ಆದಿಮ ಕಾಲದಲ್ಲಿ ಕಾಡುವಾಸಿಯಾದ ಮಾನವನು, ಹೊಟ್ಟೆ ಹೊರೆಯಲು ಪ್ರಾಣಿ ಪಕ್ಷಿಗಳನ್ನು ಬೇಟೆಯಾದುತ್ತಿದ್ದ. ಗಡ್ಡೆಗೆಣಸುಗಳನ್ನು ತಿಂದು ಬದುಕುತ್ತಿದ್ದ. ಚಳಿ ಗಾಳಿ ಮಳೆಯಿಂದ ರಕ್ಷಣೆ ಪಡೆಯಲು ಮರ-ಪೊಟರೆಗಳನ್ನು ಆಶ್ರಯಿಸಿದ್ದ. ಆಹಾರಾನ್ವೇಷಣೆಯು ಇವರನ್ನು ನಿಶ್ಚಿತ ಸ್ಥಳದಲ್ಲಿ ನೆಲನಿಲ್ಲದಂತೆ ಅಲೆಮಾರಿ ಬದುಕು ಇವರದಾಗಿಸಿತ್ತು. ಕಾಲಕ್ರಮೇಣ ವ್ಯವಸಾಯ ಮತ್ತು ಪಶುಪಾಲನೆ ರೂಢಿಗೆ ಬಂದು ಒಂದೆಡೆ ನೆಲೆನಿಂತರು. ಗಂಡು ಹೆಣ್ಣಿನ ಸಹಜೀವನಕ್ಕೆ ವಸತಿಯ ಅಗತ್ಯತೆಯನ್ನು ಅರಿತು ಗುಹಾವಾಸಕ್ಕೆ ತೊಡಗಿದರು-ಹೀಗೆ ಆರಂಭಗೊಂಡ ಸಾಮಾಜಿಕ ಜೀವನ, ಸಾಂಸ್ಕೃತಿಕ ಉಜ್ವಲತೆಗೆ, ಭವ್ಯ ನಾಗರಿಕತೆಗೆ ನಾಂದಿಯಾಯಿತು. ಆಧುನಿಕ ಸಂಸ್ಕೃತಿಯವರಿಗೆ ಮುಂದುವರಿಯಿತು. ಆದರೆ ಕೆಲವು ಮಾನವ ಕುಲಗಳು, ತಮ್ಮ ಆದಿಮ ಬದುಕಿಗೆ ಅಂಟಿಕೊಂಡು ಹಳೆಯ ಸಾಂಸ್ಕೃತಿಕ ಪಳಿಯುಳಿಕೆಗಳ ಪ್ರತೀಕಗಳಾದವು. ಅಲೆಮಾರಿ ಜೀವನವನ್ನು ಅಪ್ಪಿಕೊಂಡು ವಿಶಿಷ್ಟ ಬದುಕಿನೊಂದಿಗೆ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಕಾಯ್ದುಕೊಂಡು ನಾಗರಿಕ ಸಮಾಜದಿಂದ ದೂರ ಉಳಿದವು. ಆದರೆ ಯಾವ ಸಂಸ್ಕೃತಿಯೂ ಪರಿವರ್ತನಾಶೀಲ ಗುಣದಿಂದ ವಿಮುಖವಾಗುವುದಿಲ್ಲ. ಕಾಲಗತಿಯಲ್ಲಿ ಸಾಂಸ್ಕೃತಿಕ ಸಂಕ್ರಮಣದ ಸ್ಥಿತಿಗೆ ಒಳಪಡಲೇಬೇಕಾಗುತ್ತದೆ. ಹೀಗೆ ಒಳಪಟ್ಟ ಕೊಂಡಮಾಮರ ಸಾಂಸ್ಕೃತಿಕ ಬದುಕಿನ ಮೇಲೊಂದು ನೋಟ.

ಪೂವರ್ೇತಿಹಾಸ ಹಿನ್ನಲೆಯಿಲ್ಲದ ಜನಾಂಗವಿಲ್ಲ. ಅದು ಅವರಿಗೆ ಪ್ರಾಚೀನ ಪರಂಪರೆಯನ್ನು, ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನಲೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿರುತ್ತದೆ. ಅವು ಐತಿಹ್ಯಗಳಾಗಿಯೋ, ಕಾಲ್ಪನಿಕ ಕಥೆಗಳಾಗಿಯೋ, ಹಾಡುಗಬ್ಬಗಳಾಗಿಯೋ ಅಥವಾ ಪ್ರಾದೇಶಿಕ ನಂಬಿಕೆಗಳಾಗಿಯೋ ಲಭ್ಯವಾಗುತ್ತವೆ. ಇವು ನಿಖರವಾದ ದಾಖಲೆಗಳಲ್ಲದಿದ್ದರೂ ಸಾಂಸ್ಕೃತಿಕ ಅಧ್ಯಯನಕ್ಕೆ ಆನುಷಂಗಿಕ ಮಾಹಿತಿಗಳಾಗಬಲ್ಲವು. ಆದರೆ ಅವುಗಳನ್ನು ಅಭಿವ್ಯಕ್ತಿಸುವ, ಲಭ್ಯ ಮಾಹಿತಿಗಳನ್ನು ಸಂರಕ್ಷಿಸಿಡುವ ಪ್ರಜ್ಞಾವಂತಿಕೆ ಈ ಜನಾಂಗದಲ್ಲಿದ್ದ ಹಾಗೆ ಕಾಣುವುದಿಲ್ಲ. ಬಹುಶಃ ತಮ್ಮ ಸಾಂಸ್ಕೃತಿಕ ಬದುಕಿನ ರಹಸ್ಯವನ್ನು ಕಾಯ್ದುಕೊಳ್ಳುವ ಅಥವಾ ಅನ್ಯ ಸಂಸ್ಕ್ರತಿಯೊಂದಿಗೆ ಸಮವಾಗಿ ನಿಲ್ಲಲಾರದ ಕೀಳಿರಿಮೆಯ ಭಾವನೆಯೂ ಇದರ ಹಿಂದೆ ಇರುವ ಹಾಗಿದೆ. ಒಟ್ಟಾರೆ ಅನಕ್ಷರಸ್ಥ ಅಮಾಯಕ ಜನರಾದ ಇವರಿಂದ ಮಾಹಿತಿಗಳನ್ನು ಸಂಗ್ರಹಿಸುವುದು ತ್ರಾಸದಾಯಕವೆಂದೆ ಹೇಳಬೇಕಾಗುತ್ತದೆ. ಆದರೂ ಹಲವಾರು ಮೂಲಗಳಿಂದ ಸಂಗ್ರಹಿಸಿದ ಇವರ ಪುರಾತನ ಬದುಕಿನ ಚಿತ್ರಣ ಇಂತಿದೆ-
1 . ರಾಮಾಯಣದ ಕಾಲದಲ್ಲಿ ಈ ಜನಾಂಗ ಅಸ್ತಿತ್ವದಲ್ಲಿತ್ತು ಎಂಬ ಪ್ರತೀತಿಯಿದೆ. ಶ್ರೀರಾಮನು ಲಕ್ಷ್ಮಣ ಸಮೇತನಾಗಿ ದಕ್ಷಿಣಪಥದಲ್ಲಿ ಸಂಚರಿಸುವಾಗ ಇವರ ಲಿಂಗಪೂಜೆಯನ್ನು, ಶೂರತನವನ್ನು ಮೆಚ್ಚಿ, ತನ್ನ ವಂಶಜರೆಂದು, ಒಕ್ಕಲೆಂದು ಹೇಳಿದನು. ತನ್ನ ಕೀತರ್ಿಯನ್ನು ಹೆಚ್ಚಿಸುವಂತೆ ಇವರ ಮೂಲ ಪುರುಷನಿಗೆ ವಚನವಿತ್ತಿದ್ದನೆಂದು_ಇವರ ಅನೇಕ ಹಾಡುಗಬ್ಬಗಳಿಂದ ತಿಳಿದು ಬರುತ್ತದೆ.
