ಮಂಗಳವಾರ, ಡಿಸೆಂಬರ್ 20, 2011

ಕೋಲಾರ ಜಿಲ್ಲಾ ದರ್ಶನ

            ತನ್ನೊಡಲ ಬಗೆಸಿಕೊಂಡು ಪ್ರಪಂಚಕ್ಕೇ ಬಂಗಾರ ಕೊಟ್ಟ ಈ ಕಂದೆಲುಗು ನೆಲದೊಡಲು ಇಂದು ಬರಿದಾಗಿದ್ದರೂ ಕನರ್ಾಟಕ ಸಾಂಸ್ಕೃತಿಕ ಇತಿಹಾಸಕ್ಕೆ ನೀಡುವ ಕೊಡುಗೆಯಲ್ಲಿ ಸಿರಿವಂತಿಕೆಯನ್ನೇ ಮರೆದಿದೆ. ಭೌಗೋಳಿಕ ವೈವಿಧ್ಯತೆಯ ಈ ನೆಲದೊಡಲಲ್ಲಿ ಹಲವಾರು ಗಿರಿಶಿಖರಗಳು, ನದ-ನದಿಗಳು, ಸಾವಿರಾರು ಕೆರೆ-ಕುಂಟೆಗಳು, ಕಟ್ಟೆ-ಕಾಲುವೆಗಳು, ಪ್ರಾಚೀನ-ಆವರ್ಾಚೀನ ಗತವೈಭವವನ್ನು ಸಾರುವ ಸಾವಿರಾರು  ದೇಗುಲ-ಮಠಗಳು, ವಿವಿಧ ರಾಜಸಂತತಿಗಳು ಕೆತ್ತಿಸಿದ ಹತ್ತು ಹಲವು ಶಿಲಾಶಾಸನಗಳು, ಆದಿ ಮಾನವನ ಬದುಕಿನ ಹಲವು ಮಜಲುಗಳನ್ನು ಅರಿಯಲು ನೆರವಾಗುವ ಹತ್ತಾರು ಸ್ಥಳ ವಿಶೇಷಗಳು- ಹೀಗೆ ವಿಭಿನ್ನ ಆಯಾಮಗಳು ಜಿಲ್ಲೆಯ ರಾಜಕೀಯ, ಸಾಮಾಜಿಕ, ಆಥರ್ಿಕ ಹಾಗೂ ಸಾಂಸ್ಕೃತಿಕ ಗತ ವೈಭವವನ್ನು ಬಿಂಭಿಸಿವೆ.
           ಕೋಲಾರ ಜಿಲ್ಲೆಯು ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಪಡೆದಿದೆ. ಅದು ರಾಮಾಯಣ ಮತ್ತು ಮಹಾಭಾರತದಷ್ಟು ಪ್ರಾಚೀನತೆಯನ್ನು ಪಡೆದಿದೆ.ಇದನ್ನು ಪುಷ್ಠೀಕರಿಸುವ ಹತ್ತಾರು ಸ್ಥಳಪುರಾಣಗಳು ಹಾಗೂ ಐತಿಹ್ಯಗಳು ಉಪಲಬ್ಧವಾಗುತ್ತವೆ.
ಸ್ಥಳ ನಿದರ್ೇಶನ ಮತ್ತು ಮೇರೆಗಳು   ಪಶ್ಚಿಮದಲ್ಲಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು, ಉತ್ತರ ಮತ್ತು ಪೂರ್ವದಲ್ಲಿ ಅನುಕ್ರಮವಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಗಳು, ದಕ್ಷಿಣದಲ್ಲಿ ತಮಿಳುನಾಡಿನ ಉತ್ತರ ಆಕರ್ಾಟ್ ಮತ್ತು ಧರ್ಮಪುರಿ ಜಿಲ್ಲೆಗಳು  ಇವು ಕೋಲಾರ ಜಿಲ್ಲೆಯ ಮೇರೆಗಳು. ಜಿಲ್ಲೆಯಲ್ಲಿ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳು ಇವೆ. ಒಟ್ಟು ವಿಸ್ತೀರ್ಣ 3923.3 ಚ.ಕಿ.ಮೀಟರುಗಳು.

ಜಲಸಂಪನ್ಮೂಲಗಳು            ಕೋಲಾರ ಜಿಲ್ಲೆಯಲ್ಲಿ ಸರ್ವಋತು ನದಿಗಳು ಯಾವುವೂ ಇಲ್ಲ. ಬಹುತೇಕ ನದಿಗಳು ಸಣ್ಣವು. ಮಳೆಗಾಲದಲ್ಲಿ ಮಾತ್ರ ಇವುಗಳಲ್ಲಿ ಪ್ರವಾಹ. ಪಾಲಾರ್ ಮತ್ತು ಉತ್ತರಪಿನಾಕಿನಿ (ಉತ್ತರ ಪೆನ್ನಾರ್) ಇವು ಮುಖ್ಯನದಿಗಳು. ಇವೂ ಹಲವು ಸಣ್ಣ ನದಿಗಳೂ ಜಿಲ್ಲೆಯಲ್ಲಿ ಹುಟ್ಟಿ ವಿವಿಧ ದಿಕ್ಕುಗಳಲ್ಲಿ ಹರಿಯುತ್ತವೆ. ಪಾಲಾರ್ ನದಿ ಮೊದಲು ಕಾಣಿಸಿಕೊಳ್ಳುವುದು ಕೈವಾರದ ದಕ್ಷಿಣಕ್ಕಿರುವ ಗೌತಮ ಗುಡ್ಡದಲ್ಲಿ. ಅಲ್ಲಿಂದ ಜಂಗಮಕೋಟೆಯವರೆಗೆ ಪೂವರ್ಾಬಿಮುಖವಾಗಿ, ಮುಂದೆ ದಕ್ಷಿಣ ಮತ್ತು ಆಗ್ನೇಯಾಬಿಮುಖವಾಗಿ ಹರಿದು, ಬಂಗಾರಪೇಟೆಯನ್ನು ಹಾದು, ಜಿಲ್ಲೆಯನ್ನು ಬಿಡುತ್ತದೆ. ಉಗಮಸ್ಥಳದಿಂದ ಜಿಲ್ಲೆಯನ್ನು ಬಿಡುವಲ್ಲಿಯ ವರೆಗೆ ಇದರ ಉದ್ದ 108ಕಿಮೀ ಉತ್ತರಪಿನಾಕಿನಿ ಚೆನ್ನಕೇಶವ ಬೆಟ್ಟದಲ್ಲಿ ಹುಟ್ಟಿ ವಾಯವ್ಯ ದಿಕ್ಕಿನಲ್ಲಿ ಹರಿದು, ಮಂಚೇನಹಳ್ಳಿ ಮತ್ತು ಗೌರಿಬಿದನೂರುಗಳ ಬಳಿಯಲ್ಲಿ ಸಾಗಿ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 55ಕಿಮೀ. ನಂದಿಬೆಟ್ಟದ ಬಳಿ ಹುಟ್ಟಿ ದಕ್ಷಿಣಕ್ಕೆ ಪ್ರವಹಿಸುವ ದಕ್ಷಿಣಪಿನಾಕಿನಿ ಕೋಲಾರ ಜಿಲ್ಲೆಯಲ್ಲಿ ಸ್ವಲ್ಪ ದೂರ ಮಾತ್ರ ಹರಿಯುತ್ತದೆ. ಜಿಲ್ಲೆಯ ಇನ್ನೊಂದು ಮುಖ್ಯ ನದಿ ಪಾಪಘ್ನಿ. ಚಿಕ್ಕಬಳ್ಳಾಪುರದ ಬಳಿಯ ಬೆಟ್ಟದಲ್ಲಿ ಇದರ ಉಗಮ. ಇದು ಈಶಾನ್ಯ ದಿಕ್ಕಿನಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಮೂಲಕ ಹರಿದು, ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 68ಕಿಮೀ. ಚಿತ್ರಾವತಿ ಇನ್ನೊಂದು ನದಿ. ನಂದಿ ಬೆಟ್ಟಕ್ಕೆ ಉತ್ತರದಲ್ಲಿ 14ಕಿಮೀ ದೂರದಲ್ಲಿ ಹುಟ್ಟಿ ಈಶಾನ್ಯಾಬಿಮುಖವಾಗಿ ಹರಿದು ಹಿಂದೂಪುರವನ್ನು ಪ್ರವೇಶಿಸುತ್ತದೆ. ಇದು ಉತ್ತರ ಪಿನಾಕಿನಿಯ ಒಂದು ಉಪನದಿ. ಜಿಲ್ಲೆಯಲ್ಲಿ ಇದರ ಹರಿವು 48ಕಿಮೀ. ಇದರ ಜಲಾನಯನ ಪ್ರದೇಶ 538ಚ.ಕಿಮೀ. ಇಲ್ಲಿ 206 ಕೆರೆಗಳಿವೆ. ನಂಗ್ಲಿಹೊಳೆ ಮುಳಬಾಗಿಲಬಳಿಯ ಕುರುಡುಮಲೆಯಲ್ಲಿ ಹುಟ್ಟಿ ಪೂವರ್ಾಬಿಮುಖವಾಗಿ ಹರಿದು ಜಿಲ್ಲೆಯನ್ನು ದಾಟಿ ಹೋಗುತ್ತದೆ. ಇದು ಕೌಂಡಿನ್ಯ ನದಿಯ ಉಪನದಿ. ಕುಮುದ್ವತಿ ನದಿ ಉತ್ತರ ಪಿನಾಕಿನಿಯ ಉಪನದಿ. ಜಿಲ್ಲೆಯಲ್ಲಿ ಇದರ ಉದ್ದ 29ಕಿಮೀ. ಇದು ಮಾಕಳಿದುರ್ಗಕ್ಕೆ ಪಶ್ಚಿಮದಲ್ಲಿ ಉಜನಿ ಬೆಟ್ಟದಲ್ಲಿ ಹುಟ್ಟಿ ಉತ್ತರಕ್ಕೆ ಹರಿದು ಗೌರಿಬಿದನೂರು ತಾಲ್ಲೂಕಿನಲ್ಲಿ ಸಾಗಿ ಜಿಲ್ಲೆಯ ಎಲ್ಲೆಯನ್ನು ದಾಟುತ್ತದೆ. ಕುಶಾವತಿ ಎಂಬ ಹೆಸರಿನ ಎರಡು ಹೊಳೆಗಳು ಈ ಜಿಲ್ಲೆಯಲ್ಲುಂಟು. ಒಂದು ಪಾಪಘ್ನಿಯನ್ನೂ ಇನ್ನೊಂದು ಚಿತ್ರಾವತಿಯನ್ನೂ ಸೇರುತ್ತದೆ. ಮಾರ್ಕಂಡೇಯ ಇನ್ನೊಂದು ಹೊಳೆ. ಕೋಲಾರ ತಾಲ್ಲೂಕಿನ ವಕ್ಕಲೇರಿ ಬೆಟ್ಟಗಳ ಮೇಲೆ ಮತ್ತು ಮಾಲೂರು ತಾಲ್ಲೂಕಿನ ಟೇಕಲ್ ಬೆಟ್ಟಗಳ ಮೇಲೆ ಹುಟ್ಟುವ ಎರಡು ತೊರೆಗಳು ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಎಂಬಲ್ಲಿ ಸೇರಿ ಮಾರ್ಕಂಡೇಯ ನದಿಯಾಗಿ ದಕ್ಷಿಣದತ್ತ ಹರಿದು ವೃಷಭಾವತಿಯನ್ನು ಸೇರಿಕೊಳ್ಳುವುದು. ಜಿಲ್ಲೆಯಲ್ಲಿ 50ಕಿಮೀ ದೂರ ಈ ನದಿ ಹರಿಯುವುದು. ಇದರ ಜಲಾನಯನ ಪ್ರದೇಶದಲ್ಲಿ 274 ಕೆರೆಗಳಿವೆ. ದಕ್ಷಿಣಪಿನಾಕಿನಿ ನದಿ ಹುಟ್ಟುವುದು ಚೆನ್ನರಾಯನ ಬೆಟ್ಟದಲ್ಲಿ. ಶಿಡ್ಲಘಟ್ಟದವರೆಗೆ ಪೂವರ್ಾಬಿಮುಖವಾಗಿ ಹರಿದು, ದಕ್ಷಿಣಕ್ಕೆ ತಿರುಗಿ, ಬೆಂಗಳೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕೋಲಾರ ಜಿಲ್ಲೆಯಲ್ಲಿ ಇದರ ಉದ್ದ 39ಕಿಮೀ. ಜಲಾನಯನ ಪ್ರದೇಶ 580ಚ.ಕಿಮೀ. ಕಾವೇರಿಯ ಉಪನದಿಗಳಲ್ಲಿ ಒಂದಾದ ಅಕರ್ಾವತಿ ಉದಿಸುವುದು ನಂದಿದುರ್ಗದಲ್ಲಿ. ಇದು ಬೆಟ್ಟವನ್ನಿಳಿದು ಜಿಲ್ಲೆಯನ್ನು ದಾಟಿ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕನ್ನು ಸೇರುತ್ತದೆ. ವೃಷಭಾವತಿ ನದಿ ವಕ್ಕಲೇರಿ ಬೆಟ್ಟದಲ್ಲಿ ಹುಟ್ಟುತ್ತದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಹಾಯ್ದು, ಕೊಪ್ಪ ದೊಡ್ಡ ಕೆರೆಗೆ ನೀರು ಒದಗಿಸಿ, ಕಾಮಸಂದ್ರದ ಬಳಿ ದಕ್ಷಿಣಕ್ಕೆ ಹರಿದು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಹೊಸೂರು ತಾಲ್ಲೂಕನ್ನು ಪ್ರವೇಶಿಸುತ್ತದೆ. ಕಾಮಸಂದ್ರದ ಬಳಿ ಇದಕ್ಕೆ ಕಟ್ಟೆ ಕಟ್ಟಲಾಗಿದೆ. ಜಿಲ್ಲೆಯಲ್ಲಿ ಈ ನದಿಯ ಉದ್ದ 58ಕಿಮೀ. ಜಲಾನಯನ ಪ್ರದೇಶ 347ಚ.ಕಿಮೀ. ಈ ಪ್ರದೇಶದಲ್ಲಿ 264 ಕೆರೆಗಳಿವೆ.  ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಹಲವು ಸಣ್ಣ ಗುಡ್ಡಗಳಿವೆ. ಇಲ್ಲಿಯ ಮುಖ್ಯ ನದಿ ಪಾಲಾರ್. ಇದು ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಿಗೆ ಹರಿದು ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ನೀರು ಒದಗಿಸುತ್ತದೆ. ಇದು ಗುಂಡಲಪಲ್ಲಿಯ ಬಳಿಯಲ್ಲಿ ತಮಿಳುನಾಡಿನ ಉತ್ತರ ಆಕರ್ಾಟ್ ಜಿಲ್ಲೆಯನ್ನು ಪ್ರವೇಶಿಸುತ್ತದೆ. ವಕ್ಕಲಗೇರಿ ಬೆಟ್ಟದ ನೈಋತ್ಯಕ್ಕೆ ಒಂದು ತೊರೆ ಹುಟ್ಟುತ್ತದೆ. ಮಾಲೂರು ತಾಲ್ಲೂಕಿನ ಟೇಕಲ್ ಬೆಟ್ಟದಲ್ಲಿ ಇನ್ನೊಂದು ಉಗಮಿಸುತ್ತದೆ. ಇವೆರಡೂ ಬೂದಿಕೋಟೆಯ ಬಳಿ ಕೂಡುತ್ತವೆ. ಒಂದಾದ ನದಿಗೆ ಮಾರ್ಕಂಡೇಯ ಎಂದು ಹೆಸರು. ಇದು ತಾಲ್ಲೂಕಿನ ದಕ್ಷಿಣದಲ್ಲಿ ಪ್ರವಹಿಸುತ್ತದೆ. ವಕ್ಕಲಗೇರಿ ಬೆಟ್ಟದಲ್ಲಿ ಹುಟ್ಟುವ ವೃಷಭಾವತಿ ನದಿ ದಕ್ಷಿಣ ದಿಕ್ಕಿಗೆ ಹರಿದು ಕೊಪ್ಪ ದೊಡ್ಡ ಕೆರೆಗೆ ನೀರನ್ನು ಒದಗಿಸುತ್ತದೆ. ಇದು ಕಡನಟ್ಟದ ಬಳಿ ತಮಿಳುನಾಡನ್ನು ಪ್ರವೇಶಿಸುತ್ತದೆ.

ಸಸ್ಯ,ಪ್ರಾಣಿ ಮತ್ತು ಖನಿಜ ಸಂಪತ್ತು

           ಕೋಲಾರ ಜಿಲ್ಲೆ ಬಹುಮಟ್ಟಿಗೆ ನೈಸ್ ಕಣಶಿಲೆಯ ಪ್ರದೇಶ. ಶ್ರೀನಿವಾಸಪುರದಿಂದ ದಕ್ಷಿಣಾಬಿಮುಖವಾಗಿ ಜಿಲ್ಲೆಯ ಅಂಚಿನವರೆಗೆ ಸುಮಾರು 6ಕಿಮ  ಅಗಲದ ಶಿಸ್ಟ್ ಕಲ್ಲಿನ ಪಟ್ಟೆಯೊಂದು ಹಬ್ಬಿದೆ. ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ನೆಲ ಅಲ್ಪಸ್ವಲ್ಪ ಏರುತಗ್ಗುಗಳೊಡನೆ ಹರಡಿದ್ದು ಕಣಶಿಲೆಯ ಗುಡ್ಡಬೆಟ್ಟಗಳು ಅಲ್ಲಲ್ಲಿ ಎದ್ದು ನಿಂತಂತಿರುತ್ತವೆೆ. ದೊಡ್ಡ ದೊಡ್ಡ ಬಂಡೆಗಳನ್ನು ಒಂದರ ಮೇಲೊಂದು ವಿಚಿತ್ರಾಕಾರದಲ್ಲಿ ಪೇರಿಸಿದಂತಿರುವ ಈ ಬೆಟ್ಟಗಳು ಕೋಲಾರ ಜಿಲ್ಲೆಯ ವೈಶಿಷ್ಟ್ಯ. ಶಿಸ್ಟ್ ಕಲ್ಲಿನ ಪಟ್ಟೆಯ ಪ್ರದೇಶ ಆಥರ್ಿಕವಾಗಿ ಮುಖ್ಯವಾದುದು. ಇದಕ್ಕೆ ಹೊಂದಿಕೊಂಡಂತೆ ಕ್ವಾಟರ್ೈಟ್, ಬೆಣಚುಕಲ್ಲು ಮುಂತಾದ ವಿವಿಧ ಬಗೆಯ ಶಿಲೆಗಳ ಸಮುದಾಯವಿದೆ. ಪ್ರಸಿದ್ಧವಾದ ಚಿನ್ನದ ಭೂನಿಕ್ಷೇಪಗಳು ಹಬ್ಬಿರುವುದೂ ಇದರ ಜೊತೆಯಲ್ಲೇ. ಇದಲ್ಲದೆ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತರ ದಕ್ಷಿಣ ಅಥವಾ ಪೂರ್ವ ಪಶ್ಚಿಮವಾಗಿ ಹಬ್ಬಿರುವ ಡಾಲರೈಟ್ನ ಹೊಡೆಸಾಲುಗಳೂ ಇವೆ. ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಜಂಗಮಕೋಟೆ ಈ ತ್ರಿಕೋನ ಪ್ರದೇಶದಲ್ಲಿ ಮತ್ತು ಸ್ವಲ್ಪಮಟ್ಟಿಗೆ ಶ್ರೀನಿವಾಸಪುರದ ಬಳಿ ಜಂಬುಮಣ್ಣು ಸಹ ಇದೆ. ಕೋಲಾರದ ಚಿನ್ನದ ಗಣಿಗಳು ಜಗತ್ಪ್ರಸಿದ್ಧ. ಇಲ್ಲಿ ಅಲ್ಪಾಂಶ ಬೆಳ್ಳಿಯೂ ದೊರಕುತ್ತದೆ. ಬಂಗಾರಪೇಟೆ ತಾಲ್ಲೂಕಿನ ರಾಮಸಮುದ್ರದ ಬಳಿ ಕೊರಂಡಂ, ಮಾಲೂರು ತಾಲ್ಲೂಕಿನ ಕರಡಿಬಂಡೆ ಬಳಿ ಸುದ್ದೆಮಣ್ಣು ದೊರಕುತ್ತವೆ.
           ಸ್ವಲ್ಪ ಹೆಚ್ಚು ಮಳೆಯಾಗುವ ಬೆಟ್ಟಗುಡ್ಡಗಳಲ್ಲಿ ಚಿಕ್ಕ ಮರ ಮತ್ತು ಕುರುಚಲು ಕಾಡುಗಳಿವೆ. ಈ ಕಾಡುಗಳಲ್ಲಿ ಬೇವು, ಹುಣಿಸೆ, ಗಂಧ, ಹೊಂಗೆ, ಕರಿಜಾಲಿ, ಬಿಳಿಜಾಲಿ, ಕಗ್ಗಲಿ, ಬನ್ನಿ, ಗುಜ್ಜಲು, ಬಿಲ್ವಾರ, ಚುಜ್ಜಲು, ದಿಂಡಿಗ, ನೇರಳೆ, ಚೆನ್ನಂಗಿ, ಪಚರಿ, ನವಿಲಾದಿ, ದೇವದಾರು, ಆಲ, ಬೇಲ, ಮುತ್ತುಗ ಬೆಳೆಯುತ್ತವೆ. ಸೌದೆ, ಶ್ರೀಗಂಧ ಮುಖ್ಯ ಉತ್ಪನ್ನಗಳು. ನಂದಿಬೆಟ್ಟದ ಕಾಡುಗಳಲ್ಲಿ ಕರಡಿ, ಚಿರತೆ, ಕಾಡುಮೊಲ, ಕಾಡುಹಂದಿ ಮತ್ತು ಜಿಂಕೆಗಳಿವೆ. ದೊಡ್ಡ ನದಿಗಳಿಲ್ಲದಿರುವುದರಿಂದಲೂ ಮಳೆ ಕಡಿಮೆಯಾದ್ದ ರಿಂದಲೂ ಈ ಜಿಲ್ಲೆಯ ವ್ಯವಸಾಯಕ್ಕೆ ಕೆರೆಗಳು ಮುಖ್ಯ ಆಧಾರ. ಜಿಲ್ಲೆಯಲ್ಲಿ ಉತ್ತಮ ವಿದ್ಯುತ್ ಸಂಪರ್ಕಗಳಿರುವುದರಿಂದ, ನೀರಾವರಿ ಪಂಪ್ಗಳೂ ಹೆಚ್ಚು ಸಂಖ್ಯೆಯಲ್ಲಿವೆ. ರಾಗಿ, ಬತ್ತ, ಜೋಳ, ಸಜ್ಜೆ, ಕಾಳುಗಳು, ನೆಲಗಡಲೆ, ಕಬ್ಬು, ಆಲೂಗೆಡ್ಡೆ, ಈರುಳ್ಳಿ ಮತ್ತು ಹೊಗೆಸೊಪ್ಪು ಇಲ್ಲಿಯ ಮುಖ್ಯ ಬೆಳೆಗಳು.

