ ಸ್ಥಾನದಲ್ಲಿ ತಬಲ, ಹಾಮರ್ೋನಿಯಂ ಹಾಗೂ ಪೀಟೀಲುಗಳಂತಹ ಆಧುನಿಕ ವಾದ್ಯ ಪರಿಕರಗಳು ಬಾಯಾಡಿಸುತ್ತಿವೆ. ನಟರ ನಟನೆ, ಕುಣಿತ, ಹಾವಭಾವ ಪ್ರದರ್ಶನ, ಜಾನಪದೀಯ ಗತ್ತು ಗಮ್ಮತ್ತುಗಳು ಉಚ್ಚಾಟನೆಗೊಂಡು ಸಿನಿಮಾ ನಟರ ಅನುಕರಣೆ ಮೆರೆದು ಕೃತಕತೆ ಎದ್ದು ಕುಣಿದಿದೆ. ಬಣ್ಣ ತೆಳುವಾಗಿ ಬಿಟ್ಟಿದೆ. ಹೊಸ ಪ್ಯಾಷನ್ನಿನೊಂದಿಗೆ ಸೇರ್ಪಡೆಯಾಗಿರುವ ಕಪ್ಪು ಕನ್ನಡಕ ,ಕೈಗಡಿಯಾರಗಳು ಕಣ್ಣು ಮನಸ್ಸಿಗೆ ಕಿರಿಕಿಯನ್ನುಂಟು ಮಾಡುತ್ತಿವೆ.ಇವು ಕೃತಕತೆಯನ್ನು ಪೋಷಿಸಲು ಮತ್ತಷ್ಟು ಸಹಕಾರಿಯಾಗಿವೆ. ಇದನ್ನು ಸಹಿಸಿಕೊಂಡರೆ ಕೇಳಿಕೆ ಬದಲಾದ ಪರಿಸರ ಮನೋಭಾವಗಳ ನಡುವೆಯೂ ಹವ್ಯಾಸಿಗಳಿಂದಾಗಿ ಉಳಿದಿದೆ ಎಂಬುದರಿಂದಷ್ಟೆ ಸಮಾಧಾನ ಪಡಬೇಕಾಗಿದೆ. ಕಾಲಧರ್ಮಕ್ಕೆ ಅನುಗುಣವಾದ ಬದಲಾವಣೆ ತಪ್ಪಲ್ಲ. ಹಾಗೆಂದು ಪರಂಪರೆಯಿಂದ ದೂರ ಮಾಡಿ ಕೃತಕತೆಯ ಹಂದರದಲ್ಲಿ ನಲುಗುವುದು ಕ್ಷಮ್ಯವಲ್ಲ. ಮೂಲದ ರಂಗನ್ನೆ ತೊಳೆಯುವುದು ಪರಂಪರೆಗಷ್ಟೆ ಅಲ್ಲ ಮುಂದಿನ ಪೀಳಿಗೆಯನ್ನು ವಂಚಿಸಿದಂತೆಯೇ. ಇಂದು ಕೇಳಿಕೆಯ ಅನಪೇಕ್ಷಿತ ಬದಲಾವಣೆ ಅಥವಾ ಮಾಪರ್ಾಡಿಗೆ ಯಾವ ಶಾಸ್ತ್ರೀಯ ಸೈದ್ಧಾಂತಿಕ ಇಲ್ಲವೇ ಸಾಂಪ್ರದಾಯಿಕ ತಳಹದಿಯೂ ಇಲ್ಲವಾಗಿದೆ. ಮೂಲ ಕಲಾವಂತಿಕೆಯನ್ನು ಹಾಳು ಮಾಡುವ ಯಾವುದೇ 'ಆಧುನೀಕರಣ' ಪ್ರತಿಯೊಂದು ಸಾಂಪ್ರದಾಯಿಕ ಕಲೆಗೆ ಮಾರಕವೆಂದೇ ಹೇಳಬೇಕಾಗುತ್ತದೆ.
ತೊಗಲುಗೊಂಬೆಯಾಟ:
ತೊಗಲುಗೊಂಬೆಯಾಟ ಕೇಳಿಕೆಯ ಮತ್ತೊಂದು ಪ್ರಾಚೀನ ಜಾನಪದ ಕಲಾ ಪ್ರಕಾರವೇ ತೊಗಲುಗೊಂಬೆಯಾಟ. ಅವಸಾನದ ಅಂಚಿನಲ್ಲಿರುವ ಜನಪ್ರಿಯ ಜಾನಪದ ಪ್ರದರ್ಶನ ಕಲೆಗಳಲ್ಲಿ ಆದಿ ಸ್ಥಾನದಲ್ಲಿದೆ. ಚಲನಚಿತ್ರಗಳ ಕನಸೂ ಸಾಧ್ಯವಿಲ್ಲದ ಸಂದರ್ಭದಲ್ಲಿ ಮನರಂಜನೆಯ ಕಾರಣದಿಂದ ಜನರ ಆದರಾಭಿಮಾನಗಳನ್ನುಗಳಿಸಿದ್ದ ಆಟವಿದು. ಗೊಂಬೆಗಳೊಂದಿಗೆ ಬಿಚ್ಚುತ್ತಿದ್ದ ಮಾಯಾಲೋಕ ಇಂದಿನ ಸಿನಿಮಾಗಳಷ್ಟೆ ರಂಗಿನ ಮೋಡಿಯದಾಗಿತ್ತು. ಕೇಳಿಕೆಯಂತೆಯೇ ತೊಗಲುಗೊಂಬೆಯಾಟ ಕಟ್ಟಿಸಿವಲ್ಲಿದ್ದ ಪುರುಷಾರ್ಥ ಅದ್ಬುತವಾದುದಾಗಿದೆ. ಮನರಂಜನೆ, ಧಾಮರ್ಿಕ ಆಶಯ ಹಾಗೂ ಸಮುದಾಯದ ಕಲ್ಯಾಣದ ಬಯಕೆ ಗೊಂಬೆಯಾಟದವರಿಗೆ ಹೊಟ್ಟೆಪಾಡಿನ ವೃತ್ತಿಯಷ್ಟೆ ಆಗಿರಲಿಲ್ಲ. ಜನಪರ ನಂಬಿಕೆ ಆಶಯಗಳು ಇವರದಾಗಿದ್ದವು.
ತೊಗಲುಗೊಂಬೆಯಾಟ ಏರಿದ ಎತ್ತರ ಎಷ್ಟು ಹೆಮ್ಮೆಯದೋ ಅದು ಕಂಡ ಪಾತಾಳ ಅಷ್ಟೇ ವಿಷಾದನೀಯ.
-ಜಿ.ಶ್ರೀನಿವಾಸಯ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