2. ಕೊಂಡಮಾಮರ ಮೂಲ ಪುರುಷರು ಕಾಡುವಾಸಿಗಳಾಗಿದ್ದರು. 'ಶ್ರೀಜಂಗಾಲು'ಎಂದು ಹಿಂದೆ ಇವರನ್ನು ಕರೆಯುತ್ತಿದ್ದರು. ವಿವಸ್ತ್ರರಾಗಿ ಅಲೆಯುತ್ತಾ ಬಿಲ್ಲು-ಬಾಣ,ಬತ್ತಳಿಕೆಗಳನ್ನು ಧರಿಸಿ, ಬೇಟೆಯಲ್ಲೇ ಬದುಕನ್ನು ಸಾಗಿಸುತ್ತಿದ್ದರು. ಒಮ್ಮೆ ಆದಿದೇವನಾದ ಶ್ರೀಶೈಲ ಮಲ್ಲಿಕಾಜರ್ುನನು ನಾರದನ ರೂಪದಲ್ಲಿ ವೇಷ ಮರೆಸಿ, ಇವರ ವಂಶಜರನ್ನು ಕಾಣಲು ಬಂದನು. ವಿವಸ್ತ್ರರಾದ ಇವರನ್ನು ಕಂಡು ಮರಗಿದನು. ನನ್ನ ಭಕ್ತರಾದ ಇವರನ್ನು ಹೀಗೆಯೇ ಬಿಟ್ಟರೇ ಉಳಿಗಾಲವಿಲ್ಲವೆಂದು ತಿಳಿದು, ಏಕನಾದವನ್ನು ನೀಡಿ, ಮುಂದೆ ನನ್ನನ್ನು ತಪ್ಪದೆ ಧ್ಯಾನಿಸಬೇಕೆಂದು ಅಪ್ಪಣೆಯನ್ನು ನೀಡಿದನೆಂದು-ಅವರ ಹಿರಿಯರ ಅಭಿಮತವಾಗಿದೆ. ಹೀಗೆ ಅವರಿಗೆ ಏಕನಾದವೂ ಅನುಚಾನವಾಗಿ ಬಂದಿತೆಂದು ಹೇಳುತ್ತಾರೆ.
3. ಕೊಂಡಮಾಮರ ವಂಶದ ಮೂಲಗುರು ಶ್ರೀಶೈಲದವರು. ಆದರೆ ಒಮ್ಮೆ ಭದ್ರಾಚಲಕ್ಕೆ ಭೇಟಿ ನೀಡಿ ರಾಮದಾಸನ ದರ್ಶನ ಪಡೆದುದರಿಂದ ಶ್ರೀರಾಮಭಕ್ತರಾದರೆಂದು ಹಿರಿಯರು ಹೇಳುತ್ತಾರೆ. ಅಂದಿನಿಂದ ಕ್ಷೌರ ಮಾಡಿಸದೆ, ಶ್ರೀರಾಮನ ಹೆಸರಿನಲ್ಲಿ ಮುಡಿಗಟ್ಟಿ ಧ್ಯಾನ ಮಾಡುತ್ತಾ ಭವಿಷ್ಯಕಾರ ವೃತ್ತಿಯನ್ನು ಹಿಡಿದರು. ಅದಕ್ಕೆ ತಮ್ಮ ಕುಲದವರನ್ನು 'ರಾಮಕ್ಷತ್ರಿಯ'ರು ಎಂದು ಕರೆಯುವರೆಂದು ಹೇಳುತ್ತಾರೆ.
ಈ ಮೇಲೆ ಪ್ರಸ್ತಾಪಗೊಂಡ ಮೂರು ಮಾಹಿತಿಗಳು, ಕೆಲವು ವಿಶಿಷ್ಟಾಂಶಗಳ ಚಚರ್ೆಗೆ ಗ್ರಾಸವಾಗುತ್ತವೆ. ಇವರು ಮೂಲತಃ ದ್ರಾವಿಡ ಸಂಸ್ಕೃತಿಯವರೂ ಕಾಡುವಾಸಿಗಳೂ ಹಾಗೂ ಮೂಲದಲ್ಲಿ ಶಿವನಿಷ್ಠರು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಕಾಲಾನಂತರದಲ್ಲಿ ವೈಷ್ಣವ ನಿಷ್ಠೆಗೆ ಪರಿವರ್ತನೆಗೊಂಡವರೆಂದು ಹೇಳಬಹುದಾಗಿದೆ. ಅಂದರೆ ವಚನನಿಷ್ಠೆಯನ್ನು ಮೀರದ ಸತ್ಯವಂತರಾಗಿದ್ದರು. ಇಂದಿಗೂ ಈ ಅಪೂರ್ವ ಗುಣವನ್ನು ಇವರಲ್ಲಿ ಕಾಣಬಹುದಾಗಿದೆ. ಕಾಡಿನ ಹಂತದ ಅವರ ಬರ್ಬರ ಬದುಕು ಹಾಗೂ ತನ್ನ ಒಕ್ಕಲುಗಳಾಗಿ ಪರಿವತರ್ಿಸುವಲ್ಲಿ ದೇವರುಗಳ ಪ್ರವೇಶ ಮತ್ತು ನಿಷ್ಠರಾಗಿ ತಮ್ಮ ಸಾಂಸ್ಕೃತಿಕ ಬದುಕಿನಲ್ಲಿ ಸಂಭವಿಸಿದ ಸಂಕ್ರಮಣಗಳೂ ವೇಷಭೂಷಣಗಳೂ ಅವರ ಸಾಂಸ್ಕೃತಿಕ ಸ್ಥಿತ್ಯಂತರದ ಕುರುಹುಗಳಾಗಿವೆ ಎಂದರೆ ತಪ್ಪಾಗಲಾರದು. ಅಲ್ಲದೆ ಅವರು ಶೈವ ಮತ್ತು ವೈಷ್ಣವ ಸಂಪ್ರದಾಯಕ್ಕೆ ತೋರುವ ನಿಷ್ಠೆಯೂ ಅವರು ಧರಿಸುವ ರುದ್ರಾಕ್ಷಿ, ನಾಮ, ಏಕನಾದ, ಮುಡುಗಟ್ಟು ಮುಂತಾದ ಉಡುಗೆ-ತೊಡುಗೆಗಳು, ಅವರ ದೈವಿಕ ಹಾಗೂ ಕುಲಾಚಾರದಲ್ಲಿನ ತತ್ತ್ವ ನಿಷ್ಠೆಗಳನ್ನು ತೋರಿಸುತ್ತವೆ. ಆದರೆ ಪ್ರಸ್ತುತ ಈ ಸಾಂಸ್ಕೃತಿಕ ಕಲಾಸಿರಿ ಕಾಲದಂಚಿಗೆ ಸರಿಯಲ್ಪಡುತ್ತಿರುವುದು ಆಧುನಿಕತೆಯ ವಿಪಯರ್ಾಸವೆಂದೆ ಹೇಳಬೇಕಾಗುತ್ತದೆ.