ಕೃಷಿ ಮತ್ತು ನೀರಾವರಿ

            ಬೆಟ್ಟಗುಡ್ಡಗಳಿಂದ ಕೂಡಿದೆ. ಮುಳಬಾಗಲು ಮತ್ತು ಅವನಿ ಬಳಿಯ ಬೆಟ್ಟಗಳು ದೊಡ್ಡವು. ಮುಖ್ಯ ಬೆಟ್ಟಶ್ರೇಣಿಯೊಂದು ಮಧ್ಯದಲ್ಲಿ ಹಬ್ಬಿದ್ದು ಇದರ ಪಶ್ಚಿಮ ಪ್ರದೇಶದಲ್ಲಿ ವಿಶಾಲ ಕಣಿವೆಗಳಿದ್ದರೆ ಪೂರ್ವದಲ್ಲಿ ಕಿರುಕಣಿವೆಗಳಿವೆ. ಪಿಂಗಾಣಿ ಸಾಮಾನು ತಯಾರಿಕೆಗೆ ಉಪಯುಕ್ತವಾಗುವ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣುಂಟು. ವ್ಯವಸಾಯಕ್ಕೆ ಪೂರಕವಾಗುವಂಥ ಹಲವಾರು ಕೆರೆಗಳೂ ಬಾವಿಗಳೂ ಇವೆ. ರಾಗಿ, ಬತ್ತ, ನೆಲಗಡಲೆ ಮುಖ್ಯ ಬೆಳೆಗಳು, ದ್ವಿದಳ ಧಾನ್ಯಗಳನ್ನೂ ಹಣ್ಣುಗಳನ್ನೂ ಬೆಳೆಸುತ್ತಾರೆ. ಪಶುಪಾಲನೆ ಉಂಟು.   ಬೆಟ್ಟಗುಡ್ಡಗಳಿಂದ ಕೂಡಿದೆ. ಮುಳಬಾಗಲು ಮತ್ತು ಅವನಿ ಬಳಿಯ ಬೆಟ್ಟಗಳು ದೊಡ್ಡವು. ಮುಖ್ಯ ಬೆಟ್ಟಶ್ರೇಣಿಯೊಂದು ಮಧ್ಯದಲ್ಲಿ ಹಬ್ಬಿದ್ದು ಇದರ ಪಶ್ಚಿಮ ಪ್ರದೇಶದಲ್ಲಿ ವಿಶಾಲ ಕಣಿವೆಗಳಿದ್ದರೆ ಪೂರ್ವದಲ್ಲಿ ಕಿರುಕಣಿವೆಗಳಿವೆ. ಪಿಂಗಾಣಿ ಸಾಮಾನು ತಯಾರಿಕೆಗೆ ಉಪಯುಕ್ತವಾಗುವ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣುಂಟು. ವ್ಯವಸಾಯಕ್ಕೆ ಪೂರಕವಾಗುವಂಥ ಹಲವಾರು ಕೆರೆಗಳೂ ಬಾವಿಗಳೂ ಇವೆ. ರಾಗಿ, ಬತ್ತ, ನೆಲಗಡಲೆ ಮುಖ್ಯ ಬೆಳೆಗಳು, ದ್ವಿದಳ ಧಾನ್ಯಗಳನ್ನೂ ಹಣ್ಣುಗಳನ್ನೂ ಬೆಳೆಸುತ್ತಾರೆ. ಪಶುಪಾಲನೆ ಉಂಟು.

ಕೈಗಾರಿಕೆಗಳು

         ಮಾಲೂರಿನ ಹತ್ತಿರದಲ್ಲಿ ದೊರೆಯುವ ಮಣ್ಣು ಹೆಂಚು ಮತ್ತು ಇಟ್ಟಿಗೆ ತಯಾರಿಕೆಗೆ ಉತ್ತಮವಾದದ್ದು. ಇಲ್ಲಿ ತಲಾ ನಾಲ್ಕು ಹೆಂಚಿನ ಮತ್ತು ಇಟ್ಟಿಗೆ ಕಾಖರ್ಾನೆಗಳೂ ಇವೆ. ಗೃಹಕೈಗಾರಿಕೆಗಳಾಗಿ ಬೆಂಕಿಪೊಟ್ಟಣ, ಊದುಬತ್ತಿ, ಬೀಡಿ ತಯಾರಿಕೆ, ಜೇನು ಮತ್ತು ಕೋಳಿ ಸಾಕಣೆ, ಹಾಲಿನ ಉತ್ಪಾದನೆ ಮತ್ತು ರೇಷ್ಮೆ ವ್ಯವಸಾಯ ಇವು ಇತರ ಪ್ರಚಲಿತವಿರುವ ಉದ್ಯಮಗಳು. ಇಲ್ಲಿ ತಯಾರಾಗುವ ಇಟ್ಟಿಗೆ ಹೆಂಚುಗಳನ್ನು ಹೊರಜಿಲ್ಲೆಗಳಿಗೂ ಕಳುಹಿಸಲಾಗುವುದು. ಶಿವಾರಪಟ್ಟಣದಲ್ಲಿ ತಯಾರಾಗುವ ಲೋಹದ ಮತ್ತು ಕಲ್ಲಿನ ವಿಗ್ರಹಗಳಿಗೆ ವಿದೇಶಗಳಲ್ಲಿ ಬೇಡಿಕೆ ಇದೆ. ಇಲ್ಲಿ ಬೆಳೆಯುವ ವಿವಿಧ ತರಕಾರಿಗಳನ್ನೂ ಮಲ್ಲಿಗೆ, ಸೇವಂತಿಗೆ, ಗುಲಾಬಿ ಹೂಗಳನ್ನೂ ಹೊರರಾಜ್ಯಗಳಿಗೆ ರವಾನಿಸಲಾಗುತ್ತದೆ. ಇಲ್ಲಿಯ ವ್ಯಾಪಾರ ವಾಣಿಜ್ಯೋದ್ಯಮಗಳಿಗೆ ಸಹಕಾರಿಯಾಗಿರುವ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ.
           ಚಿನ್ನದ ಗಣಿಗಾರಿಕೆ ಜಿಲ್ಲೆಯ ಒಂದು ದೊಡ್ಡ ಉದ್ಯಮ. ಭಾರತದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸೇ.99ನ್ನು ಕೋಲಾರ ಚಿನ್ನದ ಗಣಿಗಳಲ್ಲಿ ತೆಗೆಯಲಾಗುತ್ತಿತ್ತು. ಈಗ ಚಿನ್ನದ ಗಣಿಗಾರಿಕೆ ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತ ಸಕರ್ಾರದ ರಕ್ಷಣಾ ಇಲಾಖೆಯ ಆಡಳಿತ ನಿಯಂತ್ರಣಕ್ಕೊಳಪಟ್ಟ ಭಾರತ್ ಅತರ್್ ಮೂವರ್ಸ್ ಲಿಮಿಟೆಡ್ ಸಂಸ್ಥೆ ಭಾರಿ ಯಂತ್ರೋಪಕರಣಗಳನ್ನು ತಯಾರಿಸುತ್ತಿದೆ. ಗೌರಿಬಿದನೂರಿನಲ್ಲಿ ಸಹಕಾರ ಸಕ್ಕರೆ ಕಾಖರ್ಾನೆ ಸ್ಥಾಪಿತವಾಗಿದೆ. ಹಲವು ಸಣ್ಣ ಕೈಗಾರಿಕೆಗಳು ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿವೆ. ಉಕ್ಕಿನ ಸಾಮಾನುಗಳು, ವ್ಯವಸಾಯೋಪಕರಣಗಳು, ಅಲ್ಯುಮಿನಿಯಂ ಪಾತ್ರೆಗಳು, ಹೆಂಚು, ಇಟ್ಟಿಗೆ, ಸ್ಲೇಟ್, ಸೀಸದಕಡ್ಡಿ, ಸಾಬೂನು, ಅಂಟು, ಸುಗಂಧದ್ರವ್ಯಗಳು, ಔಷದಿಗಳು, ಕಡ್ಡಿಪೆಟ್ಟಿಗೆ, ಪ್ಲಾಸ್ಟಿಕ್ ಸಾಮಾನುಗಳು ಕೊಡ ಕೋಲಾರ ಜಿಲ್ಲೆಯಲ್ಲಿ ತಯಾರಾಗುತ್ತವೆ. ಕಲ್ಲಿಗೆ ಹೊಳಪು ಕೊಡುವುದು, ಬೀಡಿ ಕಟ್ಟುವುದು, ಊದುಬತ್ತಿ ತಯಾರಿಕೆ, ಕೈಮಗ್ಗ, ಕಂಬಳಿ ತಯಾರಿಕೆ, ಗಾಣದಿಂದ ಮತ್ತು ಯಂತ್ರಗಳಿಂದ ಎಣ್ಣೆ ಉತ್ಪಾದನೆ, ಬೆಲ್ಲ ತಯಾರಿಕೆ ಇವೂ ಇವಕ್ಕೆ ಸಂಬಂಧಪಟ್ಟ ಸಣ್ಣಪುಟ್ಟ ಉತ್ಪಾದನೆ ಮತ್ತು ಕೈಕೆಲಸಗಳೂ ಹಲವು ಜನರಿಗೆ ಉದ್ಯೋಗ ದೊರಕಿಸಿವೆ. ಜಿಲ್ಲೆಯಲ್ಲಿ ರೇಷ್ಮೆಉದ್ಯಮ ಉತ್ತಮ ಸ್ಥಿತಿಯಲ್ಲಿದೆ. ಶಿಡ್ಲಘಟ್ಟ ಈ ಉದ್ಯಮಕ್ಕೆ ಪ್ರಸಿದ್ಧವಾಗಿದೆ. ಚರಕದಿಂದ ನೂಲು ತೆಗೆಯುವುದು. ಮಣ್ಣಿನ ಸಾಮಾನುಗಳನ್ನು ತಯಾರಿಸುವುದು. ಚರ್ಮ ಹದ ಮಾಡುವುದು, ಜೇನುಸಾಕಣೆ, ಕೊಟ್ಟಣದ ಅಕ್ಕಿ ತಯಾರಿಕೆ -ಇವು ಇತರ ಕೆಲವು ಸಣ್ಣ ಕೈಗಾರಿಕೆಗಳು. ಆಲೂಗೆಡ್ಡೆ, ಮೆಣಸಿನಕಾಯಿ ಮತ್ತು ಈರುಳ್ಳಿ ಇವನ್ನು ಆಂಧ್ರಪ್ರದೇಶಕ್ಕೂ ಶ್ರೀಲಂಕಾಗೂ ಕಳುಹಿಸುತ್ತಾರೆ. ಉಣ್ಣೆಕಂಬಳಿಗಳೂ ರೇಷ್ಮೆ ಬಟ್ಟೆಗಳೂ ಚರ್ಮದ ವಸ್ತುಗಳೂ ನೆರೆ ರಾಜ್ಯಗಳಿಗೆ ಹೋಗುತ್ತವೆ. ಆಂಧ್ರಪ್ರದೇಶದಿಂದ ಜಿಲ್ಲೆಗೆ ಅಕ್ಕಿಪೂರೈಕೆಯಿದೆ.

ಪೌರಾಣಿಕ ಹಿನ್ನೆಲೆ           ಕೋಲಾರವನ್ನು ಕೋಲಾಹಲಪುರ ,ಕುವಲಾಲ, ಕೋಲಾಳ ಇತ್ಯಾದಿ ನಾಮದೇಯಗಳಿಂದ ಹಿಂದಿನ ಕಾಲದಲ್ಲಿ ಕರೆದಿದ್ದಾರೆ. ಈ ನಾಮದೇಯಗಳ ಉಗಮಕ್ಕೆ ಒಂದು ಕಥಾಕಾರಣವೂ ಇದೆ. ಪೂರ್ವದಲ್ಲಿ ಕಾರ್ತವೀಯರ್ಾಜರ್ುನ ಈ ಪ್ರಾಂತ್ಯದ ದೊರೆಯಾಗಿ ಆಳುತ್ತಿದ್ದ. ಒಮ್ಮೆ ಮಹಷರ್ಿ ಜಮದಗ್ನಿಯ ಆಶ್ರಮಕ್ಕೆ ಬಂದ ಕಾರ್ತವೀಯರ್ಾಜರ್ುನನನ್ನು ಸುರಭಿಯೆಂಬ ಗೋವಿನ ಸಹಾಯದಿಂದ ಮಹಷರ್ಿ ಸತ್ಕರಿಸಿದನು. ಸತ್ಕಾರ ಸ್ವೀಕರಿಸಿದ ದೊರೆ ಆ ಗೋವನ್ನು ತನಗೆ ಕೊಡಬೇಕೆಂದು ಪೀಡಿಸಿದ ಅಲ್ಲದೆ ಬಲತ್ಕಾರವಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದಾಗ ಜಮದಗ್ನಿಯ ಪುತ್ರನಾದ ಪರಶುರಾಮನಿಂದ ಹತನಾದನು. ಅನಂತರ ದೊರೆಯ ಮಕ್ಕಳಿಂದ ಜಮದಗ್ನಿ ಮಹಷರ್ಿ ಹತ್ಯೆ ನಡೆಯುತ್ತದೆ. ಮಹಷರ್ಿಯ ಮಡದಿ ರೇಣುಕಾದೇವಿಯು ಸತಿಸಹಗಮನವಾಗುತ್ತಾಳೆ. ಈ ಎಲ್ಲಾ ಘಟನೆಗಳಿಂದ ಕುಪಿತನಾದ ಪರಶುರಾಮ ಕ್ಷತ್ರಿಯರ ನಾಶದ ಪಣ ತೊಟ್ಟು ಕಾರ್ತವೀಯರ್ಾಜರ್ುನರ ಮಕ್ಕಳನ್ನು ಯುದ್ಧದಲ್ಲಿ ಕೊಲ್ಲುತ್ತಾನೆ.  ಈ ಯುದ್ಧಗಳಿಂದ ಉದ್ಭವವಾದ ಕೋಲಾಹಲ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಮಾರ್ದನಿಗೊಂಡ ಪರಿಣಾಮ ಈ ಪ್ರದೇಶಕ್ಕೆ ಕೋಲಾಹಲವೆಂದು ಹೆಸರು ಬಂತು ಅಲ್ಲದೆ ಸತಿಯಾದ ರೇಣುಕೆಯ ನೆನಪಿಗಾಗಿ ಕೋಲಾರಮ್ಮನ ದೇಗುಲ ನಿಮರ್ಾಣವಾಯಿತು ಎಂದು ಸ್ಥಳೀಯ ಐತಿಹ್ಯವೊಂದು ಮಾಹಿತಿ ನೀಡುತ್ತದೆ. ಮುಂದೆ ಸತ್ತ ಕಾರ್ತವೀರ್ಯನ ವಂಶಜರೇ ಹೈಹಯ ವಂಶ ಚೋಳರೆನಸಿ, ಶ್ರೀಶೈಲ ಪೀಠಾಧೀಶರಿಂದ ಶಾಪ ವಿಮೋಚನೆಯನ್ನು ಪಡೆದರು.
                                               
           ಕೋಲಾರದ ದಕ್ಷಿಣ ದಿಶೆಗಿರುವ ಶತಶೃಂಗ ಪರ್ವತವು ರೇಣುಕಾದೇವಿ ಹಾಗೂ ಪರಶುರಾಮನ ಸಂಬಂಧಿ ಐತಿಹ್ಯಕ್ಕೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮಹಾಭಾರತ ಕಾಲದ ಪಾಂಡವರು ಇಲ್ಲಿ ತಮ್ಮ ವನವಾಸದ ಕೆಳ ಸಮಯವನ್ನು ಈ ಪ್ರದೇಶಗಳಲ್ಲಿ ಕಳೆದರೆಂದು ಹಾಗೂ ರಾಮಾಯಣದ ನಂಟು ಈ ಪ್ರಾಂತ್ಯಕ್ಕಿದೆ ಎಂದು ಹೇಳುತ್ತಾರೆ. ಅಲ್ಲದೆ ಅದೇ ಬೆಟ್ಟದ ಮಡಿಲಲ್ಲಿರುವ ತೇರಹಳ್ಳಿ ಬಳಿ 'ಪಾಂಡವರ ಹಜಾರ'ಎಂಬ ಗುಹೆ ಹಾಗೂ ಕೋಲಾರದಲ್ಲಿದ್ದು ಈ ಬಸ್ ನಿಲ್ದಾಣವಾಗಿರುವ 'ದಶರಥಕುಂಟೆ'ಯನ್ನು ಇದಕ್ಕೆ ನಿದರ್ಶನವಾಗಿ ತೋರುತ್ತಾರೆ. ಸಾಲಿನಲ್ಲಿ ಪಶ್ಚಿಮಕ್ಕಿರುವ ಸೀತಿಬೆಟ್ಟದಲ್ಲಿನ ಶಿವಲಿಂಗವನ್ನು ಸ್ವತಃ ಶ್ರೀಪತಿಯೇ ಪ್ರತಿಷ್ಠಾಪಿಸಿದನೆಂದೂ ಆ ಶ್ರೀಪತಿಯೇ ಮುಂದೆ ಸೀತಿಯಾಯಿತೆಂದು ಹೇಳುತ್ತಾರೆ.
          'ಮೂಡಲಬಾಗಿಲು' ಎಂದು ಕರೆಯುವ ಮುಳಬಾಗಿಲು ತಾಲೂಕಿನ ಆವನಿ ಪ್ರದೇಶ, ಪುರಾಣ ಪ್ರಸಿದ್ಧ ಆವಂತಿಕಾ ಕ್ಷೇತ್ರವಾಗಿತ್ತು. ಇಲ್ಲಿ ರಾಮಾಯಣದ ಕತರ್ೃ ವಾಲ್ಮೀಕಿ ಋಷಿಯು ವಾಸಿಸುತ್ತಿದ್ದನೆಂದು ಪ್ರತೀತಿಯಿದೆ. ಅಲ್ಲದೆ ರಾಮನಿಂದ ಬಹಿಷ್ಕೃತಗೊಂಡ ಸೀತಾದೇವಿಯು ಲವಕುಶರಿಗೆ ಜನ್ಮ ನೀಡಿದ್ದೂ ಬಾಲಕ ಲವಕುಶರು ರಾಮಾಲಕ್ಷ್ಮಣರೊಡನೆ ಕದನ ಮಾಡಿದ್ದೂ ಈ ಆವನಿ ಪ್ರದೇಶವೆಂದೂ ಇಲ್ಲಿ ಅವರು ಯಜ್ಞಕುದುರೆಯನ್ನು ಕಟ್ಟಿದ ಸ್ಥಳವನ್ನು ಈಗಲೂ ಕಾಣಬಹುದು. ತಂದೆ ಮಕ್ಕಳ ಮಾಡಿದ 'ಆಹವ(ಯುಧ್ಧ)ನೀಯ'ಎಂಬ ಹೆಸರೇ ಮುಂದೆ ಆವನಿಯಾಯಿತು ಎಂದು ಸ್ಥಳಿಯ ಐತಿಹ್ಯಗಳು ತಿಳಿಸುತ್ತವೆ. ಅಲ್ಲದೆ ರಾಮ-ಲಕ್ಷ್ಮಣ, ಭರತ-ಶತೃಘ್ನ, ವಾಲಿ-ಸುಗ್ರೀವ, ಲವ-ಕುಶ ಇವರುಗಳ ಹೆಸರುಗಳಲ್ಲಿ ಈ ಕ್ಷೇತ್ರದಲ್ಲಿ ಅನೇಕ ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ಬೆಟ್ಟದ ಮೇಲಿನ ಶಿವಾಲಯವು ದ್ರಾವಿಡ ವರ್ಗಕ್ಕೆ ಸೇರಿದ್ದು ವಿಶಿಷ್ಟ ಕಲಾವೈಭವದಿಂದ ಕೂಡಿದೆ. ಇದೇ ತಾಲೂಕಿನ ಕುರುಡುಮಲೆಯು ತ್ರಿಪುರಾಂತನನ ಸಂಹಾರಕ್ಕೆ ಯೋಜನೆಯನ್ನು ರೂಪಿಸಲು ದೇವಾನುದೇವತೆಗಳು ಇಲ್ಲಿ ಕೂಡಿದರು. ಇದನ್ನು ಕೌಂಡಿನ್ಯಗಿರಿ ಎಂದು ಕರೆಯುತ್ತಿದ್ದರು. ಆ ರೀತಿ 'ಕೂಡುಮಲೆಯು' ಇಂದು ಕುರುಡುಮಲೆಯಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ವೃತಾಸುರನನ್ನು ಸಂಹರಿಸಲು ಎಲ್ಲಾ ದೇವತೆಗಳು ವಿನಾಯಕನನ್ನು ಪೂಜಿಸಿದ್ದರು ಎಂಬ ಪ್ರತೀತಿಯೂ ಇದೆ. ಮಾಲೂರು ತಾಲೂಕಿನ ಚಿಕ್ಕತಿರಿಪತಿಯು ಜನಮೇಜಯರಾಯ ಯಾಗ ಮಾಡಿದ ಸ್ಥಳವೆಂದು ಸ್ಥಳೀಯ ಪುರಾಣವೊಂದು ಮಾಹಿತಿ ನೀಡುತ್ತದೆ.
   