ಕೊಂಡಮಾಮರು ಕನರ್ಾಟಕ, ಆಂಧ್ರ ಮತ್ತು ಭಾರತದ ಗಡಿಯಾಚೆಗೂ ಜನಪ್ರಿಯತೆಯನ್ನು ಪಡೆದ ಭವಿಷ್ಯಕಾರರಾಗಿದ್ದಾರೆ. ಇವರನ್ನು ಪ್ರಾದೇಶಿಕ ಹಿನ್ನಲೆಯಲ್ಲಿ ಹಲವಾರು ನಾಮದೇಯಗಳಿಂದ ಕರೆಯುತ್ತಾರೆ. ಬೈರಾಗಿ, ಜಂಗಮುಲು, ಶಾಸ್ತ್ರೀಕರು, ರಾಮಕೊಂಡಲು, ಕೊಂಡಮಾಮ, ಕೊಂಡರಾಜು-ಮುಂತಾದ ಹೆಸರುಗಳಿವೆ. ಆದರೆ ತಮ್ಮ ಶಾಸ್ತ್ರದ ಆದಿಪುರುಷನಾದ ಶ್ರೀರಾಮನನ್ನು ಹಾಗೂ ತಮ್ಮ ಸಾಂಸ್ಕೃತಿಕ ನೆಲದೇವತೆಯಾದ ಕೊಂಡದೇವತೆ(ಮಲೆದೇವತೆ)ಯನ್ನು ಸ್ತುತಿಸುವುದರಿಂದ ಕೊಂಡಮಾಮದಂತಹ ಹೆಸರು ಪ್ರಾಪ್ತವಾಗಿರಬಹುದು. ಮಾನಸಿಕ ಭಾವನೆಯ ಕುರುಹನ್ನು ಹೊರದೋರುವ ಹಿರಿಯನಾಗಿರುವುದರಿಂದ 'ಕುರುಕುರುಮಾಮ' ಹೆಸರಿನಿಂದ ಕರೆಯುತ್ತಾರೆಂದು ಹಿರಿಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ನಂಬಿಕೆರಹಿತ ಮನುಷ್ಯನ ಬದುಕಿಲ್ಲ. ಆದಿಮಾನವನಿಂದ ಆಧುನಿಕ ಮಾನವನ ತನಕ ಇದನ್ನು ಕಾಣಬಹುದು. ಅದು ಅಗೋಚರ ಶಕ್ತಿಯ ನಂಬಿಕೆಯಿರಬಹುದು ಆಥವಾ ಭವಿಷ್ಯ ನಿಧರ್ಾರಕ ಶಕ್ತಿಗಳಲ್ಲಿರಬಹುದು. ಒಟ್ಟಾರೆ ಭವಿಷ್ಯದ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮಾನವ ಸಹಜವಾಗಿದೆ. ಅದಕ್ಕಾಗಿ ಅವನು ಹಲವು ಸಂಕೇತ, ಶಕುನ ಹಸ್ತ ಸಾಮುದ್ರಿಕೆಗಳಲ್ಲಿ ನಂಬಿಕೆಯಿಟ್ಟಿರುತ್ತಾನೆ. ಅವು ಮೂಢನಂಬಿಕೆಗಳೋ ಕುರುಡು ನಂಬಿಕೆಗಳೋ ಎಂಬುದು ಮುಖ್ಯವಲ್ಲ. ಮಾನವನ ಭವಿಷ್ಯಗ್ರಹಿಕೆಯೂ ಅದರಲ್ಲೂ ಅದರಲ್ಲಿನ ಆಸಕ್ತಿಯು ಎಷ್ಟು ಪುರಾತನವೆಂಬುದು ಇಲ್ಲಿ ಪ್ರಧಾನವಾಗಿರುತ್ತದೆ. ಈ ನಿಟ್ಟಿನಲ್ಲಿ ಕೊಂಡಮಾಮರ ಭವಿಷ್ಯವನ್ನು ಗ್ರಹಿಸಬೇಕಾಗುತ್ತದೆ.
ಭವಿಷ್ಯಕಾರರ ಭವಿಷ್ಯವಿಂದು ಅಧೋಗತಿಗಿಳಿದಿದೆ. ವೃತ್ತಿನಿರತ ಭವಿಷ್ಯಕಾರರು ಮೂಲೆಗುಂಪಾಗಿದ್ದಾರೆ. ಭವಿಷ್ಯವನ್ನು ಹೇಳುವ ಆಧುನಿಕ ತಾಂತ್ರಿಕ ಭವಿಷ್ಯಕಾರರು ತಲೆಯೆತ್ತುತ್ತಿದ್ದಾರೆ. ಜ್ಯೋತಿಷ್ಯಾಲಯಗಳಲ್ಲಿ ಇಂದು ಭವಿಷ್ಯ ಕಂಪ್ಯೂಟರೀಕರಣಗೊಳ್ಳುತ್ತಿದೆ. ನಿಯತಕಾಲಿಕಗಳು, ದೃಶ್ಯ ಹಾಗೂ ಶ್ರವ್ಯಮಾಧ್ಯಮಗಳು ಭವಿಷ್ಯ ಸಂಬಂಧಿ ಕಾರ್ಯಕ್ರಮಗಳನ್ನು ಯಥೇಚ್ಛವಾಗಿ ಬಿತ್ತರಿಸುತ್ತಿವೆ. ಅಲ್ಲದೆ ಆಧುನಿಕ ಶಿಕ್ಷಣ, ವೈಜ್ಞಾನಿಕ ಬೋಧನೆಗೆ ಮುಂದಾಗಿರುವುದರಿಂದ ವೃತ್ತಿನಿರತ ಕೊಂಡಮಾಮರ ಭವಿಷ್ಯಕ್ಕೆ ಮನ್ನಣೆ ಇಲ್ಲದಾಗಿದೆ. ಇವರ 'ಶಾಸ್ತ್ರಕಟ್ಟಿ'ನ ಭವಿಷ್ಯಕ್ಕಿಂತ, ಹಸ್ತಸಾಮುದ್ರಿಕೆಗಿಂತ 'ಕಂಪ್ಯೂಟರೀಕೃತ ಭವಿಷ್ಯ' ಮೇಲುಗೈ ಸಾಧಿಸಿದೆ. ಹೀಗೆ ಹತ್ತು ಹಲವಾರು ಕಾರಣಗಳಿಂದ, ಕುಲವೃತ್ತಿಯನ್ನೇ ನಂಬಿ ಬದುಕುತ್ತಿದ್ದ ಕೊಂಡಮಾಮರು ಜೀವನ ನಿರ್ವಹಣೆಗಾಗಿ ಅನ್ಯವೃತ್ತಿಗಳನ್ನು ಅವಲಂಬಿಸಿ ಬದುಕು ಮುನ್ನಡೆಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದಾರೆ.
ಕೊಂಡಮಾಮರ ಮೂಲ ನೆಲೆ ಆಂಧ್ರಪ್ರದೇಶವಾದರೂ ಎಲ್ಲಾ ಪ್ರದೇಶಗಳಲ್ಲಿ ಇವರನ್ನು ಕಾಣಬಹುದಾಗಿದೆ. ತಮ್ಮ ಮಾತೃಭಾಷೆಯಾದ ತೆಲುಗಿನ ಜೊತೆಗೆ ತಾವು ನೆಲೆಸಿರುವ ಪ್ರಾದೇಶಿಕ ಭಾಷೆಗಳನ್ನು ಮಾತನಾಡಬಲ್ಲರು. ಕಾಡುತನದಿಂದ ಅಲೆಮಾರಿ ಬದುಕಿಗೆ ಒಗ್ಗಿದರೂ ಸಮಾಜದ ಇತರೆ ಸಂಸ್ಕೃತಿಯ ಜನರ ಜೊತೆ ಬೆರೆತರೂ ತಮ್ಮ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ವಲಸೆ ಹೋದ ಕಡೆಗಳಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಆಯಾ ಪ್ರಾದೇಶಿಕ ಭಾಷೆಯ ಕಲಿಕೆಯು ಅನಿವಾರ್ಯವಾದುದುರಿಂದ ಅವರು ಬಹುತೇಕ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಹಲವು ದಶಕಗಳ ಹಿಂದೆ ಹೊಟ್ಟೆ ಹೊರೆದುಕೊಳ್ಳುಲು ವಲಸೆ ಬಂದ ಈ ಜನಸಮೂಹವು, ಇಂದು ಕನರ್ಾಟಕದ ಎಲ್ಲಾ ಪ್ರಾಂತ್ಯಗಳಲ್ಲೂ ಕಾಣಸಿಗುತ್ತಾರೆ. ಅಲ್ಲದೆ ಅವರ ವೇಷಭಾಷೆಯಲ್ಲಿಯೂ ಕನ್ನಡತನವನ್ನು ಕಾಣಬಹುದಾಗಿದೆ.
ಗುಡ್ಡಗಾಡಿನ ವಾಸಿಗಳಾದ ಇವರು ವ್ಯವಸಾಯ ಮಾಡಿ ಜೀವಿಸುತ್ತಿದ್ದರು-ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುವುದುಂಟು. ಆದರೆ ನಿದರ್ಿಷ್ಟ ಆಧಾರಗಳಿಲ್ಲ. ಏಕೆಂದರೆ ಅಲೆಮಾರಿ ಜೀವನವೇ ಇವರಿಗೆ ಪ್ರಧಾನವಾದಂತಿದೆ. ಭಿಕ್ಷೆ ಬೇಡುವುದೇ ನಿತ್ಯಕಾಯಕವಾಗಿರುವ ಇವರು ಮಠ-ಮಂದಿರವನ್ನೋ ಚಾವಡಿಕಟ್ಟೆಯನ್ನೋ ನಿತ್ಯ ಮನೆಯಾಗಿಸಿಕೊಳ್ಳುವ ಇವರಿಗೆ ವ್ಯವಸಾಯದ ಕಡೆಗೆ ಗಮನ ಹರಿದಿರಲು ಸಾಧ್ಯವಿಲ್ಲವೆನಿಸುತ್ತದೆ! ಒಟ್ಟಾರೆ ಇವರು ಜಮೀನು ಪಡೆದು ವ್ಯವಸಾಯವನ್ನು ಮಾಡುತ್ತಿದ್ದರೂ ಎಂಬುದಕ್ಕೆ ಉದಾಹರಣೆಗಳು ಅಪರೂಪವೆಂದು ಹೇಳಬೇಕಾಗುತ್ತದೆ. ಆದರೆ ಇಂದು ಒಕ್ಕೆಡೆ ನೆಲೆ ನಿಂತು ವ್ಯವಸಾಯಕ್ಕೆ ತೊಡಗಿರುವ ಜನರು ಇಲ್ಲವೆಂದರೆ ತಪ್ಪಾಗುತ್ತದೆ. ತಮ್ಮ ಮೂಲವೃತ್ತಿಯಿಂದ ಜೀವನ ನಿರ್ವಹಣೆ ಕಷ್ಟದಾಯಕವಾಗಿರುವುದು ಇದಕ್ಕೆ ಒಂದು ಕಾರಣವೆಂದು ಹೇಳಿದರೂ ಅಲೆಮಾರಿ ಜೀವನವನ್ನೇ ನಂಬಿದವರು ಜಾಸ್ತಿಯಾಗಿಯೇ ಇದ್ದಾರೆ.
ಅದು ಅಲೆಮಾರಿ ಬದುಕಾಗಲೀ, ನೆಲೆನಿಂತ ಜೀವನವಾಗಲೀ ಇವರು ತಮ್ಮದೆ ಪಶು ಸಂಪದವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ದನಕರು, ಕುರಿಕೋಳಿ, ಮೇಕೆಗಳನ್ನು ಸಾಕುತ್ತಾರೆ. ಸಾಗಾಣಿಕೆ ಮತ್ತು ಹಣಕಾಸಿನ ತೊಂದರೆಯನ್ನು ನೀಗಿಸಿಕೊಳ್ಳವಲ್ಲಿ ಇವು ಸಹಕಾರಿಯಾಗಿವೆ. ಹಿಂದೆ ಸಂಚಾರಕ್ಕಾಗಿ, ಸರಕು ಸಾಗಾಣಿಕೆಗಾಗಿ ಕುದುರೆ ಮತ್ತು ದನಕರುಗಳನ್ನು ಬಳಸುತ್ತಿದ್ದರು. ಈಗ ಕುದುರೆಗಳನ್ನು ಬಳಸುವವರಿದ್ದಾರೆ. ಆದರೆ ಬಹುತೇಕ ಅಲೆಮಾರಿ ಕುಟುಂಬದವರು ಕಾವಡಿಕಟ್ಟಿಕೊಂಡು ಸಾಮಾನುಗಳನ್ನು ಹೊರುವುದು ಸಾಮಾನ್ಯವಾಗಿತ್ತು. ಇಂದು ಅವುಗಳ ಸ್ಥಾನವನ್ನು ದ್ವಿಚಕ್ರವಾಹನಗಳು ತುಂಬಿಕೊಟ್ಟಿವೆ.
ಆದಿಮ ಕಾಲದಲ್ಲಿ ಮೂಲವಾಸ ಗುಡ್ಡಗಾಡುಗಳಾಗಿದ್ದೂ ಬೇಟೆಯೇ ನಿತ್ಯಕಾಯಕವಾಗಿತ್ತು. ಮಾಂಸಾಹಾರಿಗಳಾದ ಇವರು ಮಾಂಸದ ಜೊತೆಗೆ ಅಂಬಲಿ ಹಾಗೂ ಬಿದಿರುಗಂಜಿಯನ್ನು ಸೇವಿಸುತ್ತಿದ್ದರು. ಆದರೂ ಆಹಾರ ಪದ್ಧತಿಯಲ್ಲಿ ಕೆಲವು ಕಟ್ಟುಪಾಡುಗಳನ್ನು ಆಚರಣೆಯಲ್ಲಿವೆ. ನವಿಲು, ಗಿಳಿ, ಹಂಸ, ಪಾರಿವಾಳ, ಗರುಡ-ಮುಂತಾದ ಪಕ್ಷಿಗಳ ಮಾಂಸ ಸೇವನೆಗೆ ಇವರಲ್ಲಿ ನಿಷೇಧವಿದೆ. ಏಕೆಂದರೆ ನವಿಲು ನಂಬಿಕೆಯಂತೆ ಪವಿತ್ರ ಪ್ರಾಣಿ. ಗಿಳಿಯು ರಾಮನ ಸಂಕೇತ. ಹಾಗೆಯೇ ಗರುಡನನ್ನು 'ರತ್ನಪಕ್ಷಿ'ಎಂದು ಕರೆದು ನಮಸ್ಕರಿಸುತ್ತಾರೆ. ಆದರೆ ಈ ನಿಷೇಧಗಳು ಸಡಿಲಗೊಂಡಿವೆ. ಆಧುನಿಕ ಆಹಾರ ಪಾನೀಯಗಳು ಇವರ ಬದುಕಿನಲ್ಲಿ ಪ್ರವೇಶಿಸಿವೆ. ಪಾರಂಪರಿಕ ಹವ್ಯಾಸವಾದ ಮದ್ಯಪಾನ, ಭಂಗಿಸೇವನೆ ಇಂದು ಇವರ ಬದುಕಿನ ಬವಣೆಯನ್ನು ಹೆಚ್ಚಿಸಿ ನಿತ್ಯ ಸಂಪಾದನೆ ಆ ಚಟಕ್ಕೆ ಸುರಿಯುವಂತೆ ಮಾಡಿದೆ.