ನೂತನ ಶಿಲಾಯುಗ ಸಂಸ್ಕೃತಿ

          ಮಾನವನ ಸಾಂಸ್ಕೃತಿಕ ಪಥದ ಅನುಪಮ ಹಂತ-ನೂತನ ಶಿಲಾಯುಗ. ಈ ಹಂತದಲ್ಲಿ ಮಾನವ ಅಲೆಮಾರಿ ಬದುಕಿನಿಂದ ಸ್ಥಿರವಾಸ್ತವ್ಯದ ಬದುಕಿಗೆ ಬಡ್ತಿ ಪಡೆದ. ಮಡಿಕೆ-ಕುಡಿಕೆಗಳ ತಯಾರಿಕೆ, ಶಿಲಾ ಉಪಕರಣಗಳು. ನಾಜೂಕಿನ ವಿವಿಧ ಕಲ್ಲಿನ ಪರಕರಗಳು ಮರ ,ಮೂಳೆ ಮತ್ತು ಕಟ್ಟಿಗೆಗೆ ಕಟ್ಟಿ ಬಳಸಲಾಗುತ್ತಿತ್ತು. ಇಂತಹ ಆದಿಮಾನವನ ಪರಿಕರಗಳು ಹಾಗೂ ನೆಲೆಯು ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗೊರವನಹಳ್ಳಿಯಲ್ಲಿ ಪತ್ತೆಯಾಗಿವೆ. ಈ ಸಾಂಸ್ಕೃತಿಕ ಘಟ್ಟಕ್ಕೆ ಸೇರಿದ ಸುಮಾರು 200 ನೆಲೆಗಳು ರಾಜ್ಯಾಂದ್ಯಂತ ಕಂಡು ಬಂದಿವೆ. ಅವುಗಳಲ್ಲಿ ಜಿಲ್ಲೆಯ ಶ್ರೀನಿವಾಸಪುರದಲ್ಲಿ 1916ಕ್ಕೂ ಹಿಂದೆಯೇ ಪತ್ತೆಹಚ್ಚಿ ವರದಿ ಮಾಡಿದ ಕೀತರ್ಿ ರಾಬಟರ್್ ಬ್ರೂಸ್ ಪೂಟ್ ಅವರಿಗೆ ಸಲ್ಲಬೇಕು. ದಕ್ಷಿಣ ಭಾರತದಲ್ಲೇ ವಿಶಾಲನೆಲೆಯೆಂದು ಪಾತ್ರವಾಗಿರುವ ಮಾಲೂರು ತಾಲೂಕಿನ ಬನಹಳ್ಳಿ ಭಾರತದ ಪುರಾತತ್ವ ಇಲಾಖೆಯ ನಕಾಶೆಯಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಅಲ್ಲದೆ ಕೋಲಾರ ತಾಲೂಕಿನ ಅಂತರಗಂಗೆ, ತೇರಹಳ್ಳಿ, ಪಾಪರಾಜನಹಳ್ಳಿ, ಅರಾಭಿಕೊತ್ತನೂರು, ಕಡಗತ್ತೂರು, ಕೆಂದಟ್ಟಿ, ಗುಟ್ಟಹಳ್ಳಿ ಹಾಗೂ ವೆಂಕಟಾಪುರ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ತೂಕಲ್ಲು, ಸೂಲಿಕುಂಟೆ ಹಾಗೂ ಹುನಗುಂದ.ಮಾಲೂರು ತಾಲೂಕಿನ ಕುಪ್ಪಳ್ಳಿ, ತರ್ನಹಳ್ಳಿ, ದೊಡ್ಡಕಡತೂರು, ನಾಗನಾಳ ಹಾಗೂ ಧನಮಟ್ನಹಳ್ಳಿಗಳಲ್ಲಿ ಈ ಘಟ್ಟದ ಅವಶೇಷಗಳು ಪತ್ತೆಯಾಗಿವೆ. ಟೇಕಲ್ ಬೆಟ್ಟದ ಬುಡದಲ್ಲಿ ಶಿಲಾಯುಗದ ಶಿಲಾ ಉಪಕರಣಗಳು ಲಭ್ಯವಾಗಿವೆ.ಅಲ್ಲದೆ ಬರಿಗೈಯಿಂದ ಮಾಡಿದ ಕೈಮಡಕೆಗಳೂ ಅವುಗಳ ಮೇಲೆ ಮಾಡಿದ ಕಾವಿ ಮಣ್ಣಿನ ತೆಳು ಲೇಪನ ಪರಿಕರಗಳು ಹಾಗೂ ಪ್ರಾಣಿಗಳ ಅಸ್ತಿಪಂಜರಗಳು ದೊರೆತಿವೆ. ವಿಸ್ತೃತವಾದ ಕ್ಷೇತ್ರಕಾರ್ಯ ಹಾಗೂ ಉತ್ಖನನಗಳು ಕೈಗೊಂಡರೆ  ಮತ್ತಷ್ಟು ಮಾಹಿತಿಗಳು ದೊರೆಯಬಹುದು.

ಶಿಲಾ-ತಾಮ್ರಯುಗ ಸಂಸ್ಕೃತಿ

           ನೂತನ ಶಿಲಾಯುಗದ ಜೊತೆಜೊತೆಗೆ ವಿಸೃತಗೊಂಡ ಸಾಂಸ್ಕೃತಿಕ ಹಂತವಿದು. ಶಿಲಾಯುಧಗಳ ಬದಲಿಗೆ ಲೋಹದ ಆಯುಧಗಳು ಚಾಲ್ತಿಗೆ ಬಂದ ಘಟ್ಟವಿದು. ನೀಳಚೆಕ್ಕೆ, ಸಣ್ಣ ಮಣ್ಣಿನ ಕುಡಿಕೆಗಳ ಬಳಕೆ ಹಾಗೂ ಸುಧಾರಿತ ಬೇಸಾಯಕ್ರಮಗಳು ಸಂಸ್ಕೃತಿಗೆ ಪ್ರವೇಶ ಪಡೆದವು. ಆದರೆ ಸಂಸ್ಕೃತಿಗೆ ಸಂಬಂಧಿಸಿದ ನೆಲೆಗಳಾವುವು ಈ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಆದರೂ ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಹರಪ್ಪಾ ಮತ್ತು ಮೊಹೆಂಜೋದಾರೋ ಪಟ್ಟಣಗಳಲ್ಲಿ ಲಭ್ಯವಾದ ಚಿನ್ನದ ಪುರಾವಸ್ತುಗಳಲ್ಲಿ ಅಡಕವಾಗಿರುವ ಬೆಳ್ಳಿಯ ಪ್ರಮಾಣವನ್ನು ಆಧರಿಸಿ ಅದನ್ನು ಕೋಲಾರದ ಗಣಿ ಪ್ರದೇಶದಿಂದ ಅಮದು ಮಾಡಿಕೊಂಡಿರಬಹುದು ಎಂದು 1928ರಷ್ಟು ಹಿಂದೆಯೆ ವಿದೇಶಿ ವಿದ್ವಾಂಸ ಸರ್ ಜಾನ್ ಮಾರ್ಷಲ್ ತಕರ್ಿಸಿದ್ದರು. ಆದರೆ ಇದನ್ನು ಪುನರ್ ವಿವೇಚಿಸುವ ಅನಿವಾರ್ಯತೆಯಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಬೃಹತ್ ಶಿಲಾಯುಗ ಸಂಸ್ಕೃತಿ

         ಮಾನವರು ವಿಭಿನ್ನ ಬಗೆಯ ಸಮಾಧಿಗಳ ನಿಮರ್ಿತಿಗೆ ಬೃಹತ್ ಗಾತ್ರದ ಕಲ್ಲುಗಳನ್ನು ಬಳಸಿದ ಹಂತವಾಗಿದೆ. ಅಲ್ಲದೆ ಕಪ್ಪು, ಕೆಂಪು ಬಣ್ಣದ ಮಡಕೆಗಳನ್ನು ಬಳಸುವುದು ಈ ಸಂಸ್ಕೃತಿಯ ವಿಶೇಷವಾಗಿದೆ  ವಿಸ್ತೃತವಾದ  ಕಬ್ಬಿಣದ ಬಳಕೆ ಚಾಲ್ತಿಯಲ್ಲಿದುದರ ಕಾರಣದಿಂದ 'ಕಬ್ಬಿಣಯುಗ'ವೆಂದು ಕರೆಯುವವರು. ಈಸಂಸ್ಕೃತಿಯು ಕ್ರಿ.ಪೂ. 1500 ರಿಂದ ಕ್ರಿ.ಪೂ. 250ರವರಿಗೆ ಚಾಲ್ತಿಯಲ್ಲಿತ್ತು. ಈ ಕಾಲದ ಜನವಾಸ್ತವ್ಯದ ಸ್ಥಳಗಳನ್ನು 'ನೆಲೆ'ಗಳೆಂದು ಶವಸಂಸ್ಕಾರದ ತಾಣಗಳನ್ನು 'ಗೋರಿ'(ಸಮಾಧಿ)ಗಳೆಂದು ಕರೆಯಲಾಗಿದೆ. ಇಂತಹ ನೆಲೆಗಳು ಕೋಲಾರ ತಾಲೂಕಿನ ಕಜ್ಜಿಕಲ್ಲಹಳ್ಳಿ, ಕಡಗತ್ತೂರು, ಕೆಂದಟ್ಟಿ, ಕೊರಟಿ ಮಲ್ಲಾಂಡ್ಲಹಳ್ಳಿ, ಕೊಂಡರಾಜನಹಳ್ಳಿ, ತಿರುಮಲಕೊಪ್ಪ, ಪಟ್ಣ, ವೆಂಕಟಾಪುರ ಹಾಗೂ ಹಾರೋಹಳ್ಳಿ. ಬಂಗಾರಪೇಟೆ ತಾಲೂಕಿನ ಕದಿರೇನಹಳ್ಳಿ, ಕಿರುಮಂದೆ, ತೊಂಲಕೊಪ್ಪ, ಭಟ್ರಕೊಪ್ಪ, ಮರಗಲ್ಲು, ಬೂದಿಕೋಟೆ, ರಾಮಸಾಗರ, ಸಂತೆಪಲ್ಲಿ ಹಾಗೂ ಹುನಕುಂದ. ಮಾಲೂರು ತಾಲೂಕಿನ ಬನಹಳ್ಳಿ, ದೊಡ್ಡಕಡತೂರು, ನಾಗನಾಳ, ಹೊಗೇರಿ ಹೊಂಗೇನಹಳ್ಳಿ ಹಾಗೂ ಹರಹೊಲ್ಲಿ. ಮುಳಬಾಗಿಲು ತಾಲೂಕಿನ ಆವನಿ, ಶ್ರೀನಿವಾಸಪುರ ತಾಲೂಕಿನ ಹರಳಕುಂಟೆಗಳಲ್ಲಿ ಈ ಘಟ್ಟದ ನೆಲೆಗಳು ಪತ್ತೆಯಾಗಿವೆ.
            ಈ ಸಂಸ್ಕೃತಿಯ ಶಿಲಾಗೋರಿ(ಸಮಾಧಿ)ಮಾದರಿಗಳು ಕೋಲಾರ ತಾಲೂಕಿನ ಉಡಪನಹಳ್ಳಿ, ಗಂಗಾಪುರ, ಚೊಕ್ಕಾಪುರ, ನಂದಂಬಳ್ಳಿ, ಕರುಡುಬಂಡೆಹೊಸಹಳ್ಳಿ, ದೊಡ್ಡವಲ್ಲಬಿ, ಕುರುಗಲ್ಲು, ಕೀಲುಕೋಟೆ, ಕಲ್ಲಹಳ್ಳಿ, ದಿನ್ನೆಹೊಸಹಳ್ಳಿ, ದಿಣ್ಣೇಹಳ್ಳಿ, ದೊಡ್ಡಯ್ಯಾರು, ಚಂಜಮಲೆ, ಜೂಹಳ್ಳಿ, ತೇರಹಳ್ಳಿ, ತ್ಯಾವನಹಳ್ಳಿ, ಪಜರ್ೇನಹಳ್ಳಿ, ಬೆಟ್ಟಕಲ್ಲಹಳ್ಳಿ, ಬಂಡೂರಕೃಷ್ಣಾಪುರ, ಮದ್ದೇರಿ, ಮಲಿಯಪ್ಪನಹಳ್ಳಿ, ವೆಲಗಲಬುರ್ರೆ, ಶೆಟ್ಟಿವಾರಹಳ್ಳಿ, ಸುಂಗೊಂಡಹಳ್ಳಿ, ಹಾಲೇರಿ, ಹುಲಿಕಲ್ಲು, ಹೊಗರಿ, ಹೊಗರಿಗೊಲ್ಲಹಳ್ಳಿ, ಬಳಗೆರೆ ಹಾಗೂ ಚೋಳಘಟ್ಟ. ಬಂಗಾರಪೇಟೆ ತಾಲೂಕಿನ ಅಕಿಂಟ್ಲಗೊಲ್ಲಹಳ್ಳಿ, ಸೂಲಿಕುಂಟೆ, ಮುಗಳಬೆಲೆ, ಮರಗಲ್ಲು, ಕೆಲಮಂಗಲ, ಕರೆಬೆಲೆ, ಅಡಂಪಲ್ಲಿ, ಅಲ್ಲಿಕುಂಟ, ಉಕ್ಕುಂದಿ, ಉಪಾಸಪುರ, ಕನುಮನಹಳ್ಳಿ, ಕನ್ನುಂಬೆಲೆ, ಕುಂದರಸನಹಳ್ಳಿ, ಕೀಲುಕಂಬಳಿ, ಕೊತ್ತೂರು, ಕೋಡಿಹಳ್ಳಿ, ಗೊರವನಹಳ್ಳಿ, ಗುಟ್ಲೂರು, ಚಿಕ್ಕೇನಹಳ್ಳಿ, ಜಂಗಮನಹಳ್ಳಿ, ತಮಟಮಾಕನಹಳ್ಳಿ, ತೋಪನಹಳ್ಳಿ, ದೇಶಿಹಳ್ಳಿ, ಮುಂತಾದವು. ಮಾಲೂರು ತಾಲೂಕಿನ ಹೊಸಹಳ್ಳಿ, ಮಲಿಯಪ್ಪನಹಳ್ಳಿ, ಸೋಮಸಂದ್ರ, ಹನುಮಂತಪುರ ಮುಂತಾದವು.ಮುಳಬಾಗಿಲು ತಾಲೂಕಿನ ಅರಹಳ್ಳಿ, ಜನ್ನನಾಗಾವರ, ಎನ್.ವೆಂಕಟಾಪುರ, ಕಿಳುಹೊಳಲಿ, ಕುರುಬರಹಳ್ಳಿ, ಕೊತ್ತೂರು ಮುಂದಾದವು. ಶ್ರೀನಿವಾಸಪುರ ತಾಲೂಕಿನ ಶ್ರೀನಿವಾಸಪುರ ಹಾಗೂ ಹೊಸಹಳ್ಳಿಗಳಲ್ಲಿ ಪತ್ತೆಯಾಗಿವೆ. ಅಲ್ಲದೆ ಕೋಲಾರ ತಾಲೂಕಿನ ಗರುಡನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ ನೂರಕ್ಕೂ ಹೆಚ್ಚು ಕಲ್ಗೋರಿಗಳಿವೆ.
          ಕೆಲವು ಪ್ರದೇಶಗಳಲ್ಲಿ ಸಮಾಧಿಗಳಿಗೆ ಶಿಲಾವೃತ್ತಗಳ ಜೊತೆಗೆ ಕಲ್ಗುಪ್ಪೆ ಸಮಾಧಿಗಳು, ಶವಗುಣಿಗಳು ಕಂಡಿಕೋಣೆ ಕಲ್ಗೋರಿಗಳು ಹಾಗೂ ನಿಲುಸುಗಲ್ಲು ಸಮಾಧಿಗಳು ಪತ್ತೆಯಾಗಿವೆ. ಕೋಲಾರ ತಾಲೂಕಿನ ಅರಾಭಿಕೊತ್ತನೂರು, ಸುಲೂರು, ಕೆಂದಂಟ್ಟಿ ಹಾಗೂ ಕೋಲಾರ. ಬಂಗಾರಪೇಟೆ ತಾಲೂಕಿನ ತೂಕಲ್ಲು ,ತ್ಯಾಪನಹಳ್ಳಿ ,ಮುಂತಾದ ಕಡೆ. ಮಾಲೂರು ತಾಲೂಕಿನ ಅಯ್ಯಪ್ಪನಹಳ್ಳಿ, ಉಪ್ಪಾರಹಳ್ಳಿ ಮುಂತಾದ ಕಡೆಗಳಲ್ಲಿ ಈ ಮಾದರಿಯ ಸಮಾಧಿಗಳನ್ನು ಪುರಾತತ್ವಜ್ಞರು ಪತ್ತೆ ಮಾಡಿದ್ದಾರೆ. ಕೋಲಾರ ತಾಲೂಕಿನ ಕೊತ್ತಪಾಳ್ಯ ಗತ್ತೂರು, ಬಂಗಾರಪೇಟೆ ತಾಲೂಕಿನ ಅಕ್ಷಿತಲಗೊಲ್ಲಹಳ್ಳಿ, ಗಟ್ಟಿಕಾಮದೇನಹಳ್ಳಿ, ಗಾಜಗ, ಗೊದಮಂಡೆ, ಗೊಡುಗುಮಂಡೆ, ನಾಗಕುಪ್ಪ ಮುಂತಾದ ಕಡೆ. ಮಾಲೂರು ತಾಲೂಕಿನ ಮಂಡಕಲ್ಲು, ಓಬಳಾಪುರಗಳಲ್ಲಿ ಹಾಗೂ ಶ್ರೀನಿವಾಸಪುರ ತಾಲೂಕಿನ ರಾಘವಪಲ್ಲಿಗಳಲ್ಲಿ ಈ ಶವಗುಣಿಗಳು ಕಂಡುಬಂದಿವೆ. ಕೋಲಾರ ತಾಲೂಕಿನ ಕೆಂದಟ್ಟಿ, ಗರುಡನಹಳ್ಳಿ ಗುಟ್ಟಿಹಳ್ಳಿ. ಬಂಗಾರಪೇಟೆ ತಾಲೂಕಿನ ಕನ್ನಂಬೆಲೆ, ಗೊಡಗುಮಂಡೆ, ತ್ಯಾಪನಹಳ್ಳಿ. ಮಾಲೂರು ತಾಲೂಕಿನ ಕೃಷ್ಣಾಪುರ ಶ್ರೀಕಂಠಪುರ, ಹಾಲಹಳ್ಳಿ ಮಲಕನಹಳ್ಳಿ ವೀರಕಪುರ, ವೆಂಕಟಾಪುರ ಹಾಗೂ ಮುಳಬಾಗಿಲು ತಾಲೂಕಿನ ಆನೆಗುತ್ತಹಳ್ಳಿಗಳಲ್ಲಿ ಕಂಡಿಕೋಣೆ ಸಮಾಧಿಗಳು ಪತ್ತೆಯಾಗಿವೆ. ಕೋಲಾರ ತಾಲೂಕಿನ ಕೆಂದಟ್ಟಿ, ಗರುಡನಹಳ್ಳಿ, ಬಂಡೂರುಕೃಷ್ಣಾಪುರ ಹಾಗೂ ಸುಲೂರುಗಳಲ್ಲಿ ನಿಲುಸುಗಲ್ಲು ಸಮಾಧಿಗಳು ಕಂಡುಬಂದಿವೆ.
            ಇವು ಅಂದಿನ ಮಾನವನ ಅಂತ್ಯಸಂಸ್ಕಾರದ ರೀತಿನೀತಿಗಳು, ಆಥರ್ಿಕ, ಸಾಮಾಜಿಕ ಹಾಗೂ ಧಾಮರ್ಿಕ ನಂಬಿಕೆ ಆಚರಣೆಗಳನ್ನು ತಿಳಿಯಪಡಿಸುವ ಮುಖ್ಯ ಆಧಾರಗಳಾಗಿವೆ.