ಶಿಷ್ಟ ಸಂಸ್ಕೃತಿಯವರಂತೆ ಇವರುಗಳಲ್ಲಿ ಹಲವಾರು ಪಂಗಡಗಳಿವೆ. ಅವುಗಳನ್ನು ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಬೆಡಗುಗಳು ಬೇರೆಯಾದರೂ ತಮ್ಮನ್ನು ರಾಮಕ್ಷತ್ರಿಯರೆಂದು ಕರೆದುಕೊಳ್ಳುತ್ತಾರೆ. ತಮ್ಮೊಳಗೆ ಯಾವುದೇ ಮೇಲುಕೀಳಿನ ಅಥವಾ ಭಿನ್ನಭೇದದ ಭಾವನೆಯನ್ನು ತೋರಿಸುವುದಿಲ್ಲ. ಆದರೆ ವೈವಾಹಿಕ ಸಂದರ್ಭಗಳಲ್ಲಿ ಬೆಡಗುಗಳನ್ನು ಅನುಸರಿಸಿಯೇ ಪರಸ್ಪರ ಸಂಬಂಧಗಳನ್ನು ಏರ್ಪಡಿಸಿಕೊಳ್ಳುತ್ತಾರೆ. ಶಿಷ್ಟಸಂಸ್ಕೃತಿಯವರಲ್ಲಿನ ಗೋತ್ರಗಳಂತೆ ಇವರಲ್ಲಿಯೂ ಗ್ರೋತ್ರಗಳಿದ್ದೂ ಸಗೋತ್ರ ವಿವಾಹಕ್ಕೆ ನಿಷೇಧವಿದೆ. ಉಳಿದ ಯಾವುದೇ ವಿಚಾರಗಳಲ್ಲಿ ರಾಜಿಯಾದರೂ ಗೋತ್ರ ತಪ್ಪಿದ ವಿವಾಹಕ್ಕೆ ಇಂದಿಗೂ ಸಮ್ಮತಿಯಿಲ್ಲವೆಂದು ಆ ಸಮೂಹದ ಹಿರಿಯರು ಅಭಿಪ್ರಾಯಪಡುತ್ತಾರೆ.
ಇತರೆ ಪರಿಶಿಷ್ಟ ಜನಾಂಗದ ಬೆಡಗುಗಳಲ್ಲಿರುವಂತೆ 'ಕುಲಪೆದ್ದ'(ಕುಲದ ಯಜಮಾನ) ವ್ಯವಸ್ಥೆ ಇವರಲ್ಲಿ ಅಸ್ತಿತ್ವದಲ್ಲಿದೆ. ಇವನು ಜನಾಂಗದ ಹಿರಿಯನಾಗಿದ್ದು ಬೆಡಗಿನ ಪ್ರಮುಖನಾಗಿರುತ್ತಾನೆ. ಇವನನ್ನು 'ಬಂಡಾರರು'ಎಂದು ಕರೆಯುತ್ತಾರೆ. ಈತನ ಮುಂದಾಳತ್ವದಲ್ಲೇ ಕುಲಾಚಾರಗಳು ನಡೆಯುತ್ತವೆ. ಕುಲದ ಯಾವುದೇ ಶುಭಾಶುಭ ಕಾರ್ಯಗಳಲ್ಲಿ ಇವನ ಹಾಜರಾತಿ ಕಡ್ಡಾಯವಾಗಿರುತ್ತದೆ.

ಒಂದು ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ಹೇರಳವಾಗಿದ್ದ ಈ ಸಮೂಹದಲ್ಲಿ ಇಂದು ಗಂಡ-ಹೆಂಡತಿ-ಮಕ್ಕಳೊಡಗೂಡಿದ ಸಣ್ಣ ಕುಟುಂಬಗಳು ಹೆಚ್ಚಾಗತೊಡಗಿವೆ. ಆದಾಯ ಮಿತಿ, ಜೊತೆಗೆ ಭಿಕ್ಷೆ ಹಾಗೂ ಭವಿಷ್ಯ ಹೇಳುವ ಕಾಯಕದ ಅತ್ಯಲ್ಪ ಆದಾಯದಲ್ಲಿ ದೊಡ್ಡ ಕುಟುಂಬಗಳ ಪೋಷಣೆ-ನಿರ್ವಹಣೆ ಕಷ್ಟವಾಗಿರುವುದು ಪ್ರಮುಖ ಕಾರಣವೆಂದು ಹೇಳಬಹುದು. ಆದರೂ ಕೆಲವು ಕಡೆ ಅವಿಭಕ್ತ ಕುಟುಂಬಗಳನ್ನೇ ಕಾಣಬಹುದಾಗಿದೆ.
ದ್ರಾವಿಡ ಸಂಸ್ಕೃತಿಯಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಕಾಣುತ್ತೇವೆ. ಸ್ತ್ರೀಗೆ ವಿಶೇಷ ಸ್ಥಾನಮಾನ ಹಾಗೂ ಸ್ವಾತಂತ್ರ್ಯವನ್ನು ಇವರಲ್ಲಿ ಕಲ್ಪಿಸಲಾಗಿದೆ. ಶಿಷ್ಟಸಂಸ್ಕೃತಿಯ ಸ್ತ್ರೀಯರಿಗಿರುವ ಯಾವುದೇ ಸಾಮಾಜಿಕ ನಿರ್ಬಂಧಗಳು ಇವರಲ್ಲಿ ಕಂಡು ಬರುವುದಿಲ್ಲ. ಶೋಷಣೆ ಕಿರುಕುಳಗಳಿಲ್ಲ. ಪುರುಷನಷ್ಟೆ ಸಮಾನವಾಗಿ ಸ್ತ್ರೀಯರನ್ನು ಕಾಣುತ್ತಾರೆ. ಇದಕ್ಕೆ ಸ್ಪಷ್ಟ ನಿರ್ದಶನವೆಂದರೆ ಪೂರ್ವದಲ್ಲಿ ಈ ಸಮಾಜದಲ್ಲಿ ಚಾಲ್ತಿಯಲ್ಲಿದ್ದ 'ಸೇವಾ ವಿವಾಹ ಪದ್ಧತಿ'ಯಲ್ಲಿನ ಸ್ತ್ರೀಯ ಸ್ಥಾನಮಾನಗಳ ಬಗ್ಗೆ ಸ್ಪಷ್ಟ ಮಾಹಿತಿಗಳನ್ನು ಒದಗಿಸಿಕೊಡುತ್ತದೆ. ಆದರೆ ಈ ಪದ್ಧತಿಗಳು ಮರೆಯಾಗಿ ಪುರುಷ ಪ್ರಧಾನ ಅದರಲ್ಲೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಎಲ್ಲೆಡೆಯಲ್ಲೂ ಕಾಣುತ್ತಿದ್ದೇವೆ. ಕುಟುಂಬದಲ್ಲಿ ಯಜಮಾನ್ಯ ವ್ಯವಸ್ಥೆ ಜಾರಿಯಲ್ಲಿದ್ದೂ ಯಜಮಾನನ ಮಾತನ್ನು ವೇದ ವಾಕ್ಯವೆಂದು ಭಾವಿಸುವ ಕಾಲಘಟ್ಟದಲ್ಲಿದ್ದೇವೆ.
ಕೊಂಡಮಾಮರ ಸಂಸ್ಕೃತಿಯಲ್ಲಿ ಗಂಡು ಮಕ್ಕಳು ತಮ್ಮ ಹದಿನಾಲ್ಕು ಅಥವಾ ಹದಿನೈದನೆಯ ವಯಸ್ಸಿಗೆ ಪರಂಪರಾಗತವಾಗಿ ಬಂದ ತಂದೆಯ ವೃತ್ತಿಯನ್ನು ಅನುಸರಿಸಿ ಕಲಿಯುವುದು ಸಂಪ್ರದಾಯವಾಗಿದೆ. ಮುಡಿಕಟ್ಟುವುದು, ಸಾಂಪ್ರದಾಯಿಕ ವೇಷಭೂಷಣ ತೊಡುವುದು, ಏಕನಾದದ ಧ್ವನಿಗೆ ತಕ್ಕ ಹಾಗೆ ಆಕಷರ್ಿಣೀಯ ಮಾತಿನಲ್ಲಿ ಮೋಡಿ ಮಾಡುವುದು ಮುಂತಾದ ಕುಲವೃತ್ತಿಯ ಕೌಶಲಗಳನ್ನು ತಮ್ಮ ಹಿರಿಯರಿಂದ ಆಥವಾ ತಂದೆಯರಿಂದ ಕಲಿತು ಕುಲವೃತ್ತಿಯ ವಾರಸುದಾರರಾಗುತ್ತಿದ್ದರು. ಆದರೆ ಇಂದು ಅವಿಭಕ್ತ ಕುಟುಂಬಗಳು ವಿಘಟನೆಗೊಂಡು, ತಂದೆಯ ಸ್ಥಾನಮಾನಗಳು ಕುಸಿಯುವ ಹಂತ ತಲುಪಿವೆ. ಕುಲವೃತ್ತಿಗಿಂತ ಕೂಲಿನಾಲಿಯೇ ಸೂಕ್ತವೆಂಬ ಅಭಿಪ್ರಾಯ ಜನಾಂಗದ ಕಿರಿಯ ಪೀಳಿಗೆಯವರಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಮೋಹಕವಾದ ಆಧುನಿಕ ಜೀವನ ಶೈಲಿಯು ಬಹುತೇಕ ಕಾರಣವೆಂದು ಹೇಳಬಹುದಾಗಿದೆ.
ಕೊಂಡಮಾಮರ ಸಮಾಜದಲ್ಲಿ ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳು ದುಡಿಯಬೇಕೆಂಬುದು ನಿಯಮ. ಅವರ ಸಂಪಾದನೆಯ ಹಣದಿಂದ ಸಂಸಾರವನ್ನು ನಿರ್ವಹಿಸಬೇಕೇ ಹೊರೆತು ವಂಚಿಸುವುದು ಅಕ್ಷಮ್ಯ ಅಪರಾದವೆಂದು ಹಿರಿಯರು ಹೇಳುತ್ತಾರೆ. ಒಂದು ವೇಳೆ ವಂಚನೆಯ ಆರೋಪ ರುಜುವಾದರೇ ಕುಲದ ಹಿರಿಯನ ಸಮಕ್ಷಮದಲ್ಲಿ ದಂಡ ವಿಧಿಸಲಾಗುತ್ತಿತ್ತು. ಕೆಟ್ಟ ಮಾತು, ಕೆಟ್ಟಕೆಲಸ ಮಾಡಿದರೂ ದಂಡನೆಗೆ ಗುರಿಯಾಗುವುದಲ್ಲದೆ ಕುಲ ಬಹಿಷ್ಕಾರದಂತಹ ಉಗ್ರ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಈ ದಂಡನೆಯ ಶಿಕ್ಷೆಯು ಕೊಂಡಮಾಮರಲ್ಲಿ ಮಾತ್ರವೇ ಅಲ್ಲದೆ ಬಹುತೇಕ ಅಲೆಮಾರಿಗಳಲ್ಲಿ ಒಂದು ವಿಶಿಷ್ಟ ನಿಯಮವಾಗಿ ಅಸ್ತಿತ್ವದಲ್ಲಿತ್ತು. ಇದರಿಂದ ಪರಸ್ಪರ ವ್ಯಾಜ್ಯಗಳು ಕೋಟರ್ು ಕಛೇರಿಗಳ ಮೆಟ್ಟಿಲನ್ನೇರದೆ ತಮ್ಮೊಳಗೆ ಇತ್ಯರ್ಥವಾಗುತ್ತಿದ್ದವು. ತಪ್ಪೊಪ್ಪಿಗೆಯ ಸಂದರ್ಭದಲ್ಲಿ ದೇವರ ಮೇಲೆ ಮಾಡುವ ಪ್ರಮಾಣವು ಕೋಟರ್ಿನ ಶಿಕ್ಷೆಗಿಂತ ಮಿಗಿಲಾದುದು ಎಂಬ ನಂಬಿಕೆ ಇವರಲ್ಲಿ ಪ್ರಬಲವಾಗಿತ್ತು. ಈ ನಂಬಿಕೆ ಹಾಗೂ ಉಗ್ರ ಶಿಕ್ಷೆಯ ಕಾರಣವಾಗಿ ಅಕ್ಷಮ್ಯ ಅಪರಾಧಗಳನ್ನು ಪ್ರಜ್ಞಾಪೂರ್ವಕವಾಗಿ ಯಾರು ಮಾಡುತ್ತಿರಲಿಲ್ಲ. ಆದರೆ ಸಮೂಹ ಜೀವನ ವ್ಯವಸ್ಥೆಯ ಸಮಯದಲ್ಲಿ ಇವು ಕಟ್ಟುನಿಟ್ಟಾಗಿ ಪಾಲನೆಯಲ್ಲಿದ್ದವು. ಕಾಲಘಟ್ಟಗಳು ಬದಲಾದಂತೆ ನಿಯಮಗಳಲ್ಲಿ ಸಡಿಲಿಕೆ ಕಂಡು ಬಂದಿತು. ಇಂತಹ ದಂಡನೆಯ ನಿಯಮಗಳು ಅಲ್ಲೊಂದಿಲ್ಲೊಂದು ಕಂಡು ಬರುವುದು ಇದೆ.
ಕೊಂಡಮಾಮರು ಯಾವುದೇ ಪ್ರಾದೇಶಿಕ ನೆಲದಲ್ಲಿ ವಾಸಿಸುತ್ತಿದ್ದರೂ ತಮ್ಮ ಗಂಡು ಮಕ್ಕಳಿಗೆ ಗುರು ದೀಕ್ಷೆ ಕೊಡಿಸುವ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಪ್ರಾಪ್ತ ವಯಸ್ಸಿಗೆ ಬಂದ ಹುಡುಗರನ್ನು ಶ್ರೀಶೈಲದ ಮಲ್ಲಿಕಾಜರ್ುನನ ದರ್ಶನಕ್ಕೆ ಕರೆದೊಯ್ದು ಗುರು ದೀಕ್ಷೆಯನ್ನು ಕೊಡಿಸುತ್ತಿದ್ದರು. ಈ ದೀಕ್ಷೆಯನ್ನು ಪಡೆದವರು ಮಾತ್ರವೇ ಸಾಂಪ್ರದಾಯಿಕ ವೃತ್ತಿಯನ್ನು ಮಾಡಲು ಅರ್ಹರೆಂದು ನಿಯಮವಿದೆ. ಆದರೆ ಕೆಲವು ಅನನುಕೂಲತೆಯ ಕಾರಣದಿಂದ ಕುಟುಂಬ ಕಟ್ಟುಪಾಡುಗಳನ್ನು ಮೀರುವುದುಂಟು. ಕುಲವೃತ್ತಿಯ ಹಿರಿಯರಿಂದಲೇ ಇಂದು ದೀಕ್ಷೆ ಪಡೆದು ವೃತ್ತಿಯನ್ನು ಮುಂದುವರಿಸುವ ಜನರು ಇದ್ದಾರೆ. ಒಟ್ಟಾರೆ ನೀತಿನಿಯಮಗಳನ್ನು ಮೀರುವ ಜನರೇ ಇಂದು ಹೆಚ್ಚಾಗ ತೊಡಗಿದ್ದಾರೆಂದರೆ ತಪ್ಪಾಗುವುದಿಲ್ಲವೆಂದು ಹಿರಿಯರು ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಕೊಂಡಮಾಮರ ಸಾಂಸ್ಕೃತಿಕ ಬದುಕಿನಲ್ಲಿ ವೇಷಭೂಷಣಗಳಿಗೆ ವಿಶಿಷ್ಟ ಸ್ಥಾನವಿತ್ತು. ಅವರ ಚಿಂತಾಮಣಿ ಕಟ್ಟು, (ಶಾಸ್ತ್ರಕಟ್ಟು) ರುದ್ರಾಕ್ಷಿಸರ, ವಿಭೂತಿ ಉಂಡೆಗಳು, ಏಕನಾದ, ಮುಡಿಕಟ್ಟು, ನಾಮ ವೀರಗಚ್ಚೆ, ಎದೆಗೆ ಕಾವಿ ಇಲ್ಲವೆ ಅರ್ಧ ಅಂಗಿಯ ಕುಪ್ಪಸ ತೊಟ್ಟು, ಕಪ್ಪುಬಟ್ಟೆ ಅಥವಾ ಚರ್ಮದ ನಡುಪಟ್ಟಿ, ಕೈಗಳಲ್ಲಿ ತಾಮ್ರದ ಕಡಗಗಳು, ಎತ್ತಿಕಟ್ಟಿದ ಮುಡಿ, ಅದರ ಮೇಲೆ ಯಂತ್ರಕಡಗದಿಂದ ಸಿಂಬೆ ಮಾಡಿ ತಾಮ್ರದ ಬಳೆ ತೊಡಿಸುವುದು, ಬಳೆಯಾಕಾರದ ಹುಲಿಚರ್ಮವನ್ನು ಮುಡಿಗೆ ಕಟ್ಟಿಕೊಂಡು ನವಿಲುಗರಿ-ಹಕ್ಕಿಪುಕ್ಕಗಳನ್ನು ಸಿಕ್ಕಿಸಿಕೊಳ್ಳುವುದು, ಹಣೆಗೆ ಬಿಳಿ ನಾಮ, ಕುತ್ತಿಗೆಗೆ ಬೆಳ್ಳಿಕಟ್ಟಿನ ಹುಲಿ ಉಗುರಿನ ತಾಯತ ಕಟ್ಟಿಕೊಳ್ಳುವುದು, ಕೊಂಡಿ ಕಟ್ಟಿರುವ ಬೆಳ್ಳಿ ಹಾಗೂ ತಾಮ್ರ ನಾಣ್ಯಗಳನ್ನು ಸರವಾಗಿ ಧರಿಸುವುದು, ಬಿದಿರುದಬ್ಬೆಗೆ ಕೌದಿಚೀಲ ನೇತು ಹಾಕಿಕೊಂಡು, ಕೈಯಲ್ಲಿ ಏಕನಾದ ಮತ್ತೊಂದು ಕೈಯಲ್ಲಿ ಚಿಂತಾಮಣಿ ಕಟ್ಟು ಹಿಡಿದುಕೊಳ್ಳುವುದು, ಕಿವಿಯಲ್ಲಿ ಚಂದ್ರಾಕಾರದ 'ಚಂದ್ರಮುಡಿ'ಗಳು ಇರುತ್ತಿದ್ದವು. ಆದರೆ ಹಿಂದೆ ಚಂದ್ರಮುಡಿಯ ಬದಲಿಗೆ ಬಾಣ ಭತ್ತಳಿಕೆಗಳು ಧರಿಸುತ್ತಿದುದುಂಟು .ಹೀಗೆ ಪ್ರತಿ ವಸ್ತುವೂ ಸಾಂಸ್ಕೃತಿಕ ಅನನ್ಯತೆಯನ್ನು ಸೂಚಿಸುವ ಸಂಕೇತಗಳಾಗಿದ್ದವು. ಕೊಂಡಮಾಮರು ವರ್ಷಕ್ಕೊಂದಾವತರ್ಿ ಶ್ರೀಶೈಲನ ಸನ್ನದಿಗೆ ತೆರಳಿ, ಗುರುಕಾಣಿಕೆಯನ್ನು ಸಮರ್ಪಸುವ ಸಂಪ್ರದಾಯವಿತ್ತು. ಕುಲ ನಿಯಮದ ಪ್ರಕಾರ ಗಡ್ಡಮೀಸೆ ಹಾಗೂ ತಲೆಗೂದಲನ್ನು ಬೋಳಿಸುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ದಂಡನೆಗೆ ಗುರಿಯಾಗುತ್ತಿದ್ದರು. ಆದರೆ ಆಧುನಿಕ ಸಂಸ್ಕೃತಿಯ ಅಬ್ಬರದಲ್ಲಿ ಸಾಂಪ್ರದಾಯಿಕ ಬದುಕಿನ ನಿಯಮಗಳು ಬೆಲೆ ಕಳೆದುಕೊಳ್ಳ ತೊಡಗಿವೆ. ಹೊಟ್ಟೆಯೇ ಖಾಲಿಯಾಗಿರುವಾಗ ದೇವರಿಗೆ ಕಾಣಿಕೆಯನ್ನು ಸಲ್ಲಿಸುವ ಗೋಜಿಗೆ ಹೋಗದ ಅನೇಕ ಕುಟುಂಬಗಳನ್ನು ಇಂದು ನಾವು ಕಾಣಬಹುದಾಗಿದೆ.
ಕೊಂಡಮಾಮರ ಜೀವನಾವರ್ತನ ನಂಬಿಕೆಗಳು ಸಂಕರ ಸ್ಥಿತಿಯಲ್ಲವೆ. ಗಭರ್ಿಣಿ ಬಸುರಿನೊಳಗಿನ ಕಂದನ ಆಸೆಗಳನ್ನು ತೀರಿಸುವ ಬಯಕೆಯ ಆಚರಣೆಯು ಬದಲಾಗಿ ಸೀಮಂತದಂತಹ ಪ್ಯಾಶನ್ ಆಚರಣೆಗಳು ಜಾಗ ಮಾಡಿಕೊಂಡಿವೆ. ಪ್ರಸವ ಕಾರ್ಯವನ್ನು ನಿರ್ವಹಿಸುತ್ತಿದ್ದ 'ಮಂತ್ರಸಾನಿ (ಸೂಲಗಿತ್ತಿ) ಯ ಕೆಲಸಕ್ಕೆ ವಿರಾಮ ನೀಡಲಾಗಿದೆ. ಏಕೆಂದರೆ ಅನಕ್ಷರರಾದ ಇವರು ಆಧುನಿಕ ಆಸ್ಪತ್ರೆಗಳ ಮುಖ ನೋಡಿದವರಲ್ಲ. ಆದರೆ ಕೆಲವರ್ಷಗಳಲ್ಲಿ ಕಾಡಿದ ಮಾರಣಾಂತಿಕ ಕಾಯಿಲೆಗಳೂ ಆರೋಗ್ಯ ಶಿಕ್ಷಣ ಪದ್ಧತಿಗಳು, ಅವರನ್ನು ಆಧುನಿಕ ಚಿಕಿತ್ಸಗೆ ಅವರನ್ನು ಪ್ರೇರೇಪಿಸಿದವು. ಬಾಣಂತಿಯ ಆರೈಕೆಗೆ ಬಳಸುತ್ತಿದ್ದ ವಾಂಪುಡಿ, ಪಿಪ್ಪೀಳ್ಳು (ಕರಿಮೆಣಸು), ಕಸ್ತೂರಿ ಮಾತ್ರೆ, ಬಜೆ, ಕರ್ಕಾಯಿ, ನಾಮಕೊಡಿ, ಪರಂಗಿಚೆಕ್ಕೆಯಂತಹ ಮನೆಮದ್ದುಗಳು ಆಧುನಿಕ ಔಷಧಿಗಳ ಕಾರಣದಿಂದ ದೂರ ಸರಿದವು. ಆದರೆ ಸಂಪ್ರದಾಯಕ್ಕಾದರೂ ಬಳಸಬೇಕೆಂದು ಕೆಲವು ಕುಟುಂಬಗಳು ಇವುಗಳನ್ನು ತರುತ್ತಾರೆ.