ಪ್ರಾಗಿತಿಹಾಸಕಾಲದ ರೇಖಾ ವರ್ಣಚಿತ್ರಗಳು

           ಕೋಲಾರ ಜಿಲ್ಲೆ ,ಶ್ರೀನಿವಾಸಪುರ ತಾಲೂಕಿನ ಜಿಂಕಲವಾರಪಲ್ಲಿ ಬಳಿಯ, ಸುಣ್ಣಕಲ್ಲು ಬೆಟ್ಟಗಳಲ್ಲಿನ 'ದ್ಯಾವರಕೊಂಡ' (ಚಿತ್ತಾರಾಲಗುಟ್ಟು)ಎಂದು ಕರೆಯಲ್ಪಡುವ ಬೆಟ್ಟದಲ್ಲಿ ಕೆಲವು ನೈಸಗರ್ಿಕ ಗುಹೆಗಳಿವೆ. ಆ ಗುಹೆಗಳಲ್ಲಿ ಕೆಂಪು ಹಾಗೂ ಬಿಳಿಯ ವರ್ಣದಲ್ಲಿ ಗುಹೆಯ ಮೇಲ್ಚಾವಣಿಗೆ ಕೆಲವು ರೇಖಾಚಿತ್ರಗಳನ್ನು ಬಿಡಿಸಲಾಗಿದೆ.  ಸುಮಾರು ನಲವತ್ತು ವರ್ಷಗಳ ಹಿಂದೆ ಕೃಷ್ಣಾನಂದ ಕಾಮತ್, ಬಿ.ಜಿ.ಎಲ್.ಸ್ವಾಮಿ ಹಾಗೂ ಡಾ.ಆರ್.ಶೇಷಶಾಸ್ತ್ರಿ ಅವರಗಳು ಭೇಟಿ ನೀಡಿ ಪರಿಶೀಲಿಸಿದ್ದವೆಂದು, ಅವು ಇತಿಹಾಸ ಪೂರ್ವಕಾಲದವವೆಂದು ಶಾಸನತಜ್ಞರಾದ ಡಾ.ಆರ್.ಶೇಷಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ. ಇವು ಕಾಲಗರ್ಭದಲ್ಲಿ ಕಳೆದು ಹೋಗುವ ಮುನ್ನ ಇತಿಹಾಸತಜ್ಞರು ಹಾಗೂ ಪುರಾತತ್ವ ಇಲಾಖೆ ಇದರ ಕಡೆ ಗಮನ ಹರಿಸಿ ಪರಿಶೀಲಿಸಿದರೆ ಮತ್ತಷ್ಟು ವಿಶೇಷ ಮಾಹಿತಿಗಳು ಹೊರಬರಬಹುದು.
                                       
ಇತಿಹಾಸ ಆರಂಭಕಾಲ

         ಇತಿಹಾಸಪೂರ್ವಕಾಲ ಹಾಗೂ ಇತಿಹಾಸ ಕಾಲಗಳ ನಡುವಿನ ಸಂಕ್ರಮಣ ಕಾಲದ ಈ ಘಟ್ಟವನ್ನು 1954ರ ತನಕ 'ಆಂಧ್ರಸಂಸ್ಕೃತಿ',ಶಾತವಾಹನ ಕಾಲ' ಎಂದು ಕರೆಯಲಾಗುತ್ತಿತ್ತು. ಆದಿ ಮಾನವ ಅಲೆಮಾರಿ ಬದುಕನ್ನು ಬಿಟ್ಟು ಗ್ರಾಮೀಣ ಬದುಕಿಗೆ ಬದ್ಧನಾಗಿ ಅಕ್ಷರಕಲೆಯಲ್ಲಿ ದಾಪುಗಾಲು ಹಾಕುತ್ತಿದ್ದ. ಸುಟ್ಟ ಮಡಕೆಗಳು, ಅವುಗಳ ಮೇಲೆ ಕಲಾತ್ಮಕ ಚಿತ್ತಾರಗಳನ್ನು ಬಿಡಿಸುವ ಕಲೆಯಲ್ಲಿ ಪಳಗಿದ್ದ. ಇಟ್ಟಿಗೆಯಿಂದ ಕಟ್ಟಿದ ಕಟ್ಟಡಗಳು ಈ ಘಟ್ಟದ ಮುಖ್ಯ ವಿಶೇಷಗಳಾಗಿವೆ. ಅಂತಹ ಅವಶೇಷಗಳು ಕನರ್ಾಟಕದಾಂದ್ಯಂತ ಕಂಡುಬರುತ್ತವೆ.
        ಈ ಘಟ್ಟದ ಹಲವಾರು ನೆಲೆಗಳು ಕೋಲಾರ ಜಿಲ್ಲೆಯಲ್ಲೂ ಕಂಡು ಬಂದಿವೆ. ಕೋಲಾರ ತಾಲೂಕಿನ ಉರಟ ಅಗ್ರಹಾರ ಹಾಗೂ ಗುಟ್ಟಹಳ್ಳಿ. ಮಾಲೂರು ತಾಲೂಕಿನ ದಿಂಬ, ಬನಹಳ್ಳಿ, ಧನಮತ್ತನಹಳ್ಳಿ, ರೆಪ್ಪರಹಳ್ಳಿ, ಬೂದಿಹಳ್ಳಿ ಹಾಗೂ ಶಿವಾರಪಟ್ಟಣ, ಮುಳಬಾಗಿಲು ತಾಲೂಕಿನ ಅಂಟ್ಲಕಲ್ಲು, ಉಪ್ಪಾರಹಳ್ಳಿ, ಚೀಕೂರು, ತಾವರೆಕೆರೆ, ನಂಗಲಿ, ಬುಡಿದೇರು ಹಾಗೂ ಮುದಿಗೆರೆ. ಶ್ರೀನಿವಾಸಪುರ ತಾಲೂಕಿನ ಹರಳಕುಂಟೆ ಮುಂತಾದ ಕಡೆಗಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ವಸತಿನೆಲೆಗಳೆಂದು ಗುತರ್ಿಸಲಾಗಿದೆ. ಈ ನೆಲೆಗಳಲ್ಲಿ ಕೆಂಪು ಹಾಗೂ ಕಂದು ಬಣ್ಣದ ಚೂರುಗಳು ಮಾತ್ರ ಪತ್ತೆಯಾಗಿವೆ. ಆದರೆ ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವಂತವು ಬರಿ ಸ್ವತಂತ್ರ ನೆಲೆಗಳಾಗಿರುವುದು ಗಮನಾರ್ಹ.
                                     
ಚಾರಿತ್ರಿಕ ಹಿನ್ನೆಲೆ

     ಕೋಲಾರ ಜಿಲ್ಲೆಯ ಮುಳಬಾಗಿಲು  ತಾಲ್ಲೂಕು ಮೊದಲು ಬಾಣರ ಆಡಳಿತಕ್ಕೆ ಸೇರಿತ್ತು. 10ನೆಯ ಶತಮಾನದ ಕೊನೆಯಲ್ಲಿ ಪಲ್ಲವರ ಕೈಸೇರಿತು. ಉತ್ತರದಲ್ಲಿ ವೈಡುಂಬರರು ಆಳುತ್ತಿದ್ದರು. ಮುಂದೆ ಕೋಲಾರದ ಒಂದು ಭಾಗವಾಗಿ ವಿಜಯನಗರದ ಆಡಳಿತಕ್ಕೆ ಸೇರಿತು. ಲಕ್ಕಣ್ಣಡಣ್ಣಾಯಕ ಮತ್ತು ಮಾದನ್ನದಣ್ಣಾಯಕ ಎಂಬವರು ಇಲ್ಲಿ ಆಳುತ್ತಿದ್ದು ಮುಂದೆ ಹೊಸಕೋಟೆಯ ತಿಮ್ಮೇಗೌಡನ ಆಡಳಿತಕ್ಕೆ ಒಳಪಟ್ಟಿತು. 1768ರಲ್ಲಿ ಕರ್ನಲ್ ಕ್ಯಾಂಪ್ಬೆಲ್ ಇದನ್ನು ಇಂಗ್ಲೀಷರ ಆಡಳಿತಕ್ಕೆ ಸೇರಿಸಿದ.
              ಕೋಲಾರ ಜಿಲ್ಲೆಯು ವಿಜಯನಗರದ ಪತನಾನಂತರ ಸಥಳೀಯ ಸಾಮಂತರು. ಪಾಳೇಗಾರರೂ ಆಗಿದ್ದ ತಾಡಿಗೋಳ್ಳು, ಆವತಿ, ಸಾದಲಿ, ಹೊಸಕೋಟೆ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಸುಗುಟೂರು, ಗುಮ್ಮನಾಯಕನಪಾಳ್ಯ.ಮುಳಬಾಗಿಲು ತಾಲೂಕಿನ ಹರಪನಾಯಕನಹಳ್ಳಿ ಮುಂತಾದ ಪಾಳೆಪಟ್ಟುಗಳು ಜಿಲ್ಲೆಯ ಬಹುಭಾಗವನ್ನು ಆಳಿದವು. ಇವರ ಆಡಳಿತದ ಸಮಯದಲ್ಲಿ ಹಲವಾರು ಕೆರಕಟ್ಟೆಗಳು ನಿಮರ್ಾಣಗೊಂಡ ಬಗ್ಗೆ ಶಾಸನಗಳು ಮಾಹಿತಿಯನ್ನು ಒದಗಿಸುತ್ತವೆ.ಬಿಜಾಪುರ ಆದಿಲ್ ಷಾಹಿಗಳ ಆಡಳಿತಕ್ಕೆ ಒಳಪಡುವ ಮೂಲಕ ಮರಾಠರ ಪ್ರಭಾವಕ್ಕೂ ನಂತರ ಮುಘಲ್ರ ಅದಿಪಥಯಕ್ಕೂ ಒಳಗಾಯಿತು. ಮೈಸೂರು ಅರಸರು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರ ಹಿಡಿತಕ್ಕೂ ಸಿಕ್ಕಿತ್ತು. ಅಲ್ಪಕಾಲ ಮೂಳಬಾಗಿಲು ತಾಲೂಕಿನ ಹರಪನಟಯಕನಹಳ್ಳಿ ಬೀಸ್ಸೇಗೌಡ ಹಾಗೂ ಅವರ ಸಂತತಿಯವರು ಈ ಜಿಲ್ಲೆಯ ಅಧಿಪತ್ಯವನ್ನು ವಹಿಸಿದ್ದರು. ಓಪ್ಪಿವಿನ ಪತನಾನಂತರ ಮದ್ರಾಸ್ ಪ್ರೆಸ್ಸಿಡೆನ್ಸಿ ನಿದರ್ೇಶನದ ಪ್ರಕಾರ ಮದ್ರಾಸ್, ಮೈಸೂರು ಹಾಗೂ ಮಲಬಾರ್ ಪ್ರವಾಸವನ್ನು ಕೈಗೊಂಡ ಬುಕನಾನ್ ತನ್ನ ಪ್ರವಾಸಿ ಕಥನದಲ್ಲಿ  ಕೋಲಾರ ಪರಿಸರದ ಬಗ್ಗೆ  ಮಹತ್ವದ ಮಾಹಿಯನ್ನು ನೀಡಿದ್ದಾನೆ. ಟಿಪ್ಪಿವಿನ ಮರಣಾನಂತರ ಮೈಸೂರು ಅರಸರು ಹಾಗೂ ಕಮೀಷನರುಗಳ ಅವಧಿಯಲ್ಲಿ ಇನಾಂದಾರ್, ಜೋಡಿದಾರ್ ಹಾಗೂ ಜಹಗೀರ್ದಾರ್ಗಳ ಸ್ಥಳೀಯ ಆಡಳಿತವನ್ನು ನಡೆಸಿದರು.
                                        
                                                                                     ಸ್ವಾತಂತ್ರ್ಯ ಹೋರಾಟಕ್ಕೆ ಕೋಲಾರ ಜಿಲ್ಲೆ ತನ್ನದೆ ಕೊಡುಗೆಯನ್ನು ನೀಡಿದೆ. ರಾಷ್ಟ್ರಪಿತ ಮಾಹಾತ್ಮಗಾಂದೀಜೀಯವರು ಕೋಲಾರಕ್ಕೆ ಬಂದು ಸ್ವಾತಂತ್ರ್ಯದ ಆಂದೋಲನದ ಕಾವನ್ನು ಹೆಚ್ಚಿಸಿದ್ದರು ಅಲ್ಲದೆ ಹರಿಜನನಿಧಿಯನ್ನು ಸಂಗ್ರಹಿಸಿದ್ದರು. 'ಜವಾಬ್ದಾರಿ ಸಕರ್ಾರ ರಚನೆ'ಗಾಗಿ ಜರಿಗಿದ 'ಮೈಸೂರು ಚಲೋ'ದ ಮುಂದಾಳತ್ವವನ್ನು ವಹಿಸಿದವರೂ ಕೆ.ಚಿ.ರೆಡ್ಡಿ, ಕೆ.ಪಟ್ಟಾಬಿರಾಮನ್, ಟಿ.ರಾಮಾಚಾರ್, ಕೆ.ಸಂಪಂಗಿರಾಮಯ್ಯ, ಎನ್.ಚಿ.ನಾಗಯ್ಯರೆಡ್ಡಿ, ಎನ್.ಚಿ.ತಿಪ್ಪಾರೆಡ್ಡಿ, ಎಂವಿ.ಕೃಷ್ಣಪ್ಪ, ಟಿ.ಚೆನ್ನಯ್ಯ ಮುಂತಾದವರು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸುವಹಿಸಿದರು. ಭಾರತದ ಗಣರಾಜ್ಯದಲ್ಲಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳೂ ಆಗಿ ಅಧಿಕಾರ ವಹಿಸಿಕೊಂಡ ಕೆ.ಚೆಂಗಲರಾಯರೆಡ್ಡಿಯವರು ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯವರು.-ಹೀಗೆ ನಾಡಿನ ಸಂಸ್ಕೃತಿಗೆ ಕೋಲಾರ ಜಿಲ್ಲೆ ಇತಿಹಾಸ ಪೂರ್ವ ಕಾಲದಿಂದ ಏಕೀಕೃತ ಕನರ್ಾಟಕ ರೂಪ ಪಡೆಯವ ತನಕ ತನ್ನದೆ ಅನುಪಮ ಕೊಡುಗೆಯನ್ನು ನೀಡಿದೆ.

ಸಾರಿಗೆ ಸಂಪರ್ಕ ಮತ್ತು ವ್ಯಾಪಾರ ಮತ್ತು ವಾಣಿಜ್ಯ

   ಕೋಲಾರ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಚೆನ್ನಾಗಿ ಬೆಳೆದಿದೆ. ರಾಷ್ಟೀಯ ಹೆದ್ದಾರಿ ನಂ. 4 ಮತ್ತು 7 ಮತ್ತು ರಾಜ್ಯ ಹೆದ್ದಾರಿಗಳು ಇಲ್ಲಿ ಹಾದು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರತಿ ಹಳ್ಳಿಗೂ ತಾಲ್ಲೂಕಿಗೂ ಜಾಲದಂತೆ ರಸ್ತೆ ಮಾರ್ಗಗಳು ಹೆಣೆದುಕೊಂಡಿವೆ. ಸಕರ್ಾರಿ ಮತ್ತು ಖಾಸಗಿ ಬಸ್ಸುಗಳೂ ಕಾರುಗಳೂ ಬಂಡಿಗಳೂ ಜನರನ್ನೂ ಸರಕುಗಳನ್ನೂ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸುತ್ತವೆ. ಹಿಂದೂಪುರ - ಬೆಂಗಳೂರು ರೈಲುಮಾರ್ಗ ಗೌರಿಬಿದನೂರು ಮೂಲಕವೂ ಚೆನ್ನೈ - ಬೆಂಗಳೂರು ರೈಲುಮಾರ್ಗ ಬಂಗಾರಪೇಟೆಯ ಮೂಲಕವೂ ಸಾಗುತ್ತವೆ. ಇನ್ನೊಂದು ರೈಲುಮಾರ್ಗ ಬೆಂಗಳೂರಿನಿಂದ ನಂದಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರಗಳ ಮೂಲಕ ಬಂಗಾರ ಪೇಟೆಗೆ ಸಾಗುತ್ತದೆ. ಬಂಗಾರಪೇಟೆಯಿಂದ ಚಿನ್ನದ ಗಣಿ ಪ್ರದೇಶಕ್ಕೆ ರೈಲ್ವೆ ಸಂಪರ್ಕವುಂಟು
    ಇಲ್ಲಿ ಉಕ್ಕಿನ ಪೀಠೋಪಕರಣ ಮತ್ತು ಕೈಮಗ್ಗದ ಬಟ್ಟೆ ತಯಾರಿಸುತ್ತಾರೆ. ಕೈಗಾರಿಕಾ ಸಹಕಾರ ಸಂಘಗಳು ನಿಯಂತ್ರಿತ ಮಾರುಕಟ್ಟೆ ಮತ್ತು ವಾಣಿಜ್ಯ ಬ್ಯಾಂಕುಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಲಭ್ಯಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮಮಟ್ಟದ ಔಷಧಾಲಯಗಳು ಹಾಗೂ ಕೆಲವು ಆಯುವರ್ೇದ ಮತ್ತು ಯುನಾನಿ ಔಷಧಾಲಯಗಳು ಇವೆ.

ಧಾಮರ್ಿಕ ಹಿನ್ನೆಲೆ:
ಪ್ರೇಕ್ಷಣೀಯ ಸ್ಥಳಗಳು      ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
 ಬೆಂಗಳೂರು-ಕಡಪ ಪ್ರಾಂತೀಯ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಶ್ರೀನಿವಾಸಪುರ ಮುಖಾಂತರ ಹಾದುಹೋಗುವುದು. ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀನಿವಾಸಪುರದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿರುವ ಹೆಬ್ಬೆಟ್ಟ ಒಂದು. ಇಲ್ಲಿ ಗಂಗರ ದೊರೆ ಮಾರಸಿಂಹನ ಕಾಲದ (10ನೆಯ ಶತಮಾನ) ಯಂತ್ರದ ಕಲ್ಲು (ಗೋಕಲ್ಲು) ಇದ್ದು ಇದನ್ನು ತೊಳೆದ ನೀರು ಪಶುಗಳಿಗೆ ಔಷಧವಾಗಿ ರೋಗಗಳನ್ನು ಗುಣಪಡಿಸುತ್ತದೆಂಬ ನಂಬಿಕೆಯಿದೆ.
       ಶ್ರೀನಿವಾಸಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕೋಲಾರದ ಈಶಾನ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 22,926. ಪಾಪನಪಲ್ಲಿ ಈ ಊರಿಗಿದ್ದ ಹಿಂದಿನ ಹೆಸರು. ದಿವಾನ್ ಪೂರ್ಣಯ್ಯನವರು ತಿರುಪತಿಯಿಂದ ಹಿಂದಿರುಗುತ್ತ ಈ ಊರಿಗೆ ಬಂದು, ತಮ್ಮ ಮಗ ಶ್ರೀನಿವಾಸಮೂತರ್ಿಗಳ ಹೆಸರಿನಲ್ಲಿ ಇದಕ್ಕೆ ಶ್ರೀನಿವಾಸಪುರವೆಂದು ನಾಮಕರಣ ಮಾಡಿದರು. ಈ ಊರಿನ ಪೂರ್ವಕ್ಕೆ ಸು. 3 ಕಿ.ಮೀ. ದೂರದಲ್ಲಿ ಹರಳುಕೋಟೆ ಎಂಬ ಪುರಾತನ ಪಟ್ಟಣವಿತ್ತೆಂದು ಪ್ರತೀತಿ. ಬಾಣರಸ, ವಿಕ್ರಮಾದಿತ್ಯ ಮತ್ತು ಪಲ್ಲವ-ಇವರಿಗೆ ಸಂಬಂಧಿಸಿದ ಶಾಸನಗಳು ಈ ಊರಿನಲ್ಲಿ ದೊರೆತಿವೆ.
            ಮಾಲೂರು ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಚಿಕ್ಕತಿರುಪತಿ ಒಂದು ಪುಣ್ಯಕ್ಷೇತ್ರ. ಮಡಿವಾಳ ಗ್ರಾಮದಲ್ಲಿ ಚೋಳರ ಕಾಲದ ಗಂಗಾಧರೇಶ್ವರ ದೇವಾಲಯವಿದೆ. ಮಾಲೂರಿನ ಉತ್ತರಕ್ಕಿರುವ ತೋರಣಹಳ್ಳಿಯಲ್ಲಿ ದನಗಳಿಗೆ ಬರುವ ಚಪ್ಪೆಜಾಡ್ಯವನ್ನು ವಾಸಿಮಾಡುವ ದೇವರೆಂಬ ನಂಬಿಕೆಯುಳ್ಳ ಸಪ್ಪಲಮ್ಮನ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಪುಷ್ಯಮಾಸದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಶಿವಾರಪಟ್ಟಣದಲ್ಲಿ ಗಂಗದೊರೆ ಶ್ರೀಪುರುಷನ ಕಾಲದ ಶಿಲಾಶಾಸನಗಳಿವೆ. ಚಿಕ್ಕಕಡತೂರಿನಲ್ಲಿ ಪ್ರಾಚೀನ ಕಾಲದ ವೀರರ ಗುಡಿಗಳಿವೆ. ಟೇಕಲ್ ಪವಿತ್ರ ಸ್ಥಳ. ಮಾಸ್ತಿ ಹೋಬಳಿ ಕೇಂದ್ರ ಮತ್ತು ದೊಡ್ಡ ಗ್ರಾಮ. ಈ ತಾಲ್ಲೂಕಿನ ವಿರೂಪಾಕ್ಷಪುರದಲ್ಲಿ ವಿಜಯನಗರದ ದೊರೆ ಎರಡನೆಯ ದೇವರಾಯನ ಕಾಲದ ವಿರೂಪಾಕ್ಷ ದೇವಾಲಯವಿದೆ.
           ವಕ್ಕಲೇರಿ ಬೆಟ್ಟದಲ್ಲಿರುವ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲ್ಲಿಗೆ ಹೂವನ್ನು ಮಾಲೂರಿನ ತೋಟಗಳಿಂದ ಕಳುಹಿಸುತ್ತಿದ್ದುದರಿಂದ ಈ ಊರಿಗೆ ಹಿಂದೆ ಮಲ್ಲಿಕಾಪುರ ಅಥವಾ ಮಲ್ಲಿಗೆಪಟ್ಟಣವೆಂಬ ಹೆಸರಿತ್ತು ಎನ್ನಲಾಗಿದೆ. ಈ ಊರು 16ನೆಯ ಶತಮಾನದಲ್ಲಿ ಹೊಸಕೋಟೆಯ ನಾಯಕ ತಿಮ್ಮೇಗೌಡನ ಅಧೀನದಲ್ಲಿದ್ದು ಅನಂತರ ಬಿಜಾಪುರದ ಆಡಳಿತಕ್ಕೆ ಸೇರಿದ್ದು ಹಲವು ಮನ್ಸಬ್ದಾರರಿಗೆ ಜಹಗೀರಿಯಾಗಿ ನೀಡಲಾಗಿತ್ತು. ಮರಾಠರ ಕೈವಶವಾದ ಈ ಊರನ್ನು ರಜಪೂತ ಜಮೀನ್ದಾರ ಹ್ರಿದರಾಮ್ಸಿಂಗ್ ತನ್ನ ವಶಪಡಿಸಿಕೊಂಡು ವಿಸ್ತರಿಸಿ ಊರಿಗೆ ಮಾಲೂರು ಎಂದು ಹೆಸರಿಸಿದ. ಹೈದರ್ ಆಕ್ರಮಿಸಿಕೊಳ್ಳುವ ತನಕ ಈ ಊರನ್ನು ಹ್ರಿದರಾಮ್ ಸಿಂಗನ ವಂಶಜರೇ ಆಳುತ್ತಿದ್ದರು. ಶಂಕರನಾರಾಯಣಸ್ವಾಮಿ, ಧರ್ಮರಾಯಸ್ವಾಮಿ, ಬೀರೇಶ್ವರಸ್ವಾಮಿ ಮತ್ತು ಕೋದಂಡರಾಮಸ್ವಾಮಿ ದೇವಾಲಯಗಳು ಇಲ್ಲಿಯ ಪ್ರಮುಖ ಗುಡಿಗಳು. ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಪುಷ್ಕರಿಣಿ ಇದೆ. ಫಾಲ್ಗುಣಮಾಸದಲ್ಲಿ ಶಂಕರನಾರಾಯಣಸ್ವಾಮಿಗೆ ಏಳು ದಿನಗಳು ವಿಶೇಷ ಪೂಜೆ ಮತ್ತು ರಥೋತ್ಸವ ನಡೆಯುತ್ತದೆ. ಚೈತ್ರಮಾಸದಲ್ಲಿ ಈ ಊರಿನಲ್ಲಿ ನಡೆಯುವ ಧರ್ಮರಾಯಸ್ವಾಮಿ ಕರಗ ಪ್ರಸಿದ್ಧ.
           ಬಂಗಾರಪೇಟೆ ತಾಲೂಕಿನ ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
                                           
            ಬೇತಮಂಗಲ, ಬೂದಿಕೋಟೆ, ಹುನಕುಂದ ಇವು ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ಸ್ಥಳಗಳು. ಬೇತಮಂಗಲ ಕೋಲಾರಕ್ಕೆ 29 ಕಿಮೀ. ದಕ್ಷಿಣದಲ್ಲಿ ಪಾಲಾರ್ ನದಿಯ ಬಲದಂಡೆಯ ಮೇಲಿದೆ. ಇದೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ದೊಡ್ಡ ಕೆರೆಯ ಮೇಲೆ ದೋಣಿ ವಿಹಾರ ಸೌಕರ್ಯವಿದೆ. 1864ರವರೆಗೆ ಈ ಊರೇ ತಾಲ್ಲೂಕಿನ ಮುಖ್ಯಸ್ಥಳವಾಗಿತ್ತು. ಬಂಗಾರಪೇಟೆ-ಮುಳಬಾಗಿಲು ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಬಾಣ ದೊರೆ ಬಹುಶಃ ಸ್ಥಾಪಿಸಿದ ವಿಜಯಾದಿತ್ಯಮಂಗಲವೇ ಬೇತಮಂಗಲವಾಗಿದೆಯೆನ್ನಲಾಗಿದೆ. ನೊಳಂಬರ ಕಾಲದ ಎರಡು ಶಿಲಾಶಾಸನಗಳು ಇಲ್ಲಿಯ ಗಂಗಮ್ಮ ದೇವಾಲಯದಲ್ಲಿವೆ. ಇಲ್ಲಿರುವ ಕೆರೆ ಯಾವಾಗ ನಿಮರ್ಾಣವಾಯಿತೆಂಬುದು ಗೊತ್ತಿಲ್ಲ. ಇರಿವ ನೊಳಂಬ 950ರಲ್ಲಿ ಇದನ್ನು ದುರಸ್ತು ಮಾಡಿಸಿದ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ವಿಜಯೇಂದ್ರ ದೇವಾಲಯ ಇಲ್ಲಿಯ ಪ್ರಮುಖ ದೇವಸ್ಥಾನ. ಬೂದಿಕೋಟೆ ಬಂಗಾರಪೇಟೆಗೆ 13 ಕಿಮೀ. ದಕ್ಷಿಣದಲ್ಲಿದೆ. ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ. ಇದೊಂದು ಹೋಬಳಿ ಕೇಂದ್ರ. ಸಂಸ್ಕೃತದ ವಿಭೂತಿಪುರ ಎಂಬುದು ಬೂದಿಕೋಟೆ ಎಂದಾಗಿದೆಯೆನ್ನಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣನ ಶಾಸನವಿದೆ. ಇದು ಹೈದರ್ ಅಲಿಯ ಜನ್ಮಸ್ಥಳ. ಹೈದರನ ತಂದೆ ಫತೆ ಮಹಮ್ಮದನಿಗೆ ಇದು ಜಹಗೀರಾಗಿತ್ತು. ಶಿರಾದ ಸುಬೇದಾರನಿಂದ ಘೌಜುದಾರನಾಗಿ ನೇಮಕಗೊಂಡಾಗ ಅವನಿಗೆ ಈ ಜಹಗೀರನ್ನು ನೀಡಲಾಗಿತ್ತು. ಕೋಟೆಯೊಳಗೆ ಒಂದು ತಿಳಿನೀರಿನ ತೊರೆಯಿದೆ. ಇಲ್ಲಿ ವೆಂಕಟರಮಣ ಮತ್ತು ಸೋಮೇಶ್ವರ ದೇವಾಲಯಗಳಿವೆ. ಬಂಗಾರಪೇಟೆಗೆ 13 ಕಿಮೀ ಈಶಾನ್ಯದಲ್ಲಿರುವ ಹುನಕುಂದದಲ್ಲಿ ಅನೇಕ ಶಾಸನಗಳಿವೆ. ಊರಿನ ಬಳಿಯ ಗುಡ್ಡದ ಮೇಲೆ ಶಿವನ ದೇಗುಲವಿದೆ. ಬಂಗಾರಪೇಟೆಯ ಉತ್ತರದಲ್ಲಿರುವ ಯಲಬುಗರ್ಿಯಲ್ಲಿ ವೆಂಕಟರಮಣ ದೇವಾಲಯವಿದೆ.
           ಕೋಲಾರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಂತರಗಂಗೆ ಒಂದು. ಹಿಂದೂ ಜನರಿಗೆ ಅತ್ಯಂತ ಪವಿತ್ರವಾದ ತೀರ್ಥಗಳಲ್ಲಿ ಗಂಗೆ ಬಹಳ ಪ್ರಸಿದ್ಧವಾದುದು. ಸಮಗ್ರ ಭಾರತದಲ್ಲಿ ಆ ಹೆಸರಿನ ಹಲವು ತೀರ್ಥಗಳನ್ನು ನಾವು ಕಾಣಬಹುದು: ಪಾತಾಳಗಂಗೆ, ಶಿವಗಂಗೆ, ಸಿದ್ಧಗಂಗೆ, ದೇವಗಂಗೆ ಮೊದಲಾದುವುಗಳು ಇದಕ್ಕೆ ಉದಾಹರಣೆಗಳು. ಅಂತರಗಂಗೆ ಎಂಬುದು ಇದೇ ವರ್ಗದ ಒಂದು ತೀರ್ಥ. ಈ ಹೆಸರಿನ ಒಂದು ತೀರ್ಥ ಕೋಲಾರಕ್ಕೆ ಸಮೀಪದಲ್ಲಿರುವ ಶತಶೃಂಗಪರ್ವತದಲ್ಲಿದೆ. ಇಲ್ಲಿ ಸ್ನಾನಪೂಜಾದಿಗಳು ಬಹಳ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ. ಬೆಂಗಳೂರು ಜಿಲ್ಲಾ ಕುದೂರಿನಲ್ಲಿಯೂ ಈ ಹೆಸರಿನ ಒಂದು ತೀರ್ಥವಿದೆ.
                                         
             ಅತ್ಯಂತ ಪ್ರಾಚೀನ ದೇವಾಲಯಗಳು ಬೆಟ್ಟದ ನೈಋತ್ಯದಲ್ಲಿ ಒಂದು ದೊಡ್ಡ ಪ್ರಾಂಗಣದ ಮಧ್ಯೆ ಇವೆ.  ಇವೆಲ್ಲವೂ ಶೈವ ದೇವಾಲಯಗಳು.  ಮಧ್ಯದಲ್ಲಿ ಪಾರ್ವತೀ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ಸುಗ್ರೀವೇಶ್ವರ, ಅಂಜನೇಶ್ವರ ಮುಂತಾದ ಗುಡಿಗಳಿವೆ. ಇವುಗಳಲ್ಲಿ ಲಕ್ಷ್ಮಣೇಶ್ವರ ಗುಡಿ ಅತ್ಯಂತ ಸುಂದರ ಕಟ್ಟಡ.  ಗರ್ಭಗೃಹ, ಅಂತರಾಳ ಮತ್ತು ನವರಂಗವಿರುವ ಈ ಗುಡಿಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು-ಇವುಗಳಿಂದ ಅಲಂಕೃತವಾದ ಆರು ಪಟ್ಟಿಕೆಗಳಿವೆ.  ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುಗರ್ಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ (ಪಿಲ್ಯಾಸ್ಟರ್) ಛೇದಿಸಲ್ಪಟ್ಟ ಎತ್ತರವಾದ ಭಿತ್ತಿಯಿದೆ. ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮದರ್ಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಸಿವೆ.  ಒಳಭಾಗದ ನವರಂಗದಲ್ಲಿ, ಮಧ್ಯೆ ಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ.  ರಚನಾರೀತಿಯಲ್ಲಿ, ಲಕ್ಷ್ಮಣೇಶ್ವರ ದೇವಾಲಯ ಕಂಚಿಯ ದೇವಾಲಯಗಳ ಸಂಪ್ರದಾಯದಿಂದ ಬೆಳೆದು ಬಂದ ನೊಳಂಬವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಪ್ರತೀಕವಾಗಿದೆ.  ವಾಸ್ತುಶೈಲಿಯಿಂದ, ಮತ್ತು ಸ್ಥಳೀಯ ಶಾಸನಗಳ ಸಾಂದಭರ್ಿಕ ಮಾಹಿತಿಗಳಿಂದ ಈ ದೇವಾಲಯ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಟ್ಟಲಾಗಿರಬೇಕೆಂದು ಹೇಳಬಹುದು.  ಆದರೆ ದೇವಾಲಯದ ಮೇಲುಭಾಗದಲ್ಲಿರುವ ಗೋಪುರ ಮುಂತಾದ ಇಟ್ಟಿಗೆಯ ಸೇರ್ಪಡೆಗಳು ಸುಮಾರು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆದವುಗಳು.  ಶತ್ರುಘ್ನೇಶ್ವರ, ಅಂಜನೇಶ್ವರ ಮತ್ತು ಭರತೇಶ್ವರ ದೇವಾಲಯಗಳೂ ಸುಮಾರು ಲಕ್ಷ್ಮಣೇಶ್ವರದ ಮಾದರಿಯವೇ. ಕಾಲದಲೂ ಇವುಗಳಲ್ಲಿ ಬಹಳಷ್ಟು ಅಂತರವಿರಲಾರದೆಂಬುದು ಈ ಕೆಲವು ದೇವಾಲಯಗಳಲ್ಲಿ ಕಂಡುಬಂದಿರುವ ನೊಳಂಬ ಮತ್ತು ಗಂಗರ ಶಾಸನಗಳಿಂದ ಸಿದ್ಧವಾಗುತ್ತದೆ.  ಇದೇ ಕಾಲದ ರಾಮೇಶ್ವರ ದೇವಾಲಯ ದ್ರಾವಿಡಶೈಲಿಯ ಮೂಲ ಶಿಖರವನ್ನು ಇನ್ನೂ ಉಳಿಸಿಕೊಂಡಿದೆ.  ಈ ದೇವಾಲಯದಲ್ಲಿ ಮೂಲಗರ್ಭಗುಡಿ ಮತ್ತು ನವರಂಗದ ಕೆಲವು ಭಾಗಗಳು ರಚನಾರೀತಿಯಲ್ಲಿ ಇತರ ಸಮಕಾಲೀನ ದೇವಾಲಯಗಳಂತೆಯೇ ಇದ್ದರೂ ಮುಂದೆ 12-13ನೆಯ ಶತಮಾನದ ಕೆಲವು ಸೇರ್ಪಡೆಗಳಿಂದಾಗಿ ಕಟ್ಟಡದ ಅಂದಕ್ಕೆ ಸ್ವಲ್ಪ ಕುಂದು ಬಂದಿದೆ.  ಮಧ್ಯದಲ್ಲಿರುವ ಪಾರ್ವತೀ ದೇವಾಲಯ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿರುವ ಸಾಮಾನ್ಯ ಕಟ್ಟಡ.  ಇಲ್ಲಿಯ ವಾಸ್ತುರಚನೆಯಲ್ಲಾಗಲೀ ಶಿಲ್ಪಗಳಲ್ಲಾಗಲೀ ಈ ಹಿಂದಿನ ದೇವಾಲಯಗಳಲ್ಲಿರುವ ಪ್ರಬುದ್ದತೆ ಕಂಡುಬರುವುದಿಲ್ಲ.  13ನೆಯ ಶತಮಾನದಲ್ಲಿ ಕೋಲಾರ ಪ್ರದೇಶದಲ್ಲಿ ಆಳುತ್ತಿದ್ದ ತಮಿಳು ಗಂಗ ಅರಸು ಇಳವಂಜಿ ವಾಸುದೇವರಾಯ ಇದನ್ನು ಕಟ್ಟಿಸಿರಬಹುದೆಂದು ಊಹಿಸಲು ಆಧಾರಗಳಿವೆ.  ದೇವಾಲಯದ ಒಳಗೆ ಇಳವಂಜಿ ವಾಸುದೇವರಾಯ ಮತ್ತು ಅವನ ತಮ್ಮನದೆಂದು ಹೇಳಲಾಗುವ ಎರಡು ಭಕ್ತ ವಿಗ್ರಹಗಳಿವೆ. ಈ ದೇವಾಲಯಗಳ ಗುಂಪಿನಲ್ಲೇ ಇರುವ ಕಾಮಾಕ್ಷಿ ಮತ್ತು ಇತರ ಗುಡಿಗಳು ಅನಂತರದ ಕಟ್ಟಡಗಳು.  ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ.  ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ.  ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ.  ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದುದು. ಬೆಟ್ಟದ ಮೇಲುಗಡೆ ಇರುವ ಸೀತಾಪಾರ್ವತೀ ಗುಡಿ ಹೊರನೋಟಕ್ಕೆ ಈಚಿನ ಬಹುಸಾಮಾನ್ಯ ಕಟ್ಟಡದಂತೆ ಕಂಡರೂ ಒಳಭಾಗ ಪುರಾತನವಾದುದು.  ಇದು ನೊಳಂಬ ಅರಸರ ಕಾಲದ (9-10ನೆಯ ಶತಮಾನ) ಗುಹಾದೇವಾಲಯವೆಂದು ಕಾಣುತ್ತದೆ.  ಆವನಿ ಗ್ರಾಮದಲೂ ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ.       
              ಕೋಲಾರ ಹೋಬಳಿ ಗ್ರಾಮಗಳಲ್ಲದೆ ಬೆಳ್ಳೂರು, ಗರುಡನಪಾಳ್ಯ, ಪಾಪರಾಜನ ಹಳ್ಳಿ, ಸೀತಿ, ಸುಗಟೂರು ತೇರುಹಳ್ಳಿ, ವಾಣರಾಸಿ, ವಕ್ಕಲೇರಿ, ವೇಮಗಲ್ಲು ಮೊದಲಾದವು ಈ ತಾಲ್ಲೂಕಿನಲ್ಲಿನ ಮುಖ್ಯ ಸ್ಥಳಗಳು. ಗರುಡನಪಾಳ್ಯದ ಬಳಿಯ ಚಿಕ್ಕಗುಡ್ಡದಲ್ಲಿ ಸ್ಥಳೀಯವಾಗಿ ಪಾಂಡವರ ಗುಡಿಗಳೆಂದು ಕರೆಯುವ ಬೃಹತ್ ಶಿಲಾಸಮಾದಿಗಳಿವೆ. ಕೋಲಾರದ ಬಳಿಯ ಬೆಟ್ಟವೊಂದರ ಮೇಲಿರುವ ಪಾಪರಾಜನ ಹಳ್ಳಿಯಲ್ಲಿ ಒಂದು ಶಿವ ದೇವಾಲಯ ಮತ್ತು ಉಸ್ಮಾನ್ ಅಲಿಯ ದರ್ಗ ಅಲ್ಲದೆ ಭೂತಗೌಡನ ಗವಿ, ಮುಗಲ್ ಸುಬೇದಾರನ ಕೋಟೆ ಮೊದಲಾದವು ಇವೆ. ಮತ್ತೊಂದು ಬೆಟ್ಟದ ಮೇಲೆ ತೇರುಹಳ್ಳಿ ಗ್ರಾಮದಲ್ಲಿ ಸು.12-13ನೆಯ ಶತಮಾನದ ಗಂಗಾಧರೇಶ್ವರನ ಬೃಹತ್ ದೇವಾಲಯ ಮತ್ತು ಕೆಲವು ಪ್ರಾಗೈತಿಹಾಸಿಕ ಅವಶೇಷಗಳು ಇವೆ. ಬೆಳ್ಳೂರು ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ಹೊಯ್ಸಳರ ಕಾಲದಲ್ಲಿ ವಿಷ್ಣುವರ್ಧನ ಚತುವರ್ೆದಿ ಮಂಗಲಂ ಎಂದು ಪ್ರಸಿದ್ಧವಾಗಿದ್ದ ಶ್ರೀವೈಷ್ಣವ ಅಗ್ರಹಾರವಾಗಿತ್ತು. ಮಣವಾಲ ಮಹಾಮುನಿಯ ಶಿಷ್ಯರಾದ ಪ್ರತಿವಾದಿ ಭಯಂಕರರ ಅಣ್ಣ ಇಲ್ಲಿಯವರೆಂದು ಪ್ರತೀತಿ. ಇಲ್ಲಿ ರಾಮದೇವಾಲಯವಿದೆ. ವೆಂಕಟಾಪುರದಲ್ಲಿ ವೆಂಕಟರಮಣ ದೇವಾಲಯವಿದೆ. ವಕ್ಕಲೇರಿಯ ಬೆಟ್ಟದ ಮೇಲೆ ಪ್ರಾಚೀನ ಮಾರ್ಕಂಡೇಶ್ವರ ದೇವಾಲಯವಿದೆ. ಪ್ರತಿ ಮಾಘ ಮಾಸದಲ್ಲಿ ಸು.20 ದಿನಗಳ ಕಾಲ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ವಾಣರಾಸಿಯಲ್ಲಿ ಸ್ಥಳೀಯ ವೀರ ಇರಳಪ್ಪನ ದೇವಾಲಯವಿದೆ. ಪ್ರತಿ ಚೈತ್ರಮಾಸದಲ್ಲಿ ಇಲ್ಲೂ ದೊಡ್ಡ ಜಾತ್ರೆ ನಡೆಯುತ್ತವೆ. ಹೋಳೂರಿನಲ್ಲಿ ಲಕ್ಷ್ಮೀನಾರಾಯಣ ದೇವಾಲಯವಿದೆ. ಮಾಘ ಶುದ್ಧ ಪಾಡ್ಯಮಿಯಂದು ಜಾತ್ರೆ ನಡೆಯುತ್ತದೆ. ವೇಮಗಲ್ಲಿನಲ್ಲಿರುವ ದಗರ್ಾ ಪ್ರಸಿದ್ಧವಾದುದು.
                                    