ಈ ಜನಾಂಗದ ವಿವಾಹ ಆಚರಣೆಗಳಿಗೆ ಒಂದು ವೈಶಿಷ್ಟ್ಯತೆಯಿದೆ. ಕುಟುಂಬದ ಯಜಮಾನಾದಿಯಾಗಿ ಕುಲಪೆದ್ದನ ಸಮ್ಮುಖದಲ್ಲಿ ಕನ್ಯಾ ನಿಶ್ಚಿತಾರ್ಥ ನೆರವೇರುತ್ತಿತ್ತು. ಯಾವುದೇ ಪುರೋಹಿತನ ಮುಂದಾಳತ್ವ ಇವರ ಮದುವೆಗಳಲ್ಲಿಲ್ಲ. ಕುಲದ ಹಿರಿಯನೇ ಈ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಆದರೆ ಪ್ರಸ್ತುತ ಜಾತಕ, ನಕ್ಷತ್ರಫಲ ಹಾಗೂ ಮಹೂರ್ತ ನಿರ್ಣಯ ಕಾರ್ಯಗಳಿಗೆ ಪುರೋಹಿತರನ್ನು ಆಶ್ರಯಿಸ ತೊಡಗಿದ್ದಾರೆ. ಶುಭಾಶುಭ ಕಾರ್ಯಗಳಿಂದ ಕುಲದ ನಿಯಮಗಳನ್ನು ಮೀರಿ ದಂಡನೆಗೊಳಪಟ್ಟವರನ್ನು ದೂರವಿಡುವ ನಿಯಮವು ಇಂದು ಸಡಿಲಗೊಳ್ಳ ತೊಡಗಿದೆ. ಇವರಲ್ಲಿ ಒಂದು ಕಾಲದಲ್ಲಿ ಜಾರಿಯಲ್ಲಿದ್ದ 'ಕೂಡಿಕೆಪದ್ಧತಿ' ಇಂದಿಗೂ ಜಾರಿಯಲ್ಲದೆ. ಗಂಡಸರ ಮರುಮದುವೆಗೆ ಅವಕಾಶವಿದೆ. ಆದರೆ ಮೊದಲ ಹೆಂಡತಿ ತೀರಿಕೊಂಡಿದ್ದರೇ ಮಾತ್ರವೇ ಎಂಬ ನಿಯಮವಿದೆ. ಇವರಲ್ಲಿ ಯಾವುದೇ ಕಾರಣಕ್ಕೂ ವಿವಾಹ ವಿಚ್ಛೇಧನದಂತಹ ಕಾರ್ಯಕ್ಕೆ ಆಸ್ಪದವಿಲ್ಲ. ಇಂತಹ ವಿಚಾರಗಳು ಜಟಿಲವಾದಾಗ ಕುಲಪಂಚಾಯತಿ ಮಾಡಿ ಪರಿಹರಿಸಿಕೊಳ್ಳುವ ವಿಶಿಷ್ಟ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.

ಹಿಂದೆ ಪ್ರತಿ ಮನೆ ಮನೆಗೂ ಬಂದು ಭಿಕ್ಷೆ ಬೇಡುವುದರ ಜೊತೆಗೆ ಶಾಸ್ತ್ರವನ್ನು ಹೇಳುತ್ತಿದ್ದರು. ಮಕ್ಕಳಿಗೆ ಬಾಲಗ್ರಹ, ನೆಲಗ್ರಹ ಭೀತಿ, ಹಲ್ಲು ಕಡಿಯುವಿಕೆ-ಮುಂತಾದ ಮಕ್ಕಳ ಕಾಯಿಲೆಗಳಿಗೆ, ಗರ್ಭಚವಿ, ಗರ್ಭಸುಲಿ, ಕಿವಿ ಸೋರುವುದು, ದೃಷ್ಟಿದೋಷ, ವಾಂತಿ ಮುಂತಾದ ಹಿರಿಯರ ಕಾಯಿಲೆಗಳಿಗೆ ನಾಟಿ ಔಷಧವನ್ನು ಮಾಡಿಕೊಡುತ್ತಿದ್ದರು. ಆದರೆ ಆಧುನಿಕ ಔಷಧಿಯ ಕಾರಣದಿಂದ ನಾಟಿ ಮನೆಮದ್ದುಗಳು ಬೆಲೆ ಕಳೆದುಕೊಳ್ಳ ತೊಡಗಿವೆ.
ಹೀಗೆ ಭವ್ಯ ಸಾಂಸ್ಕೃತಿಕ ಬದುಕನ್ನು ನಡೆಸಿದ, ಸಂತೆ ಪಟ್ಟಣಗಳಲ್ಲಿ ಹೇರಳವಾಗಿ ಶಾಸ್ತ್ರ ಹೇಳುತ್ತಿದ್ದ ಕೊಂಡಮಾಮರು ಇಂದು ಅಪರೂಪವಾಗುತ್ತಿದ್ದಾರೆ. ಅವರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಲು ಹಿಂಜರಿಯುತ್ತಿದ್ದಾರೆ. ಧರಿಸಿದರೂ ಮನೆಯಂಗಳಕ್ಕೆ ಬಂದು ಬೇಡಿದಾಗ, ಭಿಕ್ಷೆ ನೀಡುವ ತಾಯಂದಿರ ಸಂಖ್ಯೆ ಕಡಿಮೆಯಾಗಿದೆ. ಆಧುನಿಕ ಜ್ಯೋತಿಷ್ಯಾಲಯಗಳು ಇವರ ಬದುಕಿಗೆ ಬರೆ ಎಳೆದಿವೆ. ಸಕರ್ಾರ ಹಾಗೂ ಸಕರ್ಾರೇತರ ಸಂಸ್ಥೆಗಳು ಇವರ ಬದುಕಿಗೆ ಆಸರೆ ನೀಡುತ್ತಿಲ್ಲ. ಇವರ ಕಲಾವಂತಿಕೆಗೆ ಸೂಕ್ತ ಮನ್ನಣೆಯಿಲ್ಲದೆ, ವೃತ್ತಿ ಬದುಕನ್ನು ತೊರೆದು ಜೀವನ ನಿರ್ವಹಣೆಗಾಗಿ ಅನ್ಯಕೆಲಸಗಳನ್ನು ಹುಡುಕುತ್ತಾ ಪಟ್ಟಣದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಕಲಾಸಿರಿಯನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇಂದು ಅಧಿಕವಾಗಿದೆ. ಆಧುನಿಕತೆಯ ಪ್ರವಾಹದಲ್ಲಿ ದೇಸೀಕಲೆಗಳು ಕೊಚ್ಚಿ ಹೋಗುವ ಮುನ್ನ ಅವುಗಳನ್ನು ರಕ್ಷಿಸಿ, ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದಾಗಬೇಕಾಗಿದೆ.
- ಡಾ|| ಜಿ.ಶ್ರೀನಿವಾಸಯ್ಯ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