                                                                  ಕುರುಡಮಲೆ ಇತಿಹಾಸಪ್ರಸಿದ್ಧ ಗ್ರಾಮ. ಇಲ್ಲಿ ಅನೇಕ ಪ್ರಾಚೀನ ಅವಶೇಶಗಳು ದೊರಕಿವೆ. ಈ ಪ್ರದೇಶ ಚೋಳರ ಆಳ್ವಿಕೆಗೆ ಬಳಪಟ್ಟಿದ್ದಾಗ ಇದೊಂದು ಪ್ರಮುಖಸ್ಥಳವಾಗಿದ್ದುದರಿಂದ ಇಲ್ಲಿ ಕೆಲವು ಉತ್ತಮ ದೇವಾಲಯಗಳನ್ನು ನಿಮರ್ಿಸಲಾಗಿತ್ತು. ಸ್ಥಳ ಪುರಾಣದ ರೀತ್ಯಾ ಇದು ಕೌಂಡಿನ್ಯಕ್ಷೇತ್ರ. ಕೃತ, ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಇದಕ್ಕೆ ಗಣೇಶಗಿರಿ, ಕೂಟಾಚಲ ಮತ್ತು ಯಾದವಾಚಲಗಳೆಂಬ ಹೆಸರುಗಳಿದ್ದುವೆಂದೂ ಕಲಿಯುಗದಲ್ಲಿ ಕೌಂಡಿನ್ಯಕ್ಷೇತ್ರವಾಗಿದೆಯೆಂದೂ ಪ್ರತೀತಿಯಿದೆ. ಮತ್ತೊಂದು ಐತಿಹ್ಯದ ರೀತ್ಯಾ ಕುರುಡುಮಲೆ ಎಂಬುದು ಕೂಡುಮಲೆಯ ರೂಪಾಂತರ. ಸಕಲದೇವತೆಗಳೂ ಮಹಾಗಣಪತಿಯ ಅರ್ಚನೆಗಾಗಿ ಇಲ್ಲಿ ಸೇರುತ್ತಿದ್ದುದರಿಂದ ಇವಕ್ಕೆ ಕೂಡುಮಲೆಯೆಂದು ಹೆಸರಾಯಿತಂತೆ. ಕುರುಡುಮಲೆ ಮಹಾಗಣಪತಿ ಮಂದಿರ ಇಲ್ಲಿಯ ಪ್ರಾಚೀನತಮ ದೇವಾಲಯ. ಬಹುಶಃ ಚೋಳರ ಕಾಲದಲ್ಲಿ ನಿಮರ್ಿತವಾದ ಈ ಮಂದಿರ ಬಹಳ ಸುಂದರಕಲಾಕೃತಿ. ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇದರ ಜೀಣರ್ೋದ್ಧಾರವಾಯಿತು. ಈ ದೇವಾಲಯದ ಮುಂದಿರುವ, ಗಣಪತಿಯ ವಾಹನವಾದ ಮೂಷಿಕದ ಶಿಲ್ಪ ಹಸಿರುಕಲ್ಲಿನಲ್ಲಿ ಮಾಡಲಾದ ಬೃಹದ್ಗಾತ್ರದ ಉತ್ತಮ ಕಲಾಕೃತಿ. ದೇವಾಲಯದ ಗರ್ಭಗೃಹದ (20' ಉದ್ದ, 1 1/2'  ಅಗಲ ಮತ್ತು  16'  ಎತ್ತರ) ಮುಂದಿನ ಹದಿನಾರು ಮೂಲೆಗಳ ಕಂಬಗಳ ಮೇಲಿನ ಶಿಲ್ಪಗಳು ಸಾಧಾರಣವಾಗಿವೆ. ಮಹಾಗಣಪತಿಯ ವಿಗ್ರಹ 2' ಎತ್ತರದ ಪೀಠದಮೇಲೆ 1 1/2 ' ಎತ್ತರದ ಆಸನದಲ್ಲಿ ಕುಳಿತಿದ್ದು 8 1/2' ಎತ್ತರವಿದೆ. ಪಾಶಾಂಕುಶ  ಹಸ್ತನಾದ ಗಣಪತಿ ತನ್ನ ಕೈಯಲ್ಲಿಯ ಮೋದಕವನ್ನು ಸವಿಯುತ್ತಿರುವಂತೆ ರೂಪಿಸಲಾಗಿದೆ. ವಿಗ್ರಹ ಹಾವಿನ ಉದರ ಬಂಧ ಮತ್ತು ಯಜ್ಞೋಪವೀತಗಳನ್ನು ಧರಿಸಿದೆ. ಅದರ ಹೊಟ್ಟೆಯ ಸುತ್ತಳತೆ 13'. ಸುಕನಾಸಿ (10'ಘಿ8') ಮತ್ತು  ನವರಂಗ (25'ಘಿ 25') ಇವು ಈ ಮಂದಿರದ ಇತರ ಭಾಗಗಳು. ನವರಂಗದ ದಕ್ಷಿಣಭಾಗದಲ್ಲಿ 5' ಎತ್ತರದ, ಹನ್ನೆರಡು ಕೈಗಳುಳ್ಳ, ಮಯೂರವಾಹನನಾದ ಕುಮಾರನ ಪ್ರತಿಮೆಯಿದೆ. ಇದೊಂದು ಸುಂದರಶಿಲ್ಪ.
 ಇಲ್ಲಿಯ ಅತ್ಯಂತ ಸುಂದರ ಕಟ್ಟಡ ಸೋಮೇಶ್ವರ ದೇವಾಲಯ. ಇದರಲ್ಲಿ ಗರ್ಭಗುಡಿ (20'ಘಿ10'), ಸುಕನಾಸಿ  (10'ಘಿ8') ಮತ್ತು ನವರಂಗ (25'ಘಿ25') ಇವೆ. ನವರಂಗದ ಅಷ್ಟಮುಖದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದು ಕಂಬದ ಮೇಲಿರುವ ಆನೆಯನ್ನು ಕೊಲ್ಲುತ್ತಿರುವ ಸಿಂಹದ ಶಿಲ್ಪ ಗಂಗರನ್ನು ಹೊಯ್ಸಳರು ಸೋಲಿಸಿದ ಸಂಕೇತವಿರಬಹುದೆಂದು ಊಹಿಸಲಾಗಿದೆ. ಹೊರಗೋಡೆಗಳ ಮೇಲೆ ಸ್ತಂಭಿಕ ಮತ್ತು ಗೂಡುಗಳ ಸುಂದರ ಅಲಂಕರಣವಿದೆ. ಗರ್ಭಗುಡಿಯಲ್ಲಿರುವ ಲಿಂಗದ ಮುಂಭಾಗದ ಕಿಟಕಿಯ ಬಳಿ ಮೂರು ವ್ಯಕ್ತಿಗಳ ಶಿಲ್ಪಗಳಿವೆ. ಇವು 13 ನೆಯ ಶತಮಾನದಲ್ಲಿ ಚೋಳರ ಸಾಮಂತನಾಗಿದ್ದ ಇಳವಂಜಿ ವಾಸುದೇವರಾಯ ಮತ್ತು ಆತನ ರಾಣಿಯರ ಮೂತರ್ಿಗಳೆಂದು ಗುರುತಿಸಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಪಾರ್ವತಿ ಮತ್ತು ಕಾಮಾಕ್ಷಿ ಅಮ್ಮನವರ ಮಂದಿರಗಳೂ ಇವೆ.
ಪಾಳುಬಿದ್ದಿರುವ ಚೆನ್ನರಾಯಸ್ವಾಮಿ ದೇವಾಲಯ ಸಹ ಆ ಸುಮಾರಿಗೆ ಸೇರಿದ್ದಿರಬಹುದು. ಗ್ರಾಮದ ಉತ್ತರಕ್ಕೆ ಮುರಿದ ತೋರಣದ ಕಂಬಗಳೂ ಮಾಸ್ತಿಕಲ್ಲೊಂದೂ ಇವೆ. ಹೊಯ್ಸಳ ಮುಮ್ಮಡಿ ಬಲ್ಲಾಳ ಆ ಪ್ರದೇಶವನ್ನು  ಆಳುತ್ತಿದ್ದನೆಂದೂ ಆಗ ಹೊರಡಿಸಿದ ವೀರರಾಯಿ ಹಣ ದೊರಕಿವೆಯೆಂದೂ ಹೇಳಲಾಗಿದೆ. ಈ ಪ್ರದೇಶದಲ್ಲಿ ಹಳೆಯ ಊರಿನ ಅವಶೇಷಗಳು ಕಾಣಬರುತ್ತವೆ.
                ಈ ಕಂದೆಲುಗು ನೆಲ ನಾಡಿನ ಸಂಸ್ಕೃತಿಗೆ ಪೂರ್ವಕಾಲದಿಂದ ಏಕೀಕೃತ ಕನರ್ಾಟಕ ರೂಪಗೊಳ್ಳುವವರೆಗೆ ಪೌರಾಣಿಕ, ಧಾಮರ್ಿಕ, ಸಾಮಾಜಿಕ .ಆಥರ್ಿಕ ಹಾಗೂ ಚಾರಿತ್ರಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನುಪಮವಾದುದು ಎಂದರೆ ಅತಿಶಯೋಕ್ತಯಾಗಲಾರದು.
         ಭಾರತ ಹಾಗೂ ಕನರ್ಾಟಕ ಇತಿಹಾಸವು ಮೌರ್ಯರೊಂದಿಗೆ  ಆರಂಭವಾಗುತ್ತದೆ. ಮೌರ್ಯರ ಅಶೋಕನ ಶಾಸನಗಳೇ ಲಿಖಿತ ಆರಂಭದ ದಾಖಲೆಗಳಾಗಿವೆ. ಆದರೆ ಕೋಲಾರ ಜಿಲ್ಲೆಯೂ ಅಶೋಕನ ಆಡಳಿದ ಪ್ರಭಾವಕ್ಕೆ ಪರೋಕ್ಷವಾಗಿ ಒಳಪಟ್ಟಿರಬಹುದಾದ ಸಾಧ್ಯತೆಗಳಿದ್ದರೂ ಪೂರಕ ಸಾಮಗ್ರಿಗಳ ಕೊರತೆಯಿದೆ. 
       ಕೋಲಾರ ಜಿಲ್ಲೆಯ ಪೌರಾಣಿಕ ಹಿನ್ನೆಲೆಗಿಂತಲೂ ಚಾರಿತ್ರಿಕ ಮಹತ್ವವೇ ಹೆಚ್ಚು ಉತ್ಕೃಷ್ಟವೆನಿಸಿಕೊಂಡಿದೆ. ಕೋಲಾರ ಪ್ರಾಂತ್ಯವನ್ನು ಆಳಿದ ಅರಸರಲ್ಲಿ ಬಾಣರು ಮೊದಲಿಗರು. ಇವರನ್ನು ಇತಿಹಾಸದಲ್ಲಿ ಪೆಬರ್ಾಣರು, ಬೃಹತ್ ಬಾಣರು ಎಂದು ಕರೆದಿದ್ದಾರೆ. ಇವರು ಪಾಲಾರ್ ಪೂರ್ವಭಾಗದಲ್ಲಿರುವ ಚಿಂತಾಮಣಿ, ಬಂಗಾರಪೇಟೆ ಹಾಗೂ ಮುಳಬಾಗಿಲು ಪ್ರಾಂತ್ಯವನ್ನು ಆಳಿದರು. ಕ್ರಿ.ಶ. ಆರಂಭದಿಂದ ಒಂಭತ್ತನೆಯ ಶತಮಾನದವರಿಗೂ ಆಳಿದೆರೆನ್ನುವುದಕ್ಕೆ ಅನೇಕ ಶಾಸನಗಳು  ಆಧಾರವಾಗಿವೆ. ಶಾಸನತಜ್ಞರಾದ ಲೂಯಿರೈಸ್ ಅವರು ಕ್ರಿ.ಶ.339 ರ ಕಾಲಮಾನದ ಮುಳಬಾಗಿಲು ತಾಲೂಕಿನ ಮುಡಿಯನೂರು ಶಾಸನವನ್ನು ಆಧರಿಸಿ, ಬಾಣರು ಕೋಲಾರ ಪ್ರಾಂತ್ಯವನ್ನು ಆಳಿದ ಮೊದಲ ದೊರೆಗಳೆಂದು ತಕರ್ಿಸಿದ್ದಾರೆ.
          ಕನರ್ಾಟಕ ಇತಿಹಾಸದಲ್ಲಿ ತಲಕಾಡಿನ ಗಂಗರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅಂತಹ ಗಂಗರ ಮೊದಲ ರಾಜಧಾನಿ ಕುವಲಾಲಪುರ(ಕೋಲಾರ)ಆಗಿತ್ತು. ಚರಿತ್ರಕಾರರರ ಪ್ರಕಾರ ಗಂಗಗರ ಮೂಲಪುರುಷರಾದ ದಡಿಗ ಮತ್ತು ಮಾಧವ ಎಂಬ ಸೋದರರು ಮೂಲತಃ ಕಡಪ ಜಿಲ್ಲೆಯ ಗಂಗಪೆರೂರಿನವರು. ಇಲ್ಲಿನ ಜೈನಮುನಿ ಸಿಂಹನಂದ್ಯಾಚಾರ್ಯರ ಆಶರ್ೀವಾದದಿಂದ ಸೈನ್ಯವನ್ನು ಕಟ್ಟಿದರು. ಕುವಲಾಲ ಪ್ರದೇಶವನ್ನು ಆಳುತ್ತಿದ್ದ ಬಾಣರನ್ನು ಸೋಲಿಸಿ ನಂದಿದುರ್ಗದಲ್ಲಿ ಕೋಟೆಯನ್ನು ಕಟ್ಟಿದರು.  ಇದಕ್ಕೆ ಅನೇಕ ಶಾಸನಗಳು ಆಧಾರವನ್ನು ಒದಗಿಸುತ್ತವೆ. ಅಲ್ಲದೆ ಅವರ ಕಾಲದ ತಾಮ್ರ ಹಾಗೂ ಶಿಲಾಶಾಸನಗಳು ಕೋಲಾರ. ಚಿಕ್ಕಬಳ್ಳಾಪು, ನಂದಿದುರ್ಗ, ಮುಡಿಯನೂರು, ಉತ್ತನೂರು, ಸುಗುಟೂರು, ನರಸಾಪುರ, ಗುಮ್ಮರೆಡ್ಡಿಪುರ, ಹೆಬ್ಬಟ, ಹಾಗೂ ಗಂಗರಸನಹಳ್ಳಿಗಳಲ್ಲಿ ದೊರೆತಿವೆ. ಆದರೆ ಇವುಗಳಲ್ಲಿ ಬಹುತೇಕ ಶಾಸನಗಳು ದಾನಶಾಸನಗಾಗಿವೆ. ಕ್ರಿ.ಶ.ನಾಲ್ಕನೆಯ ಶತಮಾನದಿಂದ ಹತ್ತನೆಯ ಶತಮಾನವದರಿಗೂ ತಮ್ಮ ಪ್ರಾಬಲ್ಯವನ್ನು ಮರೆದ ಗಂಗರು ತಮ್ಮ ಶಾಸನಗಳಲ್ಲಿ 'ಕುವಲಾಲಪುರವರಾಧೀಶ್ವರ' ಹಾಗೂ 'ನಂದಗಿರಿನಾಥ'ರೆಂದು ಕರೆದುಕೊಂಡಿದ್ದಾರೆ.
         ದ್ವಿಭಾಷಾ ಪ್ರಾಂತ್ಯವಾದ ಕೋಲಾರವನ್ನು ನೊಳಂಬರು ಆಳಿದರು. ಅವರ ಕಾಲದಲ್ಲಿ 'ನೊಳಂಬವಾಡಿ'ಗೆ ಕೋಲಾರದ ಬಹುತೇಕ ಪ್ರಾಂತ್ಯ ಒಳಪಟ್ಟಿತ್ತು. ಹತ್ತನೆಯ ಶತಮಾನದ ಅಂತ್ಯದ ವೇಳೆಗೆ ಗಂಗರ ಪ್ರಾಬಲ್ಯ ಇಳಿಮುಖವಾಯಿತು. ತಮಿಳುನಾಡಿನ ಚೋಳರ ದೊರೆ ರಾಜರಾಜಚೋಳನು ಕೋಲಾರದ ಆಗ್ನೇಯ ಭಾಗವನ್ನು ಜಯಿಸಿದ. ಇವನ ಆಳ್ವಿಕೆಯ ಸಮಯದಲ್ಲಿ ಕೋಲಾರ ಜಿಲ್ಲೆ ತೊಂಡೈಮಂಡಲ, ನಿಗಿರಿಲಿ ಚೋಳಮಂಡಲ,ಮಾರಾಯಪಡಿ ಹಾಗೂ ವಿಜಯ ರಾಜಮಂಡಲಗಳ ಭಾಗವಾಗಿತ್ತು. ಕ್ರಿ.ಶ.997ರಲ್ಲಿ ಹೊಸಕೋಟೆಯ ತನಕ ಅವನ ರಾಜ್ಯ ವಿಸ್ತಾರವಾಗಿತ್ತು. ಇವರು ಹಾಕಿಸಿದ ಸುಮಾರು 160 ಕ್ಕೂ ಹೆಚ್ಚು ತಮಿಳು ಶಾಸನಗಳು ಕೋಲಾರ ಪ್ರಾಂತ್ಯದಲ್ಲಿವೆ.  ಈ ವಂಶದ ದೊರೆಗಳು, ಮಂತ್ರಿಗಳು ಹಾಗೂ ಅಧಿಕಾರಿಗಳು ಕೋಲಾರ ಪ್ರದೇಶದಲ್ಲಿ ಅನೇಕ ದೇಗುಲಗಳನ್ನು ಕಟ್ಟಿಸಿರುವ, ಜೀಣರ್ೋದ್ಧಾರ ಮಾಡಿರುವ, ದಾನದತ್ತಿಗಳನ್ನು ನೀಡಿರುವ ಶಾಸನ ಉಲ್ಲೇಖಗಳು ಇವೆ. ದ್ರಾವಿಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಲವಾರು ಶೈವ-ವೈಷ್ಣವ ದೇವಾಲಯಗಳನ್ನು ನಿಮರ್ಿಸಿದ್ದಾರೆ. ಸಂಗೀತ, ನೃತ್ಯ, ಕಲೆಗಳನ್ನು ಅಭಿವೃದ್ಧಿಗೊಳಿಸಿದರು.  ಕೆರೆಕಟ್ಟೆ ಕಟ್ಟಿಸಿದರು. ಅದರಲ್ಲಿ ಕೋಲಾರದ ಕೋಲಾರಮ್ಮನ ದೇಗುಲವು ಒಂದು. ಕೋಲನೆಂಬ ಗೊಲ್ಲನ ಕಥೆಯು ಇದಕ್ಕೆ ಒಂದು ಆಧಾರವಾಗಿದೆ.
          ಬಾಣರು, ಗಂಗರು, ಚೋಳರ ತರುವಾಯ ಹೊಯ್ಸಳರು, ನೊಳಂಬರು, ಪಲ್ಲವರು, ವಿಜಯನಗರದ ಅರಸರು ಈ ಪ್ರಾಂತ್ಯವನ್ನು ಆಳಿದ್ದಾರೆ. ಇವರೆಲ್ಲರ ಆಳ್ವಿಕೆಯ ಗತವೈಭವವನ್ನು ಸಾರುವ ಆನೇಕ ಶಾಸನಗಳು ಈ ನೆಲದಲ್ಲಿ ಲಭ್ಯವಾಗಿವೆ. ಈ ಶಾಸನಗಳ ವೈಶಿಷ್ಟ್ಯವೆಂದರೆ ತೆಲುಗು.ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ರಚನೆಗೊಂಡಿರುವುದು. ದಿ ಎಪಿಗ್ರಾಫಿಯಾ ಕನರ್ಾಟಕಾದ ಸಂಪಾದಕರಾದ ಬೆಂಜಿಮಿನ್ ಲೂಯಿ ರೈಸ್ ಅವರು ಕೋಲಾರ ಪ್ರಾಂತ್ಯದ ಶಾಸನಗಳನ್ನು the present volume contains the vaey varied inseiption of the east the mysore state ,a part of the country where the Kannada. Tamil and Telugu Languages meet and which was also once subject to Tamil sway under the chola kings. Accordingly out of the total of 1347 incriptions in the District 422 are in Tamil, while 211 are in telugu, But the oldest are in kannada. This was the orginal language. Tamil came in with the cholas in the 11th century, and Telugu with Vijayanagar kings after the 15th  The perod covered by the incriptino is from the 4th to the 18th  century.  F jÃw ºÉýzÁÝgÉ.
   ಕೋಲಾರ ಜಿಲ್ಲೆಯ ಮುಳಬಾಗಿಲು  ತಾಲ್ಲೂಕು ಮೊದಲು ಬಾಣರ ಆಡಳಿತಕ್ಕೆ ಸೇರಿತ್ತು. 10ನೆಯ ಶತಮಾನದ ಕೊನೆಯಲ್ಲಿ ಪಲ್ಲವರ ಕೈಸೇರಿತು. ಉತ್ತರದಲ್ಲಿ ವೈಡುಂಬರರು ಆಳುತ್ತಿದ್ದರು. ಮುಂದೆ ಕೋಲಾರದ ಒಂದು ಭಾಗವಾಗಿ ವಿಜಯನಗರದ ಆಡಳಿತಕ್ಕೆ ಸೇರಿತು. ಲಕ್ಕಣ್ಣಡಣ್ಣಾಯಕ ಮತ್ತು ಮಾದನ್ನದಣ್ಣಾಯಕ ಎಂಬವರು ಇಲ್ಲಿ ಆಳುತ್ತಿದ್ದು ಮುಂದೆ ಹೊಸಕೋಟೆಯ ತಿಮ್ಮೇಗೌಡನ ಆಡಳಿತಕ್ಕೆ ಒಳಪಟ್ಟಿತು. 1768ರಲ್ಲಿ ಕರ್ನಲ್ ಕ್ಯಾಂಪ್ಬೆಲ್ ಇದನ್ನು ಇಂಗ್ಲೀಷರ ಆಡಳಿತಕ್ಕೆ ಸೇರಿಸಿದ.
     ಕೋಲಾರ ಜಿಲ್ಲೆಯು ವಿಜಯನಗರದ ಪತನಾನಂತರ ಸಥಳೀಯ ಸಾಮಂತರು. ಪಾಳೇಗಾರರೂ ಆಗಿದ್ದ ತಾಡಿಗೋಳ್ಳು, ಆವತಿ, ಸಾದಲಿ, ಹೊಸಕೋಟೆ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಸುಗುಟೂರು, ಗುಮ್ಮನಾಯಕನಪಾಳ್ಯ.ಮುಳಬಾಗಿಲು ತಾಲೂಕಿನ ಹರಪನಾಯಕನಹಳ್ಳಿ ಮುಂತಾದ ಪಾಳೆಪಟ್ಟುಗಳು ಜಿಲ್ಲೆಯ ಬಹುಭಾಗವನ್ನು ಆಳಿದವು. ಇವರ ಆಡಳಿತದ ಸಮಯದಲ್ಲಿ ಹಲವಾರು ಕೆರಕಟ್ಟೆಗಳು ನಿಮರ್ಾಣಗೊಂಡ ಬಗ್ಗೆ ಶಾಸನಗಳು ಮಾಹಿತಿಯನ್ನು ಒದಗಿಸುತ್ತವೆ.ಬಿಜಾಪುರ ಆದಿಲ್ ಷಾಹಿಗಳ ಆಡಳಿತಕ್ಕೆ ಒಳಪಡುವ ಮೂಲಕ ಮರಾಠರ ಪ್ರಭಾವಕ್ಕೂ ನಂತರ ಮುಘಲ್ರ ಅದಿಪಥಯಕ್ಕೂ ಒಳಗಾಯಿತು. ಮೈಸೂರು ಅರಸರು ಹಾಗೂ ಹೈದರಾಲಿ-ಟಿಪ್ಪು ಸುಲ್ತಾನರ ಹಿಡಿತಕ್ಕೂ ಸಿಕ್ಕಿತ್ತು. ಅಲ್ಪಕಾಲ ಮೂಳಬಾಗಿಲು ತಾಲೂಕಿನ ಹರಪನಟಯಕನಹಳ್ಳಿ ಬೀಸ್ಸೇಗೌಡ ಹಾಗೂ ಅವರ ಸಂತತಿಯವರು ಈ ಜಿಲ್ಲೆಯ ಅಧಿಪತ್ಯವನ್ನು ವಹಿಸಿದ್ದರು. ಓಪ್ಪಿವಿನ ಪತನಾನಂತರ ಮದ್ರಾಸ್ ಪ್ರೆಸ್ಸಿಡೆನ್ಸಿ ನಿದರ್ೇಶನದ ಪ್ರಕಾರ ಮದ್ರಾಸ್, ಮೈಸೂರು ಹಾಗೂ ಮಲಬಾರ್ ಪ್ರವಾಸವನ್ನು ಕೈಗೊಂಡ ಬುಕನಾನ್ ತನ್ನ ಪ್ರವಾಸಿ ಕಥನದಲ್ಲಿ  ಕೋಲಾರ ಪರಿಸರದ ಬಗ್ಗೆ  ಮಹತ್ವದ ಮಾಹಿಯನ್ನು ನೀಡಿದ್ದಾನೆ. ಟಿಪ್ಪಿವಿನ ಮರಣಾನಂತರ ಮೈಸೂರು ಅರಸರು ಹಾಗೂ ಕಮೀಷನರುಗಳ ಅವಧಿಯಲ್ಲಿ ಇನಾಂದಾರ್, ಜೋಡಿದಾರ್ ಹಾಗೂ ಜಹಗೀರ್ದಾರ್ಗಳ ಸ್ಥಳೀಯ ಆಡಳಿತವನ್ನು ನಡೆಸಿದರು.
    ಸ್ವಾತಂತ್ರ್ಯ ಹೋರಾಟಕ್ಕೆ ಕೋಲಾರ ಜಿಲ್ಲೆ ತನ್ನದೆ ಕೊಡುಗೆಯನ್ನು ನೀಡಿದೆ. ರಾಷ್ಟ್ರಪಿತ ಮಾಹಾತ್ಮಗಾಂದೀಜೀಯವರು ಕೋಲಾರಕ್ಕೆ ಬಂದು ಸ್ವಾತಂತ್ರ್ಯದ ಆಂದೋಲನದ ಕಾವನ್ನು ಹೆಚ್ಚಿಸಿದ್ದರು ಅಲ್ಲದೆ ಹರಿಜನನಿಧಿಯನ್ನು ಸಂಗ್ರಹಿಸಿದ್ದರು. 'ಜವಾಬ್ದಾರಿ ಸಕರ್ಾರ ರಚನೆ'ಗಾಗಿ ಜರಿಗಿದ 'ಮೈಸೂರು ಚಲೋ'ದ ಮುಂದಾಳತ್ವವನ್ನು ವಹಿಸಿದವರೂ ಕೆ.ಚಿ.ರೆಡ್ಡಿ, ಕೆ.ಪಟ್ಟಾಬಿರಾಮನ್, ಟಿ.ರಾಮಾಚಾರ್, ಕೆ.ಸಂಪಂಗಿರಾಮಯ್ಯ, ಎನ್.ಚಿ.ನಾಗಯ್ಯರೆಡ್ಡಿ, ಎನ್.ಚಿ.ತಿಪ್ಪಾರೆಡ್ಡಿ, ಎಂವಿ.ಕೃಷ್ಣಪ್ಪ, ಟಿ.ಚೆನ್ನಯ್ಯ ಮುಂತಾದವರು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸುವಹಿಸಿದರು. ಭಾರತದ ಗಣರಾಜ್ಯದಲ್ಲಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳೂ ಆಗಿ ಅಧಿಕಾರ ವಹಿಸಿಕೊಂಡ ಕೆ.ಚೆಂಗಲರಾಯರೆಡ್ಡಿಯವರು ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯವರು.-ಹೀಗೆ ನಾಡಿನ ಸಂಸ್ಕೃತಿಗೆ ಕೋಲಾರ ಜಿಲ್ಲೆ ಇತಿಹಾಸ ಪೂರ್ವ ಕಾಲದಿಂದ ಏಕೀಕೃತ ಕನರ್ಾಟಕ ರೂಪ ಪಡೆಯವ ತನಕ ತನ್ನದೆ ಅನುಪಮ ಕೊಡುಗೆಯನ್ನು ನೀಡಿದೆ.

ಸಾರಿಗೆ ಸಂಪರ್ಕ ಮತ್ತು ವ್ಯಾಪಾರ ಮತ್ತು ವಾಣಿಜ್ಯ
   ಕೋಲಾರ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಚೆನ್ನಾಗಿ ಬೆಳೆದಿದೆ. ರಾಷ್ಟೀಯ ಹೆದ್ದಾರಿ ನಂ. 4 ಮತ್ತು 7 ಮತ್ತು ರಾಜ್ಯ ಹೆದ್ದಾರಿಗಳು ಇಲ್ಲಿ ಹಾದು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರತಿ ಹಳ್ಳಿಗೂ ತಾಲ್ಲೂಕಿಗೂ ಜಾಲದಂತೆ ರಸ್ತೆ ಮಾರ್ಗಗಳು ಹೆಣೆದುಕೊಂಡಿವೆ. ಸಕರ್ಾರಿ ಮತ್ತು ಖಾಸಗಿ ಬಸ್ಸುಗಳೂ ಕಾರುಗಳೂ ಬಂಡಿಗಳೂ ಜನರನ್ನೂ ಸರಕುಗಳನ್ನೂ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸುತ್ತವೆ. ಹಿಂದೂಪುರ - ಬೆಂಗಳೂರು ರೈಲುಮಾರ್ಗ ಗೌರಿಬಿದನೂರು ಮೂಲಕವೂ ಚೆನ್ನೈ - ಬೆಂಗಳೂರು ರೈಲುಮಾರ್ಗ ಬಂಗಾರಪೇಟೆಯ ಮೂಲಕವೂ ಸಾಗುತ್ತವೆ. ಇನ್ನೊಂದು ರೈಲುಮಾರ್ಗ ಬೆಂಗಳೂರಿನಿಂದ ನಂದಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರಗಳ ಮೂಲಕ ಬಂಗಾರ ಪೇಟೆಗೆ ಸಾಗುತ್ತದೆ. ಬಂಗಾರಪೇಟೆಯಿಂದ ಚಿನ್ನದ ಗಣಿ ಪ್ರದೇಶಕ್ಕೆ ರೈಲ್ವೆ ಸಂಪರ್ಕವುಂಟು
    ಇಲ್ಲಿ ಉಕ್ಕಿನ ಪೀಠೋಪಕರಣ ಮತ್ತು ಕೈಮಗ್ಗದ ಬಟ್ಟೆ ತಯಾರಿಸುತ್ತಾರೆ. ಕೈಗಾರಿಕಾ ಸಹಕಾರ ಸಂಘಗಳು ನಿಯಂತ್ರಿತ ಮಾರುಕಟ್ಟೆ ಮತ್ತು ವಾಣಿಜ್ಯ ಬ್ಯಾಂಕುಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಲಭ್ಯಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮಮಟ್ಟದ ಔಷಧಾಲಯಗಳು ಹಾಗೂ ಕೆಲವು ಆಯುವರ್ೇದ ಮತ್ತು ಯುನಾನಿ ಔಷಧಾಲಯಗಳು ಇವೆ.

ಧಾಮರ್ಿಕ ಹಿನ್ನೆಲೆ:
ಪ್ರೇಕ್ಷಣೀಯ ಸ್ಥಳಗಳು
      ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
 ಬೆಂಗಳೂರು-ಕಡಪ ಪ್ರಾಂತೀಯ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಶ್ರೀನಿವಾಸಪುರ ಮುಖಾಂತರ ಹಾದುಹೋಗುವುದು. ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರೀನಿವಾಸಪುರದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿರುವ ಹೆಬ್ಬೆಟ್ಟ ಒಂದು. ಇಲ್ಲಿ ಗಂಗರ ದೊರೆ ಮಾರಸಿಂಹನ ಕಾಲದ (10ನೆಯ ಶತಮಾನ) ಯಂತ್ರದ ಕಲ್ಲು (ಗೋಕಲ್ಲು) ಇದ್ದು ಇದನ್ನು ತೊಳೆದ ನೀರು ಪಶುಗಳಿಗೆ ಔಷಧವಾಗಿ ರೋಗಗಳನ್ನು ಗುಣಪಡಿಸುತ್ತದೆಂಬ ನಂಬಿಕೆಯಿದೆ.
 ಶ್ರೀನಿವಾಸಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕೋಲಾರದ ಈಶಾನ್ಯಕ್ಕೆ 24 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 22,926. ಪಾಪನಪಲ್ಲಿ ಈ ಊರಿಗಿದ್ದ ಹಿಂದಿನ ಹೆಸರು. ದಿವಾನ್ ಪೂರ್ಣಯ್ಯನವರು ತಿರುಪತಿಯಿಂದ ಹಿಂದಿರುಗುತ್ತ ಈ ಊರಿಗೆ ಬಂದು, ತಮ್ಮ ಮಗ ಶ್ರೀನಿವಾಸಮೂತರ್ಿಗಳ ಹೆಸರಿನಲ್ಲಿ ಇದಕ್ಕೆ ಶ್ರೀನಿವಾಸಪುರವೆಂದು ನಾಮಕರಣ ಮಾಡಿದರು. ಈ ಊರಿನ ಪೂರ್ವಕ್ಕೆ ಸು. 3 ಕಿ.ಮೀ. ದೂರದಲ್ಲಿ ಹರಳುಕೋಟೆ ಎಂಬ ಪುರಾತನ ಪಟ್ಟಣವಿತ್ತೆಂದು ಪ್ರತೀತಿ. ಬಾಣರಸ, ವಿಕ್ರಮಾದಿತ್ಯ ಮತ್ತು ಪಲ್ಲವ-ಇವರಿಗೆ ಸಂಬಂಧಿಸಿದ ಶಾಸನಗಳು ಈ ಊರಿನಲ್ಲಿ ದೊರೆತಿವೆ.
    ಮಾಲೂರು ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಚಿಕ್ಕತಿರುಪತಿ ಒಂದು ಪುಣ್ಯಕ್ಷೇತ್ರ. ಮಡಿವಾಳ ಗ್ರಾಮದಲ್ಲಿ ಚೋಳರ ಕಾಲದ ಗಂಗಾಧರೇಶ್ವರ ದೇವಾಲಯವಿದೆ. ಮಾಲೂರಿನ ಉತ್ತರಕ್ಕಿರುವ ತೋರಣಹಳ್ಳಿಯಲ್ಲಿ ದನಗಳಿಗೆ ಬರುವ ಚಪ್ಪೆಜಾಡ್ಯವನ್ನು ವಾಸಿಮಾಡುವ ದೇವರೆಂಬ ನಂಬಿಕೆಯುಳ್ಳ ಸಪ್ಪಲಮ್ಮನ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಪುಷ್ಯಮಾಸದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಶಿವಾರಪಟ್ಟಣದಲ್ಲಿ ಗಂಗದೊರೆ ಶ್ರೀಪುರುಷನ ಕಾಲದ ಶಿಲಾಶಾಸನಗಳಿವೆ. ಚಿಕ್ಕಕಡತೂರಿನಲ್ಲಿ ಪ್ರಾಚೀನ ಕಾಲದ ವೀರರ ಗುಡಿಗಳಿವೆ. ಟೇಕಲ್ ಪವಿತ್ರ ಸ್ಥಳ. ಮಾಸ್ತಿ ಹೋಬಳಿ ಕೇಂದ್ರ ಮತ್ತು ದೊಡ್ಡ ಗ್ರಾಮ. ಈ ತಾಲ್ಲೂಕಿನ ವಿರೂಪಾಕ್ಷಪುರದಲ್ಲಿ ವಿಜಯನಗರದ ದೊರೆ ಎರಡನೆಯ ದೇವರಾಯನ ಕಾಲದ ವಿರೂಪಾಕ್ಷ ದೇವಾಲಯವಿದೆ.
ವಕ್ಕಲೇರಿ ಬೆಟ್ಟದಲ್ಲಿರುವ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲ್ಲಿಗೆ ಹೂವನ್ನು ಮಾಲೂರಿನ ತೋಟಗಳಿಂದ ಕಳುಹಿಸುತ್ತಿದ್ದುದರಿಂದ ಈ ಊರಿಗೆ ಹಿಂದೆ ಮಲ್ಲಿಕಾಪುರ ಅಥವಾ ಮಲ್ಲಿಗೆಪಟ್ಟಣವೆಂಬ ಹೆಸರಿತ್ತು ಎನ್ನಲಾಗಿದೆ. ಈ ಊರು 16ನೆಯ ಶತಮಾನದಲ್ಲಿ ಹೊಸಕೋಟೆಯ ನಾಯಕ ತಿಮ್ಮೇಗೌಡನ ಅಧೀನದಲ್ಲಿದ್ದು ಅನಂತರ ಬಿಜಾಪುರದ ಆಡಳಿತಕ್ಕೆ ಸೇರಿದ್ದು ಹಲವು ಮನ್ಸಬ್ದಾರರಿಗೆ ಜಹಗೀರಿಯಾಗಿ ನೀಡಲಾಗಿತ್ತು. ಮರಾಠರ ಕೈವಶವಾದ ಈ ಊರನ್ನು ರಜಪೂತ ಜಮೀನ್ದಾರ ಹ್ರಿದರಾಮ್ಸಿಂಗ್ ತನ್ನ ವಶಪಡಿಸಿಕೊಂಡು ವಿಸ್ತರಿಸಿ ಊರಿಗೆ ಮಾಲೂರು ಎಂದು ಹೆಸರಿಸಿದ. ಹೈದರ್ ಆಕ್ರಮಿಸಿಕೊಳ್ಳುವ ತನಕ ಈ ಊರನ್ನು ಹ್ರಿದರಾಮ್ ಸಿಂಗನ ವಂಶಜರೇ ಆಳುತ್ತಿದ್ದರು.
 ಶಂಕರನಾರಾಯಣಸ್ವಾಮಿ, ಧರ್ಮರಾಯಸ್ವಾಮಿ, ಬೀರೇಶ್ವರಸ್ವಾಮಿ ಮತ್ತು ಕೋದಂಡರಾಮಸ್ವಾಮಿ ದೇವಾಲಯಗಳು ಇಲ್ಲಿಯ ಪ್ರಮುಖ ಗುಡಿಗಳು. ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಪುಷ್ಕರಿಣಿ ಇದೆ. ಫಾಲ್ಗುಣಮಾಸದಲ್ಲಿ ಶಂಕರನಾರಾಯಣಸ್ವಾಮಿಗೆ ಏಳು ದಿನಗಳು ವಿಶೇಷ ಪೂಜೆ ಮತ್ತು ರಥೋತ್ಸವ ನಡೆಯುತ್ತದೆ. ಚೈತ್ರಮಾಸದಲ್ಲಿ ಈ ಊರಿನಲ್ಲಿ ನಡೆಯುವ ಧರ್ಮರಾಯಸ್ವಾಮಿ ಕರಗ ಪ್ರಸಿದ್ಧ.
       ಬಂಗಾರಪೇಟೆ ತಾಲೂಕಿನ ಪ್ರಾಚೀನ ಕಾಲದಲ್ಲಿ ನಡೆದ ಮಹತ್ತಾದ ಪೂಣರ್ಾಹುತಿಯ ಪರಿಣಾಮವಾಗಿ ಈ ಸ್ಥಳಕ್ಕೆ ಬೂದಿ ಕೋಟೆ (ಸಂಸ್ಕೃತದಲ್ಲಿ ವಿಭೂತಿಪುರ) ಎಂದು ಹೆಸರು ಬಂದಿರಬಹುದೆಂದು ಊಹಿಸಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣರ ಶಾಸನವಿದೆ. 17ನೆಯ ಶತಮಾನದಲ್ಲಿ ಇದು ಶಿರಾದ ಸುಭೇದಾರನ ಕೆಳಗೆ ಪೌಜುದಾರನಾಗಿ ನೇಮಕಗೊಂಡಿದ್ದ ಫತೆ ಮಹಮ್ಮದನ ಜಹಗೀರಿಯಾಗಿತ್ತು. ಅವನ ಮಗ ಹೈದರ್ ಆಲಿ ಜನಿಸಿದ್ದು ಇಲ್ಲಿಯೇ. ಗ್ರಾಮದಲ್ಲಿ ಶಿಥಿಲವಾದ ಕೋಟೆಯ ಅವಶೇಷಗಳಿವೆ. ಕೋಟೆಯ ಒಳಭಾಗದಲ್ಲಿ ವೇಣುಗೋಪಾಲಸ್ವಾಮಿಯ ದೇವಾಲಯವೂ ಹೊರಭಾಗದಲ್ಲಿ ವೆಂಕಟೇಶ್ವರ ದೇವಾಲಯವೂ ಇವೆ. ಊರಿನ ವಾಯುವ್ಯಕ್ಕೆ ಸುಮಾರು 1.5 ಕಿ.ಮೀ. ದೂರದಲ್ಲಿ ಸೋಮೇಶ್ವರ ದೇವಾಲಯವಿದೆ.
       ಬೇತಮಂಗಲ, ಬೂದಿಕೋಟೆ, ಹುನಕುಂದ ಇವು ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ಸ್ಥಳಗಳು. ಬೇತಮಂಗಲ ಕೋಲಾರಕ್ಕೆ 29 ಕಿಮೀ. ದಕ್ಷಿಣದಲ್ಲಿ ಪಾಲಾರ್ ನದಿಯ ಬಲದಂಡೆಯ ಮೇಲಿದೆ. ಇದೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ದೊಡ್ಡ ಕೆರೆಯ ಮೇಲೆ ದೋಣಿ ವಿಹಾರ ಸೌಕರ್ಯವಿದೆ. 1864ರವರೆಗೆ ಈ ಊರೇ ತಾಲ್ಲೂಕಿನ ಮುಖ್ಯಸ್ಥಳವಾಗಿತ್ತು. ಬಂಗಾರಪೇಟೆ-ಮುಳಬಾಗಿಲು ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಬಾಣ ದೊರೆ ಬಹುಶಃ ಸ್ಥಾಪಿಸಿದ ವಿಜಯಾದಿತ್ಯಮಂಗಲವೇ ಬೇತಮಂಗಲವಾಗಿದೆಯೆನ್ನಲಾಗಿದೆ. ನೊಳಂಬರ ಕಾಲದ ಎರಡು ಶಿಲಾಶಾಸನಗಳು ಇಲ್ಲಿಯ ಗಂಗಮ್ಮ ದೇವಾಲಯದಲ್ಲಿವೆ. ಇಲ್ಲಿರುವ ಕೆರೆ ಯಾವಾಗ ನಿಮರ್ಾಣವಾಯಿತೆಂಬುದು ಗೊತ್ತಿಲ್ಲ. ಇರಿವ ನೊಳಂಬ 950ರಲ್ಲಿ ಇದನ್ನು ದುರಸ್ತು ಮಾಡಿಸಿದ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ವಿಜಯೇಂದ್ರ ದೇವಾಲಯ ಇಲ್ಲಿಯ ಪ್ರಮುಖ ದೇವಸ್ಥಾನ. ಬೂದಿಕೋಟೆ ಬಂಗಾರಪೇಟೆಗೆ 13 ಕಿಮೀ. ದಕ್ಷಿಣದಲ್ಲಿದೆ. ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ. ಇದೊಂದು ಹೋಬಳಿ ಕೇಂದ್ರ. ಸಂಸ್ಕೃತದ ವಿಭೂತಿಪುರ ಎಂಬುದು ಬೂದಿಕೋಟೆ ಎಂದಾಗಿದೆಯೆನ್ನಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣನ ಶಾಸನವಿದೆ. ಇದು ಹೈದರ್ ಅಲಿಯ ಜನ್ಮಸ್ಥಳ. ಹೈದರನ ತಂದೆ ಫತೆ ಮಹಮ್ಮದನಿಗೆ ಇದು ಜಹಗೀರಾಗಿತ್ತು. ಶಿರಾದ ಸುಬೇದಾರನಿಂದ ಘೌಜುದಾರನಾಗಿ ನೇಮಕಗೊಂಡಾಗ ಅವನಿಗೆ ಈ ಜಹಗೀರನ್ನು ನೀಡಲಾಗಿತ್ತು. ಕೋಟೆಯೊಳಗೆ ಒಂದು ತಿಳಿನೀರಿನ ತೊರೆಯಿದೆ. ಇಲ್ಲಿ ವೆಂಕಟರಮಣ ಮತ್ತು ಸೋಮೇಶ್ವರ ದೇವಾಲಯಗಳಿವೆ. ಬಂಗಾರಪೇಟೆಗೆ 13 ಕಿಮೀ ಈಶಾನ್ಯದಲ್ಲಿರುವ ಹುನಕುಂದದಲ್ಲಿ ಅನೇಕ ಶಾಸನಗಳಿವೆ. ಊರಿನ ಬಳಿಯ ಗುಡ್ಡದ ಮೇಲೆ ಶಿವನ ದೇಗುಲವಿದೆ. ಬಂಗಾರಪೇಟೆಯ ಉತ್ತರದಲ್ಲಿರುವ ಯಲಬುಗರ್ಿಯಲ್ಲಿ ವೆಂಕಟರಮಣ ದೇವಾಲಯವಿದೆ.
ಕೋಲಾರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಂತರಗಂಗೆ ಒಂದು. ಹಿಂದೂ ಜನರಿಗೆ ಅತ್ಯಂತ ಪವಿತ್ರವಾದ ತೀರ್ಥಗಳಲ್ಲಿ ಗಂಗೆ ಬಹಳ ಪ್ರಸಿದ್ಧವಾದುದು. ಸಮಗ್ರ ಭಾರತದಲ್ಲಿ ಆ ಹೆಸರಿನ ಹಲವು ತೀರ್ಥಗಳನ್ನು ನಾವು ಕಾಣಬಹುದು: ಪಾತಾಳಗಂಗೆ, ಶಿವಗಂಗೆ, ಸಿದ್ಧಗಂಗೆ, ದೇವಗಂಗೆ ಮೊದಲಾದುವುಗಳು ಇದಕ್ಕೆ ಉದಾಹರಣೆಗಳು. ಅಂತರಗಂಗೆ ಎಂಬುದು ಇದೇ ವರ್ಗದ ಒಂದು ತೀರ್ಥ. ಈ ಹೆಸರಿನ ಒಂದು ತೀರ್ಥ ಕೋಲಾರಕ್ಕೆ ಸಮೀಪದಲ್ಲಿರುವ ಶತಶೃಂಗಪರ್ವತದಲ್ಲಿದೆ. ಇಲ್ಲಿ ಸ್ನಾನಪೂಜಾದಿಗಳು ಬಹಳ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ. ಬೆಂಗಳೂರು ಜಿಲ್ಲಾ ಕುದೂರಿನಲ್ಲಿಯೂ ಈ ಹೆಸರಿನ ಒಂದು ತೀರ್ಥವಿದೆ.
     ಅತ್ಯಂತ ಪ್ರಾಚೀನ ದೇವಾಲಯಗಳು ಬೆಟ್ಟದ ನೈಋತ್ಯದಲ್ಲಿ ಒಂದು ದೊಡ್ಡ ಪ್ರಾಂಗಣದ ಮಧ್ಯೆ ಇವೆ.  ಇವೆಲ್ಲವೂ ಶೈವ ದೇವಾಲಯಗಳು.  ಮಧ್ಯದಲ್ಲಿ ಪಾರ್ವತೀ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ಸುಗ್ರೀವೇಶ್ವರ, ಅಂಜನೇಶ್ವರ ಮುಂತಾದ ಗುಡಿಗಳಿವೆ. ಇವುಗಳಲ್ಲಿ ಲಕ್ಷ್ಮಣೇಶ್ವರ ಗುಡಿ ಅತ್ಯಂತ ಸುಂದರ ಕಟ್ಟಡ.  ಗರ್ಭಗೃಹ, ಅಂತರಾಳ ಮತ್ತು ನವರಂಗವಿರುವ ಈ ಗುಡಿಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು-ಇವುಗಳಿಂದ ಅಲಂಕೃತವಾದ ಆರು ಪಟ್ಟಿಕೆಗಳಿವೆ.  ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುಗರ್ಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ (ಪಿಲ್ಯಾಸ್ಟರ್) ಛೇದಿಸಲ್ಪಟ್ಟ ಎತ್ತರವಾದ ಭಿತ್ತಿಯಿದೆ. ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮದರ್ಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಸಿವೆ.  ಒಳಭಾಗದ ನವರಂಗದಲ್ಲಿ, ಮಧ್ಯೆ ಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ.  ರಚನಾರೀತಿಯಲ್ಲಿ, ಲಕ್ಷ್ಮಣೇಶ್ವರ ದೇವಾಲಯ ಕಂಚಿಯ ದೇವಾಲಯಗಳ ಸಂಪ್ರದಾಯದಿಂದ ಬೆಳೆದು ಬಂದ ನೊಳಂಬವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಪ್ರತೀಕವಾಗಿದೆ.  ವಾಸ್ತುಶೈಲಿಯಿಂದ, ಮತ್ತು ಸ್ಥಳೀಯ ಶಾಸನಗಳ ಸಾಂದಭರ್ಿಕ ಮಾಹಿತಿಗಳಿಂದ ಈ ದೇವಾಲಯ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಟ್ಟಲಾಗಿರಬೇಕೆಂದು ಹೇಳಬಹುದು.  ಆದರೆ ದೇವಾಲಯದ ಮೇಲುಭಾಗದಲ್ಲಿರುವ ಗೋಪುರ ಮುಂತಾದ ಇಟ್ಟಿಗೆಯ ಸೇರ್ಪಡೆಗಳು ಸುಮಾರು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆದವುಗಳು.  ಶತ್ರುಘ್ನೇಶ್ವರ, ಅಂಜನೇಶ್ವರ ಮತ್ತು ಭರತೇಶ್ವರ ದೇವಾಲಯಗಳೂ ಸುಮಾರು ಲಕ್ಷ್ಮಣೇಶ್ವರದ ಮಾದರಿಯವೇ. ಕಾಲದಲೂ ಇವುಗಳಲ್ಲಿ ಬಹಳಷ್ಟು ಅಂತರವಿರಲಾರದೆಂಬುದು ಈ ಕೆಲವು ದೇವಾಲಯಗಳಲ್ಲಿ ಕಂಡುಬಂದಿರುವ ನೊಳಂಬ ಮತ್ತು ಗಂಗರ ಶಾಸನಗಳಿಂದ ಸಿದ್ಧವಾಗುತ್ತದೆ.  ಇದೇ ಕಾಲದ ರಾಮೇಶ್ವರ ದೇವಾಲಯ ದ್ರಾವಿಡಶೈಲಿಯ ಮೂಲ ಶಿಖರವನ್ನು ಇನ್ನೂ ಉಳಿಸಿಕೊಂಡಿದೆ.  ಈ ದೇವಾಲಯದಲ್ಲಿ ಮೂಲಗರ್ಭಗುಡಿ ಮತ್ತು ನವರಂಗದ ಕೆಲವು ಭಾಗಗಳು ರಚನಾರೀತಿಯಲ್ಲಿ ಇತರ ಸಮಕಾಲೀನ ದೇವಾಲಯಗಳಂತೆಯೇ ಇದ್ದರೂ ಮುಂದೆ 12-13ನೆಯ ಶತಮಾನದ ಕೆಲವು ಸೇರ್ಪಡೆಗಳಿಂದಾಗಿ ಕಟ್ಟಡದ ಅಂದಕ್ಕೆ ಸ್ವಲ್ಪ ಕುಂದು ಬಂದಿದೆ.  ಮಧ್ಯದಲ್ಲಿರುವ ಪಾರ್ವತೀ ದೇವಾಲಯ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿರುವ ಸಾಮಾನ್ಯ ಕಟ್ಟಡ.  ಇಲ್ಲಿಯ ವಾಸ್ತುರಚನೆಯಲ್ಲಾಗಲೀ ಶಿಲ್ಪಗಳಲ್ಲಾಗಲೀ ಈ ಹಿಂದಿನ ದೇವಾಲಯಗಳಲ್ಲಿರುವ ಪ್ರಬುದ್ದತೆ ಕಂಡುಬರುವುದಿಲ್ಲ.  13ನೆಯ ಶತಮಾನದಲ್ಲಿ ಕೋಲಾರ ಪ್ರದೇಶದಲ್ಲಿ ಆಳುತ್ತಿದ್ದ ತಮಿಳು ಗಂಗ ಅರಸು ಇಳವಂಜಿ ವಾಸುದೇವರಾಯ ಇದನ್ನು ಕಟ್ಟಿಸಿರಬಹುದೆಂದು ಊಹಿಸಲು ಆಧಾರಗಳಿವೆ.  ದೇವಾಲಯದ ಒಳಗೆ ಇಳವಂಜಿ ವಾಸುದೇವರಾಯ ಮತ್ತು ಅವನ ತಮ್ಮನದೆಂದು ಹೇಳಲಾಗುವ ಎರಡು ಭಕ್ತ ವಿಗ್ರಹಗಳಿವೆ. ಈ ದೇವಾಲಯಗಳ ಗುಂಪಿನಲ್ಲೇ ಇರುವ ಕಾಮಾಕ್ಷಿ ಮತ್ತು ಇತರ ಗುಡಿಗಳು ಅನಂತರದ ಕಟ್ಟಡಗಳು.
 ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ.  ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ.  ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ.  ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದುದು. ಬೆಟ್ಟದ ಮೇಲುಗಡೆ ಇರುವ ಸೀತಾಪಾರ್ವತೀ ಗುಡಿ ಹೊರನೋಟಕ್ಕೆ ಈಚಿನ ಬಹುಸಾಮಾನ್ಯ ಕಟ್ಟಡದಂತೆ ಕಂಡರೂ ಒಳಭಾಗ ಪುರಾತನವಾದುದು.  ಇದು ನೊಳಂಬ ಅರಸರ ಕಾಲದ (9-10ನೆಯ ಶತಮಾನ) ಗುಹಾದೇವಾಲಯವೆಂದು ಕಾಣುತ್ತದೆ.  ಆವನಿ ಗ್ರಾಮದಲೂ ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ.       
ಕೋಲಾರ ಹೋಬಳಿ ಗ್ರಾಮಗಳಲ್ಲದೆ ಬೆಳ್ಳೂರು, ಗರುಡನಪಾಳ್ಯ, ಪಾಪರಾಜನ ಹಳ್ಳಿ, ಸೀತಿ, ಸುಗಟೂರು ತೇರುಹಳ್ಳಿ, ವಾಣರಾಸಿ, ವಕ್ಕಲೇರಿ, ವೇಮಗಲ್ಲು ಮೊದಲಾದವು ಈ ತಾಲ್ಲೂಕಿನಲ್ಲಿನ ಮುಖ್ಯ ಸ್ಥಳಗಳು. ಗರುಡನಪಾಳ್ಯದ ಬಳಿಯ ಚಿಕ್ಕಗುಡ್ಡದಲ್ಲಿ ಸ್ಥಳೀಯವಾಗಿ ಪಾಂಡವರ ಗುಡಿಗಳೆಂದು ಕರೆಯುವ ಬೃಹತ್ ಶಿಲಾಸಮಾದಿಗಳಿವೆ. ಕೋಲಾರದ ಬಳಿಯ ಬೆಟ್ಟವೊಂದರ ಮೇಲಿರುವ ಪಾಪರಾಜನ ಹಳ್ಳಿಯಲ್ಲಿ ಒಂದು ಶಿವ ದೇವಾಲಯ ಮತ್ತು ಉಸ್ಮಾನ್ ಅಲಿಯ ದರ್ಗ ಅಲ್ಲದೆ ಭೂತಗೌಡನ ಗವಿ, ಮುಗಲ್ ಸುಬೇದಾರನ ಕೋಟೆ ಮೊದಲಾದವು ಇವೆ. ಮತ್ತೊಂದು ಬೆಟ್ಟದ ಮೇಲೆ ತೇರುಹಳ್ಳಿ ಗ್ರಾಮದಲ್ಲಿ ಸು.12-13ನೆಯ ಶತಮಾನದ ಗಂಗಾಧರೇಶ್ವರನ ಬೃಹತ್ ದೇವಾಲಯ ಮತ್ತು ಕೆಲವು ಪ್ರಾಗೈತಿಹಾಸಿಕ ಅವಶೇಷಗಳು ಇವೆ. ಬೆಳ್ಳೂರು ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ಹೊಯ್ಸಳರ ಕಾಲದಲ್ಲಿ ವಿಷ್ಣುವರ್ಧನ ಚತುವರ್ೆದಿ ಮಂಗಲಂ ಎಂದು ಪ್ರಸಿದ್ಧವಾಗಿದ್ದ ಶ್ರೀವೈಷ್ಣವ ಅಗ್ರಹಾರವಾಗಿತ್ತು. ಮಣವಾಲ ಮಹಾಮುನಿಯ ಶಿಷ್ಯರಾದ ಪ್ರತಿವಾದಿ ಭಯಂಕರರ ಅಣ್ಣ ಇಲ್ಲಿಯವರೆಂದು ಪ್ರತೀತಿ. ಇಲ್ಲಿ ರಾಮದೇವಾಲಯವಿದೆ. ವೆಂಕಟಾಪುರದಲ್ಲಿ ವೆಂಕಟರಮಣ ದೇವಾಲಯವಿದೆ. ವಕ್ಕಲೇರಿಯ ಬೆಟ್ಟದ ಮೇಲೆ ಪ್ರಾಚೀನ ಮಾರ್ಕಂಡೇಶ್ವರ ದೇವಾಲಯವಿದೆ. ಪ್ರತಿ ಮಾಘ ಮಾಸದಲ್ಲಿ ಸು.20 ದಿನಗಳ ಕಾಲ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ವಾಣರಾಸಿಯಲ್ಲಿ ಸ್ಥಳೀಯ ವೀರ ಇರಳಪ್ಪನ ದೇವಾಲಯವಿದೆ. ಪ್ರತಿ ಚೈತ್ರಮಾಸದಲ್ಲಿ ಇಲ್ಲೂ ದೊಡ್ಡ ಜಾತ್ರೆ ನಡೆಯುತ್ತವೆ. ಹೋಳೂರಿನಲ್ಲಿ ಲಕ್ಷ್ಮೀನಾರಾಯಣ ದೇವಾಲಯವಿದೆ. ಮಾಘ ಶುದ್ಧ ಪಾಡ್ಯಮಿಯಂದು ಜಾತ್ರೆ ನಡೆಯುತ್ತದೆ. ವೇಮಗಲ್ಲಿನಲ್ಲಿರುವ ದಗರ್ಾ ಪ್ರಸಿದ್ಧವಾದುದು.
   ಕುರುಡಮಲೆ ಇತಿಹಾಸಪ್ರಸಿದ್ಧ ಗ್ರಾಮ. ಇಲ್ಲಿ ಅನೇಕ ಪ್ರಾಚೀನ ಅವಶೇಶಗಳು ದೊರಕಿವೆ. ಈ ಪ್ರದೇಶ ಚೋಳರ ಆಳ್ವಿಕೆಗೆ ಬಳಪಟ್ಟಿದ್ದಾಗ ಇದೊಂದು ಪ್ರಮುಖಸ್ಥಳವಾಗಿದ್ದುದರಿಂದ ಇಲ್ಲಿ ಕೆಲವು ಉತ್ತಮ ದೇವಾಲಯಗಳನ್ನು ನಿಮರ್ಿಸಲಾಗಿತ್ತು. ಸ್ಥಳ ಪುರಾಣದ ರೀತ್ಯಾ ಇದು ಕೌಂಡಿನ್ಯಕ್ಷೇತ್ರ. ಕೃತ, ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಇದಕ್ಕೆ ಗಣೇಶಗಿರಿ, ಕೂಟಾಚಲ ಮತ್ತು ಯಾದವಾಚಲಗಳೆಂಬ ಹೆಸರುಗಳಿದ್ದುವೆಂದೂ ಕಲಿಯುಗದಲ್ಲಿ ಕೌಂಡಿನ್ಯಕ್ಷೇತ್ರವಾಗಿದೆಯೆಂದೂ ಪ್ರತೀತಿಯಿದೆ. ಮತ್ತೊಂದು ಐತಿಹ್ಯದ ರೀತ್ಯಾ ಕುರುಡುಮಲೆ ಎಂಬುದು ಕೂಡುಮಲೆಯ ರೂಪಾಂತರ. ಸಕಲದೇವತೆಗಳೂ ಮಹಾಗಣಪತಿಯ ಅರ್ಚನೆಗಾಗಿ ಇಲ್ಲಿ ಸೇರುತ್ತಿದ್ದುದರಿಂದ ಇವಕ್ಕೆ ಕೂಡುಮಲೆಯೆಂದು ಹೆಸರಾಯಿತಂತೆ.
 ಕುರುಡುಮಲೆ ಮಹಾಗಣಪತಿ ಮಂದಿರ ಇಲ್ಲಿಯ ಪ್ರಾಚೀನತಮ ದೇವಾಲಯ. ಬಹುಶಃ ಚೋಳರ ಕಾಲದಲ್ಲಿ ನಿಮರ್ಿತವಾದ ಈ ಮಂದಿರ ಬಹಳ ಸುಂದರಕಲಾಕೃತಿ. ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇದರ ಜೀಣರ್ೋದ್ಧಾರವಾಯಿತು. ಈ ದೇವಾಲಯದ ಮುಂದಿರುವ, ಗಣಪತಿಯ ವಾಹನವಾದ ಮೂಷಿಕದ ಶಿಲ್ಪ ಹಸಿರುಕಲ್ಲಿನಲ್ಲಿ ಮಾಡಲಾದ ಬೃಹದ್ಗಾತ್ರದ ಉತ್ತಮ ಕಲಾಕೃತಿ. ದೇವಾಲಯದ ಗರ್ಭಗೃಹದ (20' ಉದ್ದ, 1 1/2'  ಅಗಲ ಮತ್ತು  16'  ಎತ್ತರ) ಮುಂದಿನ ಹದಿನಾರು ಮೂಲೆಗಳ ಕಂಬಗಳ ಮೇಲಿನ ಶಿಲ್ಪಗಳು ಸಾಧಾರಣವಾಗಿವೆ. ಮಹಾಗಣಪತಿಯ ವಿಗ್ರಹ 2' ಎತ್ತರದ ಪೀಠದಮೇಲೆ 1 1/2 ' ಎತ್ತರದ ಆಸನದಲ್ಲಿ ಕುಳಿತಿದ್ದು 8 1/2' ಎತ್ತರವಿದೆ. ಪಾಶಾಂಕುಶ  ಹಸ್ತನಾದ ಗಣಪತಿ ತನ್ನ ಕೈಯಲ್ಲಿಯ ಮೋದಕವನ್ನು ಸವಿಯುತ್ತಿರುವಂತೆ ರೂಪಿಸಲಾಗಿದೆ. ವಿಗ್ರಹ ಹಾವಿನ ಉದರ ಬಂಧ ಮತ್ತು ಯಜ್ಞೋಪವೀತಗಳನ್ನು ಧರಿಸಿದೆ. ಅದರ ಹೊಟ್ಟೆಯ ಸುತ್ತಳತೆ 13'. ಸುಕನಾಸಿ (10'ಘಿ8') ಮತ್ತು  ನವರಂಗ (25'ಘಿ 25') ಇವು ಈ ಮಂದಿರದ ಇತರ ಭಾಗಗಳು. ನವರಂಗದ ದಕ್ಷಿಣಭಾಗದಲ್ಲಿ 5' ಎತ್ತರದ, ಹನ್ನೆರಡು ಕೈಗಳುಳ್ಳ, ಮಯೂರವಾಹನನಾದ ಕುಮಾರನ ಪ್ರತಿಮೆಯಿದೆ. ಇದೊಂದು ಸುಂದರಶಿಲ್ಪ.
 ಇಲ್ಲಿಯ ಅತ್ಯಂತ ಸುಂದರ ಕಟ್ಟಡ ಸೋಮೇಶ್ವರ ದೇವಾಲಯ. ಇದರಲ್ಲಿ ಗರ್ಭಗುಡಿ (20'ಘಿ10'), ಸುಕನಾಸಿ  (10'ಘಿ8') ಮತ್ತು ನವರಂಗ (25'ಘಿ25') ಇವೆ. ನವರಂಗದ ಅಷ್ಟಮುಖದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ. ಒಂದು ಕಂಬದ ಮೇಲಿರುವ ಆನೆಯನ್ನು ಕೊಲ್ಲುತ್ತಿರುವ ಸಿಂಹದ ಶಿಲ್ಪ ಗಂಗರನ್ನು ಹೊಯ್ಸಳರು ಸೋಲಿಸಿದ ಸಂಕೇತವಿರಬಹುದೆಂದು ಊಹಿಸಲಾಗಿದೆ. ಹೊರಗೋಡೆಗಳ ಮೇಲೆ ಸ್ತಂಭಿಕ ಮತ್ತು ಗೂಡುಗಳ ಸುಂದರ ಅಲಂಕರಣವಿದೆ. ಗರ್ಭಗುಡಿಯಲ್ಲಿರುವ ಲಿಂಗದ ಮುಂಭಾಗದ ಕಿಟಕಿಯ ಬಳಿ ಮೂರು ವ್ಯಕ್ತಿಗಳ ಶಿಲ್ಪಗಳಿವೆ. ಇವು 13 ನೆಯ ಶತಮಾನದಲ್ಲಿ ಚೋಳರ ಸಾಮಂತನಾಗಿದ್ದ ಇಳವಂಜಿ ವಾಸುದೇವರಾಯ ಮತ್ತು ಆತನ ರಾಣಿಯರ ಮೂತರ್ಿಗಳೆಂದು ಗುರುತಿಸಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ಪಾರ್ವತಿ ಮತ್ತು ಕಾಮಾಕ್ಷಿ ಅಮ್ಮನವರ ಮಂದಿರಗಳೂ ಇವೆ.
ಪಾಳುಬಿದ್ದಿರುವ ಚೆನ್ನರಾಯಸ್ವಾಮಿ ದೇವಾಲಯ ಸಹ ಆ ಸುಮಾರಿಗೆ ಸೇರಿದ್ದಿರಬಹುದು. ಗ್ರಾಮದ ಉತ್ತರಕ್ಕೆ ಮುರಿದ ತೋರಣದ ಕಂಬಗಳೂ ಮಾಸ್ತಿಕಲ್ಲೊಂದೂ ಇವೆ. ಹೊಯ್ಸಳ ಮುಮ್ಮಡಿ ಬಲ್ಲಾಳ ಆ ಪ್ರದೇಶವನ್ನು  ಆಳುತ್ತಿದ್ದನೆಂದೂ ಆಗ ಹೊರಡಿಸಿದ ವೀರರಾಯಿ ಹಣ ದೊರಕಿವೆಯೆಂದೂ ಹೇಳಲಾಗಿದೆ. ಈ ಪ್ರದೇಶದಲ್ಲಿ ಹಳೆಯ ಊರಿನ ಅವಶೇಷಗಳು ಕಾಣಬರುತ್ತವೆ.
      ಈ ಕಂದೆಲುಗು ನೆಲ ನಾಡಿನ ಸಂಸ್ಕೃತಿಗೆ ಪೂರ್ವಕಾಲದಿಂದ ಏಕೀಕೃತ ಕನರ್ಾಟಕ ರೂಪಗೊಳ್ಳುವವರೆಗೆ ಪೌರಾಣಿಕ, ಧಾಮರ್ಿಕ, ಸಾಮಾಜಿಕ .ಆಥರ್ಿಕ ಹಾಗೂ ಚಾರಿತ್ರಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅನುಪಮವಾದುದು ಎಂದರೆ ಅತಿಶಯೋಕ್ತಯಾಗಲಾರದು.

1 ಕಾಮೆಂಟ್‌:

  1. ಪ್ರಿಯ ಮಿತ್ರ ಶ್ರೀನಿವಾಸಯ್ಯನವರೇ

    ತಾವು ಒದಗಿಸಿರುವ ಮಾಹಿತಿ ಅಮೂಲ್ಯ. ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇನೆ.

    ಕಾಡದೇನಹಳ್ಳಿ ಶ್ರೀನಿವಾಸಾಚಾರಿ

    ಪ್ರತ್ಯುತ್ತರಅಳಿಸಿ